ಭಾರತೀಯ ರೈಲ್ವೆಯ ಮೆಗಾ ಪ್ಲಾನ್: ಮುಂಬೈ–ಬೆಂಗಳೂರು ಸೇರಿ 9 ಹೊಸ ವಂದೇ ಭಾರತ್ ಸ್ಲೀಪರ್ ಮಾರ್ಗ

ಭಾರತೀಯ ರೈಲ್ವೆಯ ಅತ್ಯಾಧುನಿಕ ವಂದೇ ಭಾರತ್ ಸ್ಲೀಪರ್ ರೈಲುಗಳ ವಿಸ್ತರಣೆಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಪೂರ್ವ ಮತ್ತು ಈಶಾನ್ಯ ಭಾರತವನ್ನು ಸಂಪರ್ಕಿಸುವ ಮಾರ್ಗ ಹೌರಾ-ಕಾಮಾಖ್ಯಾ ಮಾರ್ಗದಲ್ಲಿ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಈಗಾಗಲೇ ಸಂಚರಿಸುತ್ತಿದೆ. 2025ರಲ್ಲಿ ಆರಂಭವಾದ ಈ ಸೇವೆ ವೇಗದ ರಾತ್ರಿ ಪ್ರಯಾಣದ ಜೊತೆಗೆ ಆಧುನಿಕ ಸೌಲಭ್ಯಗಳನ್ನು ಪ್ರಯಾಣಿಕರಿಗೆ ಒದಗಿಸುತ್ತಿದೆ.

ಇದೀಗ ಮತ್ತಷ್ಟು ಮಾರ್ಗಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪರಿಚಯಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಕೆಲವು ಮಾರ್ಗಗಳಿಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಇನ್ನೂ ಕೆಲವು ಮಾರ್ಗಗಳನ್ನು ಭವಿಷ್ಯದ ವಿಸ್ತರಣೆಯ ಭಾಗವಾಗಿ ಆಲೋಚಿಸಲಾಗುತ್ತಿದೆ.

Vande Bharat Sleeper Expansion

ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್:

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮುಂಬೈ-ಬೆಂಗಳೂರು ವಂದೇ ಭಾರತ್ ಸ್ಲೀಪರ್ ಸೇವೆಗೆ ಅನುಮೋದನೆ ನೀಡಿದ್ದಾರೆ. ದೇಶದ ಎರಡು ಪ್ರಮುಖ ವಾಣಿಜ್ಯ ನಗರಗಳ ನಡುವಿನ ಈ ರಾತ್ರಿ ರೈಲು ಪ್ರಯಾಣದ ಅವಧಿಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವ ನಿರೀಕ್ಷೆಯಿದೆ. ವೇಳಾಪಟ್ಟಿ ಹಾಗೂ ದರಗಳ ವಿವರವನ್ನು ಇನ್ನಷ್ಟೇ ಪ್ರಕಟಣೆ ಮಾಡಲಾಗುವುದು.

ಪ್ರಯಾಣಿಕರೇ ಗಮನಿಸಿ: ಮೈಸೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ
ಪ್ರಯಾಣಿಕರೇ ಗಮನಿಸಿ: ಮೈಸೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ವಿಸ್ತರಣೆ

ರಾಜಕೀಯ ರಾಜಧಾನಿ ದೆಹಲಿ ಮತ್ತು ಆರ್ಥಿಕ ರಾಜಧಾನಿ ಮುಂಬೈ:

ದೇಶಗ ರಾಜಕೀಯ ರಾಜಧಾನಿ ದೆಹಲಿ ಮತ್ತು ಆರ್ಥಿಕ ರಾಜಧಾನಿ ಮುಂಬೈ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲಿಪರ್ ರೈಲು ಸೇವೆ ಆರಂಭಿಸುವ ಕುರಿತು ಮಹತ್ವದ ವರದಿಗಳು ಹೊರಬಿದ್ದಿದೆ. ಈ ಉಭಯ ಪ್ರಮುಖ ನಗರಗಳ ನಡುವೆ ದಿನನಿತ್ಯ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಅತ್ಯಂತ ಹೆಚ್ಚಾಗಿರುವುದರಿಂದ, ಹೊಸ ಸ್ಲೀಪರ್ ರೈಲು ಯೋಜನೆಯನ್ನು ಜಾರಿಗೆ ತರಲು ಈ ಮಾರ್ಗವನ್ನು ಮೊದಲ ಆದ್ಯತೆ ಕೊಡುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.

Vande Bharat Sleeper Expansion

ದೆಹಲಿ-ಅಹಮದಾಬಾದ್:

ದೇಶದ ರಾಜಧಾನಿ ದೆಹಲಿ ಮತ್ತು ಕೋಲ್ಕತ್ತಾ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ, ಭವಿಷ್ಯದಲ್ಲಿ ಹೊಸ 'ವಂದೇ ಭಾರತ್ ಸ್ಲೀಪರ್' ರೈಲು ಸೇವೆ ಆರಂಭವಾಗುವ ಬಲವಾದ ಸಾಧ್ಯತೆಯಿದೆ.

ಉತ್ತರ-ದಕ್ಷಿಣ ಭಾರತಕ್ಕೆ ಹೊಸ ಕೊಂಡಿ:

ದೇಶದ ಉತ್ತರ ಹಾಗೂ ದಕ್ಷಿಣ ಭಾಗಗಳನ್ನು ಜೋಡಿಸುವ ಪ್ರಮುಖ ರೈಲ್ವೆ ಮಾರ್ಗವಾದ ದೆಹಲಿ ಮತ್ತು ಚೆನ್ನೈ ನಡುವೆ ಶೀಘ್ರದಲ್ಲೇ ಅತ್ಯಾಧುನಿಕ 'ವಂದೇ ಭಾರತ್ ಸ್ಲೀಪರ್' ರೈಲು ಸೇವೆ ಆರಂಭವಾಗುವ ಸಾಧ್ಯತೆಯಿದ್ದು, ಈ ಕುರಿತು ಪ್ರಸ್ತುತ ಅಧಿಕೃತ ಚರ್ಚೆಗಳು ನಡೆಯುತ್ತಿವೆ.

KSR ರೈಲು ನಿಲ್ದಾಣಕ್ಕೆ ಬರುವವರೇ ಗಮನಿಸಿ: ಮೂರು ತಿಂಗಳು ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ
KSR ರೈಲು ನಿಲ್ದಾಣಕ್ಕೆ ಬರುವವರೇ ಗಮನಿಸಿ: ಮೂರು ತಿಂಗಳು ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ

ದೆಹಲಿ-ಸಿಕಂದರಾಬಾದ್:

ದೇಶದ ರಾಜಧಾನಿ ದೆಹಲಿಯಿಂದ ದಕ್ಷಿಣ ಭಾರತದ ಪ್ರಮುಖ ವಾಣಿಜ್ಯ ನಗರಿ ಸಿಕಂದರಾಬಾದ್‌ಗೆ ಐಷಾರಾಮಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸುವ ಸಾಧ್ಯತೆಗಳು ದಟ್ಟವಾಗಿವೆ. ಈ ಪ್ರಮುಖ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವುದರಿಂದ, ಸುದೀರ್ಘ ಪ್ರಯಾಣವನ್ನು ಇನ್ನು ಸುಲಭ ಮತ್ತು ಆರಾಮದಾಯಕವಾಗಿಸಲು ರೈಲ್ವೆ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.

Vande Bharat Sleeper Expansion

ದೆಹಲಿ-ಪುಣೆ ಕಾರಿಡಾರ್: ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಹೊಸ ವೇಗ:

ತಂತ್ರಜ್ಞಾನ ಹಾಗೂ ಕೈಗಾರಿಕಾ ರಂಗದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಪುಣೆಯನ್ನು ಸಂಪರ್ಕಿಸುವ ಈ ವಿಶೇಷ ದೆಹಲಿ-ಪುಣೆ ಮಾರ್ಗಕ್ಕೂ ಭವಿಷ್ಯದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಉನ್ನತ ಸ್ಥಾನ ನೀಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಉದ್ಯಮ ವಲಯಕ್ಕೆ ದೊಡ್ಡ ಬೂಸ್ಟ್ ನೀಡಲಿದೆ.

ಮುಂಬೈ-ಅಹಮದಾಬಾದ್ ರೈಲ್ವೆ ಮಾರ್ಗದಲ್ಲಿ ಹೊಸ ಕ್ರಾಂತಿ:

ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆಗೆ ಸಜ್ಜಾಗುತ್ತಿರುವ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ಈಗ ಮತ್ತೊಂದು ಹೊಸ ಸೇರ್ಪಡೆಯ ಚರ್ಚೆಗಳು ಶುರುವಾಗಿವೆ. ಈಗಾಗಲೇ ಹಲವು ಪ್ರೀಮಿಯಂ ರೈಲುಗಳು ಚಲಿಸುತ್ತಿರುವ ಈ ಜನನಿಬಿಡ ಮಾರ್ಗದಲ್ಲಿ, ಸದ್ಯದಲ್ಲೇ ಹೊಸ ಮಾದರಿಯ 'ವಂದೇ ಭಾರತ್ ಸ್ಲೀಪರ್' ರೈಲು ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸುವ ಬಗ್ಗೆ ರೈಲ್ವೆ ಮಂಡಳಿ ಚಿಂತನೆ ನಡೆಸುತ್ತಿದೆ.

ಶ್ರೀನಗರ ಪ್ರೀಮಿಯಂ ಸ್ಲೀಪರ್ ರೈಲು: ಶೀಘ್ರದಲ್ಲೇ ಅಧಿಕೃತ ಘೋಷಣೆ ಸಾಧ್ಯತೆ:

ಕಾಶ್ಮೀರಕ್ಕೆ ಸಂಪೂರ್ಣ ರೈಲು ಸಂಪರ್ಕ ಕಲ್ಪಿಸಿದ ಬೆನ್ನಲ್ಲೇ, ದೆಹಲಿ-ಶ್ರೀನಗರ ನಡುವೆ ಪ್ರೀಮಿಯಂ ಸ್ಲೀಪರ್ ರೈಲು ಸೇವೆ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿದ್ದು, ಪ್ರಯಾಣಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಆದರೆ, ಈ ಹೈಟೆಕ್ ರೈಲು ಸೇವೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಇನ್ನೂ ಅಧಿಕೃತ ಮುದ್ರೆ ಬೀಳಬೇಕಿದೆ.

ಭಾರತೀಯ ರೈಲ್ವೆಯು ದೇಶಾದ್ಯಂತ ವಂದೇ ಭಾರತ್ ಸ್ಲೀಪರ್ ರೈಲುಗಳ ಮಾರ್ಗಗಳನ್ನು ವಿಸ್ತರಿಸಲು ಮತ್ತು ರಾತ್ರಿ ಪ್ರಯಾಣದ ಚಿತ್ರವನ್ನು ಬದಲಾಯಿಸಲು ಮುಂದಾಗಿದೆ. ಪ್ರಯಾಣಿಕರಿಗೆ ಸುರಕ್ಷತೆ, ಅತ್ಯಂತ ವೇಗವಾದ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸುವುದೇ ಈ ಯೋಜನೆ ಪ್ರಮುಖ ಉದ್ದೆಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+