Daily Horoscope: ತಿಂಗಳ ಮೊದಲ ದಿನ ನಾಲ್ಕು ರಾಶಿಯವರಿಗೆ ಅದೃಷ್ಟ:ಒಲಿಯುವುದು ಲಾಭದಾಯಕ ಅವಕಾಶ, ಧನ ಲಾಭ

Horoscope July 1: ಬುಧವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಬುಧವಾರ ರಾಹುಕಾಲವು ಮಧ್ಯಾಹ್ನ 12:00 ರಿಂದ 01:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ (Aries):

ಇಂದು ನಿಮಗೆ ಅತ್ಯುತ್ತಮ ದಿನ. ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಸಮಯ ಕೂಡಿಬಂದಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವ್ಯವಹಾರದಲ್ಲಿ ಲಾಭದಾಯಕ ಅವಕಾಶಗಳು ನಿಮ್ಮನ್ನು ಅರಸಿ ಬರುತ್ತವೆ.ನಿಮ್ಮ ಜೀವನದಲ್ಲಿ ಹೊಸ ಅವಕಾಶಗಳು ಬರಬಹುದು. ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕು.

Horoscope July 1

ವೃಷಭ ರಾಶಿ (Taurus):

ಇಂದು ಸುವರ್ಣ ಕ್ಷಣಗಳಿಗೆ ಸಾಕ್ಷಿಯಾಗಲಿದ್ದೀರಿ. ತಂದೆಯ ಸಹಕಾರದಿಂದ ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಲಿದ್ದೀರಿ. ದಾಂಪತ್ಯ ಜೀವನದಲ್ಲಿ ಮಧುರತೆ ಹೆಚ್ಚಲಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಸಿಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮಿಥುನ ರಾಶಿ (Gemini):

ಉತ್ಸಾಹದ ದಿನವಿದು. ಕೌಟುಂಬಿಕ ಸಮಸ್ಯೆಗಳಿಗೆ ಪೋಷಕರ ಮಾರ್ಗದರ್ಶನ ಸಿಗಲಿದೆ. ಆದರೆ, ಕೆಲಸದ ವಿಷಯದಲ್ಲಿ ಏಕಾಗ್ರತೆ ಕಳೆದುಕೊಳ್ಳಬೇಡಿ, ಇಲ್ಲವಾದರೆ ಅವಕಾಶಗಳು ಕೈತಪ್ಪಬಹುದು. ಹೊಸ ಅವಕಾಶಗಳು ಇದ್ದಕ್ಕಿದ್ದಂತೆ ಉದ್ಭವಿಸುವ ಸಾಧ್ಯತೆಯಿದೆ.

ಕಟಕ ರಾಶಿ (Cancer):

ಇಂದು ಸಾಮಾನ್ಯ ದಿನ. ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರ ವಹಿಸಿ. ಹೊಸ ಕೌಶಲ್ಯಗಳನ್ನು ಕಲಿತುಕೊಳ್ಳಲು ಮುಂದಾಗುವುದು ಭವಿಷ್ಯಕ್ಕೆ ಒಳ್ಳೆಯದು.ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿದ್ದರೂ, ಖರ್ಚುಗಳನ್ನು ನಿಯಂತ್ರಿಸುವುದು ಒಳ್ಳೆಯದು. ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ನೆಮ್ಮದಿ ನೀಡಲಿದೆ.

ಸಿಂಹ ರಾಶಿ (Leo):

ಖುಷಿಯ ದಿನ. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ಹಾಗೂ ಉಡುಗೊರೆ ಸಿಗುವ ಸಾಧ್ಯತೆಯಿದೆ. ಆರೋಗ್ಯದ ದೃಷ್ಟಿಯಿಂದ ದಿನ ಉತ್ತಮವಾಗಿದೆ.ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ಕಠಿಣ ಪರಿಶ್ರಮವನ್ನು ಗುರುತಿಸಲಾಗುತ್ತದೆ.

ಕನ್ಯಾ ರಾಶಿ (Virgo):

ಲಾಭದಾಯಕ ದಿನ. ಆರ್ಥಿಕ ಯೋಜನೆಗಳು ಕೈಗೂಡಲಿವೆ. ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಉದ್ಯೋಗಾಕಾಂಕ್ಷಿಗಳಿಗೆ ಅಪೇಕ್ಷಿತ ಕಂಪನಿಯಿಂದ ಕರೆ ಬರಬಹುದು.ಕೆಲಸದಲ್ಲಿ ಹೊಸ ವಿಧಾನದೊಂದಿಗೆ ಕೆಲಸ ಮಾಡುವುದರಿಂದ ಯಶಸ್ಸು ಸಿಗುವುದು. ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅವಶ್ಯಕ.

ತುಲಾ ರಾಶಿ (Libra):

ದಾಂಪತ್ಯದಲ್ಲಿನ ಬಿರುಕುಗಳು ದೂರವಾಗಲಿವೆ. ವ್ಯವಹಾರದ ಸಲಹೆಗಾಗಿ ತಜ್ಞರ ಮೊರೆ ಹೋಗಲಿದ್ದೀರಿ. ಸರ್ಕಾರಿ ಕೆಲಸಗಳಲ್ಲಿ ಅಲ್ಪ ವಿಳಂಬವಾಗಬಹುದು. ಸಾಲದ ವ್ಯವಹಾರದಿಂದ ದೂರವಿರುವುದು ಒಳ್ಳೆಯದು.ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದರಿಂದ ಮಾನಸಿಕ ಸಂತೋಷ ಬರುತ್ತದೆ. ಕೆಲಸದಲ್ಲಿ ಪ್ರಗತಿ ಕಾಣುವಿರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಮನ್ನಣೆ ದೊರೆಯುತ್ತದೆ.

ವೃಶ್ಚಿಕ ರಾಶಿ (Scorpio):

ಆತ್ಮವಿಶ್ವಾಸದ ದಿನ. ಕುಟುಂಬ ಮತ್ತು ವೃತ್ತಿಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವಿರಿ. ಪ್ರವಾಸೋದ್ಯಮ ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿದ್ದವರಿಗೆ ಭಾರಿ ಲಾಭ ಸಿಗಲಿದೆ. ಕೆಲಸದಲ್ಲಿ ಹೊಸ ಅವಕಾಶಗಳು ಬರಬಹುದು. ಧ್ಯಾನದಿಂದ ಮನಸ್ಸು ಶಾಂತಗೊಳ್ಳುವುದು.

ಧನು ರಾಶಿ (Sagitarius):

ಅದೃಷ್ಟದ ದಿನ. ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಸಿಗುವುದು, ಕಾರ್ಯಕ್ಷೇತ್ರದಲ್ಲಿ ಧನಲಾಭದ ಯೋಗವಿದೆ. ಆಪ್ತರಿಂದ ಕೆಲಸದ ವಿಷಯದಲ್ಲಿ ಹೆಚ್ಚಿನ ಸಹಕಾರ ಸಿಗಲಿದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ನೀವು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕು.

ಮಕರ ರಾಶಿ (Capricorn):

ಹರ್ಷೋಲ್ಲಾಸದ ದಿನ. ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ಕಲೆ ಮತ್ತು ನಟನೆಯಲ್ಲಿ ಆಸಕ್ತಿ ಇರುವವರಿಗೆ ಹೊಸ ಅವಕಾಶಗಳು ಸಿಗಲಿವೆ. ಮಕ್ಕಳ ಭವಿಷ್ಯದ ಕುರಿತು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು, ಮನಸ್ಸಿನ ಮಾತಿಗೆ ಕಿವಿಗೊಡಿ.

ಕುಂಭ ರಾಶಿ (Aquarius):

ವಿಶೇಷ ದಿನವಿದು. ಅನಿರೀಕ್ಷಿತ ಧನಲಾಭದ ಯೋಗವಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಂಬಂಧಿಸಿದ ಶುಭ ಸುದ್ದಿ ಸಿಗಲಿದೆ. ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶಗಳು ಬರುತ್ತವೆ. ದಾಂಪತ್ಯ ಜೀವನ ಸುಖಮಯವಾಗಿರಲಿದೆ.

ಮೀನ ರಾಶಿ (Pisces):

ಸಮತೋಲನದ ದಿನ. ಸೃಜನಶೀಲ ಕೆಲಸಗಳಲ್ಲಿ ಗಮನ ಹರಿಸುವಿರಿ. ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡುವ ಮುನ್ನ ಎಚ್ಚರ ವಹಿಸಿ. ಹೊಸ ಆಲೋಚನೆಗಳು ಜೀವನದಲ್ಲಿ ಉತ್ತಮ ಬದಲಾವಣೆಗಳಿಗೆ ಕಾರಣವಾಗುತ್ತವೆ. ಆಪ್ತರ ಸಲಹೆಯನ್ನು ಪಡೆದುಕೊಳ್ಳುವುದು ಸೂಕ್ತ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+