Kichaha Sudeep: ನವೆಂಬರ್ 27ಕ್ಕೆ ನಾವು-ನೀವು ಸಿಗೋಣ ಎಂದ 'ಕಿಚ್ಚ', ಫ್ಯಾನ್ಸ್ ಭರ್ಜರಿ ಖುಷ್! ಕಾರಣವೇನು?
Actor Sudeep Film Big update: ಅಭಿನವ ಚಕ್ರವರ್ತಿ, ಬಾದ್‌ಷಾ ನಟ ಕಿಚ್ಚ ಸುದೀಪ್ ಅವರು ತಮ್ಮ ಫ್ಯಾನ್ಸ್‌ಗೆ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದ್ದಾರೆ. ಇದೇ ನವೆಂಬರ್ 27ರಂದು ನಾವು ನೀವು ಭೇಟಿಯಾಗೋಣ ಎಂದು ಅಭಿಮಾನಿಗಳನ್ನು ಓರಾಯನ್ ಮಾಲ್‌ಗೆ ಆಹ್ವಾನಿಸಿದ್ದಾರೆ. ಇದು ಕಿಚ್ಚ ಫ್ಯಾನ್ಸ್ ಸೇರಿದಂತೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಅಷ್ಟಕ್ಕೂ ಅಂದು ಏನಿದೆ? ಕಿಚ್ಚು ಸುದೀಪ್ ಹೀಗೆ ಹೇಳಲು ಕಾರಣವೇನು? ಅಂಥದ್ದೇನಿದೆ ಅವರ ಪೋಸ್ಟ್‌ನಲ್ಲಿ...?
ನಟ ಸುದೀಪ್ ಹಾಗೂ ನಟ, ನಿರ್ದೇಶಕ ಪ್ರೇಮ್ ಅವರು ಸುಮಾರು ಎಂಟು ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಅಂದರೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮತ್ತೊಂದು ಹೊಸ ಬಿಗ್ ಬಜೆಟ್ ಸಿನಿಮಾ ಅನೌನ್ಸ್ ಆಗಲಿದೆ. ಆ ಸಿನಿಮಾದ ಹೆಸರು ಇದೇ ನವೆಂಬರ್ 27ರಂದು ಘೋಷಣೆ ಆಗಲಿದೆ ಎಂದು ತಿಳಿದು ಬಂದಿದೆ.

ಅಂದು ಟೈಟಲ್ ಟೀಸರ್ ಲಾಂಚ್! ಕಿಚ್ಚ ಪೋಸ್ಟ್
ಬಿಗ್‌ಬಾಸ್ ಕನ್ನಡ (Bigg Boss Kannada 13) ರಿಯಾಲಿಟಿ ಶೋ, ಕ್ರಿಕೆಟ್ ಹಾಗೂ ಸಿನಿಮಾಗಳಲ್ಲಿ ಬ್ಯೂಸಿ ಇರುವ ಸುದೀಪ್ ಅವರ ಮುಂದಿನ ಸಿನಿಮಾ ಅಪ್ಡೇಟ್‌ಗಾಗಿ ಲಕ್ಷಾಂತರ ಅಭಿಮಾನಿಗಳು ಕಾತರರಿಂದ ಕಾಯುತ್ತಿದ್ದರು. ಅವರಿಗೆಲ್ಲ ಸ್ವತಃ ನಟ ಸುದೀಪ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಹತ್ವದ ಪೋಸ್ಟ್ ಮೂಲಕ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.
ಸುದೀಪ್ ಅವರು, 'See you all at Orion.. This Nov 27th... 6pm. Luv & Hug's' ಎಂದು ಹಾರ್ಟ್ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದಾರೆ. ಟೈಟಲ್ ಟೀಸರ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರೇಮ್ಸ್ ಪ್ರೊಡಕ್ಷನ್, ಪ್ರೇಮ್ ನಿರ್ದೇಶನ ಮಾಹಿತಿ ಇದ್ದು, ಹಾರ್ಟ್ ಶೇಪಿನ ಸನ್‌ಗ್ಲಾಸ್ ಅನ್ನು ಪಾಸ್‌ಪೋರ್ಟ್ ಮೇಲಿಟ್ಟಿರುವ ಪೋಸ್ಟರ್ ಇದಾಗಿದ್ದು, ಪ್ರೇಮ್ ಅವರು ಸುದೀಪ್ ಅವರಿಗೆ ನಿರ್ದೇಶಿಸಿದ ಹೊಸ ಸಿನಿಮಾದ ಟೈಟಲ್ ಟೀಸರ್ ಅಂದು ಬಿಡುಗಡೆ ಆಗಲಿದೆ.
'ದಿ ವಿಲನ್': 8 ವರ್ಷದ ಬಳಿಕ ಒಂದಾದ ಜೋಡಿ
2018ರ ಅಕ್ಟೋಬರ್ 18ರಂದು ಅಂದರೆ ಬರೋಬ್ಬರಿ ಎಂಟು ವರ್ಷಗಳ ಹಿಂದೆ ನಟ ಸುದೀಪ್ ಮತ್ತು ಇದೇ ನಿರ್ದೇಶಕ ಪ್ರೇಮ್ ಅವರು 'ದಿ ವಿಲನ್' ಸಿನಿಮಾ ಮಾಡಿದ್ದರು. ಇದೀಗ ಇಷ್ಟು ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಗಿದೆ. ಕೆಲವೇ ಗಂಟೆಗಳಲ್ಲಿ ಸಾವಿರಾರು ವಿವ್ಸ್, ಲೈಕ್ಸ್ ಪಡೆದುಕೊಂಡಿರುವ ಪೋಸ್ಟ್‌ಗೆ ಫ್ಯಾನ್ಸ್ ಕಾಮೆಂಟ್ಸ್ ಮಾಡುತ್ತಿದ್ದಾರೆ.
ನಾಯಕಿ ಯಾರು? ಫ್ಯಾನ್ಸ್‌ಗೆ ಹೆಚ್ಚಾಯ್ತು ಕುತೂಹಲ
'ಆಲ್‌ಮೋಸ್ಟ್ ವೇಟಿಂಗ್ ಇಸ್ ಓವರ್...ವೇಟಿಂಗ್ ಫಾರ್ ನವೆಂಬರ್ 27ರಂದು ಓರಾಯನ್ ಮಾಲ್‌ಗೆ ಬನ್ನಿ. ವೇಟಿಂಗ್ ಬಾಸ್...! ಎಂದಿದ್ದಾರೆ. ಇನ್ನೂ ಕೆಲವರು ಹೊಸ ಸಿನಿಮಾಗೆ ನಟಿ ಯಾರೆಂದು ಊಹಿಸುತ್ತಿದ್ದಾರೆ. ಪೈಲ್ವಾನ್ ಸಿನಿಮಾದ ನಟಿ 'ಆಕಾಂಕ್ಷಾ ಸಿಂಗ್' ಅವರು ಮತ್ತೆ ಬಾಸ್‌ಗೆ ಜೋಡಿಯಾಗ್ತಾರಾ? ಅಂತಲೂ ಕೇಳಿದ್ದಾರೆ. ಸದ್ಯ ಕಿಚ್ಚನ ಪೋಸ್ಟ್ ರಿಪೋಸ್ಟ್ ಆಗುತ್ತಿದ್ದಂತೆ ಒರಾಯನ್ ಮಾಲ್‌ನಲ್ಲಿ ನೆಚ್ಚಿನ ನಟ ಭೇಟಿಯಾಗಲು ಫ್ಯಾನ್ಸ್ ಕಾತರರಾಗಿದ್ದಾರೆ.
See you all at Orion..This Nov 27th... 6pm.Luv & Hug's❤️ 🤗 K https://t.co/rBps9wGTP4
— Kichcha Sudeepa (@KicchaSudeep) November 22, 2026




Click it and Unblock the Notifications
