IRCTC ಗುಡ್ ನ್ಯೂಸ್: ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ ಈಗ ಇನ್ನಷ್ಟು ಸುಲಭ

ಭಾರತದ ಪ್ರಮುಖ ಪುಣ್ಯಕ್ಷೇತ್ರಗಳ ದರ್ಶನ ಮಾಡಲು ಬಯಸುವ ಭಕ್ತರಿಗೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ವಿಶೇಷ ಅವಕಾಶವನ್ನು ಕಲ್ಪಿಸಿದೆ. ಅಯೋಧ್ಯೆ ಮತ್ತು ಕಾಶಿ ಪುಣ್ಯಕ್ಷೇತ್ರ ಯಾತ್ರೆ ಹೆಸರಿನ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಘೋಷಿಸಿದ್ದು, ಈ ಯಾತ್ರೆಯು 9 ರಾತ್ರಿ ಮತ್ತು 10 ದಿನಗಳ ಕಾಲ ನಡೆಯಲಿದೆ.

ಈ ವಿಶೇಷವಾದ ಪ್ರವಾಸಕ್ಕಾಗಿ 'ಭಾರತ್ ಗೌರವ ಸ್ಪೆಷಲ್ ಟೂರಿಸ್ಟ್ ರೈಲು' ಅನ್ನು ಬಳಸಲಾಗುತ್ತಿದ್ದು, ರೈಲು ಆಗಸ್ಟ್ 4, 2026ರಂದು ಸಿಕಂದರಾಬಾದ್ ನಿಂದ ಹೊರಡುತ್ತದೆ.

IRCTC Ayodhya Kashi Tour Package

ಕರ್ನಾಟಕದ ಭಕ್ತರಿಗೂ ಸುವರ್ಣಾವಕಾಶ

ಈ ಯಾತ್ರೆ ಸಿಕಂದರಾಬಾದ್‌ನಿಂದ ಆರಂಭವಾಗಲಿದ್ದರೂ, ಕರ್ನಾಟಕದ ಭಕ್ತರು ಕೂಡ ಸುಲಭವಾಗಿ ಇದರ ಪ್ರಯೋಜನ ಪಡೆಯಬಹುದು. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಿಕಂದರಾಬಾದ್‌ಗೆ ರೈಲು ಹಾಗೂ ಬಸ್ ಸಂಪರ್ಕ ಉತ್ತಮವಾಗಿರುವುದರಿಂದ ಭಕ್ತರು ಅಲ್ಲಿಗೆ ತೆರಳಿ ಯಾತ್ರೆಯಲ್ಲಿ ಭಾಗವಹಿಸಬಹುದು. ಅಯೋಧ್ಯೆ, ಕಾಶಿ, ಪುರಿ ಮತ್ತು ಪ್ರಯಾಗ್‌ರಾಜ್‌ನಂತಹ ಪ್ರಮುಖ ಪುಣ್ಯಕ್ಷೇತ್ರಗಳ ದರ್ಶನವನ್ನು ಒಂದೇ ಪ್ಯಾಕೇಜ್‌ನಲ್ಲಿ ಮಾಡುವ ಅವಕಾಶ ದೊರೆಯುತ್ತಿರುವುದರಿಂದ, ಕರ್ನಾಟಕದ ಯಾತ್ರಾರ್ಥಿಗಳಲ್ಲಿ ಈ ಪ್ರವಾಸದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುವ ನಿರೀಕ್ಷೆಯಿದೆ.

ರೈಲು ಪ್ರಯಾಣಿಕರಿಗೆ ಬಿಗ್ ಅಪ್‌ಡೇಟ್: ಇನ್ಮುಂದೆ ವೇಟಿಂಗ್ ಲಿಸ್ಟ್ ಟಿಕೆಟ್‌ ಸಿಗೋದು ಕಷ್ಟ! ರೈಲ್ವೆಯ ಹೊಸ ನಿಯಮ ಏನು?
ರೈಲು ಪ್ರಯಾಣಿಕರಿಗೆ ಬಿಗ್ ಅಪ್‌ಡೇಟ್: ಇನ್ಮುಂದೆ ವೇಟಿಂಗ್ ಲಿಸ್ಟ್ ಟಿಕೆಟ್‌ ಸಿಗೋದು ಕಷ್ಟ! ರೈಲ್ವೆಯ ಹೊಸ ನಿಯಮ ಏನು?

ಯಾವ ಯಾವ ಪುಣ್ಯಕ್ಷೇತ್ರಗಳ ದರ್ಶನ?

ಈ ಯಾತ್ರೆಯಲ್ಲಿ ಭಕ್ತರು ಪುರಿ, ಕೋಣಾರ್ಕ್, ಗಯಾ, ಕಾಶಿ(ವಾರಣಾಸಿ), ಅಯೋಧ್ಯೆ ಹಾಗೂ ಪ್ರಯಾಗರಾಜ್ ಸೇರಿದಂತೆ ಹಲವಾರು ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಭೆಟಿ ನೀಡಲಿದ್ದಾರೆ.

ಯಾತ್ರೆಯ ವೇಳೆ ಪುರಿ ಜಗನ್ನಾಥ ದೇವಾಲಯ, ಕೋಣಾರ್ಕ ಸೊರ್ಯ ದೇವಾಲಯ, ಗಯಾದ ವಿಷ್ಣುಪಾದ ದೇವಾಲಯ, ಕಾಶಿ ವಿಶ್ವಾನಾಥ ದೇವಾಲಯ ಮತ್ತು ಕಾರಿಡಾರ್, ವಿಶಾಲಾಕ್ಷಿ ದೇವಸ್ಥಾನ, ಅನ್ನಪೂಣೇಶ್ವರಿ ದೇವಸ್ಥಾನ ಹಾಗೂ ಪ್ರಸಿದ್ಢ ಗಂಗಾ ಆರತಿಯನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ.

ಇದರ ಜೊತೆಗೆ ಅಯೋಧ್ಯೆಯ ರಾಮ ಜನ್ಮಭೂಮಿ ಮಂದಿರ, ಹನುಮಾನ್ ಗಢಿ, ಸರಯೂ ನದಿಯ ಆರತಿ ಹಾಗೂ ಪ್ರಯಾಗ್ರ ರಾಜ್ ತ್ರಿವೇಣಿ ಸಂಗಮಕ್ಕೂ ಬೇಟಿ ನೀಡಲಾಗುತ್ತದೆ.

RCB ಅಭಿಮಾನಿಗಳಿಗೆ ನಮ್ಮ ಮೆಟ್ರೋ ಉಚಿತ ಪ್ರಯಾಣ!, BMRCL ಸ್ಪಷ್ಟನೆ ಇಲ್ಲಿದೆ
RCB ಅಭಿಮಾನಿಗಳಿಗೆ ನಮ್ಮ ಮೆಟ್ರೋ ಉಚಿತ ಪ್ರಯಾಣ!, BMRCL ಸ್ಪಷ್ಟನೆ ಇಲ್ಲಿದೆ

ಪ್ರವಾಸದ ದರ?

ಪ್ರಯಾಣಿಕರು ಆಯ್ಕೆ ಮಾಡುವ ವರ್ಗದ ಮೇಲೆ ಪ್ರವಾಸ ಧರ ನಿಗದಿಯಾಗಿರುತ್ತದೆ, ಸ್ಲಿಪರ್ ಕ್ಲಾಸ್ (ಎಕಾನಮಿ) ಟಿಕೆಟ್ ದರ ಪ್ರತಿ ವ್ಯಕ್ತಿಗೆ ರೂ. 16,500 ರಿಂದ ಪ್ರಾರಂಭವಾಗುತ್ತದೆ.

ಸ್ಲೀಪರ್ ಕ್ಲಾಸ್ (ಎಕಾನಮಿ) - ರೂ. 16,500
ತೃತೀಯ ಎಸಿ (3AC) - ರೂ. 25,600
ದ್ವಿತೀಯ ಎಸಿ (2AC) - ರೂ. 33,400
ಪ್ಯಾಕೇಜ್‌ನಲ್ಲಿ ಏನೆಲ್ಲ ಸೌಲಭ್ಯಗಳಿವೆ?

ಈ ಪ್ಯಾಕೇಜ್ ಎಲ್ಲಾ ವೆಚ್ಚಗಳನ್ನು ಒಳಗೊಂಡ ಯೋಜನೆ ಆಗಿದೆ. ರೈಲು ಪ್ರಯಾಣ, ಸ್ಥಳಿಯ ಸಾರಿಗೆ, ವಸತಿ ವ್ಯವಸ್ಥೆ, ಸಸ್ಯಹಾರಿ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ, ಪ್ರವಾಸದ ಮಾರ್ಗದರ್ಶಕರ ಸೇವೆ ಮತ್ತು ಪ್ರಯಾಣ ವಿಮೆ ಸೇರಿದಂತೆ ಇನ್ನು ಹಲವಾರು ಸೌಲಭ್ಯಗಳು ಇದರಲ್ಲಿ ಸೇರಿವೆ.

ಯಾವ ನಿಲ್ದಾಣಗಳಲ್ಲಿ ಹತ್ತಬಹುದು?

ಸಿಕಂದರಾಬಾದ್, ಚರ್ಲಪಳ್ಳಿ, ಕಾಜಿಪೇಟ್, ವಾರಂಗಲ್, ಖಮ್ಮಂ, ವಿಜಯವಾಡ, ಗುಡಿವಾಡ, ಭೀಮಾವರಂ, ತನೂಕು, ನಿಡದವೋಲು, ರಾಜಮಹೇಂದ್ರವರಂ, ಸಮಲ್ಕೋಟ್, ತುಣಿ, ದುವ್ವಾಡ, ಪೆಂಡುರ್ತಿ ಹಾಗೂ ವಿಜಯನಗರಂ ಜಂಕ್ಷನ್ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪ್ರಯಾಣಿಕರು ರೈಲು ಹತ್ತಲು ಮತ್ತು ಇಳಿಯಲು ಅವಕಾಶವಿದೆ.

ಟಿಕೆಟ್ ಬುಕ್ಕಿಂಗ್ ಹೇಗೆ?

ಈ ಪವಿತ್ರ ಯಾತ್ರೆಯಲ್ಲಿ ಭಾಗವಹಿಸಲು ಬಯಸುವವರು ಐಆರ್‌ಸಿಟಿಸಿ ಪ್ರವಾಸೋದ್ಯಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದು. ಈ ರೈಲಿನಲ್ಲಿ ಒಟ್ಟು 702 ಆಸನಗಳಿದ್ದು, 160 ಸ್ಲೀಪರ್, 490 ತೃತೀಯ ಎಸಿ ಹಾಗೂ 52 ದ್ವಿತೀಯ ಎಸಿ ಆಸನಗಳು ಲಭ್ಯವಿವೆ.

ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ದರ್ಶನವನ್ನು ಕಡಿಮೆ ವೆಚ್ಚದಲ್ಲಿ ಮಾಡಲು ಬಯಸುವ ಭಕ್ತರಿಗೆ ಈ ವಿಶೇಷ ಯಾತ್ರೆ ಉತ್ತಮ ಅವಕಾಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+