Junior: ಚೊಚ್ಚಲ ಸಿನಿಮಾದಲ್ಲೇ SIIMA ಪ್ರಶಸ್ತಿ ಮುಡಿಗೇರಿಸಿಕೊಂಡ ನಟ ಕಿರೀಟಿ: ಹೆಮ್ಮೆಯ ಕ್ಷಣ ಎಂದ ಜನಾರ್ದನ ರೆಡ್ಡಿ!
ಬೆಂಗಳೂರು: ಕನ್ನಡ ಚಿತ್ರರಂಗ ಹಾಗೂ ತೆಲುಗಿನ ಭರವಸೆಯ ನಟ, ಮೊದಲ ಚಿತ್ರದಲ್ಲೇ ಅಂಥದ್ದೊಂದು ಛಾಪು ಮೂಡಿಸಿದ್ದ ನಟ ಪುತ್ರ ಕಿರೀಟಿ ಅವರ ಸಿನಿಮಾಗೆ ಸೈಮಾ ಪ್ರಶಸ್ತಿ 2026 ಲಭಿಸಿದೆ. ಪುತ್ರನ ಚೊಚ್ಚಲ ಸಿನಿಮಾಗೆ ಪ್ರಶಸ್ತಿ ಬಂದಿದ್ದು ಕಂಡು, ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು 'ನಮ್ಮ ಕುಟುಂಬಕ್ಕೆ ಅತ್ಯಂತ ಹೆಮ್ಮೆಯ ಹಾಗೂ ಸಂತಸದ ಕ್ಷಣ!' ಎಂದು ಹೇಳಿದ್ದಾರೆ.
ಗಾಲಿ ಜನಾರ್ದನ್ ರೆಡ್ಡಿ ಅವರ ಪುತ್ರ ನಟ ಕಿರೀಟಿ ಅವರ 'ಜ್ಯೂನಿಯರ್' ಸಿನಿಮಾ ಕಳೆದ ವರ್ಷ 2025ರಲ್ಲಿ ಜುಲೈ 18ರಂದು ತೆರೆ ಕಂಡಿತ್ತು. ಸಿನಿಮಾದ ನಟನೆ, ಕಥೆ, ಕಿರೀಟಿ ಡಾನ್ಸ್ ನೋಡಿದ ಪ್ರೇಕ್ಷಕರು ಬಹುಪರಾಕ್ ಹೇಳಿದ್ದರು. ಜ್ಯೂನಿಯ್ ಪುನೀತ್ ರಾಜ್ ಕುಮಾರ್ ಎನ್ನುವಂತೆ 'ವೈರಲ್ ವೈಯ್ಯಾರಿ...' ಸಾಂಗ್‌ಗೆ ಅದ್ಭುತ ಸ್ಟೆಪ್ಸ್ ಹಾಕಿದ್ದರು. ಮೊದಲ ಸಿನಿಮಾದಲ್ಲೇ ಸಾಕಷ್ಟು ಭರವಸೆ ಮೂಡಿಸಿದ್ದರು. ಅದೇ ಚಿತ್ರೀಕ್ಕೀಗ ಸೈಮಾ ಪ್ರಶಸ್ತಿ ಬಂದಿದೆ.

Siima ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಗಾಲಿ ಜನಾರ್ದನ ರೆಡ್ಡಿ ಅವರು, ನನ್ನ ಪುತ್ರ ಕಿರೀಟಿ ಅಭಿನಯದ ಮೊದಲ ಸಿನಿಮಾ 'ಜೂನಿಯರ್' ಚಿತ್ರಕ್ಕೆ, ದೇಶದ ಹೆಮ್ಮೆಯ ಹಾಗೂ ಪ್ರತಿಷ್ಠಿತ ಸೈಮಾ ಪ್ರಶಸ್ತಿ 2026 (Siima Awards 2026) ಅತ್ಯುತ್ತಮ ಚೊಚ್ಚಲ ನಟ ( ಕನ್ನಡ ) ಪ್ರಶಸ್ತಿ ದೊರೆತಿರುವುದು ತಂದೆ-ತಾಯಿಯಾಗಿ ನಮಗೆ ಅಪಾರ ಸಂತೋಷ ಮತ್ತು ಹೆಮ್ಮೆ ತಂದಿದೆ ಎಂದು ತಿಳಿಸಿದ್ದಾರೆ.
ಕಿರೀಟಿಯ ಮೊದಲ ಹೆಜ್ಜೆಯನ್ನೇ ಇಷ್ಟೊಂದು ಪ್ರೀತಿಯಿಂದ ಸ್ವೀಕರಿಸಿ, ತಮ್ಮ ಅಮೂಲ್ಯ ಬೆಂಬಲ ಮತ್ತು ಆಶೀರ್ವಾದವನ್ನು ನೀಡಿದ ಕನ್ನಡದ ಚಿತ್ರಪ್ರೇಮಿಗಳಿಗೆ ಅವರು ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.
ಈ ಯಶಸ್ಸಿನ ಹಿಂದೆ ಶ್ರಮಿಸಿದ "ಜೂನಿಯರ್" ಚಿತ್ರದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ಪ್ರತಿಯೊಬ್ಬ ತಂತ್ರಜ್ಞರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನಿಮ್ಮ ಪರಿಶ್ರಮ, ಪ್ರತಿಭೆ ಮತ್ತು ಸಮರ್ಪಣೆಯೇ ಈ ಚಿತ್ರದ ಯಶಸ್ಸಿನ ಶಕ್ತಿ.
ಇದಿನ್ನು ಆರಂಭವಷ್ಟೇ: ಪುತ್ರನ ಬಗ್ಗೆ ವಿಶ್ವಾಸದ ಮಾತು
ಕಿರೀಟಿಯ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದ ಸೈಮಾ ತೀರ್ಪುಗಾರರಿಗೂ ಹಾಗೂ ಕುಟುಂಬಕ್ಕೂ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಇದು ಕಿರೀಟಿಯ ಪಯಣದ ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆಲ್ಲಲಿ ಎಂಬುದು ನನ್ನ ಹಾರೈಕೆ. ಇದೇ ರೀತಿಯ ಪ್ರೀತಿ, ಆಶೀರ್ವಾದ ಮತ್ತು ಬೆಂಬಲವನ್ನು ನನ್ನ ಪುತ್ರ ಕಿರೀಟಿಯ ಮುಂದಿನ ಎಲ್ಲಾ ಚಿತ್ರಗಳಿಗೂ ನಾಡಿನ ಜನತೆ ಸದಾ ನೀಡಲಿ. ಕಿರೀಟಿಗೆ ಇನ್ನಷ್ಟು ಎತ್ತರದ ಯಶಸ್ಸು ಲಭಿಸಲಿದೆ ಎಂದು ಹಾರೈಸಿದ್ದಾರೆ.
ನಮ್ಮ ಕುಟುಂಬಕ್ಕೆ ಅತ್ಯಂತ ಹೆಮ್ಮೆಯ ಹಾಗೂ ಸಂತಸದ ಕ್ಷಣ! ನನ್ನ ಪುತ್ರ ಕಿರೀಟಿ ಅಭಿನಯದ ಮೊದಲ ಸಿನಿಮಾ ‘ಜೂನಿಯರ್’ ಚಿತ್ರಕ್ಕೆ, ದೇಶದ ಹೆಮ್ಮೆಯ ಹಾಗೂ ಪ್ರತಿಷ್ಠಿತ @siima Awards 2026 – ಅತ್ಯುತ್ತಮ ಚೊಚ್ಚಲ ನಟ ( ಕನ್ನಡ ) ಪ್ರಶಸ್ತಿ ದೊರೆತಿರುವುದು ತಂದೆ-ತಾಯಿಯಾಗಿ ನಮಗೆ ಅಪಾರ ಸಂತೋಷ ಮತ್ತು ಹೆಮ್ಮೆ ತಂದಿದೆ.ಕಿರೀಟಿಯ ಮೊದಲ ಹೆಜ್ಜೆಯನ್ನೇ ಇಷ್ಟೊಂದು ಪ್ರೀತಿಯಿಂದ ಸ್ವೀಕರಿಸಿ, ತಮ್ಮ ಅಮೂಲ್ಯ ಬೆಂಬಲ ಮತ್ತು ಆಶೀರ್ವಾದವನ್ನು ನೀಡಿದ ಕನ್ನಡದ ಚಿತ್ರಪ್ರೇಮಿಗಳಿಗೆ ಹೃದಯಪೂರ್ವಕ ಧನ್ಯವಾದಗಳು. ಈ ಯಶಸ್ಸಿನ ಹಿಂದೆ ಶ್ರಮಿಸಿದ "ಜೂನಿಯರ್" ಚಿತ್ರದ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಹಾಗೂ ಪ್ರತಿಯೊಬ್ಬ ತಂತ್ರಜ್ಞರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ನಿಮ್ಮ ಪರಿಶ್ರಮ, ಪ್ರತಿಭೆ ಮತ್ತು ಸಮರ್ಪಣೆಯೇ ಈ ಚಿತ್ರದ ಯಶಸ್ಸಿನ ಶಕ್ತಿ.ಕಿರೀಟಿಯ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದ ಸೈಮಾ ತೀರ್ಪುಗಾರರಿಗೂ ಹಾಗೂ ಕುಟುಂಬಕ್ಕೂ ವಿಶೇಷ ಧನ್ಯವಾದಗಳು.ಇದು ಕಿರೀಟಿಯ ಪಯಣದ ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆಲ್ಲಲಿ ಎಂಬುದು ನನ್ನ ಹಾರೈಕೆ.ಇದೇ ರೀತಿಯ ಪ್ರೀತಿ, ಆಶೀರ್ವಾದ ಮತ್ತು ಬೆಂಬಲವನ್ನು ನನ್ನ ಪುತ್ರ ಕಿರೀಟಿಯ ಮುಂದಿನ ಎಲ್ಲಾ ಚಿತ್ರಗಳಿಗೂ ನಾಡಿನ ಜನತೆ ಸದಾ ನೀಡಲಿ ಎಂದು ಹಾರೈಸುತ್ತೇನೆ.ಕಿರೀಟಿ, ನಿನ್ನ ಈ ಸಾಧನೆಗೆ ತಂದೆ ತಾಯಿಯಾಗಿ ಅಪಾರ ಹೆಮ್ಮೆಪಡುತ್ತೇವೆ. ಇನ್ನಷ್ಟು ಎತ್ತರದ ಯಶಸ್ಸು ನಿನ್ನದಾಗಲಿ ಮಗನೆ...#Kireeti #JuniorKannada #SIIMA2026 #Bestdebutantactor #SIIMA #Proudmoment #KannadaCinema
— Gali Janardhana Reddy (@JanardhanaBJP) November 15, 2026



Click it and Unblock the Notifications
