Gold: ಚಿನ್ನದ SGB ಹೂಡಿಕೆದಾರರಿಗೆ ಬಂಪರ್! ಶೇ.300ರಷ್ಟು ಭರ್ಜರಿ ಲಾಭ

ನವದೆಹಲಿ: ಸರ್ಕಾರಿ ಸ್ವಾಮ್ಯದ ಸಾವರೀನ್ ಗೋಲ್ಡ್ ಬಾಂಡ್‌ನಲ್ಲಿ (SGB) ಕಳೆದ 2019-20ನೇ ಸಾಲಿನ ಹೂಡಿಕೆ ಮಾಡಿದವರಿಗೆ ಇದೀಗ ಶೇ. 300ಕ್ಕೂ ಅಧಿಕ (ಅಂದರೆ 3 ಪಟ್ಟು) ಭರ್ಜರಿ ಲಾಭ ದೊರೆತಿದೆ. ಈ ಸರಣಿಯ ಬಾಂಡ್‌ಗಳನ್ನು ಅವಧಿಗೆ ಮುನ್ನವೇ ಹಿಂಪಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅವಕಾಶ ನೀಡಿದೆ.

2019ರಲ್ಲಿ ಪ್ರತಿ ಗ್ರಾಂ ಚಿನ್ನದ ಬಾಂಡ್ ಬೆಲೆ 3,745 ರೂಪಾಯಿ ಇತ್ತು. ಇದೀಗ ಆರ್‌ಬಿಐ ನಿಗದಿಪಡಿಸಿರುವ ಮರುಪಡೆಯುವಿಕೆ ಬೆಲೆ ಪ್ರತಿ ಗ್ರಾಂಗೆ 15,275 ರೂಪಾಯಿ ಆಗಿದೆ. 2019ರ ಡಿಸೆಂಬರ್ 10ರಂದು ಬಿಡುಗಡೆಯಾದ 'ಸೀರೀಸ್-7' ಬಾಂಡ್‌ನ ಆನ್‌ಲೈನ್ ಬೆಲೆ 3,695 ರೂಪಾಯಿ ಆಗಿತ್ತು. ಅಂದಿನ ಹೂಡಿಕೆದಾರರಿಗೆ ಇದೀಗ ಶೇ. 307.87 ಲಾಭ ಸಿಕ್ಕಿದ್ದು, ಆನ್‌ಲೈನ್ ರಿಯಾಯಿತಿ ದರದಲ್ಲಿ ಪರಿಗಣಿಸಿದರೆ ಈ ಲಾಭವು ಶೇ. 313.39ಕ್ಕೆ ಹೆಚ್ಚಳವಾಗುತ್ತದೆ.

Gold Bond Investors

ಹೂಡಿಕೆದಾರನಿಗೆ ಅಧಿಕ ಲಾಭದ ನಿರೀಕ್ಷೆ

ಒಬ್ಬ ಹೂಡಿಕೆದಾರರು ಗರಿಷ್ಠ ಮಿತಿಯಾದ 4,000 ಗ್ರಾಂ (4 ಕೆಜಿ) ಚಿನ್ನದ ಬಾಂಡ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿದರೆ ಅವರಿಗೆ ಎಷ್ಟು ಲಾಭ ಬರುತ್ತಿತ್ತು ಎಂದು ನೋಡುವುದಾದರೆ ಆ ಲೆಕ್ಕಾಚಾರ ಇಲ್ಲಿದೆ.

Monsoon Rain: ಜೂನ್ 10 ದಿನಗಳಲ್ಲಿ ಮುಂಗಾರು ಮಳೆ ಕೊರತೆ: ಮುಂದಿನ 2 ವಾರಗಳ ಮುನ್ಸೂಚನೆ ಇಲ್ಲಿದೆ
Monsoon Rain: ಜೂನ್ 10 ದಿನಗಳಲ್ಲಿ ಮುಂಗಾರು ಮಳೆ ಕೊರತೆ: ಮುಂದಿನ 2 ವಾರಗಳ ಮುನ್ಸೂಚನೆ ಇಲ್ಲಿದೆ

ಇದೀಗ ಸರ್ಕಾರ ನಿಗದಿಪಡಿಸಿದ ಮರುಪಾವತಿ ಬೆಲೆ ಪ್ರತಿ ಗ್ರಾಂಗೆ 15,275 ರೂಪಾಯಿ ಆಗಿದೆ. ಇದರಿಂದ ಹೂಡಿಕೆದಾರರಿಗೆ ಶೇ. 307ರಷ್ಟು ದಷ್ಟು ಲಾಭ ಸಿಕ್ಕಿದೆ. ಚಿನ್ನದ ಬೆಲೆ ಏರಿಕೆಯು ಹೂಡಿಕೆದಾರರಿಗೆ ದೊಡ್ಡ ಮೊತ್ತದ ಹಣ ತಂದುಕೊಟ್ಟಿದೆ. ಉದಾಹರಣೆಗೆ 4,000 ಗ್ರಾಂ ಚಿನ್ನದ ಬಾಂಡ್ ಖರೀದಿಸಿದ್ದಾರೆ ಎಂದುಕೊಳ್ಳೋಣ, ಅದಕ್ಕಾಗಿ ಅವರು 2019 ರಲ್ಲಿ ಅವರು ಸುಮಾರು 1.47 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಈ ಹೂಡಿಕೆಯ ಮೌಲ್ಯ ಈಗ 6.11 ಕೋಟಿ ರೂಪಾಯಿಗೆ ಏರಿದೆ.

ಅಂದರೆ ಬೆಲೆ ಏರಿಕೆಯಿಂದಲೇ ಅವರಿಗೆ 4.63 ಕೋಟಿ ರೂಪಾಯಿ ಲಾಭ ಸಿಕ್ಕಿದೆ. ಇದರೊಂದಿಗೆ ವರ್ಷಕ್ಕೆ ಶೇ.2.5 ಬಡ್ಡಿಯೂ ಅವರಿಗೆ ಸಿಗುತ್ತದೆ. ಬಡ್ಡಿ ಹಣವನ್ನು ಸೇರಿಸಿದರೆ, ಒಟ್ಟಾರೆ ಲಾಭ ಸುಮಾರು 4.85 ಕೋಟಿ ರೂಪಾಯಿ ಆಗಿದೆ.

ಬೆಲೆ ಲೆಕ್ಕಾಚಾರ ಹೇಗೆ?

ಈ ಮರುಪಾವತಿ ಬೆಲೆ ಬಾಂಡ್ ಅವಧಿ ಮುಗಿಯುವ ಹಿಂದಿನ ಮೂರು ದಿನಗಳನ್ನು ಪರಿಗಣಿಸಿದ್ದಾರೆ ಎನ್ನಲಾಗಿದೆ. ಜೂನ್ 5, 8 ಮತ್ತು 9 ರ ಸರಾಸರಿ ಬೆಲೆಯನ್ನು ತೆಗೆದುಕೊಂಡು ಲೆಕ್ಕ ಹಾಕಲಾಗಿದ್ದು, ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ದರವನ್ನು ಬಳಸಲಾಗಿದೆ ಎಂದು ವರದಿ ಆಗಿದೆ. ಸಾಮಾನ್ಯವಾಗಿ ಈ ಬಾಂಡ್‌ಗಳ ಅವಧಿ 8 ವರ್ಷವಾಗಿದೆ. ಆದರೆ, 5 ವರ್ಷಗಳ ನಂತರ ಹಣ ಹಿಂಪಡೆಯಲು ಅವಕಾಶವಿದೆ. ಬಡ್ಡಿ ಪಾವತಿಸುವ ದಿನಗಳಂದು ಇದನ್ನು ಮರುಪಾವತಿ ಮಾಡುತ್ತಾರೆ. ಈ ನಿಯಮದ ಅಡಿಯಲ್ಲಿ ಈಗ ಹಣ ಪಾವತಿಸಲಾಗುತ್ತಿದೆ.

ವಾರ್ಷಿಕ ಬಡ್ಡಿ ದರಕ್ಕೆ ತೆರಿಗೆ ಪಾವತಿ ಎಷ್ಟು?

ಚಿನ್ನದ ಬೆಲೆ ಏರಿಕೆಯಿಂದ ಸಿಕ್ಕ ಲಾಭಕ್ಕೆ ತೆರಿಗೆ ಇಲ್ಲ. ಆದರೆ ಪ್ರತಿವರ್ಷ ಸಿಗುವ ಶೇ 2.5ರಷ್ಟು ಬಡ್ಡಿ ಹಣಕ್ಕೆ ತೆರಿಗೆ ಪಾವತಿಸಬೇಕಿರುತ್ತದೆ. ಹೂಡಿಕೆದಾರರಿಗೆ ಇದು ದೊಡ್ಡ ಆರ್ಥಿಕ ಅನುಕೂಲವಾಗಿದೆ. ಚಿನ್ನದ ಆಮದನ್ನು ಕಡಿಮೆ ಮಾಡುವ ಮುಖ್ಯ ಉದ್ದೇಶದಿಂದ 2015 ರಲ್ಲಿ ಮೋದಿ ಸರ್ಕಾರ ಈ ಯೋಜನೆಯನ್ನು ತಂದಿತ್ತು. ಗುರಿ ಈಡೇರಿದ್ದರಿಂದ ಅಕ್ಟೋಬರ್ 2023 ರಲ್ಲಿ ಹೊಸ ಬಾಂಡ್ ಬಿಡುಗಡೆ ನಿಲ್ಲಿಸಲಾಗಿದೆ. ಈ ಯೋಜನೆ ಮುನ್ನಡೆಸಲು ಸರ್ಕಾರಕ್ಕೆ ಅಧಿಕ ವೆಚ್ಚವಾಗತೊಡಗಿತು. ಹೀಗಾಗಿ ಯೋಜನೆ ಸ್ಥಗಿತ ನಿರ್ಧಾರ ಕೈಗೊಳ್ಳಲಾಯಿತು. ಸದ್ಯ ಹೂಡಿಕೆದಾರರು ಈಗ ಗೋಲ್ಡ್ ಇಟಿಎಫ್ ಆಯ್ಕೆ ಮಾಡಿಕೊಳ್ಳಬಹುದು. ಹಳೆಯ ಬಾಂಡ್ ಹೊಂದಿರುವವರಿಗೆ ಎಲ್ಲಾ ಸೌಲಭ್ಯಗಳು ಎಂದಿನಂತೆ ಮುಂದುವರಿಯಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+