ಧನುಷ್‌ ಮತ್ತು ಮೃಣಾಲ್‌ ಠಾಕೂರ್ ನಡುವೆ ಬ್ರೇಕಪ್; ಲವ್‌ ಕಹಾನಿಗೆ ಬ್ರೇಕ್‌ ಹಾಕಿ ಪ್ರೊಫೆಶನ್‌ಗೆ ಫೋಕಸ್‌

ತಮಿಳಿನ ಸ್ಟಾರ್‌ ನಟ ಧನುಷ್‌ ಹಾಗೂ ಕ್ಯೂಟ್‌ ನಟಿ ಮೃಣಾಲ್‌ ಠಾಕೂರ್‌ ಕೆಲ ಸಮಯದಿಂದ ಡೇಟಿಂಗ್‌ ಮಾಡ್ತಿದ್ದ ವಿಚಾರ ಗುಟ್ಟಾಗಿ ಉಳಿಯಲಿಲ್ಲ. ಆದರೆ ಈ ಸಂಬಂಧವನ್ನು ಮುಂದುವರಿಸದಿರಲು ಇಬ್ಬರೂ ನಿರ್ಧರಿಸಿದ್ದಾರಂತೆ. ಈಗಾಗಲೇ ಬ್ರೇಕಪ್‌ ಮಾಡಿಕೊಂಡು ಸಿನಿಮಾ ಪ್ರೊಫೆಶನ್‌ ಮೇಲೆ ಹೆಚ್ಚೆಚ್ಚು ಫೋಕಸ್‌ ಮಾಡಲು ಮುಂದಾಗಿದ್ದಾರಂತೆ.

ಧನುಷ್ ಮತ್ತು ಮೃಣಾಲ್ ಠಾಕೂರ್ ಸ್ಟಾರ್‌ ವ್ಯಾಲ್ಯೂ ಇರುವ ಕಲಾವಿದರು. ಇಬ್ಬರಿಗೂ ಅಭಿಮಾನಿ ಬಳಗವಿದೆ. ಪ್ರತಿಭೆ ಕೈ ಹಿಡಿದಿದೆ. ಆದರೆ ಧನುಷ್‌ ಒಂದು ಕಾಲದಲ್ಲಿ ರಜನಿಕಾಂತ್‌ ಅಳಿಯನಾಗಿದ್ದವರು. ತನ್ನ ಪ್ರತಿಭೆ ಜೊತೆಗೆ ಆರ್ಥಿಕವಾಗಿಯೂ ಬಲಿಷ್ಠರು. ಅವರದೇ ಪ್ರೊಡಕ್ಷನ್‌ ಹೌಸ್‌ ಇದೆ. ಅದರಿಂದ ಒಂದಿಷ್ಟು ಸಿನಿಮಾಗಳನ್ನು ನಿರ್ಮಿಸಿದ್ದು ಮುಂದೆಯೂ ಒಳ್ಳೆಳ್ಳೆ ಸಿನಿಮಾ ನಿರ್ಮಾಣ ಮಾಡುವ ಗುರಿ ಹೊಂದಿದ್ದಾರೆ. ಇನ್ನೊಂದೆಡೆ ಮೃಣಾಲ್‌ ಠಾಕೂರ್‌ ಸಿನಿಮಾ ರಂಗದಲ್ಲಿ ಗಾಡ್‌ ಫಾದರ್‌ಗಳಿಲ್ಲದೇ ತನ್ನ ಪ್ರತಿಭೆಯ ಮೂಲಕವೇ ಬೆಳೆದು ನಿಂತವರು. ʼಸೀತಾರಾಮಂʼ ನಂಥಾ ಸಿನಿಮಾದಲ್ಲಿ ಅವರ ಲುಕ್‌, ಅಭಿನಯ ನೋಡಿದವರು ಅವರ ಫ್ಯಾನ್‌ ಆಗೋದ್ರು. ಈಕೆ ಉತ್ತರದವರಾದರೂ ದಕ್ಷಿಣ ಭಾರತೀಯ ಸಿನಿಮಾಗಳು ಇವರನ್ನು ಮೇಲಕ್ಕೆ ಕೊಂಡೊಯ್ದವು. ಇಂಥಾ ನಟ, ನಟಿ ಅದ್ಹೇಗೋ ಪರಿಚಿತರಾಗಿ, ಸ್ನೇಹಿತರಾಗಿ, ಡೇಟಿಂಗ್‌ ಮಾಡ್ತಿದ್ದಾರೆ ಅಂತ ವದಂತಿ ಹಬ್ಬೋ ಲೆವೆಲ್‌ಗೆ ಬೆಳೆದರು. ಆದರೆ ಹೀಗೆ ಒಂದಾದ ಜೋಡಿ ಇದೀಗ ಸಪರೇಟ್‌ ಆಗಿ ಬದುಕಲು ತೀರ್ಮಾನ ಮಾಡಿದೆಯಂತೆ.

Dhanush Mrunal Thakur Breakup Rumours

ಇವರ ಕುರಿತಾದ ಡೇಟಿಂಗ್ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಭಾರಿ ಚರ್ಚೆಗೆ ಕಾರಣವಾಗಿವೆ. ಕಳೆದ ಕೆಲವು ತಿಂಗಳುಗಳಿಂದ, ಅವರ ಸಾರ್ವಜನಿಕ ಕಾರ್ಯಕ್ರಮಗಳು, ವೈರಲ್ ವಿಡಿಯೋಗಳು ಮತ್ತು ಇನ್‌ಸ್ಟಾಗ್ರಾಮ್ ಚಟುವಟಿಕೆಗಳನ್ನು ನೋಡಿ ಅಭಿಮಾನಿಗಳು ಇವರಿಬ್ಬರ ನಡುವೆ ಏನೋ ನಡೀತಿದೆ ಎಂದು ಲಿಂಕ್ ಮಾಡುತ್ತಿದ್ದಾರೆ. ಈಗ ಫಿಲ್ಮ್‌ಫೇರ್‌ನ ಹೊಸ ವರದಿಯೊಂದು ಈ ಕಥೆಗೆ ಹೊಸ ತಿರುವು ನೀಡಿದ್ದು, ಈ ಜೋಡಿ ಈಗ ದೂರಾಗಿದೆ ಎಂದು ಹೇಳಿದೆ. ಧನುಷ್ ಮತ್ತು ಮೃಣಾಲ್ ಠಾಕೂರ್ ಅವರ ಸಂಬಂಧದ ಬಗ್ಗೆ ತಿಂಗಳುಗಟ್ಟಲೆ ನಡೆದ ವದಂತಿಗಳ ನಂತರ, ಅವರು ಈಗ ಪರಸ್ಪರ ದೂರವಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

'ಬೆಂಗಳೂರು ಡೇಸ್‌'ನಿಂದ ಹಸೆಮಣೆ ಏರಿದ ನಟ ಫಹಾದ್‌-ನಜ್ರಿಯಾ ದಾಂಪತ್ಯದಲ್ಲಿ ಬಿರುಕು? ಅನುಮಾನ ಹುಟ್ಟಿಸಿದ ಪೋಸ್ಟ್‌
'ಬೆಂಗಳೂರು ಡೇಸ್‌'ನಿಂದ ಹಸೆಮಣೆ ಏರಿದ ನಟ ಫಹಾದ್‌-ನಜ್ರಿಯಾ ದಾಂಪತ್ಯದಲ್ಲಿ ಬಿರುಕು? ಅನುಮಾನ ಹುಟ್ಟಿಸಿದ ಪೋಸ್ಟ್‌

ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಈ ನಟ ಮತ್ತು ನಟಿ ತಮ್ಮದೇ ಆದ ದಾರಿಯಲ್ಲಿ ಹೋಗಲು ನಿರ್ಧರಿಸಿದ್ದಾರೆ. ಆದರೆ, ಇವರ ಬ್ರೇಕಪ್‌ಗೆ ನಿಖರವಾದ ಕಾರಣ ಏನೆಂಬುದು ಇನ್ನು ಬಹಿರಂಗವಾಗಿಲ್ಲ.

ಧನುಷ್ ಮತ್ತು ಮೃಣಾಲ್ ಅವರ ಸಂಬಂಧದ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ವದಂತಿಗಳು ಹರಿದಾಡುತ್ತಿದ್ದವು. ಇಬ್ಬರಲ್ಲಿ ಯಾರೂ ಕೂಡ ಈ ಬಗ್ಗೆ ಸಾರ್ವಜನಿಕವಾಗಿ ಎಲ್ಲೂ ಮಾತನಾಡದಿದ್ದರೂ, ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಅವರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದುದು ಮತ್ತು ಅವರ ನಡುವಿನ ಮಾತುಕತೆಗಳು ಅಭಿಮಾನಿಗಳ ಹಾಗೂ ಸಾಮಾಜಿಕ ಜಾಲತಾಣಗಳ ಅಭಿಮಾನಿಗಳ ಗಮನ ಸೆಳೆಯುತ್ತಿದ್ದವು. ಈ ವರ್ಷದ ಆರಂಭದಲ್ಲಿ ಧನುಷ್ ಅವರು ʼಸನ್ ಆಫ್ ಸರ್ದಾರ್ 2ʼ ಸಿನಿಮಾದ ಪ್ರೀಮಿಯರ್ ಶೋಗೆ ಬಂದಾಗ ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದವು. ಈ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಧನುಷ್ ಬಂದಿದ್ದು ಅಂತರ್ಜಾಲದಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಅಭಿಮಾನಿಗಳು ಇದನ್ನು ಮೃಣಾಲ್‌ಗೆ ಧನುಷ್ ನೀಡಿದ ಸದ್ದಿಲ್ಲದ ಬೆಂಬಲ ಎಂದು ಭಾವಿಸಿದರು, ಇದು ಅವರ ಡೇಟಿಂಗ್ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿಯಿತು.

 ಗಂಡಂಗಾದ್ರೆ ಡಿವೋರ್ಸ್ ಕೊಡಬಹುದು, ಮಕ್ಕಳನ್ನ ಬಿಡಕ್ಕಾಗಲ್ವಲ್ಲ, 60 ವರ್ಷದವರೆಗೂ ಮದುವೆ ಆಗಿಲ್ಲ ಎಂದ ಸುಹಾಸಿನಿ ಮುಲಾಯ್
ಗಂಡಂಗಾದ್ರೆ ಡಿವೋರ್ಸ್ ಕೊಡಬಹುದು, ಮಕ್ಕಳನ್ನ ಬಿಡಕ್ಕಾಗಲ್ವಲ್ಲ, 60 ವರ್ಷದವರೆಗೂ ಮದುವೆ ಆಗಿಲ್ಲ ಎಂದ ಸುಹಾಸಿನಿ ಮುಲಾಯ್

ಸದಾ ಸುದ್ದಿಯಲ್ಲಿದ್ದರೂ, ಇಬ್ಬರೂ ನಟರು ತಮ್ಮ ವೈಯಕ್ತಿಕ ಜೀವನವನ್ನು ಗುಟ್ಟಾಗಿಡಲು ಬಯಸಿದ್ದರು. ಧನುಷ್ ಆಗಲಿ ಅಥವಾ ಮೃಣಾಲ್ ಆಗಲಿ ತಾವು ರಿಲೇಶನ್‌ಶಿಪ್‌ನಲ್ಲಿದ್ದೇವೆ ಎಂದು ಎಲ್ಲೂ ಅಧಿಕೃತವಾಗಿ ಒಪ್ಪಿಕೊಂಡಿರಲಿಲ್ಲ. ಧನುಷ್ ತಮ್ಮ ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ ಯಾವಾಗಲೂ ಅಂತರ ಕಾಯ್ದುಕೊಳ್ಳುತ್ತಾರೆ. 18 ವರ್ಷಗಳ ದಾಂಪತ್ಯ ಜೀವನದ ನಂತರ 2022 ರಲ್ಲಿ ತಮ್ಮ ಮಾಜಿ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರಿಂದ ದೂರವಾಗುತ್ತಿರುವುದಾಗಿ ಘೋಷಿಸಿದ ಈ ನಟ, ಆ ಬಳಿಕ ಹೆಚ್ಚಾಗಿ ತಮ್ಮ ಕೆಲಸದ ಕಡೆಗೇ ಗಮನ ಹರಿಸಿದ್ದಾರೆ. ಅವರ ಮಗ ಯಾತ್ರಾನನ್ನು ಚಿತ್ರರಂಗಕ್ಕೆ ಪರಿಚಯಿಸಬೇಕೆಂಬ ಮಹತ್ವಾಕಾಂಕ್ಷೆಯಲ್ಲಿದ್ದಾರೆ.

ಇನ್ನೊಂದೆಡೆ, ಮೃಣಾಲ್ ಠಾಕೂರ್ ಅವರು ಸೀತಾ ರಾಮಮ್, ಹಾಯ್ ನಾನ್ನಾ ಮತ್ತು ದಿ ಫ್ಯಾಮಿಲಿ ಸ್ಟಾರ್ ನಂತಹ ಸಿನಿಮಾಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಈ ವರ್ಷ ಅವರು ದೋ ದೀವಾನೆ ಶೆಹರ್ ಮೇ, ಡಕಾಯ್ತ್: ಎ ಲವ್ ಸ್ಟೋರಿ ಮತ್ತು ಹೈ ಜವಾನಿ ತೋ ಇಷ್ಕ್ ಹೋನಾ ಹೈ ಎಂಬ ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.‌ ಮೃಣಾಲ್ ಮುಂದೆ ಪೂಜಾ ಮೇರಿ ಜಾನ್ ಮತ್ತು ರಾಕಾ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+