ಈ ರಾಶಿಯವರಿಗೆ ಶಿವಯೋಗ:ಒಲಿಯುವುದು ಉನ್ನತ ಸ್ಥಾನ, ಹೆಚ್ಚುವುದು ಆದಾಯ, ಹಣದ ಸಮಸ್ಯೆ ನೀಗುವುದು
ಜ್ಯೋತಿಷ್ಯದ ಪ್ರಕಾರ, ವಿಶ್ವದಲ್ಲಿನ ಪ್ರತಿಯೊಂದು ಗ್ರಹ ಬದಲಾವಣೆಯು ಮಾನವ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಕೆಲವು ವಿಶೇಷ ಗ್ರಹಗಳ ಸಂಯೋಜನೆಯು ಅತ್ಯಂತ ಶಕ್ತಿಶಾಲಿ ಶುಭ ಯೋಗಗಳನ್ನು ಸೃಷ್ಟಿಸುತ್ತದೆ. ಅಂತಹ ಒಂದು ಅದ್ಭುತ ಮತ್ತು ಪವಿತ್ರ ಯೋಗಗಳಲ್ಲಿ ಒಂದು "ಶಿವ ಯೋಗ". ಶಿವಯೋಗದ ಸಮಯದಲ್ಲಿ ಕೆಲವು ರಾಶಿಯವರ ಮೇಲೆ ಶಿವನ ಆಶೀರ್ವಾದ ಹೆಚ್ಚಾಗಿರುತ್ತದೆ.
ಸೂರ್ಯ ಮತ್ತು ಚಂದ್ರರ ಶುಭ ಸ್ಥಾನಗಳು ಮತ್ತು ಶುಭ ಗ್ರಹಗಳ ಬಲವಾದ ಪ್ರಭಾವದಿಂದಾಗಿ ಈ ಶಿವಯೋಗವು ರೂಪುಗೊಳ್ಳುತ್ತದೆ. ಶಿವಯೋಗದ ಪರಿಣಾಮದಿಂದಾಗಿ ಕೆಲವು ರಾಶಿಯವರ ಮೇಲೆ ಶಿವನ ಸಂಪೂರ್ಣ ಅನುಗ್ರಹವಿದ್ದು ಅಪಾರವಾದ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಈ ಯೋಗದಿಂದ ಮೂರು ರಾಶಿಯವರಿಗೆ ದೊಡ್ಡ ಪ್ರಮಾಣದ ಪ್ರಯೋಜನ ಸಿಗುತ್ತದೆ.

ಶಿವಯೋಗ ಯಾವಾಗ ಪ್ರಾರಂಭವಾಗುತ್ತದೆ?:
ಈ ವರ್ಷದ ಅತ್ಯಂತ ವಿಶೇಷವಾದ ಶಿವಯೋಗ ಜೂನ್ 24 ರಂದು ಬೆಳಿಗ್ಗೆ 10:23 ಕ್ಕೆ ಪ್ರಾರಂಭವಾಗಿ ಮರುದಿನ ಜೂನ್ 25 ರಂದು ಬೆಳಿಗ್ಗೆ 10:54ರವರೆಗೆ ಮುಂದುವರೆಯುತ್ತದೆ.ಈ ಎರಡು ದಿನಗಳ ಕಾಲ ನಿಮ್ಮ ಮೇಲೆ ಶಿವನ ಕೃಪೆ ಹೆಚ್ಚಾಗಿ ಇರುತ್ತದೆ. ಈ ಯೊಗದಿಂದಾಗಿ 3 ರಾಶಿಯವರ ಜಾತಕ ಫಲವೇ ಸಂಪೂರ್ಣವಾಗಿ ಬದಲಾಗಲಿದೆ. ಆ ಅದೃಷ್ಟ ರಾಶಿಗಳು ಯಾವುವು ಎಂದು ನೋಡುವುದಾದರೆ...
ಮಿಥುನ ರಾಶಿ (Gemini): ಈ 'ಶಿವ ಯೋಗ'ವು ಮಿಥುನ ರಾಶಿಯಲ್ಲಿ ಜನಿಸಿದವರಿಗೆ ಹೊಸ ಉದಯ ಮತ್ತು ಅನುಕೂಲಕರ ಬದಲಾವಣೆಗಳನ್ನು ತರುತ್ತದೆ.ಕೆಲಸದಲ್ಲಿ ಕಾಯುತ್ತಿದ್ದ ಮನ್ನಣೆ ಮತ್ತು ಬಡ್ತಿ ಸಿಗುವುದು. ಹೊಸ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಉನ್ನತ ಸ್ಥಾನಕ್ಕೆ ಏರುವ ಸಾಧ್ಯತೆ ಹೆಚ್ಚಿದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ನೆರವೇರುವುದು. ಮನದ ಆಸೆ ಈಡೇರುವುದು. ಮದುವೆ ಮಾತುಕತೆ ನಡೆಸಲು ಸರಿಯಾದ ಸಮಯ. ಸ್ನೇಹಿತರು ಮತ್ತು ಸಂಬಂಧಿಕರಿಂದ ಒಳ್ಳೆಯ ಸುದ್ದಿ ಸಿಗುತ್ತದೆ.
ವೃಶ್ಚಿಕ ರಾಶಿ (Scorpio): ಈ ಯೋಗವು ವೃಶ್ಚಿಕ ರಾಶಿಯವರ ಆರ್ಥಿಕ ಪರಿಸ್ಥಿತಿಗೆ ಉತ್ತಮ ಉತ್ತೇಜನ ನೀಡಲಿದೆ. ಹಠಾತ್ ಹಣದ ಲಾಭ ಇರುತ್ತದೆ. ಇದ್ದಕ್ಕಿದ್ದಂತೆ ಕೈಯ್ಯಲ್ಲಿ ಹಣ ತುಂಬಿಕೊಳ್ಳುವುದು. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಹಲೆಯ ಸಾಲದ ಸಮಸ್ಯೆಗಳೆಲ್ಲಾ ತೀರುವುದು. ನೆಮ್ಮದಿ, ಸಂತೋಷ ಹೆಚ್ಚುವುದು. ಈ ಅವಧಿಯಲ್ಲಿ ನೀವು ಮಾಡುವ ಹೂಡಿಕೆಗಳು ಮತ್ತು ವ್ಯವಹಾರ ವಿಸ್ತರಣೆಯು ಭವಿಷ್ಯದ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಹಾಕುತ್ತದೆ. ಕುಟುಂಬದ ಅಗತ್ಯಗಳನ್ನು ಸುಲಭವಾಗಿ ಪೂರೈಸಬಹುದು. ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸಲು ಉತ್ತಮ ಅವಕಾಶಗಳಿವೆ. ಜಮೀನು ಅಥವಾ ಮನೆ ರೂಪದಲ್ಲಿ ಆಸ್ತಿ ಖರೀದಿಸುವ ಸಾಧ್ಯತೆ ಇದೆ.
ಧನು ರಾಶಿ (Sagitarius): ಧನು ರಾಶಿಯವರ ಜೀವನದಲ್ಲಿನ ಗೊಂದಲಗಳು ದೂರವಾಗುತ್ತವೆ. ಎಲ್ಲಾ ಸಮಸ್ಯೆಗಳಿಗೆ ಸ್ಪಷ್ಟ ಉತ್ತರ ಸಿಗುವುದು. ಇಲ್ಲಿಯವರೆಗೆ ಪಟ್ಟ ಕಷ್ಟಗಳಿಗೆ ಪರಿಹಾರ ಸಿಗುವುದು. ನೆಮ್ಮದಿಯ ಜೀವನ ನಿಮ್ಮದಾಗುವುದು. ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ಗುರುತಿಸಲಾಗುತ್ತದೆ. ನಿಮ್ಮ ಮೇಲಾಧಿಕಾರಿಗಳಿಂದ ನಿಮಗೆ ಸಂಪೂರ್ಣ ಬೆಂಬಲ ಮತ್ತು ಸಹಕಾರ ಸಿಗುತ್ತದೆ.ಉನ್ನತ ಸ್ಥಾನ ಒಲಿಸು ಬರುವ ಸಾಧ್ಯತೆಯಿದೆ. ಈ ಅವಧಿಯಲ್ಲಿ, ಮನಸ್ಸು ಆಧ್ಯಾತ್ಮಿಕ ಮಾರ್ಗದ ಕಡೆಗೆ ತಿರುಗುತ್ತದೆ. ಕುಟುಂಬದಲ್ಲಿ ಶುಭ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತವೆ. ಮಕ್ಕಳಿಗೆ ಸಂಬಂಧಿಸಿದ ಅಡೆತಡೆಗಳು ದೂರವಾಗುತ್ತವೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡುವುದು ಸಾಧ್ಯವಾಗುತ್ತದೆ. ನಿಮಗೆ ಹೊಸ ಅವಕಾಶಗಳು ಸಿಗುತ್ತವೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications