ಹಾಸನದ 'ಸೀಗೆಗುಡ್ಡ' ಬೆನ್ನಲ್ಲೇ ಕೇರಳದ 'ಜಟಾಯು' ತಾಣಕ್ಕೆ ಪ್ರವಾಸಿಗರ ದಂಡು: ಯಶ್ 'ರಾಮಾಯಣ' ಸಿನಿಮಾ ಮ್ಯಾಜಿಕ್

ಸಿನಿಮಾಗಳೇ ಹಾಗೇ ಎಂಥವರ ಮೇಲೂ ಪರಿಣಾಮ ಬೀರುತ್ತವೆ. ಇತ್ತೀಚೆಗೆ ಹಿಟ್ ಆದ ಕನ್ನಡದ 'ಪ್ರೇಮದ ಊರಲಿ' ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರ ಚಿತ್ರೀಕರಣಗೊಂಡ ಹಾಸನದ 'ಸೀಗೆ ಗುಡ್ಡ' ಮಳೆ ಮಲ್ಲೇಶ್ವರ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಇದೀಗ ನಟ ಯಶ್ ಅವರ 'ರಾಮಾಯಣ' ಸಿನಿಮಾದ ನೋಡಿದ ನಂತರ ಕೇರಳದ ಕೊಲ್ಲಂ ಜಿಲ್ಲೆಗೆ ಹೆಚ್ಚಿನ ಜನರು ಭೇಟಿ ಕೊಡುತ್ತಿದ್ದಾರೆ. ದಿನೇ ದಿನೇ ಇಲ್ಲಿ ಸಹ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ.

ನಟ ಯಶ್ ಅವರು ನಟಿಸಿ, ನಿರ್ಮಿಸಿದ ' ರಾಮಾಯಣ' (ಭಾಗ 1) ಸಿನಿಮಾವು ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ವಿಶ್ವಮಟ್ಟದಲ್ಲಿ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಯಶ್ ನಟನೆಗೆ, ಕಥೆಯನ್ನು ಸವಿವರವಾಗಿ ತೋರಿಸುವ ರೀತಿಗೆ, ದೃಶ್ಯ ವೈಭವಕ್ಕೆ ಪ್ರೇಕಕರು ಫಿದಾ ಆಗಿದ್ದಾರೆ. ಸಿನಿಮಾ 1000 ಕೋಟಿ ರೂ. ಗಳಿಸಿ ಹೊಸ ದಾಖಲೆ ಬರೆದಿದೆ. ಇದೇ ಸಿನಿಮಾ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಅದು 'ಜಟಾಯು' ಪಕ್ಷಿ...

Kerala Jatayu Park

ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋದ ಬಳಿಕ ಧರ್ಮ ರಕ್ಷಣೆಗೆ ಮುಂದಾಗುವ 'ಜಟಾಯು' ಹೋರಾಟದಲ್ಲಿ ಕೊನೆಯುಸಿರೆಳೆಯುತ್ತದೆ. ಸಿನಿಮಾದಲ್ಲಿ ರಾವಣನಾಗಿ ಅಬ್ಬರಿಸಿರುವ ಯಶ್ ಹಾಗೂ ಸೀತೆ ಕಾಪಾಡಲು ಬಂದ 'ಜಟಾಯು' ಪಕ್ಷಿ ನಡುವಿನ ಕಾದಾಟವನ್ನು ಅತ್ಯಂತ ವಿಶಿಷ್ಟವಾಗಿ, ನೋಡುಗರ ಮನಮುಟ್ಟುವಂತೆ ಚಿತ್ರೀಕರಿಸಲಾಗಿದೆ. ಸಿನಿಮಾ ನೋಡಿದವರ ಮನಸ್ಸಿನಲ್ಲಿ 'ಜಟಾಯು' ಸಾವು ಅಚ್ಚಳಿಯದೇ ಉಳಿದು ಬಿಡುತ್ತದೆ.

Premada Oorali: ಕಡಿಮೆ ಬಜೆಟ್‌ನ 'ಪ್ರೇಮದ ಊರಲಿ' ಗೆಲುವಿಗೆ ಯಶ್ ಫಿದಾ; ಇಂಡಸ್ಟ್ರಿ ಬಗ್ಗೆ ರಾಕಿ ಬಾಯ್ ಮಾತು
Premada Oorali: ಕಡಿಮೆ ಬಜೆಟ್‌ನ 'ಪ್ರೇಮದ ಊರಲಿ' ಗೆಲುವಿಗೆ ಯಶ್ ಫಿದಾ; ಇಂಡಸ್ಟ್ರಿ ಬಗ್ಗೆ ರಾಕಿ ಬಾಯ್ ಮಾತು

ಕೊಲ್ಲಂ ಜಿಲ್ಲೆಯಲ್ಲಿದೆ 'ಜಟಾಯು' ಬೃಹತ್ ಆಕೃತಿ

ಈ ಸಿನಿಮಾದ ಪ್ರೇರಣೆಯಿಂದಲೇ ರಾಮಾಯಣ ನೋಡಿದ ಜನರು ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ 'ಜಟಾಯು' ಆಕೃತಿ (Jatayu Statue) ಪ್ರವಾಸಿ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ರಾಮಾಯಣದಲ್ಲಿ ರಾವಣನಿಂದ ಒಂದು ರೆಕ್ಕೆ ಕತ್ತರಿಸಿದ 'ಜಟಾಯು' ಈ ಕೊಲ್ಲಂ ಜಿಲ್ಲೆಯ ಚಯಡಮಂಗಲಂನ ಈ ಪ್ರವಾಸಿ ಸ್ಥಳದಲ್ಲಿ ಬಿದ್ದಿತ್ತು ಎಂಬ ಪ್ರತೀತಿ ಇದೆ.

ಈ ಐತಿಹ್ಯದಿಂದಲೇ 'ಜಟಾಯು' ಬಿದ್ದ ಸ್ಥಳವನ್ನು ಗಮನಾರ್ಹವಾಗಿ, ವಿಶೇಷ ಪ್ರವಾಸಿ ತಾಣವಾಗಿ ಅಂದಾಜು 100 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಒಂದು ರೆಕ್ಕೆ ಇಲ್ಲದ ಬೃಹತ್ 'ಜಟಾಯು' ಆಕೃತಿಯನ್ನು ಇಲ್ಲಿ ಸ್ಥಾಪಿಸಲಾಗಿದೆ. ಆಕಾಶದತ್ತ ನೋಡುತ್ತ ಮಲಗಿದಂತೆ ಕಾಣುವ ಈ 'ಜಟಾಯು' ನೋಡಲು ಹಿಂದಿನಿಂದಲೂ ಬಹಳಷ್ಟು ಪ್ರವಾಸಿಗರು ತೆರಳುತ್ತಿದ್ದರು.

'ರಾಮಾಯಣ' ಬಳಿಕ 'ಜಟಾಯು' ವೀಕ್ಷಕರ ಸಂಖ್ಯೆ ಏರಿಕೆ!

ಆದರೆ ರಾಮಾಯಣ ಸಿನಿಮಾ ಬಿಡುಗಡೆ ಆಗುವವರೆಗೂ ಈ ಸ್ಥಳದ ಕುರಿತು ಹೆಚ್ಚಿನ ಮಂದಿಗೆ ತಿಳಿದಿರಲಿಲ್ಲ. ಅಲ್ಲದೇ ಆ ಸ್ಥಳ ಮತ್ತು ಜಟಾಯು ಪಕ್ಷಿಯ ತ್ಯಾಗ, ಸಾಹಸ ಕುರಿತು ಅಷ್ಟಾಗಿ ಗಮನಿಸಿರಲಿಲ್ಲ. ಆದರೆ ಯಶ್ ಅವರ ರಾಮಾಯಣ ನೋಡಿದ ಬಳಿಕ ಪ್ರೇಕ್ಷಕರಿಗೆ ವಿಶೇಷ ಕುತೂಹಲವೊಂದು ಮೂಡಿದೆ. ಈ ಕಾರಣಕ್ಕೇನೆ ಬೃಹತ್ ಜಟಾಯು ಆಕೃತಿ ನಿರ್ಮಿಸಿದ ಕೊಲ್ಲಂನ ತಾಣಕ್ಕೆ ಜನರು ಭೇಟಿ ನೀಡುತ್ತಿವುದು ಕಂಡು ಬಂದಿದೆ.

Jailer-2 OTT: ಬೆಂಗಳೂರಿಗೆ ದಿಢೀರ್ ಆಗಮಿಸಿದ ನಟ ರಜನಿಕಾಂತ್! ಕತ್ತರಿ ಬಿದ್ದ 30 ನಿಮಿಷಗಳ ಸೀನ್‌ಗಳ ಜತೆ 'ಜೈಲರ್-2' ಓಟಿಟಿಗೆ
Jailer-2 OTT: ಬೆಂಗಳೂರಿಗೆ ದಿಢೀರ್ ಆಗಮಿಸಿದ ನಟ ರಜನಿಕಾಂತ್! ಕತ್ತರಿ ಬಿದ್ದ 30 ನಿಮಿಷಗಳ ಸೀನ್‌ಗಳ ಜತೆ 'ಜೈಲರ್-2' ಓಟಿಟಿಗೆ

ಸೀಗೆ ಗುಡ್ಡದಲ್ಲಿ ಜನವೋ ಜನ! ದಟ್ಟಣೆ ಸೃಷ್ಟಿ

ಈ ಹಿಂದೆ 'ಪ್ರೇಮದ ಊರಲಿ' ಸಿನಿಮಾ ಬಿಡುಗಡೆಯಾಗಿ, ಇಂದಿಗೂ ಉತ್ತಮ ಪ್ರದರ್ಶನ ಕಾಣುತ್ತಿದೆ. 50 ದಿನ ಪೂರೈಸಿದ ಸಿನಿಮಾ ಕೆಲವು ದೃಶ್ಯಗಳನ್ನು ಹಾಸನ ಜಿಲ್ಲೆಯ ಸೀಗೆ ಗುಡ್ಡದ ಸಿದ್ದೇಶ್ವರ ಬೆಟ್ಟ, ಮಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ಚಿತ್ರೀಕರಿಸಲಾಗಿತ್ತು. ಗುಡ್ಡಗಳ ಮಧ್ಯೆ ತಂಪು ಗಾಳಿ, ಹಸಿರು ವಾತಾವರಣದಲ್ಲಿ ಸೆರೆ ಹಿಡಿದ ಸಿನಿಮಾ ದೃಶ್ಯಗಳು ಪ್ರೇಕ್ಷಕರನ್ನು ಆ ಸ್ಥಳಕ್ಕೆ ಭೇಟಿ ನೀಡುವಂತೆ ಮಾಡಿತು. ನಿತ್ಯ ಸುಮಾರು 50 ಜನರು ಭೇಟಿ ನೀಡುತ್ತಿದ್ದ ಈ ಸೀಗೆ ಗುಡ್ಡಕ್ಕೆ ಇಂದು ಕಾಲಿಡಲು ಜಾಗವೇ ಇರದಷ್ಟು ಜನರು ಭೇಟಿ ನೀಡುತ್ತಿದ್ದು, ರಸ್ತೆಯುದ್ದಕ್ಕೂ ಸಂಚಾರ ದಟ್ಟಣೆ ಉಂಟಾದ ಬಗ್ಗೆ ಇತ್ತೀಚೆಗೆ ವರದಿ ಆಗಿತ್ತು. ಮುಂದಿನ ದಿನಗಳಲ್ಲಿ ಕೇರಳ ಕೊಲ್ಲಂನ ಚಯಡಮಂಗಲಂನ ಇದೇ ಪರಿಸ್ಥಿತಿ ಉಂಟಾದರೂ ಅಚ್ಚರಿ ಇಲ್ಲ ಎನ್ನುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+