Viral Video: ನಾನು ನಾಡಿಗೋಸ್ಕರ 30 ಕೇಸ್ ಹಾಕಿಸಿಕೊಂಡಿದ್ದೀನಿ, ನಾನ್ಯಾಕೆ ಟೋಲ್ ಶುಲ್ಕ ಪಾವತಿಸಲಿ ಎಂದ ಕನ್ನಡಪರ ಹೋರಾಟಗಾರ
Viral Video: ನಾನೇನು ಮಾಡಿದ್ದೀನಿ ಈ ನಾಡಿಗೋಸ್ಕರ 30 ಕೇಸ್ ಹಾಕಿಸಿಕೊಂಡಿದ್ದೇನೆ ಎಂದು ಕನ್ನಡಪರ ಹೋರಾಟಗಾರರೊಬ್ಬರು ಟೋಲ್ ಪ್ಲಾಜಾ ಮುಂದೆ ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡಪರ ಹೋರಾಟಗಾರರು ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ಟೋಲ್ ಶುಲ್ಕ ಕಟ್ಟುವ ವಿಚಾರಕ್ಕೆ ಟೋಲ್ ಸಿಬ್ಬಂದಿಯೊಂದಿಗೆ ಜಗಳವಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ ನಾನು ಈ ನಾಡಿಗೋಸ್ಕರ 30 ಕೇಸ್‌ಗಳನ್ನು ಹಾಕಿಸಿಕೊಂಡಿದ್ದೇನೆ ಎಂದು ಹೇಳಲಾಗಿದೆ. ಟೋಲ್ ಶುಲ್ಕ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗಿದೆ. ವಿಡಿಯೋದಲ್ಲಿ ಕನ್ನಡಪರ ಸಂಘಟನೆಯ ಹೋರಾಟಗಾರರು ಎಂದು ಹೇಳಿಕೊಂಡಿರುವವರು, ಮೊನ್ನೆ ಯಾಕೆ ಬಿಟ್ಟೆ, ಈಗ ಯಾಕೆ ಬಿಡಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ನೋಡಿ ಟೋಲ್‌ನಲ್ಲಿ ಕನ್ನಡಪರ ಹೋರಾಟಗಾರರಿಗೆ ಉಚಿತವಾಗಿ ಬಿಡಲ್ಲ. ಎಂಪಿ ಅಂತೆ ಎಂಎಲ್‌ಎ ಅಂತ ಸುಳ್ಳು ಹೇಳುವವರನ್ನ ಫ್ರೀಯಾಗಿ ಬಿಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕಾರ್‌ವೊಂದನ್ನು ಅಡ್ಡಗಟ್ಟಿರುವ ಅವರು, ನೀವು ಎಂಎಲ್‌ಎನಾ ಎಂದು ವ್ಯಕ್ತಿಯೊಬ್ಬರನ್ನು ಪ್ರಶ್ನೆ ಮಾಡಿದ್ದಾರೆ. ನಾವು ಈ ನಾಡಿಗೋಸ್ಕರ ಭಿಕ್ಷೆ ಬೇಡುತ್ತಿದ್ದೇವೆ ಅಂತಲೂ ಅವರು ವೈರಲ್ ವಿಡಿಯೋದಲ್ಲಿ ಹೇಳಿದ್ದಾರೆ. ನಾನು ನಾಡಿಗೋಸ್ಕರ ಸಂಘಟನೆ ಕಟ್ಟುವುದಕ್ಕಾಗಿ ಭಿಕ್ಷೆ ಬೇಡುತ್ತಿದ್ದೇನೆ. ನಮ್ಮಂತಹ ಹೋರಾಟಗಾರರನ್ನು ಗಮನಿಸಿ, ತಾರತಮ್ಯ ಮಾಡಬೇಡಿ. ಯಾರ್ ಯಾರಿಗೋ ಬಿಡುತ್ತೀರಾ ನಾನು ಈ ನಾಡಿಗೋಸ್ಕರ ಹೋರಾಟ ಮಾಡಿ ಬರೋಬ್ಬರಿ 30 ಕೇಸ್‌ಗಳನ್ನು ಹಾಕಿಸಿಕೊಂಡಿದ್ದೇನೆ. ಬೆಲೆ ಇಲ್ಲ ಈ ಟೋಲ್‌ನವರಿಗೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.

ಮುಂದುವರಿದು ಬೆಲೆ ಇಲ್ಲ, ಯಾರಿಗೆ ತೊಂದರೆ ಆದರೂ ನಾನು ಹೋಗಿದ್ದೇನೆ. ಇನ್ನು ಇವರು ಹೋರಾಟ ಮಾಡಿದ ನಂತರ ಎಂಎಲ್‌ಎ ಎಂದು ಹೇಳಿಕೊಂಡಿದ್ದ ವ್ಯಕ್ತಿ ಟೋಲ್ ಶುಲ್ಕ ಪಾವತಿ ಮಾಡಿರುವುದು ಸಹ ವೈರಲ್ ವಿಡಿಯೋದಲ್ಲಿ ಇದೆ. ಈ ಟೋಲ್‌ನವರು ಎಲ್ಲರಿಗೂ ಇದೇ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಕೊನೆಗೆ ಕನ್ನಡಪರ ಹೋರಾಟಗಾರರು ಎಂದು ಹೇಳಿಕೊಂಡಿರುವ ವ್ಯಕ್ತಿಯ ಕಾರ್ ಅನ್ನು ಟೋಲ್ ಶುಲ್ಕ ಪಾವತಿಸಿಕೊಳ್ಳದೆಯೇ ಟೋಲ್ ಸಿಬ್ಬಂದಿ ಕಳುಹಿಸಿದ್ದಾರೆ.
ನೆಟ್ಟಿಗರು ಹೇಳಿದ್ದೇನು
ಇನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಟೋಲ್ ಶುಲ್ಕ ಕಟ್ಟಬೇಕು ಎನ್ನುವ ಕಾರಣಕ್ಕೆ ಕನ್ನಡ ಹೋರಾಟಗಾರ ಬೇಸರಗೊಂಡಿದ್ದರು ಕೊನೆಗೆ ಟೋಲ್ ಹಣ ಕಟ್ಟದೇ ಹೋಗಬಹುದು ಎಂದು ತಿಳಿದ ನಂತರ, ಜೀವನವೇ ಗೆದ್ದಂತ ಅನುಭವ ಅವರಿಗೆ ಆಯಿತು ಎಂದು ಕಿರಣ್ ಆರಾಧ್ಯ ಎನ್ನುವವರು ಸೋಶಿಯಲ್ ಮೀಡಿಯಾದಲ್ಲಿ ಈ ವೈರಲ್ ವಿಡಿಯೋವನ್ನು ಹಂಚಿಕೊಂಡು ವ್ಯಂಗ್ಯವಾಡಿದ್ದಾರೆ.
Pro-Kannada activist was upset because he had to pay toll charges 😭
— Kiran Aradhya (@KiranAradhyaadv) May 21, 2026
At last, he found out he could pass without paying toll, uncle felt like he had conquered life https://t.co/61JB0K8V5G pic.twitter.com/28a7Y02rVy












Click it and Unblock the Notifications