• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಫಾ ವಿಶ್ವಕಪ್ ನೇರ ಪ್ರಸಾರ: ಭಾರತದಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ವಿವರ..

|
Google Oneindia Kannada News

ಕತಾರ್, ನವೆಂಬರ್ 20: ಫಿಫಾ ವಿಶ್ವಕಪ್ 2022ರ ಆವೃತ್ತಿಯು ಭಾನುವಾರದಿಂದ (ನವೆಂಬರ್ 20) ಕತಾರ್‌ನಲ್ಲಿ ಅದ್ದೂರಿಯಾಗಿ ಪ್ರಾರಂಭವಾಗುತ್ತಿದೆ. ಇಂದಿನ ಅದ್ಧೂರಿ ಉದ್ಘಾಟನಾ ಸಮಾರಂಭದ ನಂತರ ಮೊದಲ ಪಂದ್ಯ ಕತಾರ್ ಎದುರಾಳಿ ಈಕ್ವೆಡಾರ್ ನಡುವೆ ನಡೆಯಲಿದೆ. ಇನ್ನು ಭಾರತದಲ್ಲೂ ಕೂಡ ಪುಟ್ಬಾಲ್‌ ಆಟಕ್ಕೆ ಸಾಕಷ್ಟು ಅಭಿಮಾನಿ ಬಳಗವಿದ್ದು ಹಾಗಾಗಿ, ನೀವು ಭಾರತದಲ್ಲಿ ಫಿಪಾ ವಿಶ್ವಕಪ್‌ನ ಥ್ರಿಲ್ ಆನಂದಿಸಲು ಬಯಸಿದರೆ ಪಂದ್ಯಗಳ ಲೈವ್ ಟೆಲಿಕಾಸ್ಟ್ ವಿವರಗಳು ಇಲ್ಲಿವೆ. ನೀವು ಪಂದ್ಯವನ್ನು ಉಚಿತವಾಗಿ ಸಹ ಆನಂದಿಸಬಹುದು.

ಕತಾರ್ ಮತ್ತು ಈಕ್ವೆಡಾರ್ ನಡುವಿನ ಫಿಫಾ ವಿಶ್ವಕಪ್ 2022ರ ಮೊದಲ ಪಂದ್ಯ ಪ್ರಾರಂಭವಾಗುತ್ತದೆ. ಫಿಫಾ ವಿಶ್ವಕಪ್‌ನ ಮೊದಲ ಪಂದ್ಯ ಭಾರತೀಯ ಕಾಲಮಾನ ರಾತ್ರಿ 9:30ಕ್ಕೆ ಆರಂಭವಾಗಲಿದೆ. ಫಿಫಾ ವಿಶ್ವಕಪ್ 2022ರ ಉದ್ಘಾಟನಾ ಸಮಾರಂಭವು ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಅದ್ದೂರಿ ಚಾಲನೆ ದೊರೆಯಲಿದೆ.

ಫುಟ್ಬಾಲ್‌ ವಿಶ್ವಕಪ್‌: ಕತಾರ್ ವಿರುದ್ಧದ ಪಂದ್ಯ ಸೋಲಲು ಈಕ್ವೆಡಾರ್ ತಂಡಕ್ಕೆ 60 ಕೋಟಿ ಲಂಚ?ಫುಟ್ಬಾಲ್‌ ವಿಶ್ವಕಪ್‌: ಕತಾರ್ ವಿರುದ್ಧದ ಪಂದ್ಯ ಸೋಲಲು ಈಕ್ವೆಡಾರ್ ತಂಡಕ್ಕೆ 60 ಕೋಟಿ ಲಂಚ?

ಭಾರತದಲ್ಲೂ ಪುಟ್ಬಾಲ್‌ಗೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದು ಪುಟ್ಬಾಲ್‌ ವಿಕ್ಷಣೆಗಾಗಿ ಸಾಕಷ್ಟು ಕಾತುರರಾಗಿದ್ದಾರೆ. ಭಾರತದ ಈಶಾನ್ಯ ರಾಜ್ಯಗಳು, ಗೋವಾ, ದಕ್ಷಿಣ ಭಾರತದ ಅನೇಕ ರಾಜ್ಯಗಳು ಹೆಚ್ಚು ಫಿಫಾ ಪುಟ್ಬಾಲ್‌ ಅಭಿಮಾನಿಗಳು ಪುಟ್ಬಾಲ್‌ ಪಂದ್ಯವನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಅಲ್ಲದೆ, ಈ ಭಾಗದಲ್ಲಿ ಕ್ರಿಕೆಟ್‌ನಂತೆ ಪುಟ್ಬಾಲ್‌ ಪಂದ್ಯಗಳಿಗೂ ಸಾಕಷ್ಟು ಅಭಿಮಾನಿ ಬಳಗವಿದೆ.

ಫಿಫಾ ವಿಶ್ವಕಪ್ 2022 ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬಹುದು?

ಫಿಫಾ ವಿಶ್ವಕಪ್‌ನ ಎಲ್ಲಾ ಪಂದ್ಯಗಳ ನೇರ ಪ್ರಸಾರವು ಸ್ಪೋರ್ಟ್ಸ್ 18 ಮತ್ತು ಸ್ಪೋರ್ಟ್ಸ್ 18 ಎಚ್‌ಡಿಯಲ್ಲಿ ನೇರ ಪ್ರಸಾರವಾಗಲಿದೆ. ಈ ಚಾನಲ್‌ಗಳಲ್ಲಿ ನೀವು ಪಂದ್ಯವನ್ನು ಆನಂದಿಸಬಹುದು.
ಕತಾರ್ ಮತ್ತು ಈಕ್ವೆಡಾರ್ ನಡುವಿನ ಫಿಫಾ ವಿಶ್ವಕಪ್ 2022ರ ಮೊದಲ ಪಂದ್ಯದ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ (JioCinema) ಅಪ್ಲಿಕೇಶನ್‌ನಲ್ಲಿರುತ್ತದೆ ಮತ್ತು ಜಿಯೋ ನೀವು ವೆಬ್‌ಸೈಟ್‌ನಲ್ಲಿಯೂ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು. ನೀವು ಜಿಯೋ ಸಿಮ್‌ ಬಳಕೆ ಮಾಡುತ್ತಿದ್ದರೆ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಫಿಫಾ ಪಂದ್ಯಗಳನ್ನು ಉಚಿತವಾಗಿ ವೀಕ್ಷಣೆ ಮಾಡಬಹುದು.

English summary
FIFA World Cup 2022 Opening Ceremony: Here is all you need to know about the opening ceremony timings in IST.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X