Karnataka Dam Water Level: ಮುಂಗಾರು ಅಬ್ಬರಕ್ಕೆ ರಾಜ್ಯದ ಅಣೆಕಟ್ಟುಗಳಿಗೆ ಜೀವಕಳೆ, ಇಂದಿನ ಮಟ್ಟ ಎಷ್ಟಿದೆ?

ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆ ಆರ್ಭಟಿಸುತ್ತಿದೆ. ಕರಾವಳಿ, ಪಶ್ಚಿಮ ಘಟ್ಟಗಳ ಸಾಲಿನ ಅಲಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆ ಸುರಿದಿದೆ. ಕಳೆದ ವರ್ಷ ಸುರಿದ ಉತ್ತಮ ಮುಂಗಾರು, ಹಿಂಗಾರು ಮಳೆಯಿಂದಾಗಿ ರಾಜ್ಯದ ಕಾವೇರಿ, ಕಬಿನಿ ಸೇರಿ ಕೆಲವು ಜಲಾಶಯಗಳಲ್ಲಿ ತಕ್ಕಮಟ್ಟಿಗಿನ ನೀರಿತ್ತು. ಇನ್ನುಳಿದಂತೆ ಹಲವಾರು ಡ್ಯಾಂಗಳು ನೀರಿಲ್ಲದೇ ಬಣಗುಡುತ್ತಿದ್ದವು. ಇದೀಗ ವ್ಯಾಪಕ ಮಳೆಯಿಂದಾಗಿ ಜೂನ್ ಎರಡನೇ ವಾರದಲ್ಲಿ ವಿವಿಧ ಅಣೆಕಟ್ಟುಗಳಲ್ಲಿ ಒಳಹರಿವು ಹೆಚ್ಚಾಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ (ಜೂನ್ 11) ನೀರಿನ ಮಟ್ಟದ ಮಾಹಿತಿ ಮುಂದಿದೆ.

ಕೆಲವು ವಾರಗಳಿಂದ ಕೇರಳ ಭಾಗದಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಿದೆ. ಜಲಾಶಯಗಳ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಸುರಿದ ಪರಿಣಾಮ ಕರ್ನಾಟಕ ಪ್ರಮುಖ ಅಣೆಕಟ್ಟುಗಳಾದ ಕೆಆರ್‌ ಎಸ್, ಕಬಿನಿ, ಲಿಂಗನಮಕ್ಕಿ, ಹಾರಂಗಿ, ನಾರಾಯಣಪುರದಲ್ಲಿ ಒಳಹರಿವು ಏರಿಕೆ ಆಗಿದೆ. ಹೊರ ಹರಿವುಗಿಂತ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಮುಂದಿನ ಕೆಲವೇ ವಾರಗಳಲ್ಲಿ ಎಲ್ಲ ಡ್ಯಾಂಗಳಲ್ಲಿ ಜೀವಕಳೆ ಮರುಕಳಿಸುತ್ತದೆ.

Karnataka Dams

ಕೃಷ್ಣ ರಾಜ ಸಾಗರ (KRS) ಅಣೆಕಟ್ಟು ಕಳೆದ ವರ್ಷ ಜೂನ್ ತಿಂಗಳಲ್ಲೇ ನಿರೀಕ್ಷೆಗೂ ಮೀರಿ ಭರ್ತಿ ಆಗಿತ್ತು. ಸುಮಾರು ಮೂರು ಸಲ ತುಂಬಿ ಹರಿದಿತ್ತು. ಇದರಿಂದ ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ ಸೇರಿ ವಿವಿಧ ಭಾಗಗಳು, ಅಷ್ಟೇ ಯಾಕೆ ತಮಿಳುನಾಡಿಗೂ ಉತ್ತಮ ನೀರಿನ ಪೂರೈಕೆ ಆಗಿ ಬೇಸಿಗೆ ಹಾಹಾಕಾರ ತಪ್ಪಿತ್ತು. ಈ ಸಲವು ಉತ್ತಮ ಮುಂಗಾರಿನ ಆರಂಭವಾಗಿದ್ದು, ಇದೇ ರೀತಿ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಜುಲೈ ಹೊತ್ತಿಗೆ ಡ್ಯಾಂಗಳಲ್ಲಿ ನಿರೀಕ್ಷಿತ ನೀರು ಸಂಗ್ರಹವಾಗುವ ಸಾಧ್ಯತೆ ಇದೆ.

Karnataka Weather: ಮುಂದಿನ 48 ಗಂಟೆ ಕರಾವಳಿ, ಒಳನಾಡು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಎಚ್ಚರಿಕೆ, ರೆಡ್ ಅಲರ್ಟ್
Karnataka Weather: ಮುಂದಿನ 48 ಗಂಟೆ ಕರಾವಳಿ, ಒಳನಾಡು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಎಚ್ಚರಿಕೆ, ರೆಡ್ ಅಲರ್ಟ್

ಇಂದು 2026 ಜೂನ್ 11ರ ಹೊತ್ತಿಗೆ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ, ಒಳ ಮತ್ತು ಹೊರ ಹರಿವು ಎಷ್ಟಾಗಿದೆ. ಪ್ರಮುಖವಾಗಿ ಕಳೆದ ವರ್ಷ ಇದೇ ದಿನ (2025 ಜೂನ್ 11) ಎಷ್ಟು ಪ್ರಮಾಣದ ಟಿಎಂಸಿ ನೀರಿತ್ತು ಎಂಬ ಮಾಹಿತಿ ಇಲ್ಲಿದೆ.

ರಾಜ್ಯದ ಜಲಾಶಯಗಳಲ್ಲಿ ಒಳಹರಿವು ಏರಿಕೆ

ಕೃಷ್ಣ ರಾಜ ಸಾಗರ (KRS) ಡ್ಯಾಂನ ಇಂದಿನ ಮಟ್ಟ

ಅಣೆಕಟ್ಟಿನ ಒಟ್ಟು ಸಾಮರ್ಥ್ಯ: 49.45 ಟಿಎಂಸಿ, ಕ್ಯೂಸೆಕ್

ಇಂದಿನ ಒಟ್ಟು ಸಂಗ್ರಹ: 11.40 ಟಿಎಂಸಿ

ಇಂದಿನ ಒಳಹರಿವು: 581 ಕ್ಯೂಸೆಕ್

ಹೊರ ಹರಿವು : 436 ಕ್ಯೂಸೆಕ್

2025 ಜೂನ್ 11ರ ಸಂಗ್ರಹ: 30.24 ಟಿಎಂಸಿ

ಕಬಿನಿ ಅಣೆಕಟ್ಟಿನ ನೀರಿನ ವಿವರ

ಅಣೆಕಟ್ಟಿನ ಒಟ್ಟು ಸಾಮರ್ಥ್ಯ: 19.52 ಟಿಎಂಸಿ

ಇಂದಿನ ಒಟ್ಟು ಸಂಗ್ರಹ : 4.69 ಟಿಎಂಸಿ

ಇಂದಿನ ಒಳಹರಿವು : 2446 ಕ್ಯೂಸೆಕ್

ಹೊರ ಹರಿವು: 600 ಕ್ಯೂಸೆಕ್

2025 ಜೂನ್ 11ರ ಸಂಗ್ರಹ: 15.89 ಟಿಎಂಸಿ

ಹಾರಂಗಿ ಜಲಾಶಯದ ಅಪ್ಡೇಟ್ಸ್

ಅಣೆಕಟ್ಟಿನ ಒಟ್ಟು ಸಾಮರ್ಥ್ಯ: 8.5 ಟಿಎಂಸಿ

ಇಂದಿನ ಒಟ್ಟು ಸಂಗ್ರಹ: 3.2 ಟಿಎಂಸಿ

ಇಂದಿನ ಒಳಹರಿವು: 350 ಕ್ಯೂಸೆಕ್

ಹೊರ ಹರಿವು : 180 ಕ್ಯೂಸೆಕ್

2025 ಜೂನ್ 11ರ ಸಂಗ್ರಹ: 6.25 ಟಿಎಂಸಿ

ನಾರಾಯಣಪುರ ಡ್ಯಾಂ ನೀರಿನ ಸಂಗ್ರಹ

ಅಣೆಕಟ್ಟಿನ ಒಟ್ಟು ಸಾಮರ್ಥ್ಯ: 33.31 ಟಿಎಂಸಿ

ಇಂದಿನ ಒಟ್ಟು ಸಂಗ್ರಹ: 20.82 ಟಿಎಂಸಿ

ಇಂದಿನ ಒಳಹರಿವು: 5024 ಕ್ಯೂಸೆಕ್

ಹೊರ ಹರಿವು: 733 ಕ್ಯೂಸೆಕ್

2025 ಜೂನ್ 11ರ ಸಂಗ್ರಹ: 25.73 ಟಿಎಂಸಿ

ಲಿಂಗನಮಕ್ಕಿ ಅಣೆಕಟ್ಟಿನ ಅಪ್ಡೇಟ್‌

ಅಣೆಕಟ್ಟಿನ ಒಟ್ಟು ಸಾಮರ್ಥ್ಯ: 151 ಟಿಎಂಸಿ

ಇಂದಿನ ಒಟ್ಟು ಸಂಗ್ರಹ: 17.82 ಟಿಎಂಸಿ

ಇಂದಿನ ಒಳಹರಿವು: 2080 ಕ್ಯೂಸೆಕ್

ಹೊರ ಹರಿವು: 2905 ಕ್ಯೂಸೆಕ್

2025 ಜೂನ್ 11ರ ಸಂಗ್ರಹ: 31.07 ಟಿಎಂಸಿ

ಸುಪಾ ಅಣೆಕಟ್ಟಿನ ನೀರಿನ ಮಾಹಿತಿ

ಅಣೆಕಟ್ಟಿನ ಒಟ್ಟು ಸಾಮರ್ಥ್ಯ: 145.33 ಟಿಎಂಸಿ

ಇಂದಿನ ಒಟ್ಟು ಸಂಗ್ರಹ: 31.17 ಟಿಎಂಸಿ

ಇಂದಿನ ಒಳಹರಿವು: 859 ಕ್ಯೂಸೆಕ್

ಹೊರ ಹರಿವು: 00 ಕ್ಯೂಸೆಕ್

2025 ಜೂನ್ 11ರ ಸಂಗ್ರಹ: 37.33 ಟಿಎಂಸಿ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ

ಅಣೆಕಟ್ಟಿನ ಒಟ್ಟು ಸಾಮರ್ಥ್ಯ: 105.79 ಟಿಎಂಸಿ

ಇಂದಿನ ಒಟ್ಟು ಸಂಗ್ರಹ: 9.88 ಟಿಎಂಸಿ

ಇಂದಿನ ಒಳಹರಿವು: 367 ಕ್ಯೂಸೆಕ್

ಹೊರ ಹರಿವು : 249 ಕ್ಯೂಸೆಕ್

2025 ಜೂನ್ 11ರ ಸಂಗ್ರಹ: 24.44 ಟಿಎಂಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+