ಯಾವ ಜನ್ಮರಾಶಿಯವರು ಹೆಚ್ಚು ರಹಸ್ಯ ಕಾಪಾಡಿಕೊಳ್ಳುತ್ತಾರೆ? ಯಾರು ಮನಸ್ಸು ಬಿಚ್ಚಿ ಮಾತನಾಡುತ್ತಾರೆ?

ವ್ಯಕ್ತಿಯ ಸ್ವಭಾವ ಏನು ಎಂಬುದನ್ನು ಗಮನಿಸಲು ಆತನ ಜಾತಕ ಗಮನಿಸುವುದು ಅಗತ್ಯ. ಒಬ್ಬ ವ್ಯಕ್ತಿಯ ಸ್ವಭಾವವನ್ನು ಬಹು ಮಟ್ಟಿಗೆ ಆತನ ಜನ್ಮರಾಶಿಯಿಂದ ನಿರ್ಧರಿಸಬಹುದು. ಆತನ ಜನ್ಮಕುಂಡಲಿಯಲ್ಲಿರುವ ಚಂದ್ರ, ಲಗ್ನ, ಬುಧ, ಶನಿ, 8ನೇ ಮತ್ತು 12ನೇ ಭಾವಗಳ ಸ್ಥಿತಿ ನೋಡಿ, ಆ ವ್ಯಕ್ತಿ ರಹಸ್ಯಪ್ರಿಯನೋ ಅಥವಾ ಮುಕ್ತ ಸ್ವಭಾವದವನೋ ಎಂಬುದನ್ನು ಹೇಳಬಹುದು. ಇಲ್ಲಿ ಸಾಮಾನ್ಯವಾಗಿ ಜನ್ಮರಾಶಿಯ ಆಧಾರದ ಮೇಲೆ ಆತ ರಹಸ್ಯ ಕಾಪಾಡಿಕೊಳ್ಳುವವನೋ, ಯಾವ ಥರದ ರಹಸ್ಯ ಎಂಬುದನ್ನು ವಿಶ್ಲೇಷಿಸಲಾಗಿದೆ. ನಿಮ್ಮ ಜನ್ಮರಾಶಿ ಏನಂತಿದೆ ನೋಡಿ. ಇಲ್ಲಿ ವ್ಯಕ್ತಿಯ ಕುಟುಂಬ, ಅನುಭವ, ಶಿಕ್ಷಣ ಮತ್ತು ವ್ಯಕ್ತಿತ್ವವೂ ದೊಡ್ಡ ಪಾತ್ರ ವಹಿಸುತ್ತವೆ.

ಇವರು ಹೆಚ್ಚು ರಹಸ್ಯ ಸ್ವಭಾವದವರು

ವೃಶ್ಚಿಕ (Scorpio) - ತಮ್ಮ ಭಾವನೆಗಳು, ಯೋಜನೆಗಳು ಮತ್ತು ವೈಯಕ್ತಿಕ ವಿಷಯಗಳನ್ನು ಸುಲಭವಾಗಿ ಹಂಚಿಕೊಳ್ಳುವುದಿಲ್ಲ. ಯಾರನ್ನು ನಂಬಬೇಕು ಎಂಬುದರಲ್ಲಿ ಎಚ್ಚರಿಕೆ ವಹಿಸುತ್ತಾರೆ. ಸುಲಭವಾಗಿ ಯೃ ಜತೆಯೂ ರಹಸ್ಯ ಹಂಚಿಕೊಳ್ಲೂವುದಿಲ್ಲ.

Zodiac Signs

ಮಕರ (Capricorn) - ತಮ್ಮ ಗುರಿ, ಹಣಕಾಸು ಮತ್ತು ವೃತ್ತಿ ಯೋಜನೆಗಳನ್ನು ಮೌನವಾಗಿ ಇಟ್ಟುಕೊಳ್ಳುತ್ತಾರೆ. ಇದರಿಂದ ಇನ್ನೊಬ್ಬರು ಲಾಭ ಪಡೆಯಬಹುದು ಎಂಬುದು ಅವರಿಗೆ ತಿಳಿದಿರುತ್ತದೆ. ತಮ್ಮ ಲಾಭ ಇನ್ನೊಬ್ಬರಿಗೆ ಆಗಲು ಬಿಡುವುದಿಲ್ಲ.

ಕನ್ಯಾ (Virgo) - ಎಲ್ಲವನ್ನೂ ವಿಶ್ಲೇಷಿಸುವ ಸ್ವಭಾವ. ತಮ್ಮ ಸಮಸ್ಯೆಗಳನ್ನು ತಾವೇ ನಿಭಾಯಿಸಲು ಇಷ್ಟಪಡುತ್ತಾರೆ. ಇವರು ಸ್ವತಂತ್ರ ಚಿಂತನೆಯವರು. ತಮ್ಮ ಸಮಸ್ಯೆ ತಾವೇ ಪರಿಹರಿಸಿಕೊಳ್ಳಬಲ್ಲರು. ಅನ್ಯರು ತಲೆ ಹಾಕುವುದು ಇವರಿಗೆ ಇಷ್ಟವಿಲ್ಲ.

ಕುಂಭ (Aquarius) - ತಮ್ಮ ಆಂತರಿಕ ಭಾವನೆಗಳನ್ನು ಬಹಿರಂಗಪಡಿಸುವುದು ಕಡಿಮೆ. ಹೊರಗೆ ಬೆರೆಯುವವರಂತೆ ಕಂಡರೂ ಮನಸ್ಸಿನ ಮಾತುಗಳನ್ನು ಎಲ್ಲರಿಗೂ ಹೇಳುವುದಿಲ್ಲ. ಹಾಗೆ ಹಂಚಿಕೊಂಡರೆ ಅವಮಾನ ಆಗಬಹುದು ಎಂಬ ಥರದ ಆಲೋಚನೆ ಅವರಿಗೆ ಇರುತ್ತದೆ.

ಶುಕ್ರ-ಕೇತು ಸಂಯೋಗದಿಂದ ಕಾಳಸರ್ಪ ಯೋಗ ಅಂತ್ಯ : ಈ ರಾಶಿಯವರಿಗೆ ಇನ್ನು ಕೈ ಹಿಡಿಯಲಿದೆ ಅದೃಷ್ಟ
ಶುಕ್ರ-ಕೇತು ಸಂಯೋಗದಿಂದ ಕಾಳಸರ್ಪ ಯೋಗ ಅಂತ್ಯ : ಈ ರಾಶಿಯವರಿಗೆ ಇನ್ನು ಕೈ ಹಿಡಿಯಲಿದೆ ಅದೃಷ್ಟ

ಹೆಚ್ಚು ಮುಕ್ತ ಸ್ವಭಾವದವರು

ಧನು (Sagittarius) - ಮನಸ್ಸಿಗೆ ಬಂದದ್ದನ್ನು ನೇರವಾಗಿ ಹೇಳುವವರು. ಇವರು ಸಂಗಾತಿ, ಬಾಸ್‌, ಸಹೋದ್ಯೋಗಿ, ಮಕ್ಕಳು ಎಂದು ಗಣಿಸುವುದಿಲ್ಲ. ಇದ್ದದ್ದನ್ನು ಇದ್ದ ಹಾಗೇ ಹೇಳುವುದರಲ್ಲಿ ಸಿದ್ಧಹಸ್ತರು. ಹೆಚ್ಚು ರಹಸ್ಯ ಕಾಪಾಡಿಕೊಳ್ಳಲಾರರು.

ಮೇಷ (Aries) - ಮುಚ್ಚುಮರೆ ಇಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಲವು ರಹಸ್ಯಗಳನ್ನು ತಮ್ಮಲ್ಲೇ ಇಟ್ಟಕೊಳ್ಳುತ್ತಾರೆ. ಆದರೆ ಹಾನಿಕರವಲ್ಲದ ರೀತಿಯಲ್ಲಿ ತಮ್ಮ ಮಾತುಗಳನ್ನು ಪ್ರಕಟಪಡಿಸುತ್ತಾರೆ. ಇವರನ್ನು ನಂಬಬಹುದು.

ಮಿಥುನ (Gemini) - ಮಾತನಾಡಲು, ಅನುಭವ ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಇವರು ರಹಸ್ಯಗಳನ್ನು ಹೆಚ್ಚು ಕಾಪಾಡಿಕೊಳ್ಳಲಾರರು. ಸುತ್ತಮುತ್ತ ಇರುವವರನ್ನು ಮುಗ್ಧವಾಗಿ ನಂಬುವವರೂ ಇವರೇ. ನಂಬಿ ಮೋಸ ಹೋಗುವವರೂ ಇವರೇ.

ಸಿಂಹ (Leo) - ತಮ್ಮ ಸಾಧನೆ, ಅನುಭವ ಮತ್ತು ಆಲೋಚನೆಗಳನ್ನು ಆತ್ಮವಿಶ್ವಾಸದಿಂದ ಹಂಚಿಕೊಳ್ಳುತ್ತಾರೆ. ಅದರಿಂದ ತಮಗೇನು ಆದೀತು ಅಂತ ಆಲೋಚಿಸುವುದಿಲ್ಲ. ಹಾಗೇನಾದರೂ ಆದರೂ ಅದನ್ನು ನಿಭಾಯಿಸಿಯೇನು ಎಂಬ ಧೈರ್ಯ ಹೊಂದಿರುತ್ತಾರೆ.

ಸವಾಲುಗಳ ಎದುರು ಯಾವ ರಾಶಿಯವರು ಧೈರ್ಯದಿಂದ ನಿಲ್ಲುತ್ತಾರೆ? ಯಾರಿಗೆ ದೇವರೇ ದೊಡ್ಡ ಆಸರೆ?
ಸವಾಲುಗಳ ಎದುರು ಯಾವ ರಾಶಿಯವರು ಧೈರ್ಯದಿಂದ ನಿಲ್ಲುತ್ತಾರೆ? ಯಾರಿಗೆ ದೇವರೇ ದೊಡ್ಡ ಆಸರೆ?

ಯಾವ ರಾಶಿಯವರು ಯಾವುದನ್ನು ರಹಸ್ಯವಾಗಿಡುತ್ತಾರೆ?

ವೃಶ್ಚಿಕ - ಪ್ರೀತಿ, ನೋವು, ವೈಯಕ್ತಿಕ ಜೀವನ, ದೀರ್ಘಕಾಲದ ಯೋಜನೆಗಳು. ತಮ್ಮ ನಂಬಿಕೆ ಸಂಪಾದಿಸಿದವರಿಗೆ ಮಾತ್ರ ಈ ವಿಷಯಗಳನ್ನು ಹೇಳಲು ಇಷ್ಟಪಡುತ್ತಾರೆ. ಇವರ ನಂಬಿಕೆ ಹೊಂದಿರುವವರು ಕಡಿಮೆ, ನಂಬಿಕೆ ಸಂಪಾದಿಸಲು ಹರಸಾಹಸ ಪಡಬೇಕು.

ಮಕರ - ಹಣಕಾಸು, ವೃತ್ತಿ ಗುರಿಗಳು, ಮುಂದಿನ ಹೆಜ್ಜೆಗಳು. ತಮ್ಮ ಗುರಿಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು, ಅವುಗಳನ್ನು ಯಾರೂ ಕೆಡಿಸದಿರಲು ಹೀಗೆ ಮಾಡುತ್ತಾರೆ. ಒಂದು ಹಂತದ ಎತ್ತರ ಏರಿದ ಬಳಿಕವೂ ಅವುಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಇವರಿಗೆ ಸಹೋದ್ಯೋಗಿಗಳು ಸ್ಪರ್ಧಿಗಳಂತೆ ಕಾಣುತ್ತಾರೆ.

ಕನ್ಯಾ - ಆರೋಗ್ಯದ ಸಮಸ್ಯೆಗಳು, ವೈಯಕ್ತಿಕ ಚಿಂತೆಗಳು, ದುರ್ಬಲತೆಗಳು. ಭಾವನಾತ್ಮಕವಾಗಿ ಸುರಕ್ಷಿತವಾಗಿರಲು ಹಾಗೂ ಅವಮಾನ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಾರೆ. ತಮ್ಮ ಆರೋಗ್ಯದ ಕುರಿತು ಯಾರಾದರೂ ವ್ಯಂಗ್ಯ ಮಾಡಿದರೆ ಸಹಿಸಿಕೊಳ್ಳಲಾರರು.

ಕುಂಭ - ನಿಜವಾದ ಭಾವನೆಗಳು, ವೈಯಕ್ತಿಕ ಕನಸುಗಳು. ತಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ. ಅದರಲ್ಲಿ ಯಾರದೂ ಹಸ್ತಕ್ಷೇಪ ಬಯಸುವುದಿಲ್ಲ. ತಮ್ಮತನವನ್ನು ಅತ್ಯಂತ ಖಾಸಗಿಯಾಗಿ ಕಾಪಾಡಿಕೊಳ್ಳಲು ಬಯಸುವವರು.

ಕಟಕ (Cancer) - ಕುಟುಂಬದ ವಿಷಯಗಳು ಮತ್ತು ಭಾವನಾತ್ಮಕ ಗಾಯಗಳು. ಇವುಗಳು ಪರರ ಪಾಲಾಗದಂತೆ, ಅವರಿಂದ ಅನಗತ್ಯ ಸಲಹೆ, ಟೀಕೆ ಬಾರದಂತೆ ಕಾಪಾಡಿಕೊಳ್ಳುತ್ತಾರೆ.

ವೃಷಭ (Taurus) - ಆಸ್ತಿ, ಉಳಿತಾಯ ಮತ್ತು ಆರ್ಥಿಕ ನಿರ್ಧಾರಗಳು. ಟೀಕೆ, ಅಸೂಯೆ ಅಥವಾ ಅನಗತ್ಯ ಹಸ್ತಕ್ಷೇಪ ತಪ್ಪಿಸಲು ಹೀಗೆ ಮಾಡುತ್ತಾರೆ. ಇಂಥದನ್ನು ಅವರು ಸಹಿಸುವುದಿಲ್ಲ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+