Shafali Verma: ಸ್ಮೃತಿ ಮಂಧಾನ ಅಕ್ಕ ಜೊತೆಗಿದ್ರೆ ಧೈರ್ಯ, ಅವರಿಗೊಂದು ಸಲಾಂ: ಶಫಾಲಿ ವರ್ಮಾ ಹೀಗೆ ಹೇಳಿದ್ಯಾಕೆ?

Shafali Verma: ಇತ್ತೀಚೆಗಷ್ಟೇ ನಡೆದ ನೆಂದರ್‌ಲ್ಯಾಂಡ್ಸ್‌ ವಿರುದ್ಧದ ಮಹಿಳಾ ಟಿ20 ವಿಶ್ವಕಪ್‌ 2026 ಪಂದ್ಯದಲ್ಲಿ ಟೀಮ್ ಇಂಡಿಯಾವು ಭರ್ಜರಿ ಗೆಲುವು ಸಾಧಿಸಿತ್ತು. ಇದರ ಬೆನ್ನಲ್ಲೇ ಶಫಾಲಿ ವರ್ಮಾ ಅವರು ಸ್ಮೃತಿ ಮಂಧಾನ ಅವರಿಗೆ ವಿಶೇಷ ಕೃತಜ್ಞತೆ ತಿಳಿಸಿ ಗಮನ ಸೆಳೆದಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.

ನೆಂದರ್‌ಲ್ಯಾಂಡ್ಸ್‌ ವಿರುದ್ಧದ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಶಫಾಲಿ ವರ್ಮಾ ಆಕ್ರಮಣಕಾರಿ ಆಟ ಆಡಿ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. ಇದು ಅವರ ಚೊಚ್ಚಲ ಟಿ20 ವಿಶ್ವಕಪ್ ಅರ್ಧಶತಕವಾಗಿದೆ. ಇದರ ಬೆನ್ನಲ್ಲೇ ಅವರು ಈ ಸಾಧನೆ ಹಿಂದಿನ ರಹಸ್ಯವನ್ನು ರಿವೀಲ್ ಮಾಡಿದ್ದಾರೆ.

Shafali Verma Thanks for Smriti Mandhana After Maiden T20 World Cup Fifty Against Netherlands

ಸ್ಮೃತಿ ಸಹಾಯ ನೆನೆದ ಶಫಾಲಿ ವರ್ಮಾ

ತಮ್ಮ ಈ ಅದ್ಭುತ ಇನ್ನಿಂಗ್ಸ್ ಮತ್ತು ಯಶಸ್ಸಿನ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿರುವ ಶಫಾಲಿ, ಮೈದಾನದಲ್ಲಿ ತಮ್ಮ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರು ನೀಡಿದ ಬೆಂಬಲವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ಮೈದಾನದಲ್ಲಿ ನಾನು ಆತುರಪಟ್ಟು ವಿಕೆಟ್ ಒಪ್ಪಿಸದಂತೆ ತಡೆದು, ನನ್ನನ್ನು ಶಾಂತವಾಗಿರಿಸಲು ಸ್ಮೃತಿ ಅಕ್ಕ ಸಾಕಷ್ಟು ಸಹಾಯ ಮಾಡುತ್ತಾರೆ,' ಎಂದು ನೆನೆದಿದ್ದಾರೆ.

ಮೈದಾನದಲ್ಲಿ ಮಿಂಚಿದ ಆರಂಭಿಕ ಜೋಡಿ

ಭಾರತ ತಂಡದ ಬ್ಯಾಟಿಂಗ್‌ನ ಉತ್ತಮ ಅಡಿಪಾಯ ಎಂದರೆ ಅದು ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರ ಆರಂಭಿಕ ಜೋಡಿಯ ಆಟ. ಶಫಾಲಿ ವರ್ಮಾ ಅವರು ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಆಟಗಾರ್ತಿ. ಆದರೆ, ಕೆಲವೊಮ್ಮೆ ಈ ಆತುರವೇ ಅವರಿಗೆ ಮುಳುವಾಗುತ್ತಿತ್ತು. ಆದರೆ ಈ ಬಾರಿ ಎಡವದಂತೆ ತಮಗೆ ನೆರವಾಗಿದ್ದು ಮಂಧಾನ ಅಕ್ಕ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಶಫಾಲಿ, 'ನಾನು ಮೈದಾನಕ್ಕಿಳಿದಾಗ ಬೌಂಡರಿಗಳನ್ನು ಬಾರಿಸಲು ಅತಿಯಾದ ಉತ್ಸಾಹ ತೋರುತ್ತೇನೆ. ಆದರೆ ಸ್ಮೃತಿ ಮಂಧಾನ ಅವರು ನನ್ನ ಜೊತೆಗಿದ್ದಾಗ ಶಾಂತ ಸ್ವಭಾವದಿಂದ ಇರಲು ನೆರವಾಗುತ್ತಾರೆ. ಪ್ರತಿ ಓವರ್‌ನ ನಡುವೆ ನನ್ನ ಬಳಿ ಬಂದು ನಿಧಾನವಾಗಿ ಆಡು, ಕ್ರೀಸ್‌ನಲ್ಲಿ ನೆಲಕಚ್ಚಲು ಸಮಯ ತಗೋ ಎಂದು ಧೈರ್ಯ ತುಂಬುತ್ತಾರೆ. ಅವರ ಈ ಮಾತುಗಳು ನನ್ನನ್ನು ಸುಧಾರಿಸುವಂತೆ ಮತ್ತು ಉತ್ತಮ ಇನ್ನಿಂಗ್ಸ್ ಆಡಲು ಪ್ರೇರೇಪಿಸುತ್ತವೆ,' ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಫಿಫ್ಟಿ

ಟಿ20 ವಿಶ್ವಕಪ್‌ನಂತಹ ದೊಡ್ಡ ವೇದಿಕೆಯಲ್ಲಿ ತಮ್ಮ ಮೊದಲ ಅರ್ಧಶತಕವನ್ನು ದಾಖಲಿಸಿರುವುದು ಶಫಾಲಿ ಅವರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಈ ಪಂದ್ಯದಲ್ಲಿ ಶಫಾಲಿ ಕೇವಲ ಬೌಂಡರಿಗಳಿಗಷ್ಟೇ ಸೀಮಿತವಾಗದೆ, ಸಿಂಗಲ್ಸ್ ಮತ್ತು ಡಬಲ್ಸ್ ರನ್‌ಗಳನ್ನು ತೆಗೆದುಕೊಳ್ಳುವ ಮೂಲಕ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಇವರ ಜವಾಬ್ದಾರಿಯುತ ಅರ್ಧಶತಕದ ನೆರವೇ ಭಾರತ ತಂಡವು ಎದುರಾಳಿಗಳ ವಿರುದ್ಧ ಬೃಹತ್ ಮೊತ್ತವನ್ನು ಪೇರಿಸಲು ಮತ್ತು ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಮುಖ ಕಾರಣವಾಯಿತು.

ಹಿರಿಯ, ಕಿರಿಯ ಆಟಗಾರ್ತಿಯರ ಜೊತೆಯಾಟ ಎಷ್ಟು ಮುಖ್ಯ?

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಯಶಸ್ಸಿನಲ್ಲಿ ಹಿರಿಯ ಮತ್ತು ಕಿರಿಯ ಆಟಗಾರ್ತಿಯರ ನಡುವಿನ ಉತ್ತಮ ಬಾಂಧವ್ಯ ಪ್ರಮುಖ ಪಾತ್ರ ವಹಿಸುತ್ತಿದೆ. ಸ್ಮೃತಿ ಮಂದಾನ ಅವರ ಅನುಭವ ಮತ್ತು ಶಫಾಲಿ ವರ್ಮಾ ಅವರಂತಹ ಯುವ ಆಟಗಾರ್ತಿಯರ ರನ್‌ ವೇಗ ಹೆಚ್ಚಿದರೆ ಎದುರಾಳಿ ಬೌಲರ್‌ಗಳಿಗೆ ತಲೆನೋವಾಗುವುದು ಗ್ಯಾರಂಟಿ.

ವಿಶ್ವಕಪ್‌ನ ಮುಂದಿನ ಪಂದ್ಯಗಳಲ್ಲೂ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸುವ ಭರವಸೆಯನ್ನು ಈ ಆರಂಭಿಕ ಜೋಡಿ ನೀಡಿದೆ. ಶಫಾಲಿ ಅವರ ಈ ಫಾರ್ಮ್ ಭಾರತ ತಂಡಕ್ಕೆ ಟ್ರೋಫಿ ಗೆಲ್ಲುವ ಹಾದಿಯಲ್ಲಿ ಅತ್ಯಂತ ನಿರ್ಣಾಯಕವಾಗಲಿದೆ ಎಂದು ಹಲವು ಕ್ರಿಕೆಟ್ ದಿಗ್ಗಜರು ಹೇಳಿದ್ದಾರೆ. ಇನ್ನೂ ಶಫಾಲಿ ಅವರ ಸ್ಫೋಟಕ ಆಟದ ಜೊತೆಗೆ ಮೂಡಿಬಂದಿರುವ ಈ ಜವಾಬ್ದಾರಿಯುತ ಇನ್ನಿಂಗ್ಸ್ ಕಂಡು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವುಮೆನ್ ಇನ್ ಬ್ಲೂ ಪಡೆಯ ಈ ಗೆಲುವಿನ ಓಟ ಹೀಗೆಯೇ ಮುಂದುವರಿಯಲಿ ಎಂದು ಹಾರೈಸುತ್ತಿದ್ದಾರೆ. ಒಟ್ಟಿನಲ್ಲಿ ಶಫಾಲಿ ವರ್ಮಾ ಅವರು ತಮಗೆ ಉತ್ತಮ ಸಲಹೆ ನೀಡಿದ ಸ್ಮೃತಿ ಮಂಧಾನ ಅವರನ್ನು ನೆನೆದಿರುವುದು ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+