ಒಂದೇ ಕುಟುಂಬದ 14 ಗಂಡುಮಕ್ಕಳಿಗೆ ಮಂಟಪದಲ್ಲಿ ಒಂದೇ ಸಲ ಮದುವೆ, ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ; ಕಾರಣ ಕೇಳಿ ಗಾಬರಿ ಆಗ್ಬೇಡಿ

ಈಗೆಲ್ಲ ಮದುವೆ ಅಂದ ತಕ್ಷಣ ದುಬಾರಿ ಕಾರುಗಳು, ಕುದುರೆ ಸವಾರಿ ಹಾಗೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶೋ-ಆಫ್‌ಗಳೇ ಕಣ್ಣಮುಂದೆ ಬರುತ್ತವೆ. ಇನ್ನು ನೆಂಟರ ಹುಬ್ಬೇರಿಸಬೇಕು ಅಂತ ಅವರಿಗಿಂತ ಒಂದು ತೂಕ ಜಾಸ್ತಿಯೇ ಇರ್ಲಿ ಅಂತ ದುಬಾರಿ ಮದುವೆ ಮಾಡಿ ಎಲ್ಲರನ್ನ ತಪ್ಪದೇ ಮದುವೆ ಮಂಟಪಕ್ಕೆ ಕರೆಸಿಕೊಳ್ಳೋ ಜಮಾನ ಇದು. ಆದ್ರೆ ಒಂದೇ ಕುಟುಂಬದ 14 ಗಂಡುಮಕ್ಕಳಿಗೆ ಒಂದೇ ಮಂಟಪದಲ್ಲಿ ಒಟ್ಟಿಗೆ ಮದುವೆ ಮಾಡಿರುವ ವಿಡಿಯೋ ಮಾತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದರ ಹಿಂದಿರೋ ಪ್ಲ್ಯಾನ್‌ ಕೇಳಿ ಜನ ಶಾಕ್‌ ಕೂಡ ಆಗಿದ್ದಾರೆ.

ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಜಂಟಿ ರೈತ ಕುಟುಂಬವೊಂದು ಸಮಾಜದ ಈ ಅದ್ದೂರಿತನಕ್ಕೆ ಬ್ರೇಕ್ ಹಾಕುವ ಮೂಲಕ ಸುದ್ದಿಯಲ್ಲಿದೆ. ಮದುವೆ ಖರ್ಚು ಕಡಿಮೆ ಮಾಡಲು ಎದುರಿಸಲು ಈ ಕೃಷಿಕ ಕುಟುಂಬ ಒಂದೇ ಮಂಟಪದಲ್ಲಿ ತಮ್ಮ 14 ಜನ ಗಂಡುಮಕ್ಕಳು ಹಾಗೂ ಸೋದರಸಂಬಂಧಿಗಳಿಗೆ ಭರ್ಜರಿಯಾಗಿ ಮದುವೆ ಮಾಡಿಸಿದೆ. ಇದೀಗ ಈ ಮದುವೆಯ ಮೆರವಣಿಗೆಯ ವಿಶಿಷ್ಟ ಶೈಲಿ ಇಡೀ ದೇಶದಾದ್ಯಂತ ಭಾರಿ ಸುದ್ದಿಯಾಗುತ್ತಿದ್ದು, ಸಾಮಾಜಿಕ ಬದಲಾವಣೆಗೆ ಹೊಸ ಮುನ್ನುಡಿ ಎನ್ನುತ್ತಿದ್ದಾರೆ ನೆಟ್ಟಿಗರು.

14 Grooms

ಟ್ರಾಕ್ಟರ್‌ನಲ್ಲಿ ಜೋಡಿಗಳ ಮೆರವಣಿಗೆ

ಸಾಮಾನ್ಯವಾಗಿ ವರನ ಮೆರವಣಿಗೆಗೆ ಲಕ್ಷಾಂತರ ರೂಪಾಯಿ ಕೊಟ್ಟು ಐಷಾರಾಮಿ ಕಾರುಗಳನ್ನು ಬಾಡಿಗೆಗೆ ತರಲಾಗುತ್ತದೆ. ಆದರೆ, ಈ ರೈತ ಕುಟುಂಬ ತಮ್ಮ ಜೀವನಾಧಾರವಾಗಿರುವ ಕೃಷಿ ವಾಹನವನ್ನೇ ಮದುವೆಯ ರಥವನ್ನಾಗಿ ಮಾಡಿಕೊಂಡಿದೆ. ಒಂದೇ ಟ್ರ್ಯಾಕ್ಟರ್ ಟ್ರಾಲಿಯನ್ನು ವಿಶೇಷವಾಗಿ ಅಲಂಕರಿಸಿ, ಅದರಲ್ಲಿ ಇಡೀ 14 ಜನ ವರರು-ವಧುಗಳು ಒಟ್ಟಿಗೆ ಕುಳಿತು ಮದುವೆ ಮಂಟಪಕ್ಕೆ ರಾಜಗಾಂಭೀರ್ಯದಿಂದ ಎಂಟ್ರಿ ಕೊಟ್ಟಿದ್ದಾರೆ. ಈ ಅಪರೂಪದ ದೃಶ್ಯವನ್ನು ನೋಡಲು ಇಡೀ ಊರಿನ ಜನ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದರು. ಮದುವೆಯ ಎಲ್ಲ ಶಾಸ್ತ್ರಗಳು ಮುಗಿದ ನಂತರ, ಹೊಸ ಬದುಕಿಗೆ ಹೆಜ್ಜೆ ಇಟ್ಟ 14 ಹೆಣ್ಣುಮಕ್ಕಳು ಮತ್ತೊಂದು ಟ್ರ್ಯಾಕ್ಟರ್ ಟ್ರಾಲಿಯಲ್ಲೇ ಅತ್ಯಂತ ಸರಳವಾಗಿ, ಯಾವುದೇ ಆಡಂಬರವಿಲ್ಲದೆ ಗಂಡನ ಮನೆಗೆ ಮರಳಿದ್ದಾರೆ.

ಯಾವುದೇ ಆಡಂಬರವಿಲ್ಲ ಈ ವಿವಾಹವು ಎಲ್ಲರ ಹುಬ್ಬೇರಿಸಿದ್ದು, ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ ಕೇವಲ ರೀಲ್ಸ್ ಹಾಗೂ ಪ್ರದರ್ಶನಕ್ಕಾಗಿ ಲಕ್ಷ ಲಕ್ಷ ಹಣ ವ್ಯರ್ಥ ಮಾಡುವವರ ಮಧ್ಯೆ, ಈ ಜಂಟಿ ಕುಟುಂಬವು ಸಮಾಜದ ದುಬಾರಿ ಸಂಪ್ರದಾಯಗಳನ್ನು ಮುರಿದು ಹಾಕಿದೆ. ಇದು ಬರೀ ಹಣ ಉಳಿಸುವ ಮದುವೆಯಲ್ಲ, ಬದಲಿಗೆ ಮದುವೆಯ ಹೆಸರಿನಲ್ಲಿ ಸಾಲದ ಸುಳಿಗೆ ಸಿಲುಕುವ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳಿಗೆ ಕಣ್ಣು ತೆರೆಸುವಂತಹ ಪಾಠವಿದ್ದಂತೆ ಎಂದು ನೆಟ್ಟಿಗರು ಈ ರೈತ ಕುಟುಂಬದ ಜಾಣ್ಮೆಗೆ ಸಲಾಂ ಎನ್ನುತ್ತಿದ್ದಾರೆ.

ಬೇರೆ ಬೇರೆ ದಿನಗಳಲ್ಲಿ ಮದುವೆ ಮಾಡಿದ್ದರೆ ಸಿಗುತ್ತಿದ್ದ ಸಂಭ್ರಮಕ್ಕಿಂತ, ಒಂದೇ ಸೂರಿನಡಿ ಇಡೀ ಕುಟುಂಬದ 14 ಜೋಡಿಗಳು ಹೊಸ ಬದುಕಿಗೆ ಹೆಜ್ಜೆ ಇಟ್ಟಿರುವುದು ಇಡೀ ಜಿಲ್ಲೆಯ ಜನರಲ್ಲಿ ಅಚ್ಚರಿ ಮೂಡಿಸಿದೆ. ಮದುವೆಗೆ ಬಂದಿದ್ದ ಅತಿಥಿಗಳು ಕೂಡ ಕುಟುಂಬದ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಅದ್ದೂರಿತನಕ್ಕೆ ಸೆಡ್ಡು ಹೊಡೆದಿರುವ ಈ ಮದುವೆಯು ಸಾರ್ವಜನಿಕವಾಗಿ ಹಣ ಉಳಿತಾಯ ಮಾಡಲು ಮತ್ತು ಸರಳ ವಿವಾಹಕ್ಕೆ ಪ್ರೇರಣೆ ಎನ್ನುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+