'ಅಪ್ಪ ಸಿಎಂ ಆಗೇ ಆಗ್ತಾರೆ' ಎಂದಿದ್ದ ಡಿಕೆಶಿ ಪುತ್ರಿ ಐಶ್ವರ್ಯ ಮಾತು ನಿಜವಾಯ್ತು; ತಂದೆಗೆ ಭಾವನಾತ್ಮಕ ವಿಶ್

ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ವಿಶ್ ಮಾಡಿದ ಪುತ್ರಿ ಐಶ್ವರ್ಯ ಹೆಗ್ಡೆ ಅವರು ಈ ಹಿಂದೆ ಹಳಿದ್ದ ಭವಿಷ್ಯ ನಿಜವಾಗಿದೆ. ತಂದೆ ಸಿಎಂ ಆಗಲಿದ್ದಾರೆ ಎಂಬ ಸುದ್ದಿ ಖಚಿತವಾಗುತ್ತಿದ್ದಂತೆ 'ಆಲ್‌ ದಿ ಬೆಸ್ಟ್‌ ಅಪ್ಪ'ಎಂದು ಐಶ್ವರ್ಯ ವಿಶ್ ಮಾಡಿದ್ದಾರೆ. ಸಿಎಂ ಆದ ಬಳಿಕ 'ಈ ಬಂಡೆ ಮುಂದೇನು ಮಾಡುತ್ತದೆ ಎಂದು ನಾವು ಕಾಯುತ್ತಿದ್ದೇವೆ' ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. 'ತಂದೆ ರಾಜ್ಯದ ಸಿಎಂ ಆಗೇ ಆಗುತ್ತಾರೆ' ಎಂದು ವರ್ಷದ ಹಿಂದಷ್ಟೇ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದ ಐಶ್ವರ್ಯರ ಮಾತು ಇದೀಗ ನಿಜವಾಗಿದೆ.

ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಆಗುತ್ತಿದ್ದಂತೆ ಪುತ್ರಿ ಐಶ್ವರ್ಯ ಹೆಗ್ಡೆ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್‌ನಲ್ಲಿ ಹಂಚಿಕೊಂಡು, 'ಕಂಗ್ರಾಚ್ಯುಲೇಷನ್ ಅಪ್ಪ' ಎಂದು ಶುಭ ಕೋರಿದ್ದಾರೆ. ನಮ್ಮ ತಂದೆಯನ್ನು ಜನರು 'ಇವತ್ತು ಬಂಡೆ ಎಂದು ಕರೆಯುತ್ತಾರೆ. ಬಂಡೆ ಆಗಲು ಎಷ್ಟು ವರ್ಷ ತಗೊಂಡಿದೆ ಎಂಬುದು ನಮಗೆ ಗೊತ್ತು. ಚಿಕ್ಕವರಿದ್ದಾಗಿನಿಂದಲೂ ತಂದೆಯನ್ನು ನೋಡಿಕೊಂಡು ಬಂದಿದ್ದೇನೆ. ಇಂದು ಅವರು ಸಿಎಂ ಆಗುತ್ತಿದ್ದಾರೆ. ಈ ಬಂಡೆ ಮುಂದೆ ಏನು ಮಾಡುತ್ತದೆ? ಎಂದು ರಾಜ್ಯ ಜನರು ಮಾತ್ರವಲ್ಲದೇ, ನಾವು ಕುಟುಂಬದವರು ಕಾಯುತ್ತಿದ್ದೇವೆ' ಎಂದು ಅವರು ಬರೆದುಕೊಂಡಿದ್ದಾರೆ.

Aishwarya Hegde DKS wish

ಡಿಕೆ ಶಿವಕುಮಾರ್ ಸಿಎಂ ಯಾಗಾಗಬೇಕು?: ಪುತ್ರಿ ಹೇಳಿದ್ದಿಷ್ಟು

ಶುಭಕೋರುವ ಜೊತೆಗೆ ತಂದೆಯ ಹಳೇಯ ವಿಡಿಯೋ ಹಂಚಿಕೊಂಡಿದ್ದಾರೆ. ಅಪ್ಪ ಸಿಎಂ ಆಗೇ ಆಗುತ್ತಾರೆ ಎಂದು ಐಶ್ವರ್ಯ ಮಾತನಾಡಿದ್ದ ವಿಡಿಯೋಗಳು ಮತ್ತೆ ಹರಿದಾಡುತ್ತಿವೆ. ಅಂದು ಐಶ್ವರ್ಯ ಅವರು ಡಿಕೆ ಶಿವಕುಮಾರ್ ಅವರು ರಾಜ್ಯದ ಸಿಎಂ ಏಕಾಗಬೇಕು, ಯಾವ ಕಾರಣಕ್ಕೆ ಅವರು ಸಿಎಂ ಆಗಲಿದ್ದಾರೆ ಎಂದೆಲ್ಲ ವಿವರಿಸಿದ್ದರು.

ಪತ್ನಿ ಪಾರ್ವತಿಗೆ ರಾಜ್ಯಸಭಾ ಸ್ಥಾನ, ಯತೀಂದ್ರಗೆ ಡಿಸಿಎಂ! ರಾಹುಲ್ ಗಾಂಧಿ ಆಫರ್‍‌ಗೆ ಸಿದ್ದರಾಮಯ್ಯ ರೆಸ್ಪಾನ್ಸ್
ಪತ್ನಿ ಪಾರ್ವತಿಗೆ ರಾಜ್ಯಸಭಾ ಸ್ಥಾನ, ಯತೀಂದ್ರಗೆ ಡಿಸಿಎಂ! ರಾಹುಲ್ ಗಾಂಧಿ ಆಫರ್‍‌ಗೆ ಸಿದ್ದರಾಮಯ್ಯ ರೆಸ್ಪಾನ್ಸ್

ಅಪ್ಪನಿಗೆ ಜನರ ಬಗ್ಗೆ ಕಾಳಜಿ ಇದೆ. ರಾಜ್ಯದ ಬಗ್ಗೆ ಅವರಿಗೆ ಇರುವ ಕಮೀಟ್‌ಮೆಂಟ್ ಕಾರಣದಿಂದಲೇ ಅಪ್ಪ ಸಿಎಂ ಗಬೇಕು. ಜೈಲಿನಿಂದ ಬಿಡುಗಡೆ ಆಗಿದ್ದ ಅಪ್ಪನನ್ನು ನಾವು ನೋಡಲು ಎರಡು ದಿನ ಬೇಕಾಯಿತು. ಅವರು ಬಿಡುಗಡೆ ಬಳಿಕ ಕುಟುಂಬದವರಿಗೆ ಕರೆ ಮಾಡಲಿಲ್ಲ. ಕುಟುಂಬ ನೋಡಲು ಬಾರದೇ, ಮೊದಲು ಜನರನ್ನು ನೋಡಬೇಕೆಂದು ತೆರಳಿದ್ದರು. ಈ ಬಗ್ಗೆ ನಾನು ಅಪ್ಪನೊಂದಿಗೆ ಮಾತನಾಡಿದ್ದೆ. ಆಗ ಅವರು 'ನಾನು ಜೈಲಿನಲ್ಲಿದ್ದಾಗ ಊಟ, ನೀರು ಬಿಟ್ಟು ನನಗಾಗಿ ಕಾಯ್ದಿದ್ದಾರೆ. ಕಾಲಿಗೆ ಚಪ್ಪಲಿ ಇಲ್ಲದೇ ವಿಮಾನ ಏರಿ ನನಗಾಗಿ ಬಂದಿದ್ದಾರೆ. ಬಿಡುಗಡೆ ಬಳಿಕ ಅವರನ್ನು ನೋಡದೇ ಕುಟುಂಬಕ್ಕಾಗಿ ಹೇಗೆ ಓಡೋಡಿ ಬರಲಿ ಮಗಳೇ' ಎಂದು ಹೇಳಿದ್ದರೆಂದು ಆವತ್ತು ಐಶ್ವರ್ಯ ನೆನಪಿಸಿಕೊಂಡಿದ್ದರು.

'ಡಿಕೆ ಶಿವಕುಮಾರ್ ಅವರಿಗೆ ರಾಜ್ಯದ ಜನರ ಮೇಲೆ ಅಪಾರ ಕಾಳಜಿ ಇದೆ. ತಮ್ಮ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಅವರು ಸಿಎಂ ಆಗುತ್ತಾರೆ ಎಂಬ ವಿಶ್ವಾಸ ನನಗೂ, ನಮ್ಮ ಕುಟುಂಬಕ್ಕೆ ಇದೆ. ಅವರು ಸಿಎಂ ಆಗೇ ಆಗುತ್ತಾ'ರೆ ಎಂದು ಭವಿಷ್ಯ ನುಡಿದಿದ್ದರು. ಅಕ್ರಮ ಹಣ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಅಂದಿನ ದಿನಗಳು, ಬಿಡುಗಡೆ ಬಳಿಕ ನಡೆದ ಸಂಗತಿಗಳನ್ನು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಪುತ್ರಿ ಐಶ್ವರ್ಯ ಹಂಚಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+