Viral Video: ಕಾವೇರಿ ನೀರಿನ ವಿಚಾರದಲ್ಲಿ ಹೊಸ ಖ್ಯಾತೆ ತೆಗೆದ ತಮಿಳಿಗರು, ಕನ್ನಡಿಗರು ಹೇಳಿದ್ದೇನು
Viral Video: ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಈಗಾಗಲೇ ದಶಕಗಳಿಂದ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದವಿದೆ. ಇದೀಗ ಎರಡೂ ರಾಜ್ಯಗಳ ನಡುವೆ ಹೊಸ ಸಂಘರ್ಷವೊಂದು ಶುರುವಾಗಿದೆ. ಕರ್ನಾಟಕ ಹಾಗೂ ಬೆಂಗಳೂರಿನಿಂದ ಕಲುಷಿತ ನೀರು ಸೇರುತ್ತಿದೆ ಎಂದು ತಮಿಳಗರು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನ ಬೆಳ್ಳಂದೂರು ನದಿ ಸಮಸ್ಯೆಯಂತೆ - ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿರುವ ಹೊಸೂರಲ್ಲೂ ನದಿ ಭಾಗದಲ್ಲೂ ಇದೇ ಮಾದರಿ ಸಮಸ್ಯೆ ಎದುರಾಗಿದೆ. ತಮಿಳುನಾಡಿಗೆ ಬರುತ್ತಿರುವ ಕಾವೇರಿ ನೀರು ಕಲುಷಿತವಾಗುವುದಕ್ಕೆ ಬೆಂಗಳೂರಿನಲ್ಲಿರುವ ಕೆಲವು ಕಾರ್ಖಾನೆಗಳು ಕಲುಷಿತ ನೀರನ್ನು ಸಂಸ್ಕರಣೆ ಮಾಡದೆ ಬಿಡುತ್ತಿರುವುದೇ ಕಾರಣ ಎಂದು ತಮಿಳಿಗರು ಆರೋಪ ಮಾಡಿದ್ದಾರೆ.
ಬೆಂಗಳೂರಿನ ಫ್ಯಾಕ್ಟರಿಗಳೇ ಕಾರಣ ಎಂದ ತಮಿಳಿಗರು!
ತಮಿಳುನಾಡಿನ ಕೃಷ್ಣಗಿರಿಯ ಡ್ಯಾಂನಲ್ಲಿ ಕಲುಷಿತ ನೀರು ಹರಿಯುತ್ತಿದೆ ಎಂದು ಆರೋಪಿಸಿ ಡಾ. ನಾರಾಯಣಿ ರಂಗರಾಜ್ (narayanis_ngo) ಎನ್ನುವವರು ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ವ್ಯಾಪ್ತಿಯಲ್ಲಿರುವ ಕೆಲವಾರಪಲ್ಲಿ ಅಣೆಕಟ್ಟು ನೀರು ಕಲುಷಿತವಾಗಿದೆ. ಈ ಅಣೆಕಟ್ಟಿನಿಂದ ಬರುವ ನೀರನ್ನು ಈ ಭಾಗದ 20 ಕಿ.ಮೀಗೂ ಹೆಚ್ಚು ವ್ಯಾಪ್ತಿಯಲ್ಲಿ ಕೃಷಿ ಬಳಕೆಗೆ ಬಳಕೆ ಮಾಡಲಾಗುತ್ತದೆ. ಆದರೆ ಇದು ಭಾರೀ ಕಲುಷಿತವಾಗಿದೆ. ಕರ್ನಾಟಕದ ಇಂಡಸ್ಟ್ರಿಗಳಿಂದ ಬರುತ್ತಿರುವ ಕಲುಷಿತ ನೀರೇ ಇದಕ್ಕೆ ಕಾರಣ ಮುಖ್ಯವಾಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ವ್ಯಾಪ್ತಿಯಿಂದ ಬರುತ್ತಿರುವ ಕಲುಷಿತ ನೀರು ಸೇರಿ ಈ ರೀತಿ ಆಗುತ್ತಿದೆ ಎಂದು ಅವರು ದೂರಿದ್ದಾರೆ.
ಮುಂದುವರಿದು "ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ವ್ಯಾಪ್ತಿಯಲ್ಲಿರುವ ಕೆಲವಾರಪಲ್ಲಿ ಅಣೆಕಟ್ಟು ಕೇವಲ ಪ್ರವಾಸಿ ತಾಣವಲ್ಲ. ಇದು ಹೊಸೂರು ಹಾಗೂ ಕೃಷ್ಣಗಿರಿ ಸುತ್ತಮುತ್ತಲಿನ ಸಾವಿರಾರು ರೈತರು ಮತ್ತು ಸ್ಥಳೀಯ ಸಮುದಾಯಗಳ ಜೀವನಾಡಿಯಾಗಿರುವ ಪ್ರಮುಖ ಜಲಮೂಲವಾಗಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಅಣೆಕಟ್ಟಿನ ನೀರಿನ ಮಾಲಿನ್ಯ ಹೆಚ್ಚುತ್ತಿದ್ದು, ನೀರಿನ ಗುಣಮಟ್ಟ ಕುಸಿಯುತ್ತಿದೆ.
ಸಂಸ್ಕರಿಸದ ಒಳಚರಂಡಿ ನೀರು, ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯ ನೀರು ಹಾಗೂ ನದಿಯ ಮೇಲ್ಭಾಗದ (ಅಪ್‌ಸ್ಟ್ರೀಮ್) ಜಲಾನಯನ ಪ್ರದೇಶದಲ್ಲಿ ವೇಗವಾಗಿ ನಡೆಯುತ್ತಿರುವ ನಗರೀಕರಣ ಇಂತಹ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ" ಎಂದು ಅವರು ದೂರಿದ್ದಾರೆ. ಈ ರೀತಿ ಆಗುವುದಕ್ಕೆ ಬೆಂಗಳೂರು - ಕರ್ನಾಟಕದ ವಿವಿಧ ಭಾಗದಿಂದ ಕಲುಷಿತ ನೀರು ಬರುತ್ತಿರುವುದೇ ಕಾರಣ ಎಂದು ದೂರಲಾಗಿದೆ.
ಈ ಸಮಸ್ಯೆಗೆ ಪರಿಹಾರವೆಂದರೆ ಅಣೆಕಟ್ಟನ್ನು ಮಾತ್ರ ಸ್ವಚ್ಛಗೊಳಿಸುವುದಲ್ಲ. ಮಾಲಿನ್ಯ ಉಂಟಾಗುವ ಮೂಲದಲ್ಲೇ ಅದನ್ನು ತಡೆಗಟ್ಟಬೇಕು. ಅದಕ್ಕಾಗಿ ಒಳಚರಂಡಿ ನೀರಿನ ಸಮರ್ಪಕ ಶುದ್ಧೀಕರಣ, ಕೈಗಾರಿಕೆಗಳ ತ್ಯಾಜ್ಯ ನೀರಿನ ಕಟ್ಟುನಿಟ್ಟಿನ ಮೇಲ್ವಿಚಾರಣೆ, ನೀರಿನ ಗುಣಮಟ್ಟದ ನಿಯಮಿತ ಪರೀಕ್ಷೆ ಹಾಗೂ ಸಂಬಂಧಿತ ಇಲಾಖೆಗಳ ಸಮನ್ವಯದ ಕ್ರಮಗಳು ಅತ್ಯಗತ್ಯವಾಗಿದೆ.
ಕೆಲವಾರಪಲ್ಲಿ ಅಣೆಕಟ್ಟಿನ ಸಂರಕ್ಷಣೆ ಎಂದರೆ ಯಾವುದೇ ರಾಜ್ಯ ಅಥವಾ ಸರ್ಕಾರವನ್ನು ದೂಷಿಸುವುದಲ್ಲ. ಮುಂದಿನ ಪೀಳಿಗೆಗಾಗಿ ಅಮೂಲ್ಯ ಜಲಸಂಪನ್ಮೂಲವನ್ನು ಉಳಿಸಿ ಬೆಳೆಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದೂ ಅವರು ಹೇಳಿದ್ದಾರೆ.













Click it and Unblock the Notifications