Karna Serial: ಕರ್ಣ ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್‌: ರಮೇಶ್ ಕಳ್ಳಾಟ ಬಯಲು, ಕಾರ್ ಬ್ಲಾಸ್ಟ್‌ ಮೂಲಕ ಹೊಸ ಲೇಡಿ ವಿಲನ್ ಎಂಟ್ರಿ

Karna Serial: ಕರ್ಣ ಸೀರಿಯಲ್‌ನಲ್ಲಿ ಹೊಸ ಟ್ವಿಸ್ಟ್‌: ರಮೇಶ್ ಕಳ್ಳಾಟ ಬಯಲು, ಕಾರ್ ಬ್ಲಾಸ್ಟ್‌ ಮೂಲಕ ಹೊಸ ಲೇಡಿ ವಿಲನ್ ಎಂಟ್ರಿ ಕರ್ಣ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಕರ್ಣ ಹಾಗೂ ನಿಧಿ ಒಂದಾಗುವ ಸಮಯದಲ್ಲೇ ಸೀರಿಯಲ್‌ನಲ್ಲಿ ರೋಚಕ ತಿರುವು ಎದುರಾಗಿದೆ. ಎಲ್ಲ ಸವಾಲುಗಳನ್ನು ದಾಟಿ ಕರ್ಣ ಹಾಗೂ ನಿಧಿ ಮದುವೆ ಆಗುವುದಕ್ಕೆ ಮುಂದಾಗಿದ್ದರು. ಆದರೆ ರಮೇಶ್ ಕಳ್ಳಾಟಗಳಿಂದ ಕರ್ಣ, ನಿಧಿ ಹಾಗೂ ನಿತ್ಯಾ ಒಂದಿಲ್ಲೊಂದು ಸಮಸ್ಯೆಗಳನ್ನು ಎದುರಿಸುವಂತೆ ಆಗಿದೆ. ರಮೇಶ್‌ನ ಕಳ್ಳಾಟಗಳು ಬಯಲಾಗುತ್ತಿರುವುದರೊಂದಿಗೆ ಸೀರಿಯಲ್‌ಗೆ ಹೊಸ ವಿಲನ್‌ನ ಎಂಟ್ರಿಯೂ ಆಗಿದೆ.

ಚಿಕ್ಕಮ್ಮನ್ನು ಮುಂದೆ ಕೂರಿಸಿ ನೀವು ಹಿಂದೆ ಕುಳಿತುಕೊಂಡು ಮಜಾ ತೆಗೋತಿದಿರಾ ಅಂತ ಕರ್ಣ - ರಮೇಶ್‌ಗೆ ಪ್ರಶ್ನೆ ಮಾಡಿದ್ದಾನೆ. ಇಲ್ಲಿಯ ವರೆಗೆ ನೀವು ಏನೆಲ್ಲ ಸಂಚು ಮಾಡಿದ್ದೀರಿ ಎನ್ನುವ ಬಗ್ಗೆ ಒಂದೊಂದೇ ಹೇಳಿಕೊಂಡು ಹೋಗಲಾ ಅಂತ ಕರ್ಣ ಪ್ರಶ್ನೆ ಮಾಡಿದ್ದಾನೆ.

Karna Serial

ಈ ಸಂಭಾಷಣೆಯನ್ನು ಕೇಳಿಸಿಕೊಂಡಿರುವ ಬಂಗಾರಿ, ಅದೇನು ಅಂತ ವಿವರವಾಗಿ ಹೇಳೋ ಅಂತ ಕೇಳಿದ್ದು. ಇದಕ್ಕೆ ಕರ್ಣ, ಬಂಗಾರಿ ನಾನು ನಿನಗೊಂದು ರಾಕ್ಷಸಿಯ ಕಥೆ ಹೇಳುತ್ತೇನೆ. ಒಂದು ಸುಂದರವಾದ ರಾಜ್ಯ ಅಲ್ಲಿ ಇಬ್ಬರು ಸುಂದರವಾಗಿರುವ ರಾಜಕುಮಾರಿಯರು ಅದರಲ್ಲಿ ದೊಡ್ಡ ರಾಜಕುಮಾರಿ ಪ್ರೇಮಿನಾ ದೂರ ಮಾಡಿದ. ಆ ದೊಡ್ಡ ರಾಜಕುಮಾರಿ ತನ್ನ ಪ್ರೀತಿಸಿದ ಪ್ರೇಮಿನಾ ಬಿಟ್ಟು, ತನ್ನ ತಂಗಿ ಪ್ರೀತಿಸಿದ ರಾಜಕುಮಾರನನ್ನು ಮದುವೆಯಾಗುವ ಅನಿವಾರ್ಯತೆ ತಂದು ಬಿಟ್ಟ ಎಂದು ಕರ್ಣ ಹೇಳಿದ್ದಾನೆ. ಇದಕ್ಕೆ ಬಂಗಾರಿ ನೀನು ನಿತ್ಯಾ - ನಿಧಿ ವಿಷಯ ಹೇಳುತ್ತಿದ್ಯಾ ಅಂತ ಕೇಳಿದ್ದಾರೆ. ಕರ್ಣನ ಮಾತುಗಳನ್ನು ಕೇಳಿ ನಿಧಿ ಯಾರು ಆ ರಾಕ್ಷಸ ಎಂದು ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಕರ್ಣ ಮಿಸ್ಟರ್ ರಮೇಶ್ ವಸಿಷ್ಠ ಎಂದು ಕೈ ತೋರಿಸಿದ್ದಾನೆ. ಇದಕ್ಕೆ ರಮೇಶ್ ಯಾಕೆ ಈ ರೀತಿ ಎಲ್ಲ ಕಟ್ಟುಕಥೆ ಕಟ್ಟುತ್ತಿದ್ದಿಯಾ ಅಂತ ಪ್ರಶ್ನೆ ಮಾಡಿದ್ದಾನೆ.

ಈ ಸಂಭಾಷಣೆಯಲ್ಲಿ ಮಧ್ಯಪ್ರವೇಶ ಮಾಡಿರುವ ತೇಜಸ್, ಸತ್ಯದಿಂದ ಮಾತ್ರ ಸುಳ್ಳನ್ನ ಮಟ್ಟಹಾಕುವುದಕ್ಕೆ ಸಾಧ್ಯ ಎಂದು ಹೇಳಿದ್ದಾನೆ. ತೇಜಸ್‌ ನಿನ್ನ ಮದುವೆ ಮಂಟಪದಿಂದ ಕಿಡ್ನ್ಯಾಪ್ ಮಾಡಿಸಿದ್ದು ಯಾರು ಅಂತ ಹೇಳು ಎಂದು ರಮೇಶ್ ಕೇಳಿದ್ದಾನೆ. ಇದಕ್ಕೆ ತೇಜಸ್, ನನ್ನನ್ನು ಮದುವೆ ಮಂಟಪದಿಂದ ಕಿಡ್ನ್ಯಾಪ್ ಮಾಡಿಸಿದ್ದೇ ಈ ರಮೇಶ್ ಅವರು ಅಂತ ಹೇಳಿದ್ದಾನೆ. ಈ ವಿಷಯವನ್ನು ಕೇಳಿ ಮನೆಯವರೆಲ್ಲರೂ ಕಂಗಾಲಾಗಿದ್ದಾರೆ. ಮದುವೆಯ ನಂತರ ಕರ್ಣ - ನಿಧಿ ಮನೆ ಪ್ರವೇಶ ಮಾಡಿದ್ದಾರೆ. ಎಲ್ಲರೂ ಸಂಭ್ರಮದಲ್ಲಿ ಇರುವಾಗಲೇ ಹೊಸ ವಿಲನ್ ಯಾರು ಎನ್ನುವ ಕುತೂಹಲ ಇದೀಗ ಹೆಚ್ಚಾಗಿದೆ.

ಕರ್ಣ ಸೀರಿಯಲ್‌ನಲ್ಲಿ ಹೊಸ ವಿಲನ್ ಎಂಟ್ರಿ

ಕರ್ಣ ಸೀರಿಯಲ್ ರೋಚಕ ತಿರುವಿನಲ್ಲಿ ಇರುವಾಗಲೇ ಲೇಡಿ ವಿಲನ್ ಎಂಟ್ರಿಯಾಗಿದೆ. ಕರ್ಣನ ಮದುವೆಯಾಗಿದೆ ಎಂದು ವ್ಯಕ್ತಿಯೊಬ್ಬ ಆ ಲೇಡಿ ವಿಲನ್‌ಗೆ ಹೇಳಿದ್ದಾನೆ. ಅದಕ್ಕೆ ಆಕೆ ಹಾಗದರೆ ಈಗ ಶುರುವಾಯ್ತು ಅಸಲಿ ಆಟ. ಕರ್ಣನಿಗೆ ಮದುವೆ ಗಿಫ್ಟ್​ ಕೊಡೋಣ ಅಂತ ಹೇಳಿ ಕಾರನ್ನು ಬ್ಲಾಸ್ಟ್​ ಮಾಡಿಸುತ್ತಾಳೆ. ಕಾರ್‌ ಬ್ಲಾಸ್ಟ್‌ಗೂ ಮುನ್ನ ಕರ್ಣನ ಮೊಬೈಲ್‌ಗೆ ಮೆಸೇಜ್‌ವೊಂದು ಬರುತ್ತದೆ. ಅದರಲ್ಲಿ ಕಾರ್ ಬ್ಲಾಸ್ಟ್‌ ಮಾಡುವ ಮುನ್ಸೂಚನೆ ಕೊಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+