ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

FIFA World Cup 2022 : ಬಲಿಷ್ಠ ಜರ್ಮನಿಗೆ ಸೋಲುಣಿಸಿದ ಜಪಾನ್!

|
Google Oneindia Kannada News

ಫಿಫಾ ವಿಶ್ವಕಪ್ 2022ರ ಲೀಗ್ ಹಂತದಲ್ಲೇ ಬಲಿಷ್ಠ ತಂಡಗಳು ಮುಗ್ಗರಿಸುತ್ತಿವೆ. ಸೌದಿ ಅರೇಬಿಯಾ ವಿರುದ್ಧ ಅರ್ಜೆಂಟೀನಾ ತಂಡ ಆಘಾತ ಅನುಭವಿಸಿದ ಬೆನ್ನಲ್ಲೇ ಮಾಜಿ ಚಾಂಪಿಯನ್ ಜರ್ಮನಿಗೆ ಇಂದು ಏಷ್ಯಾದ ಪ್ರಮುಖ ತಂಡ ಜಪಾನ್ ಸೋಲುಣಿಸಿದೆ.

ಸೌದಿ ನಂತರ ಜಪಾನ್ ಕೂಡಾ ದೈತ್ಯ ಸಂಹಾರಿ ಎನಿಸಿಕೊಂಡಿದೆ. ಸೂರ್ಯ ಉದಯಿಸುವ ನಾಡು ಜಪಾನ್ ದೇಶದಲ್ಲಿ ಇಲ್ಲಿ ಸಂಭ್ರಮ ಕಳೆಗಟ್ಟಿದೆ. ಜರ್ಮನಿಯನ್ನು 1-2 ಅಂತರದಿಂದ ಸೋಲಿಸುವ ಮೂಲಕ ಜಪಾನ್ ಅರ್ಹ 3 ಅಂಕಗಳನ್ನು ಗಳಿಸಿದೆ.

ಪಂದ್ಯದ ಎರಡು ಗೋಲುಗಳನ್ನು ದ್ವಿತೀಯಾರ್ಧದಲ್ಲೇ ಜಪಾನ್ ಗಳಿಸಿದ್ದು ವಿಶೇಷ. 33ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ಗುಯೋಗಾನ್ ಹೊಡೆದ ಗೋಲು ಮೂಲಕ ಪಡೆದ ಅರಂಭಿಕ ಮುನ್ನಡೆ ಪಡೆದ ಜರ್ಮನಿ ನಂತರ ಡಲ್ ಹೊಡೆದಿದ್ದು ಎದ್ದು ಕಾಣುತ್ತಿತ್ತು. ಜಪಾನ್ ಪೈಕಿ ಗೋಲು ಗಳಿಸಿದವರಿಬ್ಬರೂ ಬದಲಿ ಆಟಗಾರರಾಗಿ ದ್ವಿತೀಯಾರ್ಧದಲ್ಲಿ ಕಣಕ್ಕಿಳಿದವರು ಎಂಬುದು ವಿಶೇಷ.

FIFA World Cup 2022 shock: Japan beat Germany 2-1

ಮಿತೊಮಾ, ಮಿನಾಮಿನೊ ಹಾಗೂ ದೊಯಾನ್(75 ನೇ ನಿಮಿಷ) ಮೊದಲ ಗೋಲಿಗೆ ಕಾರಣರಾದರೆ, ಎರಡನೇ ಗೋಲು ಗಳಿಸಿ ಜಪಾನ್ ಮರೆಯಲಾದಂಥ ಗೆಲುವು ತಂದಿತ್ತ ಅಸಾನೋ(83 ನೇ ನಿಮಿಷ) ಕೂಡಾ ಬದಲಿ ಆಟಗಾರನಾಗಿ ಮೈದಾನಕ್ಕಿಳಿದಿದ್ದು ಗಮನಾರ್ಹ.

ವಿಶ್ವಕಪ್: ಮೊದಲ ಪಂದ್ಯದಲ್ಲೆ ಸೋಲಿನ ಆಘಾತ ನಡುವೆ ಮೆಸ್ಸಿ ದಾಖಲೆವಿಶ್ವಕಪ್: ಮೊದಲ ಪಂದ್ಯದಲ್ಲೆ ಸೋಲಿನ ಆಘಾತ ನಡುವೆ ಮೆಸ್ಸಿ ದಾಖಲೆ


ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲಿ ಅರ್ಸೆನಲ್ ಪರ ಆಡುವ ಅಸಾನೋ ತಮ್ಮ ಅಭಿಮಾನಿಗಳಿಗೆ ನಿರಾಶೆಯಾಗದಂಥ ಪ್ರದರ್ಶನ ನೀಡಿದರು.

ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜರ್ಮನಿ ತಂಡ ಚೆಂಡಿನ ಮೇಲೆ ಶೇ 73ರಷ್ಟು ಹಿಡಿತ ಹೊಂದಿತ್ತು. 9 ಬಾರಿ ಗೋಲ್ ಪೋಸ್ಟ್ ಮೇಲೆ ಪ್ರಯತ್ನಿಸಿದರೂ ಒಂದು ಗೋಲು ಮಾತ್ರ ಗಳಿಸಲು ಸಾಧ್ಯವಾಯಿತು.

FIFA World Cup 2022 shock: Japan beat Germany 2-1

ಆದರೆ, ಜಪಾನ್ ಶೇ 26ರಷ್ಟು ಮಾತ್ರ ಚೆಂಡು ತಮ್ಮ ಬಳಿ ಹೊಂದಿದ್ದರೂ 4 ಬಾರಿ ಗುರಿ ಮೇಲೆ ಸರಿಯಾದ ದಾಳಿ ನಡೆಸಿ ಎರಡು ಬಾರಿ ಗೋಲು ಗಳಿಸುವಲ್ಲಿ ಸಫಲವಾಯಿತು. ಜರ್ಮನಿ 771 ಪಾಸ್ ಹಾಗೂ ಜಪಾನ್ 270 ಬಾರಿ ಚೆಂಡು ಪಾಸ್ ಮಾಡಿತ್ತು.

ಅರ್ಜೆಂಟೀನಾ ವಿರುದ್ಧ ಗೆಲ್ಲುತ್ತಿದ್ದಂತೆ ಸೌದಿ ಅರೇಬಿಯಾದಲ್ಲಿ ರಜೆ ಘೋಷಣೆಅರ್ಜೆಂಟೀನಾ ವಿರುದ್ಧ ಗೆಲ್ಲುತ್ತಿದ್ದಂತೆ ಸೌದಿ ಅರೇಬಿಯಾದಲ್ಲಿ ರಜೆ ಘೋಷಣೆ

2018 ರಲ್ಲಿ ಮೆಕ್ಸಿಕೋ ವಿರುದ್ಧ 1-0 ಅಂತರದಲ್ಲಿ ಸೋತಿದ್ದ ಜರ್ಮನಿ 2022ರಲ್ಲಿ ಮೊದಲ ಪಂದ್ಯದಲ್ಲೇ ಸೋಲು ಕಂಡು ಬೇಡದ ದಾಖಲೆಗೆ ತನ್ನದಾಗಿಸಿಕೊಂಡಿದೆ. ಇ ಗುಂಪಿನಿಂದ ನಾಕೌಟ್ ಹಂತ ತಲುಪಲು ಜರ್ಮನಿ ಇತರೆ ತಂಡಗಳಾದ ಸ್ಪೇನ್ ಹಾಗೂ ಕೋಸ್ಟರಿಕಾವನ್ನು ಸೋಲಿಸಬೇಕಿದೆ.

English summary
FIFA World Cup 2022 shock: Japan beat Germany 2-1 in World Cup 2022 shock
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X