ಟೀಂ ಇಂಡಿಯಾ 349 ರನ್ ಗಳಿಸಿದರೂ ಅಫ್ಘಾನ್‌ನ ಕೇವಲ 177 ರನ್‌ಗಳ ವಿರುದ್ಧ ಸೋತಿದ್ದು ಹೇಗೆ?
AFG-A vs IND-A 2nd Match: ದಂಬುಲ್ಲಾದಲ್ಲಿ ಗುರುವಾರ (ಜೂನ್ 12) ತ್ರಿಕೋನ ಸರಣಿಯ ಪಂದ್ಯದಲ್ಲಿ ಭಾರತ 'ಎ' ತಂಡದ ವಿರುದ್ಧ ಅಫ್ಘಾನಿಸ್ತಾನ 'ಎ' ತಂಡವು ಭರ್ರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಬರೋಬ್ಬರಿ 349 ರನ್ ಗಳಿಸಿದರೂ ಸಹ ಅಫ್ಘಾನ್‌ನ ಕೇವಲ 177 ರನ್‌ಗಳ ವಿರುದ್ಧ ಸೋಲಬೇಕಾಯಿತು. ಹಾಗಾದ್ರೆ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಪ್ರಶ್ನೆ ಬಹುತೇಕ ಮಂದಿ ತಲೆಯಲ್ಲಿರುತ್ತದೆ. ಇದಕ್ಕೆಲ್ಲ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗುರುವಾರ ಭಾರಿ ಮಳೆ ಮುಂದುವರೆದ ಹಿನ್ನೆಲೆ ಏಕದಿನ ತ್ರಿಕೋನ ಸರಣಿಯ ಪಂದ್ಯದಲ್ಲಿ ಸ್ಟಾರ್ ಆಟಗಾರರಿಂದ ಕೂಡಿದ್ದ ಭಾರತ 'ಎ' ತಂಡದ ವಿರುದ್ಧ ಅಫ್ಘಾನಿಸ್ತಾನ 'ಎ' ತಂಡವು ಡಿಎಸ್‌ಎಸ್ ನಿಯಮದನ್ವಯ 4 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಭಾರಿ ಆಘಾತ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ ಎ ತಂಡವು ಬರೋಬ್ಬರಿ 349 ರನ್ ಪೇರಿಸಿತು.

349 ರನ್‌ಗಳ ಬೃಹತ್ ಮೊತ್ತ ಪೇರಿಸಿದ ಭಾರತ
ಮೊದಲು ಬ್ಯಾಟಿಂಗ್ ಮಾಡಿದ ಭಾರತ 'ಎ' ತಂಡವು ಮಳೆಯ ಕಾರಣ 49 ಓವರ್‌ಗಳಿಗೆ ಸೀಮಿತಗೊಂಡ ಇನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 349 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಭಾರತದ ಪರ ಪ್ರಭ್‌ಸಿಮ್ರಾನ್ ಸಿಂಗ್ 69 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ 84 ರನ್ ಸಿಡಿಸಿ ಅಬ್ಬರಿಸಿದರೆ, ನಾಯಕ ತಿಲಕ್ ವರ್ಮಾ 66(73), ಋತುರಾಜ್ ಗಾಯಕ್ವಾಡ್ 66(80), ವೈಭವ್ ಸೂರ್ಯವಂಶಿ 44(22), ಸೂರ್ಯಾಂಶ್ ಶೆಡ್ಗೆ 40(27) ರನ್‌ಗಳ ಕೊಡುಗೆ ನೀಡಿದರು.
ಕೇವಲ 177 ಗಳಿಸಿದ್ದ ಅಫ್ಘಾನಿಸ್ತಾನ್‌ಗೆ ಗೆಲುವು
ಆದರೆ ಪಂದ್ಯದ ಮಧ್ಯೆ ಸತತವಾಗಿ ಮಳೆ ಬಂದಿದ್ದರಿಂದ ಡಿಎಲ್‌ಎಸ್ ನಿಯಮದ ಪ್ರಕಾರ ಅಫ್ಘಾನಿಸ್ತಾನ 'ಎ' ತಂಡದ ಗೆಲುವಿನ ಗುರಿಯನ್ನು 38 ಓವರ್‌ಗಳಲ್ಲಿ 294 ರನ್‌ಗಳಿಗೆ ಮರುನಿಗದಿಪಡಿಸಲಾಯಿತು. ಮತ್ತೆ ಮಳೆ ಮುಂದುವರೆದ ಕಾರಣ ಕಡಿಮೆ ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 177 ಗಳಿಸಿದ್ದರಿಂದ ಪರ್ಯಾಯ ದಾರಿಯಿಲ್ಲದೆ ಅಫ್ಘಾನ್ ತಂಡ ಗೆಲುವು ಸಾಧಿಸಿದೆ ಎಂದು ಘೋಷಣಡ ಮಾಡಲಾಯಿತು.
ಅಫ್ಘಾನ್ ಪರ ಯಾರು ಎಷ್ಟು ರನ್ ಬಾರಿಸಿದರು?
ಅಫ್ಘಾನಿಸ್ತಾನ ಪರ ಬ್ಯಾಟ್ ಬೀಸಿದ ನಾಯಕ ಇಮ್ರಾನ್ ಮಿರ್ ಅಜೇಯ 75(70) ರನ್ ಸಿಡಿಸಿದರೆ ಮತ್ತು ಹಸನ್ ಐಸಾಕಿಲ್ 34(29) ರನ್ ಸಿಡಿಸಿದ್ದರಿಂದ ಅಫ್ಘಾನಿಸ್ತಾನ ಪಂದ್ಯದಲ್ಲಿ ತನ್ನ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ತದನಂತರ ಇಮ್ರಾನ್ ಅವರೊಂದಿಗೆ ಕೈಜೋಡಿಸಿದ ಬಹಿರ್ ಶಾ 52 ಎಸೆತಗಳಲ್ಲಿ ಅಜೇಯ 51ರನ್ ಚಚ್ಚಿ ತಂಡದ ಮೊತ್ತವನ್ನು 25.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 177 ರನ್‌ಗಳಿಗೆ ಕೊಂಡೊಯ್ದರು.
ಆಗ ಮತ್ತೊಮ್ಮೆ ಮಳೆ ಸುರಿದು ಪಂದ್ಯವನ್ನು ಸ್ಥಗಿತಗೊಳಿಸಬೇಕಾಯಿತು. ಪಂದ್ಯ ನಿಂತ ಆ ಹಂತದಲ್ಲಿ ಅಫ್ಘಾನಿಸ್ತಾನ ತಂಡವು ಡಿಎಲ್‌ಎಸ್ ನಿಯಮದ ನಿಗದಿತ ಮೊತ್ತಕ್ಕಿಂತ ಮುಂದಿರುವುದು ಕಂಡುಬಂದಿತು. ಆದ್ದರಿಂದ ಅವರ ಜಯವನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಈ ಮೂಲಕ ಅಪ್ಘಾನ್ ತಂಡವು ಭಾರತದ ವಿರುದ್ಧ ಗೆಲುವು ಸಾಧಿಸಿತು.
ಅಫ್ಘಾನಿಸ್ತಾನ, ಭಾರತ ಎ ತಂಡಗಳ ಪ್ಲೇಯಿಂಗ್ 11
ಅಫ್ಘಾನಿಸ್ತಾನ 'ಎ' ತಂಡ ಪ್ಲೇಯಿಂಗ್ 11: ಇಮ್ರಾನ್ ಮಿರ್ (ನಾಯಕ), ಹಸನ್ ಐಸಾಕಿಲ್, ಖಾಲಿದ್ ತನಿವಾಲ್, ಬಹಿರ್ ಶಾ, ಇಜಾಜ್ ಅಹ್ಮದ್ ಅಹ್ಮದ್‌ಜೈ, ಮೊಹಮ್ಮದ್ ಇಶಾಕ್, ಫರ್ಮನುಲ್ಲಾಹ್, ಅಬ್ದುಲ್ಲಾ ಅಹ್ಮದ್‌ಜೈ, ಖಲೀಲ್ ಗುರ್ಬಾಜ್, ಮೊಹಮ್ಮದ್ ಇಬ್ರಾಹಿಂ, ಜಹೀರ್ ಖಾನ್.
ಭಾರತ 'ಎ' ತಂಡ ಪ್ಲೇಯಿಂಗ್ 11: ಪ್ರಭಸಿಮ್ರನ್ ಸಿಂಗ್, ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ (ನಾಯಕ), ಆಯುಷ್ ಬದೋನಿ, ಸೂರ್ಯಾಂಶ್ ಶೆಡ್ಗೆ, ಅನುಕುಲ್ ರಾಯ್, ಅರ್ಷದ್ ಖಾನ್, ವಿಪ್ರಜ್ ನಿಗಮ್, ಅನ್ಶುಲ್ ಕಾಂಬೋಜ್












Click it and Unblock the Notifications