Toxic ಸೋಲಿನ ಬಗ್ಗೆ ಯಶ್ ಮೊದಲ ಪ್ರತಿಕ್ರಿಯೆ; 'ರಾಯ' ಎಲ್ಲಿದ್ದಾರೆ ಎಂಬುದಕ್ಕೂ ಸಿಕ್ಕಿದೆ ಉತ್ತರ!

ಬೆಂಗಳೂರು: ಕನ್ನಡದ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ಮಾತ್ರವಲ್ಲದೇ, ವಿಶ್ವ ಮಟ್ಟದಲ್ಲಿ ಭರ್ಜರಿ ರಿಲೀಸ್ ಆಗಿತ್ತು. ಆದರೆ ಈ ಸಿನಿಮಾ ನಿರೀಕ್ಷೆಯಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡದೇ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಈ ಸಿನಿಮಾ ಸೋಲಿನ ಕುರಿತು ಯಶ್ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ 'ಟಾಕ್ಸಿಕ್' ರಿಲೀಸ್ ಬಳಿಕ ಯಶ್ ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬುದಕ್ಕೂ ಉತ್ತರ ಸಿಕ್ಕಿದೆ. ಇದರ ವಿಡಿಯೋ ವೈರಲ್ ಆಗಿದೆ.

ಹೌದು, ತಮಿಳಿನ ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ನಿರ್ದೇಶನ ಐವರು ನಾಯಕಿರು ಮತ್ತು ಯಶ್ ನಟನೆಯ 'ಟಾಕ್ಸಿಕ್' ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿತ್ತು. ಆಗಸ್ಟ್ 26ರಂದು 1200ಕ್ಕೂ ಅಧಿಕ ಸ್ಕ್ರೀನ್‌ಗಳ ಮೇಲೆ ರಾರಾಜಿಸಿತು. ಆದರೆ ಸೈಕಾಲಾಜಿಕಲ್ ಸಿನಿಮಾ 'ಟಾಕ್ಸಿಕ್' ಪ್ರೇಕ್ಷಕರಿಗೆ ಸಿನಿಮಾ ಅಷ್ಟಾಗಿ ಇಷ್ಟವಾಗಲಿಲ್ಲ. ಹಾಕಿದ ಬಂಡವಾಳ ಸಹ ಬರಲಿಲ್ಲ ಎನ್ನಲಾಗಿದೆ. ಹೀಗಿದ್ದಾಗ ಯಶ್ ಅವರು ಎಲ್ಲಿದ್ದಾರೆ, ಅವರಿಂದ ಪ್ರತಿಕ್ರಿಯೆ ಬರಲಿಲ್ಲ? ಎಂದು ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದರು. ಇದೀಗ ಅದಕ್ಕೆಲ್ಲ ಉತ್ತರ ಸಿಕ್ಕಿದೆ.

Yash Reacts to Toxic

'ಟಾಕ್ಸಿಕ್' ಸೋಲಿನ ಕುರಿತು ಯಶ್ ಮೊದಲ ಪ್ರತಿಕ್ರಿಯೆ

ಯಶ್ ಅವರು 'ಟಾಕ್ಸಿಕ್' ಸೋಲುವ ಜೊತೆಗೆ ಸಾಕಷ್ಟು ಸವಾಲು ಎದುರಿಸಿತು. ಸಿನಿಮಾ ಪೈರಸಿ ಆಗಿ ದೊಡ್ಡ ಪೆಟ್ಟು ಕೊಟ್ಟಿತು. ಸುಮಾರು 3 ಲಕ್ಷಕ್ಕೂ ಅಧಿಕ ಪೈರಸಿ ಲಿಂಕ್ ಡಿಲೀಟ್ ಮಾಡಿಸಿದ್ದೇವೆ. ಇಷ್ಟು ದೊಡ್ಡ ಮಟ್ಟದಲ್ಲಿ ಪೈರಸಿ ಆಗಿದ್ದನ್ನು ನಾನು ಇದೇ ಜೀವಮಾನದಲ್ಲಿ ನೋಡಿದ್ದು ಎಂದು 'ಟಾಕ್ಸಿಕ್' ಡಬ್ಬಿಂಗ್ ಸೂಪರ್ ವೈಸರ್ ಮತ್ತು ನಟ ಜೈದೇವ್ ಮೋಹನ್ ಅವರು ಸಂದರ್ಶನ ವೊಂದರಲ್ಲಿ ತಿಳಿಸಿದ್ದಾರೆ. ನಟ ಯಶ್ ಅವರು ಏನು ಹೇಳಿದ್ದಾರೆ ಎಂಬುದನ್ನು ಇವರು ಬಹಿರಂಗಪಡಿಸಿದ್ದಾರೆ.

ಯಶ್ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಟಾಕ್ಸಿಕ್ ಸೋಲಿನ ಕುರಿತು ಯಶ್ ಅವರೇ ಮಾತನಾಡಿದ್ದನ್ನು ಜೈದೇವ್ ಅವರು ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಿನಿಮಾ ರಿಲೀಸ್ ಆದ ಬಳಿಕ ನಾನು ಯಶ್ ಅವರನ್ನು ಭೇಟಿ ಮಾಡಿಲ್ಲ. ಬದಲಾಗಿ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಆಗ ಯಶ್ ಅವರು, 'ಜಾಸ್ತಿ ಮನಸ್ಸಿಗೆ ಹಚ್ಗೊಬೇಡ. ಆಗಿದ್ದು ಆಗಿದೆ. ಎಲ್ಲವನ್ನು ಜನರಿಗೆ ಬಿಟ್ಟು ಬಿಡೋಣ. ನಾವು ಶ್ರದ್ಧತೆಯಿಂದ ಕೆಲಸ ಮಾಡಿದ್ದೇವೆ. ಜನರ ತೀರ್ಮಾನ ಅವರಿಷ್ಟ. ಮುಂದೆ ರೆಡಿಯಾಗು ಬೇರೆ ಕೆಲಸಗಳು ಇವೆ' ಹೀಗೆಂದು ಯಶ್ ನನಗೆ ಹೇಳಿದ್ದಾರೆ ಎಂದು ತಿಳಿಸಿದರು.

ಯಾರೆ ಆಗಲಿ ಅವರಿಗೆ ನೋವು ಇದ್ದೆ ಇರುತ್ತದೆ. ಯಶ್ ಅವರು ನಾಲ್ಕು ವರ್ಷ ಸತತವಾಗಿ ಈ ಸಿನಿಮಾಗೆ ಕೆಲಸ ಮಾಡಿದ್ದಾರೆ. ಅವರಿಗೆ ನೋವಿದೆ ಎಂದು ನಾನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಜೈದೇವ್ ಹೇಳಿದರು.

ಬೆಂಗಳೂರಿಗೆ ಮರಳಿದ ಯಶ್: ವಿಡಿಯೋ ವೈರಲ್

ನಟ ಯಶ್ ಅವರ 'ಟಾಕ್ಸಿಕ್' ಸಿನಿಮಾ ಸೋಲಿನ ಬಳಿಕ ಕಾಣಿಸುತ್ತಿಲ್ಲ. ಅವರು ಬೇಸರಗೊಂಡಿದ್ದಾರೆ ಎಂದೆಲ್ಲ ಟ್ರೋಲ್‌ಗಳು ಆಗಿತ್ತು. ಈ ಹಿಂದೆಯು ಕೆಜಿಎಫ್ ಸರಣಿ ಸಿನಿಮಾಗಳ ಬಳಿಕ ಯಶ್ ಅವರು ಕುಟುಂಬಕ್ಕೆ ಸಮಯ ನೀಡಿದ್ದರು. ವೆಕೇಷನ್‌ಗೆ ವಿದೇಶಗಳಿಗೆ ತೆರಳಿದ್ದು ನಮಗೆ ಗೊತ್ತೇ ಇದೆ. ವರ್ಷಗಳ ಕಾಲ ಸಿನಿಮಾಗಾಗಿ ಸಮಯ ಮೀಸಲಿಟ್ಟಾಗ ಕುಟುಂಬಕ್ಕೆ ಸಮಯ ನೀಡಲು ಆಗಿರುವುದಿಲ್ಲ. ಹೀಗಾಗಿ ಯಶ್ ಅವರು 'ಟಾಕ್ಸಿಕ್' ಬಳಿಕವು ಕೆಲವು ದಿನಗಳ ಕಾಲ ಪತ್ನಿ, ಮಕ್ಕಳ ಜೊತೆಗೆ ವಿದೇಶಕ್ಕೆ ಹಾರಿದ್ದರು. ಇದೀಗ ಅವರು ಮರಳಿ ಬೆಂಗಳೂರಿಗೆ ಬಂದಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೆಕ್ಷರಾಗಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸೋಲಿಗೆ ಹೆದರುವುದು ಯಶ್ ಜಾಯಮಾನದಲ್ಲೇ ಇಲ್ಲ!

ಜೀವನ ಸಿಹಿ-ಕಹಿ ಅನುಭವಗಳನ್ನು ಎದುರಿಸಿರುವ ನಟ ಯಶ್ ಕೆಲವೇ ವರ್ಷಗಳಲ್ಲಿ ಈ ಮಟ್ಟಿಗಿನ ಯಶಸ್ಸು ಕಂಡಿದ್ದಾರೆ. ಅದಕ್ಕೆ ಅವರ ನಿರಂತರ ಶ್ರಮ, ಕನಸು ಬೆನ್ನಟ್ಟುವ ಗುಣ, ಪ್ರತಿ ಬಾರಿಯು ದೊಡ್ಡದಾಗಿ ಯೋಚಿಸಿ ಅದನ್ನು ಸಾಕಾರ ಮಾಡಲು ತೋರುವ ಧೈರ್ಯ ಅವರನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಒಂದು ಸಿನಿಮಾ ಸೋತರೆ ಆರ್ಥಿಕವಾಗಿ ನಷ್ಟ ನಿಜ ಆದರೆ, ಧೃತಿಗೆಡುವ, ಭಯ ಪಡುವ ವ್ಯಕ್ತಿ ಯಶ್ ಅಲ್ಲ. ರಾಮಾಯಣ ಹಾಗೂ ಮುಂದಿನ ಸಿನಿಮಾಗಳ ಮೂಲಕ ಮತ್ತೆ ಎದ್ದು ಬರುತ್ತಾರೆ. ಸೋಲಿಗೆ ಹೆದರುವುದು ಯಶ್ ಜಾಯಮಾನದಲ್ಲೇ ಇಲ್ಲ! ಎಂದು ಯಶ್ ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+