Premada Oorali: ಕಡಿಮೆ ಬಜೆಟ್‌ನ 'ಪ್ರೇಮದ ಊರಲಿ' ಗೆಲುವಿಗೆ ಯಶ್ ಫಿದಾ; ಇಂಡಸ್ಟ್ರಿ ಬಗ್ಗೆ ರಾಕಿ ಬಾಯ್ ಮಾತು

Yash-Premada Oorali: ಅತ್ಯಂತ ಕಡಿಮೆ ಬಜೆಟ್ ನಲ್ಲಿ ಸಿದ್ದವಾಗಿ ಜನಮನ ಗೆದ್ದು ಅಧಿಕ ಚಿತ್ರಮಂದಿರಗಳಲ್ಲಿ ಮುನ್ನುಗ್ಗುತ್ತಿರುವ ಕನ್ನಡ ಭಾಷೆಯ ಸಿನಿಮಾ 'ಪ್ರೇಮದ ಊರಲಿ'. ಈ ಸಿನಿಮಾ ಬಗ್ಗೆ ಇದೀಗ ಕನ್ನಡ ಹಾಗೂ ಪ್ಯಾನ್ ವರ್ಲ್ಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಮನಬಿಚ್ಚಿ ತುಂಬು ವೇದಿಕೆಯಲ್ಲಿ ಮಾತನಾಡಿದ್ದಾರೆ. ಚಿತ್ರದ ಕುರಿತು, ಚಿತ್ರರಂಗದ ಕುರಿತು ಹಾಡಿ ಹೊಗಳಿಸಿದ್ದಾರೆ. ಕೈ ಹಿಡಿದ ಕನ್ನಡಿಗರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

ಹೌದು, ಗುರುವಾರ ನಮೀತ್ ಮಲ್ಹೋತ್ರ ನಿರ್ದೇಶನದ ವಿಶ್ವವೇ ಕಾಯುತ್ತಿರುವ 'ರಾಮಾಯಣ' (Ramayana) ಸಿನಿಮಾದ ಪ್ರಚಾರ ಕಾರ್ಯ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಆರಂಭವಾಗಿದೆ. ಮೊದಲು ಕರ್ನಾಟಕದಿಂದ ಪ್ರಚಾರ ಆರಂಭಿಸಲು ಸಿನಿಮಾದ ಸಹ ನಿರ್ಮಾಪಕ ಯಶ್ ಅವರು ಕಾರಣವೆಂಬುದು ಎಲ್ಲರಿಗೂ ತಿಳಿದಿದೆ. ಟ್ರೈಲರ್ ಬಿಡುಗಡೆ ಮಾಡಿದ ಬಳಿಕ ವೇದಿಕೆಯಲ್ಲಿ ಮಾತನಾಡುವಾಗ 'ಪ್ರೇಮದ ಊರಲಿ' ಕನ್ನಡ ಸಿನಿಮಾ ಸಕ್ಸಸ್ ಕಂಡಿದೆ ಎಂದು ಮಾತನಾಡಿದ್ದಾರೆ.

Yash Praises Premada Oorali

ಪ್ರೇಮದ ಊರಲಿ: ಕಣ್ಣುಗಳಲ್ಲಿ ಖಷಿ ನೋಡಿದೆ!

'ಪ್ರೇಮದ ಊರಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುತ್ತಿದೆ. ಚಿತ್ರತಂಡದ ಸದಸ್ಯರ ಮೀಟ್ ಆದಾಗ ಅವರ ಕಣ್ಣುಗಳಲ್ಲಿ ಖುಷಿ ನೊಡಿದೆ. ಕನ್ನಡ ಚಿತ್ರರಂಗಕ್ಕೆ ಎರಡು ತೆರನಾದ ಸಿನಿಮಾಗಳು ಬೇಕು. ಗಡಿ ದಾಟಿ ಹೊರಗಡೆ ಹೋಗಿ ಎಲ್ಲೆಲ್ಲಿ ಬೇಲಿ, ಗೋಡೆ ಇದೆಯೋ ಅದೆಲ್ಲ ಒಡೆದು ಹೊಸ ರೀತಿಯ ಸಿನಿಮಾ ಮಾಡಬೇಕು. ಅದರೊಂದಿಗೆ ಹಿರಿಯರು ಹಾಕಿ ಕೊಟ್ಟ ನಮ್ಮಲ್ಲಿನ ಅಡಿಪಾಯನು ಗಟ್ಟಿ ಮಾಡಿಕೊಳ್ಳಬೇಕು.' ಎಂದಿದ್ದಾರೆ. ಈ ಮೂಲಕ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಸಿನಿಮಾಗಳ ಜೊತೆಗೆ ಸ್ಥಳೀಯ, ಸಣ್ಣ ಬಜೆಟ್ ಆದರೂ ಒಳ್ಳೆಯ ಕಥೆಗಳ ಸಿನಿಮಾಗಳು ಮಾಡಬೇಕೆಂದು ಯಶ್ ತಿಳಿಸಿದ್ದಾರೆ.

'ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬರಬೇಕು. ಹೊಸ ನಿರ್ದೇಶಕರು, ನಟರು ಬರಬೇಕು. ಚಿಕ್ಕ ಬಜೆಟ್‌ ಇದ್ದರೂ ಒಳ್ಳೆಯ ಸಿನಿಮಾ ಮಾಡಿ ಗೆಲ್ಲವಬೇಕು. ಕನ್ನಡಿಗರು ಈ ಮಟ್ಟಿಗಿನ ಗೆಲುವು ಸಕ್ಸಸ್ ಕೊಟ್ಟಿದ್ದೀರಿ. ಇದು ನೋಡಿ ಖುಷಿ ಆಯ್ತು. ಇದೆಲ್ಲ ನಮಗೆ ಮತ್ತೊಂದು ಹಂತದಲ್ಲಿ ಕೆಲಸ ಮಾಡೋಕೆ, ಸಾಧಿಸೋಕೆ ಉತ್ಸವ ಕೊಡುತ್ತದೆ' ಎಂದಿದ್ದಾರೆ ಯಶ್.

'ಟಾಕ್ಸಿಕ್' ಸೋಲಿನ ಬಗ್ಗೆ ಯಶ್ ಹೇಳಿದ್ದೇನು?

ನಾನು ಗಮನಿಸಿದ್ದೇನೆ, ನೀವು ನನ್ನ ಮೇಲೆ ಪ್ರೀತಿ ತೋರಿಸಿದ್ದೀರಿ, ಇಷ್ಟಾದರೂ (ಟೀಕೆಗಳು ಕೇಳಿ ಬಂದರೂ) ಸಿನಿಮಾ ನೋಡಿದ್ದೀರಿ. ಅದರ ಪರವಾಗಿ ಎಷ್ಟು ಹೊಡೆದಾಡ್ಡೀರಿ ಅಂತ ನನಗೆ ಗೊತ್ತಿದೆ. ತುಂಬಾ ಚೆನ್ನಾಗಿ ಕಲೆಕ್ಷನ್ ಕೊಟ್ಟಿದ್ದೀರಿ. ಆ ಋಣ ತೀರಿಸೋಕೆ ಆಗಲ್ಲ. ನೀವ್ ಕೊಟ್ಟಿರುವ ಜವಾಬ್ದಾರಿಯಿಂದ ಅದ್ಭತವಾಗಿ ಸಿನಿಮಾ ಮಾಡುವುತ್ತೇನೆ ಎಂದು ಇತ್ತೀಚಿನ 'ಟಾಕ್ಸಿಕ್' ಸಿನಿಮಾ ಸೋಲಿನ ಕುರಿತು ಯಶ್ ಅವರು ಹೇಳಿದ್ದಾರೆ. ಜೊತೆಗೆ ಸಿನಿಮಾ ಟೀಕಿಸುವವರಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದು, ಗಡಿ ಮೀರಿ, ಸೋಲು-ಗೆಲುವಿನ ಗೊಡವೆ ಇಲ್ಲದೇ ಹೊಸದಾಗಿ ಏನಾದ್ರು ಮಾಡಲು ಮುಂದಾದಾಗ ಉದ್ದೇಶ ಸರಿ ಇದ್ದಾಗ ದಯವಿಟ್ಟು ಬೆಂಬಲಿಸಿ ಎಂದು ತಮ್ಮ 'ರಾಮಾಯಣ' ಸಿನಿಮಾ ನೋಡುವಂತೆ ಕೋರಿದ್ದಾರೆ.

ಸಿನಿಮಾದ ನಟಿಯ ಹೊಗಳಿದ ರಶ್ಮಿಕಾ ಮಂದಣ್ಣ

'ರಣಬಾಲಿ' ಸಿನಿಮಾದ ಕನ್ನಡ ಸಂದರ್ಶನ ವೇಳೆ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಊರವರೇ ಆದ 'ಪ್ರೇಮದ ಊರಲಿ' ಸಿನಿಮಾದ ನಟಿ ತಪಸ್ವಿನಿ ಪೂಣಚ್ಚ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಗಿದ್ದಾರೆ.

ಇದಿನ್ನು ಆರಂಭ ಮಾತ್ರ. ನಿಮ್ಮ ಕನಸು ಈಡೇರಿಸಲಿ, ನಿಮಗೆ ನನ್ನ ಪ್ರೀತಿಯ ಅಪ್ಪುಗೆ ಎಂದು ಸಂದರ್ಶನದಲ್ಲಿ ನಟಿ ರಶ್ಮಿಕಾ ಕರೆಯಲ್ಲಿ ಮಾತನಾಡಿದ್ದಾರೆ. ಜೊತೆಗೆ ಸಿನಿಮಾ, ನಟಿಯನ್ನು ಹೊಗಳಿ ಪೋಸ್ಟ್ ಹಾಕಿದ್ದರು. ಈ ಮೂಲಕ ಕನ್ನಡದ ಸಣ್ಣ ಸಿನಿಮಾವೊಂದು ಇಂದು ಪ್ಯಾನ್ ಇಂಡಿಯಾ ಮಾಡದ ಸಾಧನೆ ಮಾಡಿದೆ. ಬರೀ ಕಲೆಕ್ಷನ್ ವಿಚಾರವೊಂದೇ ನೋಡಲು ಆಗುವುದಿಲ್ಲ. ಒಂದು ಸಿನಿಮಾ ಜನರನ್ನು ರಂಜಿಸಬೇಕು, ಅವರ ಮನದಲ್ಲಿ ಅಚ್ಚಳಿಯದ ಉಳಿಯಬೇಕು. ಆ ಸಾಲಿಗೆ ಸೇರಿದ್ದ 'ಮುಂಗಾರು ಮಳೆ, ದುನಿಯಾ, ಇತ್ತೀಚಿನ ಸು ಫಂ ಸೋ' ಸಿನಿಮಾಗಳ ಸಾಲಿಗೆ 'ಪ್ರೇಮದ ಊರಲಿ' ಸೇರ್ಪಡೆ ಆಗಿದೆ. ಇದು ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+