ಗಿಲ್ಲಿ ನಟನ ಹೊಸ ಸಿನಿಮಾಕ್ಕೆ ನಾಯಕಿ ಯಾರು ಗೊತ್ತಾ! ಕಾವ್ಯ ಅಂತ್ಹೇಳಿ ಕಾಗೆ ಹಾರಿಸ್ತಿದ್ದಾರ ಸಿನಿಮಾ ಟೀಂನವ್ರು?

ಬಿಗ್‌ಬಾಸ್‌ ವಿನ್ನರ್ ಗಿಲ್ಲಿನಟ ಸಿನಿಮಾರಂಗದಲ್ಲಿ ಲಕ್ ಟೆಸ್ಟ್ ಮಾಡಿಸಿಕೊಳ್ಳಲು ಹೊರಟಿದ್ದಾರೆ. ಅವರ ಹೊಸ ಸಿನಿಮಾ ಫಳಾರ್‌ಗೆ ಮುಹೂರ್ತ ಆಗಿದೆ. ಆದರೆ ಹೀರೋಯಿನ್ ಯಾರು ಅಂತ ಗೊತ್ತಾಗಿಲ್ಲ. ಅವರು ಯಾರು ಗೊತ್ತಾ? ನೀವಂದುಕೊಂಡಷ್ಟು ಸುಲಭ ಏನಲ್ಲ. ಗೆಸ್‌ ಮಾಡಿದ್ರೆ ಏನ್ ಸಿಗುತ್ತೆ ನೋಡಿ..

ಈ ಬಾರಿಯ ಬಿಗ್‌ಬಾಸ್‌ ವಿನ್ನರ್‌ ಗಿಲ್ಲಿನಟ ಕಾಮಿಡಿಯನ್‌ ಆಗಿಯೇ ಜನರ ಮುಂದೆ ಬಂದವರು. ಇದೀಗ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಅಫ್‌ಕೋರ್ಸ್‌ ಸಿನಿಮಾ ಕಾಮಿಡಿ ಜಾನರದಲ್ಲೇ ಇದೆ. ಮಂಡ್ಯದ ಹಳ್ಳಿ ಹೈದನ ಕಥೆ ಇದೆ. ಇನ್ನೊಂದು ವಿಶೇಷ ಅಂದರೆ ʼಜನನಾಯಗನ್‌ʼ, ʼಟಾಕ್ಸಿಕ್‌ʼನಂಥಾ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಮಾಡಿರುವ ಕೆವಿಎನ್‌ ಸಂಸ್ಥೆ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದೆ. ಇದು ಹೆಚ್ಚಿನವರ ಹುಬ್ಬೇರುವ ಹಾಗೆ ಮಾಡಿದೆ. ಯಾಕೆಂದರೆ ಈಗಷ್ಟೇ ಸಿನಿಮಾರಂಗಕ್ಕೆ ಕಾಲಿಡುತ್ತಿರುವ ಹೈಟ್‌ ವೈಟ್‌ಗಿಂತಲೂ ಕಾಮಿಡಿ ಮೂಲಕವೇ ಹೆಸರಾದ ಕಲಾವಿದನೊಬ್ಬ ಹೀರೋ ಆಗಿರುವ ಚಿತ್ರಕ್ಕೆ ಬಂಡವಾಳ ಹಾಕಲು ಹೆಚ್ಚಿನವರು ಹಿಂದೇಟು ಹಾಕುತ್ತಾರೆ. ಆದರೆ ಗಿಲ್ಲಿನಟನಿಗಿರುವ ವಿಶೇಷ ಪ್ರತಿಭೆ ನೋಡಿಯೋ, ಆತನ ಫ್ಯಾನ್‌ ಫಾಲೋವಿಂಗ್‌ಗೆ ಮಾರುಹೋಗಿಯೋ ಸಿನಿಮಾ ನಿರ್ಮಾಣಕ್ಕೆ ಕೆವಿಎನ್‌ ಮುಂದಾಗಿದೆ. ಇರಲಿ, ಈಗಿರುವ ಪ್ರಶ್ನೆ ಈ ಸಿನಿಮಾಕ್ಕೆ ಹೀರೋಯಿನ್‌ ಯಾರು ಅಂತ.

Gilli Nata

ಕಾವ್ಯ ಹೀರೋಯಿನ್‌ ಅನ್ನೋದು ಕಾಗೆನಾ?

ನಿನ್ನೆಯಿಂದ ಕಾವ್ಯ ಶೈವನೇ ಈ ಸಿನಿಮಾ ಹೀರೋಯಿನ್‌ ಅಂತ ಪೋಸ್ಟರ್‌ ಒಂದು ಹರಿದಾಡ್ತಿದೆ. ಕಾವ್ಯನೂ ಇದಕ್ಕೆ ಪೂರಕವಾಗಿ ತನ್ನನ್ನೇ ಹೋಲುವ ಹುಡುಗಿಯೊಬ್ಬಳ ಬ್ಯಾಕ್‌ ಆಂಗಲ್‌ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನು ನೋಡಿ ಹೆಚ್ಚಿನವರೆಲ್ಲ ಗಿಲ್ಲಿನಟನ ಮೊದಲ ಸಿನಿಮಾಕ್ಕೆ ಹೀರೋಯಿನ್‌ ಕಾವ್ಯನೇ ಅಂತ ಷರಾ ಬರೆದಾಗಿದೆ. ಆದರೆ ಮ್ಯಾಟರ್‌ ಅವರಂದುಕೊಂಡಷ್ಟು ಸುಲಭವಾಗಿಲ್ಲ.

ಗಿಲ್ಲಿ ಮೊದಲ ಸಿನಿಮಾಗೆ ₹1 ಕೋಟಿ ಸಂಭಾವನೆ ಪಡೆದ್ರಾ? ನಾಯಕಿಯಾಗಿ ಕಾವ್ಯ ಇರ್ತಾರಾ, ಚಿತ್ರತಂಡ ಹೇಳಿದ್ದಿಷ್ಟು
ಗಿಲ್ಲಿ ಮೊದಲ ಸಿನಿಮಾಗೆ ₹1 ಕೋಟಿ ಸಂಭಾವನೆ ಪಡೆದ್ರಾ? ನಾಯಕಿಯಾಗಿ ಕಾವ್ಯ ಇರ್ತಾರಾ, ಚಿತ್ರತಂಡ ಹೇಳಿದ್ದಿಷ್ಟು

ಡೈರೆಕ್ಟರ್‌ ಆಗ್ಬೇಕಂತ ಬಂದಿದ್ದ ಗಿಲ್ಲಿ

ಗಿಲ್ಲಿ ನಟ ಅವರ ನಿಜವಾದ ಹೆಸರು ʻನಟರಾಜ್‌ʼ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದಿಂದ ಬಂದವರು. 10ನೇ ಕ್ಲಾಸ್‌ ಮುಗಿಸಿ 2 ವರ್ಷಗಳ ಕೋರ್ಸ್‌ ಐಟಿಐ ಮಾಡಿದ್ದಾರೆ. ಪಕ್ಕಾ ಹಳ್ಳಿ ಪ್ರತಿಭೆಯಾಗಿರುವ ಗಿಲ್ಲಿ, ಮಾತನಾಡುವ ಶೈಲಿಯನ್ನೇ ತನ್ನ ಕಾಮಿಡಿಯಲ್ಲಿ ಬಳಸಿ ಫೇಮಸ್‌ ಆಗಿದ್ದಾರೆ. ಗಿಲ್ಲಿಗೆ ಶುರುವಿನಲ್ಲೇ ಸಿನಿಮಾ ಫೀಲ್ಡ್‌ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ. ಕಾಮಿಡಿಯೇ ಅವರ ಸ್ಟ್ರೆಂಥ್‌. ಸಿನಿಮಾದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಡೈರೆಕ್ಟ್‌ ಬೆಂಗಳೂರಿಗೆ ಬರುತ್ತಾರೆ. ಒಂದೆರಡು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಾರೆ. ಆರ್ಟ್‌ ಡಿಪಾರ್ಟ್‌ಮೆಂಟ್‌ನಲ್ಲಿ ಅಸಿಸ್ಟಿಂಟ್‌ ಕೆಲಸ ಮಾಡಿದ್ದಾರೆ. ಆಗೆಲ್ಲ ಗಿಲ್ಲಿಗೆ ಡೈರೆಕ್ಟರ್‌ ಆಗಬೇಕು ಅಂತ ಆಗ ಗಿಲ್ಲಿಗೆ ಸಿಕ್ಕಾಪಟ್ಟೆ ಇಷ್ಟ ಇತ್ತು. ಡೈರೆಕ್ಷನ್‌ ಸಾಹಸಕ್ಕೇ ಕೈ ಹಾಕಿದರೂ ಅದ್ರಲ್ಲಿ ಸಕ್ಸಸ್‌ ಆಗುವ ಭರವಸೆ ಇರಲಿಲ್ಲ. ಆದರೆ ತನ್ನದೇ ಕಥೆ, ಡೈರೆಕ್ಷನ್‌ನಲ್ಲಿ ಗಿಲ್ಲಿ ತಮ್ಮ ಊರಿನ ಜನರನ್ನೆಲ್ಲಾ ಒಟ್ಟುಗೂಡಿಸಿ ಕಾಮಿಡಿ ಸ್ಕಿಟ್‌ಗಳನ್ನ ಮಾಡ್ತಿದ್ರು. ಈ ವಿಡಿಯೋಗಳನ್ನ ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡ್ತಿದ್ರು. ಅದರಲ್ಲಿ ಅವರ ʻನಲ್ಲಿಮೂಳೆʼ ಸ್ಕಿಟ್‌ ಅಂತೂ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ದಿನಕಳೆದಂತೆ ಗಿಲ್ಲಿ ವಿಡಿಯೋಗಳಿಗೆ ಮಿಲಿಯನ್‌ಗಟ್ಟಲೇ ವೀವ್ಸ್‌ ಬರೋದಕ್ಕೆ ಶುರುವಾಯ್ತು. ಅಲ್ಲಿಂದ ಗಿಲ್ಲಿಗೆ ಫ್ಯಾನ್ಸ್‌ಗಳು ಹುಟ್ಟುಕೊಳ್ಳುವುದರ ಜೊತೆಗೆ, ಸಿನಿಮಾ ಹಾಗೂ ರಿಯಾಲಿಟಿ ಶೋಗಳ ಅವಕಾಶ ಕೂಡ ಹುಡುಕಿಕೊಂಡು ಬಂದವು. ಆಮೇಲೆ ಬಿಗ್‌ಬಾಸ್‌ನಲ್ಲಿ ಇವರ ನೈಜ ಪ್ರತಿಭೆಯ ಅನಾವರಣ ಆಗಿ ಬಿಗ್‌ಬಾಸ್‌ ಕಿರೀಟವನ್ನೂ ಗೆಲ್ಲುತ್ತಾರೆ. ಅಲ್ಲಿ ಅವರಿಗೆ ಜೊತೆಯಾದದ್ದೇ ಕಾವ್ಯಾ ಶೈವ.

ಲೈಫೇ ಸಿನಿಮಾದಂತೆ

ಗಿಲ್ಲಿ ನಟನ ಲೈಫೇ ಸಿನಿಮಾದಂತಿದೆ. ಈಗ ಅವರು ಸಿನಿಮಾಕ್ಕೆ ಬಂದಿದ್ದಾರೆ. ಚಂದ್ರಮೋಹನ್‌ ನಿರ್ದೇಶನದ ಫಳಾರ್‌ ಸಿನಿಮಾಕ್ಕೆ ಹೀರೋ ಆಗಿದ್ದಾರೆ. ಕೆವಿಎನ್‌ನಂಥಾ ದೈತ್ಯ ನಿರ್ಮಾಣ ಸಂಸ್ಥೆ ಅವರ ಸಿನಿಮಾ ನಿರ್ಮಿಸಲು ಮುಂದೆ ಬಂದಿದೆ. ಅಂದರೆ ಸಿನಿಮಾದ ಬಜೆಟ್‌ಗೆ ಏನೂ ಕೊರತೆಯಾಗಲಿಕ್ಕಿಲ್ಲ.

Gilli: ಗಿಲ್ಲಿ ಕಥೆ ಮುಗೀತು ಅಂದವ್ರಿಗೆ ನನ್‌ ರೇಂಜೇ ಬೇರೆ ಅನ್ನೋ ಮೆಸೇಜ್‌ ಕೊಟ್ಟ ಬಿಗ್‌ಬಾಸ್‌ ವಿನ್ನರ್‌
Gilli: ಗಿಲ್ಲಿ ಕಥೆ ಮುಗೀತು ಅಂದವ್ರಿಗೆ ನನ್‌ ರೇಂಜೇ ಬೇರೆ ಅನ್ನೋ ಮೆಸೇಜ್‌ ಕೊಟ್ಟ ಬಿಗ್‌ಬಾಸ್‌ ವಿನ್ನರ್‌

ಹೀರೋಯಿನ್‌ ಯಾರು?

ಕಾವ್ಯನೇ ಹೀರೋಯಿನ್‌ ಅಂತ ಅನೇಕರು ಹೇಳುತ್ತಿದ್ದಾರೆ. ಆಗಿರಲಿಲ್ಲ, ಇವ್ರು ಜಸ್ಟ್‌ ಕಾವ್ಯನ ಬಳಸಿಕೊಂಡು ಕಾಗೆ ಹಾರಿಸ್ತಿದ್ದಾರಷ್ಟೇ ಅಂತಲೂ ಮಾತಿದೆ. ಆದರೆ ಬಿಗ್‌ಬಾಸ್‌ನಲ್ಲಿ ಸಖತ್‌ ಶೈನ್‌ ಆದ ಜೋಡಿ ಗಿಲ್ಲಿ ಮತ್ತು ಕಾವ್ಯ. ಇವರಿಬ್ಬರ ವೇವ್‌ ಲೆನ್ತ್‌, ಮ್ಯಾನರಿಸಂ ಎಲ್ಲ ಮ್ಯಾಚ್‌ ಆಗ್ತಿದೆ ಅಂತ ಜನ ಹೇಳ್ತಿದ್ರು. ಸಾಮಾನ್ಯವಾಗಿ ಬಿಗ್‌ಬಾಸ್‌ನಲ್ಲಿ ಜನರ ಗಮನ ಸೆಳೆಯಲು ಲವ್‌ ಗೇಮ್‌ ಆಡೋ ಸ್ಪರ್ಧಿಗಳು ಹೊರಬಂದ ಮೇಲೆ ತಮ್ಮ ಪಾಡಿಗೆ ತಾವಿರ್ತಾರೆ. ಕೆಲವರು ಅದನ್ನು ನೆಕ್ಸ್ಟ್‌ ಲೆವೆಲ್‌ಗೆ ತಗೊಂಡು ಹೋಗಿ ಮದ್ವೆನೂ ಆಗ್ತಾರೆ. ಸದ್ಯ ಕಾವ್ಯ ಗಿಲ್ಲಿ ನಡುವೆ ಸಮ್‌ಥಿಂಗ್‌ ಸಮ್‌ಥಿಂಗ್‌ ಇರೋದು ನಿಜ ಅಂತ ಬಹಳ ಮಂದಿಗೆ ಅನಿಸಿದ್ರೂ ಅವ್ರಿಬ್ರೂ ತಮ್ಮಿಬ್ಬರ ರಿಲೇಶನ್‌ಶಿಪ್‌ ಸ್ಟೇಟಸ್‌ ಕನ್‌ಫಿರ್ಮ್‌ ಮಾಡಿಲ್ಲ. ಆದರೆ ಈ ಜೋಡಿಗೆ ಇರುವ ಜನಪ್ರಿಯತೆಯನ್ನು ಬಳಸಿ ಸಿನಿಮಾ ಟೀಮ್‌ ಹೀರೋಯಿನ್‌ ಆಗಿ ಕಾವ್ಯಾ ಅವರನ್ನೇ ಆಯ್ಕೆ ಮಾಡುವ ಸಾಧ್ಯತೆ ಇದೆ.

ಒಳ್ಳೆ ಚಾನ್ಸು

ಗಿಲ್ಲಿ ಮತ್ತು ಕಾವ್ಯ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಅವರಿಬ್ಬರಿಗೂ ಒಂದೊಳ್ಳೆ ಬ್ರೇಕ್‌ ಸಿಕ್ಕಿಲ್ಲ. ಸದ್ಯ ತಮ್ಮ ಜನಪ್ರಿಯತೆಯನ್ನೇ ಬಳಸಿಕೊಂಡು ಈ ಜೋಡಿ ಕ್ಲಿಕ್‌ ಆದರೆ ಇಬ್ಬರಿಗೂ ಸಿನಿಮಾರಂಗಕ್ಕೆ ಮುಂದುವರಿಯಲು ಒಂದೊಳ್ಳೆ ಬ್ರೇಕ್‌ ಸಿಕ್ಕಿದಂಗಾಗುತ್ತದೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+