Jailer-2 OTT: ಬೆಂಗಳೂರಿಗೆ ದಿಢೀರ್ ಆಗಮಿಸಿದ ನಟ ರಜನಿಕಾಂತ್! ಕತ್ತರಿ ಬಿದ್ದ 30 ನಿಮಿಷಗಳ ಸೀನ್‌ಗಳ ಜತೆ 'ಜೈಲರ್-2' ಓಟಿಟಿಗೆ

Jailer-2 OTT Updates: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಜೈಲರ್-2' ಸಿನಿಮಾ ಬಿಡುಗಡೆ ಬಳಿಕ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾ ಒಟಿಟಿ ವೇದಿಕೆಗೆ ಬರಲು ಸಜ್ಜಾಗಿದೆ. ವಿಶೇಷವೆಂದರೆ ಸಿನಿಮಾದಲ್ಲಿ ಕತ್ತರಿ ಬಿದ್ದ 30 ನಿಮಿಷಗಳನ್ನು ಸೇರ್ಪಡೆಯೊಂದಿಗೆ ಸ್ಮಾಲ್‌ ಸ್ಕ್ರೀನ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಇದು ಫ್ಯಾನ್ಸ್‌ಗೆ ಖುಷಿ ವಿಷಯವಾದರೆ, ರಜನಿಕಾಂತ್ ಅವರಿಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ಅಣ್ಣನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದು ತಿಳಿದು ಅವರು ಬೆಂಗಳೂರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಬೆಂಗಳೂರಿನಲ್ಲಿ ನಿರ್ವಾಹಕ ವೃತ್ತಿ ಆರಂಭದಿಂದಲೂ ರಜನಿಕಾಂತ್ ಅವರಿಗೆ ಇಲ್ಲಿನ ನಂಟಿದೆ. ಬೆಂಗಳೂರಿನವರೇ ಆಗಿರುವ ನಟ ರಜನಿಕಾಂತ್ ಅವರು, ಆಗಾಗ ಬೆಂಗಳೂರಿಗೆ ಬರುತ್ತಾರೆ. ಆದರೆ ಈ ಬಾರಿ ಅಣ್ಣನಿಗೆ ಚಿಕಿತ್ಸೆ ನೀಡುತ್ತಿರುವುದು ತಿಳಿದು ಚೆನ್ನೈನಿಂದ ಬೆಂಗಳೂರಿಗೆ ಓಡೋಡಿ ಬಂದಿದ್ದಾರೆ.

Jailer-2 OTT

ರಜನಿಕಾಂತ್ ಸಹೋದರರಿಗೆ ಪಟ್ಟಿ, ಆಸ್ಪತ್ರೆಗೆ ದಾಖಲು

ರಜನಿಕಾಂತ್ ಅವರ ಅಣ್ಣ ಸತ್ಯನಾರಾಯಣ ಅವರು ಮನೆಯಲ್ಲಿ ಆಯ ತಪ್ಪಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಷಯ ತಿಳಿದ ರಜನೀಕಾಂತ್ ಅವರು ದೌಡಾಯಿಸಿದ್ದಾರೆ. ಅಣ್ಣನ ಆರೋಗ್ಯ ವಿಚಾರಿದ್ದಾರೆ. ಮೂಲಗಳ ಪ್ರಕಾರ, ಅವರು ಬುಧವಾರವೇ ಬೆಂಗಳೂರಿಗೆ ಆಗಮಿದ್ದು, ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ.

ಶೂಟಿಂಗ್ ಇಲ್ಲದ ವೇಳೆ ಸದಾ ಪಂಚೆ, ಜುಬ್ಬಾದಲ್ಲಿ ಕಾಣುವ ನಟ ರಜನಿಕಾಂತ್ ಅವರು, ಆಸ್ಪತ್ರೆಗೆ ಬ್ಲಾಕ್ ಟೀ ಶರ್ಟ್ ಮತ್ತು ಜೀನ್ಸ್ ಪಾಂಟ್ ಧರಿಸಿ ಭೇಟಿ ಕೊಟ್ಟಿದ್ದು ವಿಶೇಷವಾಗಿತ್ತು.

30 ನಿಮಿಷ ಹೆಚ್ಚುವರಿ ಕಥೆಯೊಂದಿಗೆ 'ಜೈಲರ್-2' ಒಟಿಟಿಗೆ..

ಕಳೆದ ತಿಂಗಳು ಅಕ್ಟೋಬರ್ 15 ರಂದು ರಜನಿಕಾಂತ್ ಅವರೊಂದಿಗೆ ಕಲಾವಿದರಾದ ರಮ್ಯಾ ಕೃಷ್ಣ, ಶಿವರಾಜ್ ಕುಮಾರ್, ಮೋಹನ್ ಲಾಲ್, ವಿದ್ಯಾಬಾಲನ್, ಹೃತಿಕ್ ರೋಷನ್, ಜಾಕಿ ಶ್ರಾಪ್, ವಿಜಯ್ ಸೇತುಪತಿ ಸೇರಿದಂತೆ ಬಹುತಾರಾಗಣದ 'ಜೈಲರ್-2' ಸಿನಿಮಾವು ಬಿಡುಗಡೆ ಆಗಿತ್ತು. ಕಥೆ ಮೆಚ್ಚಿಕೊಂಡಿದ್ದ ಸಿನಿ ಪ್ರೇಕ್ಷಕ್ ಜೈಲರ್‌ಗೆ ಬಹುಪರಾಕ್ ಹೇಳಿದ್ದ. ಸಿನಿಮಾ ಎಲ್ಲ ಕಡೆಗಳಲ್ಲೂ ಉತ್ತಮ ರೆಸ್ಪಾನ್ಸ್ ಪಡೆದು ಮುನ್ನುಗ್ಗುತ್ತಿದೆ. ಇದೀಗ ಓಟಿಟಿಗೆ ಬರಲು ಸಿದ್ಧವಾಗಿದ್ದು, ಅಭಿಮಾನಿಗಳು ಕಾಯುತ್ತಿದ್ದಾರೆ.

ರೋಚಕ ದೃಶ್ಯಗಳಿಗೆ ಕತ್ತರಿ!

ಸಿನಿಮಾದಲ್ಲಿ ವಿದ್ಯಾಬಾಲನ್, ವಿಜಯ್ ಸೇತುಪಡಿ, ಹೃತಿಕ್ ರೋಷನ್, ಶಿವರಾಜ್ ಕುಮಾರ್, ಸಂತಾನಂ ಸೇರಿದಂತೆ ಫೈಟ್, ರೋಚಕ‌-ಸಾಹಸ ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ ಎನ್ನಲಾಗಿದೆ. ಆ ಎಲ್ಲ 30 ನಿಮಿಷಗಳ ದೃಶ್ಯಗಳು ಸೇರಿ 'ಜೈಲರ್-2' ಓಟಿಟಿಗೆ ಬರಲಿದೆ. ಆಗ ಸಿನಿಮಾದ ಅವಧಿ ಮತ್ತಷ್ಟು ವಿಸ್ತರಿಸಲಿದೆ ಎಂದು ತಿಳಿದು ಬಂದಿದೆ. ಇನ್ನು ನವೆಂಬರ್ 10 ರ ನಂತರ ಸಿನಿಮಾವು ಒಟಿಟಿ ವೇದಿಕೆ ಬರುವ ಲಕ್ಷಣಗಳು ಇವೆ.

ಸಿನಿಮಾವು ಅಮೇಜಾನ್ ಪ್ರೈಮ್‌, ನೆಟ್‌ಫ್ಲೀಕ್ಸ್ ಸೇರಿ ಯಾವ ಒಟಿಟಿ ವೇದಿಕೆಯಲ್ಲಿ ಬರುತ್ತದೆ. ಅಧಿಕೃತ ದಿನಾಂಕದ ಕುರಿತು ಸಿನಿಮಾ ತಂಡ ಇನ್ನಷ್ಟೇ ಖಚಿತಪಡಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+