Daily Horoscope May 20: ಈ ರಾಶಿಯವರ ಆರ್ಥಿಕ ಸಮಸ್ಯೆಗಳು ಇಂದಿಗೆ ಅಂತ್ಯ, ತಾಳ್ಮೆ ಕಾಯ್ದುಕೊಳ್ಳಿ, ದಿನ ಭವಿಷ್ಯ

Daily Horoscope May 20: ಮೇ 20ರಂದು ಬುಧವಾರ ಎಲ್ಲ 12 ರಾಶಿಗಳ ಗೋಚಾರ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ವೈದಿಕ ಜ್ಯೋತಿಷ್ಯ ಪ್ರಕಾರ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ದ್ವಾದಶ ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲಗಳು ಹೇಗಿವೆ ಎಂಬ ವಿವರ ಇಲ್ಲಿ ತಿಳಿಯಿರಿ.

ದ್ವಾದಶ ರಾಶಿಗಳ ದಿನ ಭವಿಷ್ಯ

ಮೇಷ ರಾಶಿ:

ಅತಿಯಾದ ಉತ್ಸಾಹ ಹೊಂದಿದ್ದು, ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಿರುತ್ತಾರೆ. ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ಯಶಸ್ಸು ಸಿಗುವುದು. ಹಣಕಾಸಿನ ಸಮಸ್ಯೆಗಳು ಬಗೆಹರಿಯುವುದು. ಏನೇ ಕೆಲಸ ಮಾಡುವುದಾದರೂ ತಾಳ್ಮೆ ಅಗತ್ಯ. ದೃಢನಿಶ್ಚಯದಿಂದಿರಿ. ಪ್ರಮುಖ ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಿ.

Daily Horoscope May 20

ವೃಷಭ ರಾಶಿ:

ಸಕಾರಾತ್ಮಕತೆ ಮತ್ತು ಶಾಂತಿಯಿಂದ ತುಂಬಿರುವ ದಿನವಾಗಿರುವುದು. ಹಣಕಾಸಿನ ಸ್ಥಿತಿ ಸ್ಥಿರವಾಗಿರುವುದು. ಆದರೂ ಅನಗತ್ಯ ಖರ್ಚುಗಳ ಮೇಲೆ ಕಡಿವಾಣ ಅಗತ್ಯ. ಮಾನಸಿಕ ಒತ್ತಡ ಕಡಿಮೆಯಾಗುವುದು.

ಮಿಥುನ ರಾಶಿ:

ಆತ್ಮವಿಶ್ವಾಸದಿಂದ ಕೂಡಿರುವ ದಿನವಾಗಿರುತ್ತದೆ. ಯಾರ ಜೊತೆಗಾದರೂ ಮಾತಾಡುವಾಗ ನಿಮ್ಮ ವಿಚಾರಗಳನ್ನು ಸ್ಪಷ್ಟವಾಗಿ ಇಡಿ. ಹಠಾತ್ ಖರೀದಿ, ಖರ್ಚುಗಳು ಎದುರಾಗುವುದು. ಆದರೂ ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಕರ್ಕಾಟಕ ರಾಶಿ:

ತಾಳ್ಮೆ ಇದ್ದರೆ ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವುದು ಸಾಧ್ಯವಾಗುವುದು. ವಿಶ್ರಾಂತಿ, ಧ್ಯಾನ ಅಥವಾ ಶಾಂತಿಯುತ ಚಟುವಟಿಕೆಗಳ ಮೂಲಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು.

ಸಿಂಹ ರಾಶಿ:

ವೃತ್ತಿಪರ ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಗಳಲ್ಲಿ ಪ್ರಗತಿ ಇರುವುದು. ಸಾಮಾಜಿಕ ಸಂವಹನಗಳು ಮೆಚ್ಚುಗೆ, ಪ್ರೋತ್ಸಾಹ ಮತ್ತು ಅಮೂಲ್ಯವಾದ ಸಂಬಂಧಗಳನ್ನು ಬಲಪಡಿಸಲು ಅವಕಾಶಗಳನ್ನು ನೀಡುತ್ತವೆ. ದೈಹಿಕ ಶಕ್ತಿಯು ಉನ್ನತ ಮಟ್ಟದಲ್ಲಿರುತ್ತದೆ.

ಕನ್ಯಾ ರಾಶಿ:

ಸಕಾರಾತ್ಮಕ ಶಕ್ತಿಯಿಂದ ತುಂಬಿದ ದಿನವಾಗಿರುವುದು. ನಿಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ ಸಿಗುವುದು. ಅನಗತ್ಯ ಖರ್ಚುಗಳನ್ನು ತಪ್ಪಿಸಿದರೆ ಆರ್ಥಿಕ ಸ್ಥಿರತೆ ಬೆಳೆಯುತ್ತದೆ.

ತುಲಾ ರಾಶಿ:

ಶಾಂತಿ ಕಾಪಾಡಿಕೊಳ್ಳುವುದು ಮುಖ್ಯವಾಗುವುದು. ಮಾತನಾಡುವಾಗ ಎಚ್ಚರಿಕೆ ಅಗತ್ಯ. ನಿಮ್ಮ ಮಾತಿನಿಂದ ಯಾರಿಗೂ ನೋವಾಗದಂತೆ ನೋಡಿಕೊಳ್ಳಿ. ಹಣಕಾಸಿನ ಸ್ಥಿತಿ ಬಲವಾಗಿರುವುದು.

ವೃಶ್ಚಿಕ ರಾಶಿ:

ಭಾವನಾತ್ಮಕವಾಗಿ ಬಲಶಾಲಿಯಾಗಿರುವಿರಿ. ದೃಢನಿಶ್ಚಯ ತೆಗೆದುಕೊಳ್ಳುವಿರಿ. ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಎದುರಾಗುವ ಸಮಸ್ಯೆಗಳನ್ನು ತಾಳ್ಮೆಯಿಂದ ನಿಭಾಯಿಸುವಿರಿ.

ಧನು ರಾಶಿ:

ಆಶಾವಾದಿಯಾಗಿರುವಿರಿ. ಹೊಸ ಅವಕಾಶಗಳು ಎದುರಾಗುವುದು. ವೃತ್ತಿಯಲ್ಲಿ ಅಭಿವೃದ್ಧಿಯಾಗುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ಎಲ್ಲಾ ದಿಕ್ಕಿನಲ್ಲಿಯೂ ಯಶಸ್ಸು ನಿಮ್ಮದಾಗುವುದು. ಹೊಸ ಸಾಧ್ಯತೆಗಳಿಗೆ ಮುಕ್ತರಾಗಿರಿ.

ಮಕರ ರಾಶಿ:

ದಿನವಿಡೀ ಶಿಸ್ತು, ತಾಳ್ಮೆ ಮತ್ತು ಪ್ರಾಯೋಗಿಕ ಚಿಂತನೆಯಿಂದ ಪ್ರಯೋಜನ ಸಿಗುವುದು. ನಿರಂತರ ಪ್ರಯತ್ನಗಳು ಯಸ್ಸು ನೀಡುವುದು. ದೀರ್ಘಕಾಲೀನ ಗುರಿಗಳತ್ತ ಹೆಜ್ಜೆ ಹಾಕುವಿರಿ. ಸಮರ್ಪಣೆ ಮತ್ತು ವಿಶ್ವಾಸಾರ್ಹತೆಯಿಂದಾಗಿ ನಿಮ್ಮ ಸುತ್ತಲಿನ ಜನರಿಂದ ಮೆಚ್ಚುಗೆ ಮತ್ತು ಗೌರವವನ್ನು ಗಳಿಸುವಿರಿ.

ಕುಂಭ ರಾಶಿ:

ನಿಮ್ಮ ವಿಶಿಷ್ಟ ಆಲೋಚನೆಗಳು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತು ಸವಾಲುಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಹಾಯ ಮಾಡುವುದು. ನೀವು ಕೆಲಸ ಮಾಡುವ ರೀತಿಗೆ ನಿಮ್ಮ ಸುತ್ತಲಿನ ಜನರು ಸ್ಫೂರ್ತಿ ಪಡೆಯುವರು. ವೈಯಕ್ತಿಕ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದರೆ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗುವುದು.

ಮೀನ ರಾಶಿ:

ಅನಗತ್ಯ ಖರ್ಚು, ಆತುರದ ನಿರ್ಧಾರಗಳನ್ನು ತಪ್ಪಿಸುವುದರಿಂದ ಹಣಕಾಸಿನ ಸಮಸ್ಯೆ ಬಗೆಹರಿಯುವುದು. ಸಹಾನುಭೂತಿಯ ಸ್ವಭಾವವು ನಿಮ್ಮನ್ನು ಮತ್ತು ಇತರರನ್ನು ಭಾವನಾತ್ಮಕವಾಗಿ ಬೆಂಬಲಿಸುತ್ತದೆ. ಭವಿಷ್ಯದ ಅವಕಾಶಗಳಿಗಾಗಿ ಹೊಸ ಭರವಸೆ ಸಿಗುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+