SSLC Results 2026: ಎಸ್‌ಎಸ್‌ಎಲ್‌ಸಿಯಲ್ಲಿ ಕೇವಲ 5 ಅಂಕಗಳೊಂದಿಗೆ ಧರ್ಮಸ್ಥಳದ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್

SSLC Results 2026: ಧರ್ಮಸ್ಥಳದ ಎಸ್‌ಡಿಎಂ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಮಾಧುರ್ಯ ಜಿ. ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಗಳನ್ನು ಗಳಿಸಿದ್ದರು. ಇದರಿಂದ ಅಸಮಾಧಾನಗೊಂಡ ಇವರು ಇದೀಗ ಮರುಮೌಲ್ಯಮಾಪನದ ಬಳಿಕ ರಾಜ್ಯದ ಟಾಪರ್‌ ಹೊರಹೊಮ್ಮಿದ್ದಾರೆ. ಹಾಗಾದ್ರೆ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗಳು ಬಹುತೇಕರಲ್ಲಿ ಪ್ರಶ್ನೆಗಳು ಮೂಡಿರುತ್ತವೆ. ಇದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಏಪ್ರಿಲ್ 23ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿತ್ತು. ಆ ವೇಳೆ ಮಾಧುರ್ಯ ಜಿ. ಅವರು 625ಕ್ಕೆ 620 ಅಂಕಗಳನ್ನು ಪಡೆದು ಅತೃಪ್ತಿಗೊಂಡಿದ್ದರು. ಬಳಿಕ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಕಳೆದುಕೊಂಡಿದ್ದ 5 ಅಂಕಗಳನ್ನು ಮರಳಿ ಪಡೆಯುವ ಮೂಲಕ ಈಗ 625ಕ್ಕೆ 625 ಅಂಕಗಳೊಂದಿಗೆ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಈ ಬಗ್ಗೆ ಆ ವಿದ್ಯಾರ್ಥಿನಿ ಪೋಷಕರು ಹಾಗೂ ಶಿಕ್ಷಕರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಮೊದಲು ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಮಾಧುರ್ಯ ಅವರು 625ಕ್ಕೆ 620 ಅಂಕಗಳನ್ನು ಗಳಿಸಿದ್ದರು. ಶಾಲೆಯ ಪರೀಕ್ಷೆಗಳಲ್ಲಿ ಸದಾ ಹೆಚ್ಚು ಅಂಕ ಗಳಿಸುತ್ತಿದ್ದ ಅವರಿಗೆ ಈ ಫಲಿತಾಂಶದಲ್ಲಿ ಹಿಂದಿಯಲ್ಲಿ 1 ಅಂಕ ಹಾಗೂ ವಿಜ್ಞಾನ ವಿಷಯದಲ್ಲಿ 4 ಅಂಕಗಳು ಕಡಿಮೆ ಬಂದಿದ್ದವು.

SSLC Results 2026 Daramasthala s Madhurya G Becomes Karnataka State Topper After Revaluation

ಹಿಂದಿಯಲ್ಲಿ 1 ಅಂಕ ಗಳಿಸಿ ಸಂತಸಪಟ್ಟ ವಿದ್ಯಾರ್ಥಿನಿ

ಮೊದಲ ಫಲಿತಾಂಶದ ನಂತರ ಮಾಧುರ್ಯ ಅವರು ಹಿಂದಿ ವಿಷಯದಲ್ಲಿ ಒಂದು ಅಂಕ ಕಡಿಮೆ ಬಂದಿದ್ದಕ್ಕೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಅವರಿಗೆ ನಿರೀಕ್ಷೆಯಂತೆ 1 ಅಂಕ ಹೆಚ್ಚಳವಾಗಿ ಒಟ್ಟು ಅಂಕ 621ಕ್ಕೇ ಏರಿಕೆಯಾಯಿತು. ಇದರಿಂದ ಮಾಧುರ್ಯ ಜಿ. ಅವರು ತುಸು ಸಂತಪಟ್ಟರು.

ವಿಜ್ಞಾನದಲ್ಲಿ 100ಕ್ಕೆ 100 ಅಂಕ ಗಳಿಕೆ

ಆದರೆ ವಿಜ್ಞಾನ ವಿಷಯದಲ್ಲಿ ಕಡಿಮೆ ಬಂದಿದ್ದ 4 ಅಂಕಗಳಿಂದ ಅಸಮಾಧಾನಗೊಂಡಿದ್ದ ಅವರು ಆ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಸಲು ಪರೀಕ್ಷೆ-2ರಲ್ಲಿ ಸುಧಾರಣಾ ಪರೀಕ್ಷೆ ಬರೆಯಲು ನಿರ್ಧರಿಸಿದರು. ವಿಜ್ಞಾನ ವಿಷಯಕ್ಕಾಗಿ ಮತ್ತೊಮ್ಮೆ ಉತ್ತಮ ತಯಾರಿ ನಡೆಸಿ ಪರೀಕ್ಷೆ ಬರೆದ ಮಾಧುರ್ಯ ಈ ಬಾರಿ ವಿಜ್ಞಾನದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದರು. ಇದರೊಂದಿಗೆ ಅವರ ಒಟ್ಟು ಅಂಕಗಳು 625ಕ್ಕೆ 625ಕ್ಕೆ ಏರಿತು.

ವಿದ್ಯಾರ್ಥಿನಿ ತಂದೆ ಹೇಳಿದ್ದೇನು?

ಮಗಳ ಈ ಸಾಧನೆ ಕುರಿತು ಮಾತನಾಡಿದ ತಂದೆ ಜಿ. ಸುಬ್ರಹ್ಮಣ್ಯ ಪ್ರಸಾದ್ ಅವರು ಸಂತಸ ವ್ಯಕ್ತಪಡಿಸಿದ್ದು, 'ಮಾಧುರ್ಯ ಹಿಂದಿನ ಎಲ್ಲಾ ಪರೀಕ್ಷೆಗಳಲ್ಲೂ ಶೇಕಡ 99 ಕ್ಕಿಂತ ಹೆಚ್ಚು ಅಂಕ ಪಡೆಯುತ್ತಿದ್ದಳು ಮತ್ತು ಎಸ್‌ಎಸ್‌ಎಲ್‌ಸಿಯಲ್ಲೂ ಪೂರ್ಣ ಅಂಕ ಗಳಿಸುವ ನಿರೀಕ್ಷೆ ಇತ್ತು. ಇದೀಗ ಅವಳು ಪೂರ್ಣ ಅಂಕ ಪಡೆದಿರುವುದು ನಮಗೆ ಸಂತದ ತಂದಿದೆ,' ಎಂದು ಹೇಳಿದ್ದಾರೆ.

ವಿದ್ಯಾರ್ಥಿನಿ ಮುಖ್ಯೋಪಾಧ್ಯಾಯರು ಹೇಳಿದ್ದೇನು?

ಶಾಲೆಯ ಮುಖ್ಯೋಪಾಧ್ಯಾಯರಾದ ಪರಿಮಳಾ ಎಂ.ವಿ. ಅವರು ಮಾತನಾಡಿ, 'ಮಾಧುರ್ಯ ಅವರು ಕೇವಲ ಓದಿನಲ್ಲಿ ಮಾತ್ರವಲ್ಲದೆ ಶಾಲೆಯ ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಅದ್ಭುತ ಪ್ರತಿಭೆಯುಳ್ಳ ವಿದ್ಯಾರ್ಥಿನಿಯಾಗಿದ್ದರು. ಇದೀಗ ಅವರು ಈ ಸಾಧನೆ ಮಾಡಿರುವುದರಿಂದ ನಮ್ಮ ಶಾಲೆಗೆ ಅಷ್ಟೇ ಅಲ್ಲದೆ, ವೈಯಕ್ತಿಕವಾಗಿ ನನಗೆ ತುಂಬಾ ಖುಷಿಯಾಗಿದೆ,' ಎಂದು ಶ್ಲಾಘಿಸಿದ್ದಾರೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1ರ ಫಲಿತಾಂಶ ಏಪ್ರಿಲ್ 23ರಂದು ಪ್ರಕಟವಾಗಿತ್ತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶವನ್ನು ಪ್ರಕಟ ಮಾಡಿದ್ದರು. ಪರೀಕ್ಷೆಗಳು ಮಾರ್ಚ್ 18 ರಿಂದ ಏಪ್ರಿಲ್ 2, 2026ರವರೆಗೆ ನಡೆದಿದ್ದವು. ಇನ್ನೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ಯು ಮೇ 18 ರಿಂದ ಮೇ 25, 2026 ರವರೆಗೆ ನಡೆದಿದ್ದವು. ಇದರ ಫಲಿತಾಂಶವನ್ನು ಮೇ 30, 2026 ರಂದು ಮಧ್ಯಾಹ್ನ ಪ್ರಕಟಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+