Fifa World Cup 2022: ತಂಡಗಳು, ಗುಂಪು, ಪಂದ್ಯದ ಸಮಯ ಮಾರ್ಗದರ್ಶಿ
ಜಾಗತಿಕ ಫುಟ್ಬಾಲ್ ಸಮರಕ್ಕೆ ಕತಾರ್ ಸಜ್ಜುಗೊಂಡಿದೆ. ಮಾಜಿ ಚಾಂಪಿಯನ್ ಸ್ಪೆನ್ ಹಾಗೂ ಜರ್ಮನಿ ಮುಖಾಮುಖಿಯೊಂದಿಗೆ ಭರ್ಜರಿ ಆರಂಭ ಪಡೆಯಲಿದೆ. 22ನೇ ಆವೃತ್ತಿಯ ಫೀಫಾ ಹಬ್ಬಕ್ಕೆ ಗಲ್ಫ್ ರಾಷ್ಟ್ರ ಪೂರ್ಣವಾಗಿ ತಯಾರಾಗಿದ್ದು, ಹಾಲಿ ಚಾಂಪಿಯನ್ ಫ್ರಾನ್ಸ್ ಉತ್ತಮ ಪ್ರದರ್ಶನ ನೀಡುವ ಭರವಸೆಯೊಂದಿಗೆ ಕಣಕ್ಕಿಳಿಯಲಿದೆ. ಈ ಬಾರಿ ಕೂಡಾ ವಿಶ್ವಕಪ್ ವೇಳೆ ದಿಗ್ಗಜರಾದ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಲಿಯೊನೆಲ್ ಮೆಸ್ಸಿ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತದೆ. ಇಬ್ಬರು ತಮ್ಮ ರಾಷ್ಟ್ರಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವ ತವಕದಲ್ಲಿದ್ದಾರೆ. ಬಹುಶಃ ಇಬ್ಬರಿಗೂ ಇದು ಕೊನೆ ವಿಶ್ವಕಪ್ ಟೂರ್ನಮೆಂಟ್ ಆಗಲಿದೆ.
ನವೆಂಬರ್ 20ರಂದು ಭಾನುವಾರ ಫುಟ್ಬಾಲ್ ಪ್ರೇಮಿಗಳಿಗೆ ಪರಿಷೆ ಆರಂಭವಾಗುವ ಕ್ಷಣ. ಅತಿಥೇಯ ಕತಾರ್ ಹಾಗೂ ದಕ್ಷಿಣ ಅಮೆರಿಕ ರಾಷ್ಟ್ರ ಈಕ್ವೆಡಾರ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಸುಮಾರು ಒಂದು ತಿಂಗಳ ಅವಧಿಯಲ್ಲಿ ರೋಚಕ ಪಂದ್ಯಗಳನ್ನು ಕಾಣುವ ನಿರೀಕ್ಷೆಯಿದೆ. ಕತಾರ್ ಸಂಸ್ಥಾಪನಾ ದಿನದಂದೇ (ಡಿಸೆಂಬರ್ 18) ಅಂತಿಮ ಹಣಾಹಣಿ ನಡೆಯುತ್ತಿರುವುದು ವಿಶೇಷ.
ತಂಡ ಹಾಗೂ ಗುಂಪುಗಳು
ವಿಶ್ವಕಪ್ ಪಂದ್ಯಾವಳಿ, ತಂಡ ಹಾಗೂ ಗುಂಪುಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅರ್ಹತಾ ಸುತ್ತಿನಿಂದ ಪ್ರವೇಶಿಸಿರುವ 32 ತಂಡಗಳು ಸ್ಪರ್ಧಿಸಲಿವೆ. 8 ಗುಂಪಿನ ಟಾಪ್ ಎರಡು ತಂಡಗಳು ಅಂದರೆ 16 ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿವೆ. ಡಿಸೆಂಬರ್ 3ರಿಂದ ನಾಕೌಟ್ ಪಂದ್ಯಗಳು ನಡೆಯಲಿವೆ.

ಎ ಗುಂಪು: ಕತಾರ್, ಈಕ್ವೆಡಾರ್, ಸೆನೆಗಲ್, ನೆದರ್ಲೆಂಡ್ಸ್
ಬಿ ಗುಂಪು: ಇಂಗ್ಲೆಂಡ್, ಇರಾನ್, ಯುಎಸ್ಎ, ವೇಲ್ಸ್
ಸಿ ಗುಂಪು: ಅರ್ಜೆಂಟೀನಾ, ಸೌದಿ ಅರೇಬಿಯಾ, ಮೆಕ್ಸಿಕೋ, ಪೋಲೆಂಡ್
ಡಿ ಗುಂಪು: ಫ್ರಾನ್ಸ್, ಆಸ್ಟ್ರೇಲಿಯಾ, ಡೆನ್ಮಾರ್ಕ್, ಟ್ಯುನೇಶಿಯಾ
ಇ ಗುಂಪು: ಸ್ಪೇನ್, ಕೋಸ್ಟರಿಕಾ, ಜರ್ಮನಿ, ಜಪಾನ್
ಎಫ್ ಗುಂಪು: ಬೆಲ್ಜಿಯಂ, ಕೆನಡಾ, ಮೊರಾಕ್ಕೋ, ಕ್ರೊವೇಶಿಯಾ
ಜಿ ಗುಂಪು: ಬ್ರೆಜಿಲ್, ಸೆರ್ಬಿಯಾ, ಸ್ವಿಟ್ಜರ್ಲೆಂಡ್, ಕೆಮರೂನ್
ಎಚ್ ಗುಂಪು: ಪೋರ್ಚುಗಲ್, ಘಾನಾ, ಉರುಗ್ವೆ, ದಕ್ಷಿಣ ಕೊರಿಯಾ
ಪಂದ್ಯ ಟೈಮಿಂಗ್ಸ್ (ಭಾರತೀಯ ಕಾಲಮಾನ)
ಫೀಫಾ ವಿಶ್ವಕಪ್ ಪಂದ್ಯಾವಳಿ ಭಾರತೀಯ ಕಾಲಮಾನ ಪ್ರಕಾರ 3:30 pm, 6:30 pm, 9:30 pm and 12:30 amಕ್ಕೆ ವೀಕ್ಷಿಸಬಹುದು.
ಫೀಫಾ ವಿಶ್ವಕಪ್: 1872ರಲ್ಲಿ ಗ್ಲಾಸ್ಗೋನಲ್ಲಿ ಸ್ಕಾಲೆಂಡ್ ಹಾಗೂ ಇಂಗ್ಲೆಂಡ್ ನಡುವೆ ನಡೆದ ಪಂದ್ಯ ವಿಶ್ವದ ಮೊಟ್ಟಮೊದಲ ಅಂತಾರಾಷ್ಟ್ರೀಯ ಪಂದ್ಯ ಎನಿಸಿತು. ನಂತರ 1900, 1904 ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಫುಟ್ಬಾಲ್ ಸೇರ್ಪಡೆಯಾದರೂ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯನ್ನು ಬೆಳೆಸಲು ಕ್ರಿಕೆಟ್ ಗೆ ಐಸಿಸಿ ಇರುವಂತೆ, ಜಾಗತಿಕ ಮಟ್ಟದಲ್ಲಿ ಫುಟ್ಬಾಲ್ ಕ್ರೀಡೆ ನಿಯಂತ್ರಣಕ್ಕೆ ಫೆಡರೇಷನ್ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್(ಫೀಫಾ) ಹುಟ್ಟಿಕೊಂಡಿತು.

1930 ರ ಮೊದಲ ಫುಟ್ಬಾಲ್ ವಿಶ್ವಕಪ್ ನಂತರದಿಂದ ಪ್ರತಿ ವಿಶ್ವಕಪ್ ಅನ್ನು ಫೀಫಾ ವಿಶ್ವಕಪ್ ಎಂದೇ ಸಂಬೋಧಿಸಲಾಗುತ್ತದೆ. 1942 ಹಾಗೂ 1946 ರಲ್ಲಿ ಎರಡನೇ ವಿಶ್ವ ಸಮರದ ಕಾರಣದಿಂದ ವಿಶ್ವಕಪ್ ಪಂದ್ಯಾವಳಿ ನಡೆಯಲಿಲ್ಲ. ಇದುವರೆವಿಗೂ 18 ವಿಶ್ವಕಪ್ ಟೂರ್ನಿಮೆಂಟ್ ನಡೆದಿದೆ. ಬ್ರೆಜಿಲ್ ತಂಡ ಎಲ್ಲಾ ಟೂರ್ನಿಮೆಂಟ್ ಗಳಲ್ಲಿ ಆಡಿದ ಕೀರ್ತಿ ಹೊಂದಿದೆ. ಬ್ರೆಜಿಲ್ 5, ಇಟಲಿ 4, ಜರ್ಮನಿ 3, ಉರುಗ್ವೆ, ಅರ್ಜೆಂಟೈನಾ ತಲಾ ಎರಡು ಬಾರಿ ಹಾಗೂ ಇಂಗ್ಲೆಂಡ್ ಮತ್ತು ಫ್ರಾನ್ಸ್ ಒಮ್ಮೆ ಮಾತ್ರ ವಿಶ್ವಕಪ್ ಗೆದ್ದಿದ್ದಾರೆ.
ವಿಶ್ವಕಪ್ ಗೆ ಅರ್ಹತೆ: ಪ್ರತಿ ವಿಶ್ವಕಪ್ ಮುಗಿದ ಆರು ತಿಂಗಳೊಳಗೆ ಮುಂದಿನ ವಿಶ್ವಕಪ್‌ಗೆ ತಯಾರಿ ಆರಂಭವಾಗುತ್ತದೆ ಎಂದರೆ ತಪ್ಪಾಗಲಾರದು. ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳು 1934 ರ ವಿಶ್ವಕಪ್ ನಂತರ ಶುರುವಾದ ಅರ್ಹತಾ ಸುತ್ತಿನ ಪಂದ್ಯಗಳ ಪರ್ವಕಾಲ. ಇಂದಿನವರೆಗೂ ಅದೇ ಮಾದರಿಯಲ್ಲಿ ಮುಂದುವರೆದಿದೆ. ಅಫ್ರಿಕ, ಏಷ್ಯಾ, ಉತ್ತರ ಹಾಗೂ ಮಧ್ಯ ಅಮೆರಿಕ, ಕೆರೆಬಿಯನ್, ದಕ್ಷಿಣ ಅಮೆರಿಕ, ಓಷಾನಿಯ ಮತ್ತು ಯುರೋಪ್ ರಾಷ್ಟ್ರಗಳು ಹೀಗೆ ವಿವಿಧ ಗುಂಪಿನಡಿಯಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತವೆ. ಅರ್ಹತಾ ಸುತ್ತಿನ ಪಂದ್ಯಗಳು ಮುಗಿಯಲು ಕನಿಷ್ಠವೆಂದರೂ ಮೂರು ವರ್ಷಗಳು ಬೇಕಾಗುತ್ತದೆ. ಈ ಬಾರಿಯ ವಿಶ್ವಕಪ್‌ಗೆ ಒಟ್ಟು 206 ರಾಷ್ಟ್ರಗಳು 2019ರ ಜೂನ್6 ರಿಂದ 2022ರ ಜೂನ್ 14ರ ತನಕ ಅರ್ಹತಾ ಸುತ್ತು ನಡೆದು 31 ರಾಷ್ಟ್ರಗಳು ಮುಂದಿನ ಹಂತಕ್ಕೆ ಆಯ್ಕೆಯಾಗಿವೆ. ಅತಿಥೇಯ ರಾಷ್ಟ್ರವಾಗಿ ಕತಾರ್ ಕೂಡಾ ಅರ್ಹತೆ ಪಡೆದುಕೊಂಡಿದೆ.
ಪ್ರಶಸ್ತಿಗಳು
ದ ಗೋಲ್ಡನ್ ಬಾಲ್: ಶ್ರೇಷ್ಠ ಆಟಗಾರ ಪ್ರಶಸ್ತಿ ( ಮಾಧ್ಯಮ ಪ್ರತಿನಿಧಿಗಳ ಮತಗಳ ಮೇಲೆ ನಿರ್ಧಾರ). ಇದೇ ರೀತಿ ಸಿಲ್ವರ್ ಹಾಗೂ ಬ್ರೌಂಜ್ ಬಾಲ್ ಕೂಡ ನೀಡಲಾಗುತ್ತದೆ.
ದ ಗೋಲ್ಡನ್ ಬಾಲ್: ಶ್ರೇಷ್ಠ ಆಟಗಾರ ಪ್ರಶಸ್ತಿ ( ಮಾಧ್ಯಮ ಪ್ರತಿನಿಧಿಗಳ ಮತಗಳ ಮೇಲೆ ನಿರ್ಧಾರ). ಇದೇ ರೀತಿ ಸಿಲ್ವರ್ ಹಾಗೂ ಬ್ರೌಂಜ್ ಬಾಲ್ ಕೂಡ ನೀಡಲಾಗುತ್ತದೆ.
ದ ಗೋಲ್ಡನ್ ಶೂ: ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಹೊಡೆದ ಪಟುವಿಗೆ ಚಿನ್ನದ ಬೂಟು ಲಭಿಸುತ್ತದೆ.
ಶ್ರೇಷ್ಠ ಗೋಲ್ ಕೀಪರ್‌ಗೆ ಯಾಷಿನ್ ಪ್ರಶಸ್ತಿ ಶ್ರೇಷ್ಠ ಯುವ ಫುಟ್ಬಾಲ್ ಪಟು: 21 ವರ್ಷ ವಯಸ್ಸಿನೊಳಗಿನ ಯುವ ಆಟಗಾರಿಗೆ ಪ್ರಶಸ್ತಿ ಮೀಸಲು
ಫೇರ್ ಪ್ಲೇ ಪ್ರಶಸ್ತಿ : ಜನ ಮೆಚ್ಚುಗೆ ಪಡೆವ ಸಭ್ಯ ತಂಡವನ್ನು ಆರಿಸಲಾಗುತ್ತದೆ.
ಪಂದ್ಯ ವೀಕ್ಷಣೆ
ವಯಾಕಾಮ್ ನೆಟ್ವರ್ಕ್ 18 ವಾಹಿನಿ, ಸ್ಫೋರ್ಟ್ 18 ಹಾಗೂ ಸ್ಫೋರ್ಟ್ 18 ಎಚ್ ಡಿ ಅಲ್ಲದೇ ಜಿಯೋ ಸಿನಿಮಾ ಆಪ್, ಜಿಯೋ ಟಿವಿ(app)ಯಲ್ಲಿ ಪ್ರಸಾರವಾಗಲಿದೆ.












Click it and Unblock the Notifications