ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FIFA WC 2022: ಭಾರತದ ಈ ಭಾಷೆಗಳಲ್ಲಿ ವೀಕ್ಷಕ ವಿವರಣೆ ಲಭ್ಯ

|
Google Oneindia Kannada News

ಬೆಂಗಳೂರು, ನವೆಂಬರ್​ 20: ಫಿಫಾ ವಿಶ್ವಕಪ್​ ಕತಾರ್​​ -2022 ಪಂದ್ಯಗಳ ನೇರಪ್ರಸಾರವನ್ನು ವಯಾಕಾಮ್​18 ಸ್ಪೋರ್ಟ್ಸ್‌ನಲ್ಲಿ ವೀಕ್ಷಿಸಬಹುದು. ಜೊತೆಗೆ ಭಾರತದಲ್ಲಿ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ವೀಕ್ಷಕ ವಿವರಣೆ ಲಭ್ಯವಿರಲಿದೆ.

ಫಿಫಾ ವಿಶ್ವಕಪ್​ ಕತಾರ್​-2022ಕ್ಕೆ ನವೆಂಬರ್​ 20ರಂದು ರಾತ್ರಿ 9.30ಕ್ಕೆ ಆತಿಥೇಯ ಕತಾರ್​ ಮತ್ತು ಈಕ್ವೆಡಾರ್​ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಚಾಲನೆ ಸಿಗಲಿದೆ.

ಈಗಾಗಲೇ ಪಂದ್ಯಗಳ ನೇರ ಪ್ರಸಾರ ವಿವರಗಳುಳ್ಳ ಸುದ್ದಿ ಓದಿರುತ್ತೀರಿ. ಸ್ಪೋರ್ಟ್ಸ್18 ವಾಹಿನಿಯಲ್ಲಿ ಪ್ರಸಾರದ ಜೊತೆಗೆ ಜಿಯೋ ಆಪ್, ಜಿಯೋ ಸಿನಿಮಾದಲ್ಲಿ ನೇರ ಪ್ರಸಾರದ ಜೊತೆಗೆ ಪ್ರಾದೇಶಿಕ ವೀಕ್ಷಕ ವಿವರಣೆ ಸಿಗಲಿದೆ.

ಇಂಗ್ಲಿಷ್​, ಹಿಂದಿ, ತಮಿಳು, ಮಲಯಾಳಂ ಮತ್ತು ಬೆಂಗಾಲಿ ಸೇರಿದಂತೆ ಐದು ಭಾಷೆಗಳಲ್ಲಿ ಜಿಯೋ ಸಿನಿಮಾದಲ್ಲಿ ನೇರಪ್ರಸಾರ ಕಾಣಬಹುದು. ಜಿಯೋ ಸಿನಿಮಾ ಈಗ ಜಿಯೋ, ವಿ, ಏರ್​ಟೆಲ್​ ಮತ್ತು ಬಿಎಸ್​ಎನ್​ಎಲ್​ ಚಂದಾದಾರರಿಗೆ ಲಭ್ಯವಿದೆ.

ಡಿಸೆಂಬರ್ 3ರಿಂದ ನಾಕೌಟ್ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್​ 18ರಂದು ಅಂತಿಮ ಹಣಾಹಣಿ ನಡೆಯಲಿದೆ. ಭಾರತದ ಫುಟ್​ಬಾಲ್​ ಪ್ರೇಮಿಗಳು ಸ್ಪೋರ್ಟ್ಸ್​​18 - 1 ಎಸ್​ಡಿ ಮತ್ತು ಎಚ್​ಡಿ ಟಿವಿ ಚಾನೆಲ್ ಮೂಲಕ ಪಂದ್ಯ ವೀಕ್ಷಿಸಬಹುದು.

ವಿಶ್ಲೇಷಕರ ತಂಡ:
ಡೆಂಪೋ ಫುಟ್ಬಾಲ್ ಕ್ಲಬ್ ಸಿಇಒ ಮತ್ತು ಮಾಜಿ ಕೋಚ್​ ಪ್ರಧ್ಯುಮ್​ ರೆಡ್ಡಿ ಹಾಗೂ ಬ್ರೆಜಿಲ್ ಫುಟ್​ಬಾಲ್​ ಆಟಗಾರ ಜೋಸ್​ ರಮಿರೇಜ್​ ಬ್ಯಾರೆಟೊ ಅವರು ಇಂಗ್ಲಿಷ್​ ವಿಶ್ಲೇಷಕರ ತಂಡದಲ್ಲಿದ್ದಾರೆ.

ಭಾರತದ ಫುಟ್​ಬಾಲ್​ ಆಟಗಾರ ರಾಬಿನ್​ ಸಿಂಗ್​, ಭಾರತ ಮಹಿಳಾ ರಾಷ್ಟ್ರೀಯ ತಂಡದ ಹಾಲಿ ಗೋಲು ಕೀಪರ್​ ಅದಿತಿ ಚೌಹಾಣ್, ಕೇರಳ ಬ್ಲಾಸ್ಟರ್ಸ್​ ಎಫ್​ಸಿ ತಂಡದ ಸಹಾಯಕ ಕೋಚ್​ ಇಶ್ಫಾಕ್​ ಅಹ್ಮದ್​ ಮತ್ತು ಮಾಜಿ ಆಟಗಾರ ಕರಣ್​ ಸಾವ್ನೆ ಅವರು ಹಿಂದಿ ಭಾಷೆಯ ಕಾಮೆಂಟ್ರಿ/ವಿಶ್ಲೇಷಕರ ತಂಡದಲ್ಲಿದ್ದಾರೆ.

FIFA World Cup Qatar 2022: match timing, Regional Experts Panel details

ಭಾರತ ಪುರುಷರ ಫುಟ್​ಬಾಲ್​ ತಂಡದ ಮಾಜಿ ಗೋಲು ಕೀಪರ್​ ಸುಬ್ರತಾ ಪೌಲ್​ ಮತ್ತು ಮಾಜಿ ಆಟಗಾರರಾದ ಮೆಹ್ತಾಬ್​ ಹುಸೇನ್​, ಅಲ್ವಿಟೊ ಡಿಕುನ್ಹಾ, ಶಿಲ್ಟನ್​ ಪೌಲ್​ ಮತ್ತು ಮನಾಸ್​ ಭಟ್ಟಾಚಾರ್ಯ ಅವರು ಬೆಂಗಾಲಿ ಭಾಷೆಯಲ್ಲಿ ವೀಕ್ಷಕರಿಗೆ ವಿವರಣೆಗಳನ್ನು ಒದಗಿಸಲಿದ್ದಾರೆ.

ತಮಿಳು ವೀಕ್ಷಕರು ಭಾರತದ ಮಾಜಿ ಆಟಗಾರ ಹಾಗೂ ಜನಪ್ರಿಯ ವೀಕ್ಷಕ ವಿವರಣೆಕಾರರಾದ ರಮಣ್​ ವಿಜಯನ್​ ಅವರೊಂದಿಗೆ ನಲ್ಲಪನ್​ ಮೋಹನ್​ರಾಜ್​, ಧರ್ಮರಾಜ್​ ರಾವಣನ್​ ಮತ್ತು ವಿಜಯಕಾರ್ತಿಕೇಯನ್​ ಧ್ವನಿಯನ್ನು ಆನಂದಿಸಬಹುದಾಗಿದೆ.

ಭಾರತ ತಂಡದ ಮಾಜಿ-ಹಾಲಿ ಆಟಗಾರರಾದ ಜೋ ಪೌಲ್​, ಅಂಚೆರಿ, ಕೆಸಿ ವಿನೀತ್​, ಮೊಹಮ್ಮದ್​ ರಫಿ, ರಿನೋ ಆಂಟೊ, ಸುಶಾಂತ್​ ಮ್ಯಾಥ್ಯೂ ಮತ್ತು ಫಿರೋಜ್​ ಶೆರಿಫ್​ ಅವರು ಮಲಯಾಳಂ ಭಾಷೆಯಲ್ಲಿ ಪಂದ್ಯದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ.

ಫಿಫಾ ವಿಶ್ವಕಪ್​ ಕತಾರ್​-2022 ಪಂದ್ಯಗಳ ಕುರಿತ ಆಳವಾದ ವಿಶ್ಲೇಷಣೆ, ಮೈದಾನದ ಬದಿಯ ವರದಿ ಮತ್ತು ಲಾಕರ್​ ರೂಮ್​ ಮಾಹಿತಿಗಳು ಲಭ್ಯವಾಗಲಿದೆ

FIFA World Cup Qatar 2022: match timing, Regional Experts Panel details
ಇಂಗ್ಲಿಷ್​ ವೀಕ್ಷಕ ವಿವರಣೆಗಾರರಾಗಿ ರೂನಿ
ಜಾಗತಿಕ ಫುಟ್​ಬಾಲ್​ ತಾರೆಯರಾದ ವೇಯ್ನ್​ ರೂನಿ, , ಲೂಯಿಸ್​ ಫಿಗೊ, ರಾಬರ್ಟ್​ ಪೈರ್ಸ್​, ಸೋಲ್​ ಕ್ಯಾಂಪ್​ಬೆಲ್​ ಮತ್ತು ಗಿಲ್ಬರ್ಟೊ ಸಿಲ್ವಾ ಒಳಗೊಂಡ ತಂಡವೂ ವೀಸಾ ಮ್ಯಾಚ್​ ಸೆಂಟರ್​ ಲೈವ್‌ನಲ್ಲಿ ವಿಶ್ಲೇಷಣೆಯನ್ನು ಒದಗಿಸುವ ಜತೆಗೆ ಇಂಗ್ಲಿಷ್​ ವೀಕ್ಷಕ ವಿವರಣೆಯನ್ನೂ ನೀಡಲಿದೆ.

ಫಿಫಾ ವಿಶ್ವಕಪ್​ ಕತಾರ್​-2022ಕ್ಕೆ ನವೆಂಬರ್​ 20ರಂದು ರಾತ್ರಿ 9.30ಕ್ಕೆ ಆತಿಥೇಯ ಕತಾರ್​ ಮತ್ತು ಈಕ್ವೆಡಾರ್​ ನಡುವಿನ ಆರಂಭಿಕ ಪಂದ್ಯದ ಮೂಲಕ ಚಾಲನೆ ಸಿಗಲಿದೆ.

ಸ್ಪೋರ್ಟ್ಸ್​18 -1 ಚಾನೆಲ್​ ವಿವರ

ಆಪರೇಟರ್ಸ್-ಎಸ್​ಡಿ ಚಾನೆಲ್-ಎಸ್​ಡಿ ಚಾನೆಲ್

ಟಾಟಾ ಪ್ಲೇ-488-487

ಏರ್​ಟೆಲ್​ ಡಿಜಿಟಲ್-293-294

ಜಿಯೋಟಿವಿ+-262-261

ಸನ್​ ಡೈರೆಕ್ಟ್​-505-983

ಡಿಶ್​ ಟಿವಿ-644-643

ಡಿ2ಎಚ್​--666

Fifa World Cup 2022: ತಂಡಗಳು, ಗುಂಪು, ಪಂದ್ಯದ ಸಮಯ ಮಾರ್ಗದರ್ಶಿFifa World Cup 2022: ತಂಡಗಳು, ಗುಂಪು, ಪಂದ್ಯದ ಸಮಯ ಮಾರ್ಗದರ್ಶಿ

ವಿಶ್ವಕಪ್ ಪಂದ್ಯಾವಳಿ, ತಂಡ ಹಾಗೂ ಗುಂಪುಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅರ್ಹತಾ ಸುತ್ತಿನಿಂದ ಪ್ರವೇಶಿಸಿರುವ 32 ತಂಡಗಳು ಸ್ಪರ್ಧಿಸಲಿವೆ. 8 ಗುಂಪಿನ ಟಾಪ್ ಎರಡು ತಂಡಗಳು ಅಂದರೆ 16 ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿವೆ. ಡಿಸೆಂಬರ್ 3ರಿಂದ ನಾಕೌಟ್ ಪಂದ್ಯಗಳು ನಡೆಯಲಿವೆ.

ಎ ಗುಂಪು: ಕತಾರ್, ಈಕ್ವೆಡಾರ್, ಸೆನೆಗಲ್, ನೆದರ್ಲೆಂಡ್ಸ್
ಬಿ ಗುಂಪು: ಇಂಗ್ಲೆಂಡ್, ಇರಾನ್, ಯುಎಸ್ಎ, ವೇಲ್ಸ್
ಸಿ ಗುಂಪು: ಅರ್ಜೆಂಟೀನಾ, ಸೌದಿ ಅರೇಬಿಯಾ, ಮೆಕ್ಸಿಕೋ, ಪೋಲೆಂಡ್
ಡಿ ಗುಂಪು: ಫ್ರಾನ್ಸ್, ಆಸ್ಟ್ರೇಲಿಯಾ, ಡೆನ್ಮಾರ್ಕ್, ಟ್ಯುನೇಶಿಯಾ
ಇ ಗುಂಪು: ಸ್ಪೇನ್, ಕೋಸ್ಟರಿಕಾ, ಜರ್ಮನಿ, ಜಪಾನ್
ಎಫ್ ಗುಂಪು: ಬೆಲ್ಜಿಯಂ, ಕೆನಡಾ, ಮೊರಾಕ್ಕೋ, ಕ್ರೊವೇಶಿಯಾ
ಜಿ ಗುಂಪು: ಬ್ರೆಜಿಲ್, ಸೆರ್ಬಿಯಾ, ಸ್ವಿಟ್ಜರ್ಲೆಂಡ್, ಕೆಮರೂನ್
ಎಚ್ ಗುಂಪು: ಪೋರ್ಚುಗಲ್, ಘಾನಾ, ಉರುಗ್ವೆ, ದಕ್ಷಿಣ ಕೊರಿಯಾ

ಪಂದ್ಯ ಟೈಮಿಂಗ್ಸ್ (ಭಾರತೀಯ ಕಾಲಮಾನ): ಫೀಫಾ ವಿಶ್ವಕಪ್ ಪಂದ್ಯಾವಳಿ ಭಾರತೀಯ ಕಾಲಮಾನ ಪ್ರಕಾರ 3:30 pm, 6:30 pm, 9:30 pm and 12:30 amಕ್ಕೆ ವೀಕ್ಷಿಸಬಹುದು.

English summary
Star-Studded Regional Experts Panel for the FIFA World Cup Qatar 2022. Viacom18 Sports, with regional commentary panel for the upcoming FIFA World Cup Qatar 2022
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X