Meta AI: ಹೊರದಬ್ಬುವ ಮೊದಲು ಉದ್ಯೋಗಿಗಳ ಕೌಶಲ ಕದ್ದ ಮೆಟಾ: ವಿಶ್ವಾದ್ಯಂತ ಆಕ್ರೋಶ

Meta AI: ಇತ್ತೀಚಿನ ವಿಶ್ವದ ದೈತ್ಯ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು ಸರ್ವೇ ಸಾಮಾನ್ಯ ಎನ್ನುವಂತೆ ಆಗಿದೆ. ಆದರೆ ಉದ್ಯೋಗಿಗಳನ್ನು ಕಂಪನಿಯಿಂದ ಹೊರದಬ್ಬುವ ಮೊದಲು ಉದ್ಯೋಗಿಗಳ ಕೌಶಲ ಕದ್ದ ಮೆಟಾ ನಡೆಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೆಲಸ ಕಳೆದುಕೊಂಡ ಆತಂಕ, ನೋವು ಒಂದು ಕಡೆಯಾದರೆ ತಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಮಹತ್ವದ ಕೌಶಲಗಳನ್ನೇ ಕದ್ದಿರುವುದು ಇದೀಗ ವ್ಯಾಪಕ ಆಕ್ರೋಶವನ್ನು ಸೃಷ್ಟಿ ಮಾಡಿದೆ. ಮೆಟಾ ತನ್ನ ಕೃತಕ ಬುದ್ಧಿಮತ್ತೆ (AI) ಮಾದರಿಗಳಿಗೆ ತರಬೇತಿ ನೀಡಲು ನೌಕರರು ಕೆಲಸ ಮಾಡುವ ವಿಧಾನವನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಿದೆ. ಅವರ ಕೀಸ್ಟ್ರೋಕ್‌ಗಳು ಮತ್ತು ಮೌಸ್ ಕ್ಲಿಕ್‌ಗಳು ಸೇರಿದಂತೆ ಹಲವು ವಿಷಯಗಳ ಮೇಲೆ ಗಮನ ಇರಿಸಿದೆ ಎನ್ನುವುದು ಉದ್ಯೋಗ ವಲಯದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ. Instagram ಮತ್ತು Facebook ಎನ್ನುವ ದೈತ್ಯ ಕಂಪನಿಗಳನ್ನು ಹೊಂದಿರುವ ಕಂಪನಿಯು ಮಂಗಳವಾರ ಉದ್ಯೋಗಿಗಳಿಗೆ ಹೊಸ ಉಪಕರಣವನ್ನು ಪರಿಚಯಿಸಿದೆ. ಮೆಟಾದ ಕಂಪ್ಯೂಟರ್‌ಗಳು ಮತ್ತು ಆಂತರಿಕ ಅಪ್ಲಿಕೇಶನ್‌ಗಳಲ್ಲಿ ಕಾರ್ಯನಿರ್ವಹಿಸುವ ವಿಧಾನವು ಆತಂಕಕ್ಕೆ ಕಾರಣವಾಗಿದೆ. AI ತಂತ್ರಜ್ಞಾನಕ್ಕಾಗಿ ತರಬೇತಿ ಡೇಟಾವಾಗಿ ಬಳಸಲು ಅವರ ಚಟುವಟಿಕೆಯನ್ನು ಲಾಗ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಇದಷ್ಟೇ ಅಲ್ಲದೆ ಮೆಟಾ ಉದ್ಯೋಗಿಗಳನ್ನು ಹೊರದಬ್ಬುವ ಮೊದಲು ಉದ್ಯೋಗಿಗಳ ಕೌಶಲ ಕದ್ದಿದೆ ಎನ್ನುವ ವಿಚಾರವು ಇದೀಗ ವಿಶ್ವಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಬಿಬಿಸಿ ವರದಿ ಮಾಡಿದೆ. ಮೆಟಾ ವಕ್ತಾರರು ಕಂಪ್ಯೂಟರ್‌ಗಳನ್ನು ಬಳಸಿಕೊಂಡು ಜನರು ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸಲು ನಾವು ಏಜೆಂಟ್‌ಗಳನ್ನು ನಿರ್ಮಿಸುತ್ತಿದ್ದರೆ, ಜನರು ಅವುಗಳನ್ನು ನಿಜವಾಗಿ ಹೇಗೆ ಬಳಸುತ್ತಾರೆ ಎಂಬುದರ ನೈಜ ಉದಾಹರಣೆಗಳ ಅಗತ್ಯವಿದೆ. ಡೇಟಾವನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

Meta AI Shock

ಆದರೆ ಗುರುತಿಸಲು ಬಯಸದ ಮೆಟಾ ಉದ್ಯೋಗಿಯೊಬ್ಬರು, ಕಾರ್ಮಿಕರು ಹೆಚ್ಚುವರಿ ಉದ್ಯೋಗ ಕಡಿತಗಳನ್ನು ನಿರೀಕ್ಷಿಸುತ್ತಿರುವುದರಿಂದ AI ಮಾದರಿಗೆ ತರಬೇತಿ ನೀಡಲು ಕಂಪ್ಯೂಟರ್‌ನಲ್ಲಿ ತಮ್ಮ ಸಣ್ಣ ಕ್ರಿಯೆಗಳನ್ನು ಬಳಸಲಾಗುತ್ತಿದೆ. ಈ ಉಪಕರಣವು ಸೂಕ್ಷ್ಮ ವಿಷಯವನ್ನು ರಕ್ಷಿಸಲು ಭದ್ರತಾ ಕ್ರಮಗಳನ್ನು ಹೊಂದಿದೆ ಎಂದಿದ್ದಾರೆ ಎಂದು ಹೇಳಲಾಗಿದೆ. ಮುಂದುವರಿದು ಕಂಪನಿಯು AI ಬಗ್ಗೆ ಹೆಚ್ಚು ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

'ಒಂಟಿಯಾಗಿದ್ದರೆ ಕೆಲಸದಲ್ಲಿ ಏಕಾಗ್ರತೆ ಹೆಚ್ಚು': ಗೂಗಲ್ ಉದ್ಯೋಗಿಯ ಪೋಸ್ಟ್‌ಗೆ ನೆಟ್ಟಿಗರ ಪರ-ವಿರೋಧ ಚರ್ಚೆ
'ಒಂಟಿಯಾಗಿದ್ದರೆ ಕೆಲಸದಲ್ಲಿ ಏಕಾಗ್ರತೆ ಹೆಚ್ಚು': ಗೂಗಲ್ ಉದ್ಯೋಗಿಯ ಪೋಸ್ಟ್‌ಗೆ ನೆಟ್ಟಿಗರ ಪರ-ವಿರೋಧ ಚರ್ಚೆ

ಉದ್ಯೋಗಿಗಳ ಕೌಶಲ ಕದ್ದ ಮೆಟಾ

ಇನ್ನು ಮೆಟಾದ ಈ ಕ್ರಮವು ಆಕ್ರೋಶಕ್ಕೆ ಕಾರಣವಾಗುತ್ತಿರುವಾಗಲೇ ಸಂಸ್ಥೆಯು ಮತ್ತೊಂದು ದೊಡ್ಡ ಎಡವಟ್ಟು ಮಾಡಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಕಂಪನಿಯನ್ನು ತೊರೆದ ಮತ್ತೊಬ್ಬ ವ್ಯಕ್ತಿ, ಈ ಟ್ರ್ಯಾಕಿಂಗ್ ಉಪಕರಣವು AI ಅನ್ನು ಎಲ್ಲರ ಮೇಲೂ ಬಲವಂತವಾಗಿ ಹೇರಲು ಬಳಸುತ್ತಿರುವ ಇತ್ತೀಚಿನ ಮಾರ್ಗವಾಗಿದೆ ಎಂದು ಆರೋಪಿಸಿದ್ದಾರೆ. ಮೆಟಾ ಈ ವರ್ಷ ಈಗಾಗಲೇ ಒಂದು ಸುತ್ತಿನ ಉದ್ಯೋಗ ಕಡಿತ / ಲೇಆಫ್ ಮಾಡಿದೆ. ಸುಮಾರು 2,000 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಆದರೆ ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+