ಭಾರತ vs ಇಂಗ್ಲೆಂಡ್ ಟಿ20 ಸರಣಿ: ಪಂದ್ಯದ ಸಮಯ, ನೇರಪ್ರಸಾರದ ವಿವರ ಇಲ್ಲಿದೆ
India Vs England T20 Series: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ರೋಚಕ ಟಿ20 ಸರಣಿ ಬುಧವಾರದಿಂದ (ಜುಲೈ 1) ಆರಂಭವಾಗಲಿದೆ. ಟೀಮ್ ಇಂಡಿಯಾವು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕಣಕ್ಕಿಯಲಿದ್ದು, ಐರ್ಲೆಂಡ್ ವಿರುದ್ಧ ಅನುಭವಿಸಿದ ಹೀನಾಯ ಸೋಲಿನ ಗಾಯದ ನೋವಿನಿಂದ ಹೊರಬರಲು ಭರ್ಜರಿ ಸಿದ್ಧತೆ ನಡೆಸಿದೆ. ಹಾಗಾದ್ರೆ ಈ ಪಂದ್ಯದ ಸಮಯ, ನೇರಪ್ರಸಾರವನ್ನು ಯಾವ ಟಿವಿ ಚಾನೆಲ್‌ನಲ್ಲಿ ವೀಕ್ಷಣೆ ಮಾಡಬಹುದು ಹಾಗೂ ವೈಭವ್ ಸೂರ್ಯವಂಶಿ ಆಡ್ತಾರಾ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡವು ಕೈಚೆಲ್ಲಿದೆ. ಟಿ20 ವಿಶ್ವಕಪದ ಚಾಂಪಿಯನ್ ಆಗಿರುವ ಟೀಮ್ ಇಂಡಿಯಾ ಅನುಭವಿಸಿದ ಈ ಹೀನಾಯ ಸೋಲಿನಿಂದ ಭಾರಿ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಇದೀಗ ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯು ಬುಧವಾರದಿಂದ ಆರಂಭವಾಗಲಿದೆ.

ಸೋಲಿನ ಗಾಯದಿಂದ ಹೊರಬರಲು ಭರ್ಜರಿ ತಯಾರಿ
ಈ ಸರಣಿಯ ಮೊದಲನೇ ಟಿ20 ಪಂದ್ಯವು ನಾಳೆ ಡರ್ಹಾಮ್ ಕೌಂಟಿಯಲ್ಲಿ ನಡೆಯಲಿದೆ. ಐರ್ಲೆಂಡ್ ಸರಣಿಯ ನಂತರ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿರುವ ಭಾರತ ತಂಡವನ್ನು ತನ್ನ ತವರು ನೆಲದಲ್ಲಿ ಮಣಿಸಲು ಹ್ಯಾರಿ ಬ್ರೂಕ್ ನೇತೃತ್ವದ ಪಡೆ ಭರ್ಜರಿ ಸಿದ್ಧತೆ ನಡೆಸಿದೆ. ಇತ್ತ ಟೀಮ್ ಇಂಡಿಯಾದ ಆಟಗಾರರು ಕೂಡ ಸೋಲಿನ ಗಾಯದ ನೋವಿನಿಂದ ಹೊರಬರಲು ಸಖತ್ ತಯಾರಿ ನಡೆಸಿದ್ದಾರೆ.
ವಂಡರ್ ಕಿಡ್ ವೈಭವ್ ಆಡ್ತಾರಾ?
ಬುಧವಾರ ನಡೆಯಲಿರುವ ಪಂದ್ಯದಲ್ಲಾದರೂ ಯುವ ಆಟಗಾರ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆಯೇ ಎಂಬ ಕುತೂಹಲ ಹೆಚ್ಚಾಗಿದೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಇವರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡಿರಲಿಲ್ಲ. ಈಗಾಗಲೇ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಕಳಪೆ ಪ್ರದರ್ಶನ ನೀಡಿದ್ದು, ಇವರಿಬ್ಬರಲ್ಲಿ ಒಬ್ಬರನ್ನು ಹೊರಗಡೆ ಕೂರಿಸಿ ವಂಡರ್ ಕಿಡ್ ಆಡಿಸುವ ಸಾಧ್ಯತೆ ಹೆಚ್ಚಿದೆ. ಈ ಬಾಲಕನ ಆಟ ನೋಡಲು ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.
ವೈಭವ್ ಬಂದ್ರೆ ಹೊರಗುಳಿಯುವವರು ಯಾರು?
ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಇಬ್ಬರೂ ಅತ್ಯುತ್ತಮ ಆಟಗಾರರೇ ಆಗಿದ್ದಾರೆ. ಆದರೂ ಪ್ರಸ್ತುತ ಫಾರ್ಮ್‌ನಲ್ಲಿ ಇಲ್ಲದಿರುವುದು ಭಾರತ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಈ ಕಾರಣದಿಂದಾಗಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಇಬ್ಬರಲ್ಲಿ ಒಬ್ಬರನ್ನು ತಂಡದಿಂದ ಕೈಬಿಟ್ಟು, ವೈಭವ್ ಸೂರ್ಯವಂಶಿ ಅವರನ್ನು ಕಣಕ್ಕಿಳಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಪಂದ್ಯದ ಸಮಯ, ನೇರಪ್ರಸಾರದ ವಿವರ
ಈ ಪಂದ್ಯದ ಸಮಯದ ಬಗ್ಗೆ ಹೇಳುವುದಾದರೆ, ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 9:30 ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 10 ಗಂಟೆಗೆ ಪಂದ್ಯ ಆರಂಭವಾಗಲಿದೆ. ಭಾರತದಲ್ಲಿರುವ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ಟೆಲಿವಿಷನ್ ಚಾನೆಲ್‌ಗಳಲ್ಲಿ ನೇರಪ್ರಸಾರ ವೀಕ್ಷಣೆ ಮಾಡಬಹುದು. ಅದೇ ರೀತಿ ಒಟಿಟಿಯಲ್ಲಿ ವೀಕ್ಷಿಸಲು ಇಚ್ಛಿಸುವವರು ಸೋನಿ ಲೈವ್ ಆ್ಯಪ್‌ನಲ್ಲಿ ಚಂದಾದಾರಿಕೆ ಪಡೆದು ಪಂದ್ಯವನ್ನು ಲೈವ್ ಸ್ಟ್ರೀಮಿಂಗ್ ನೋಡಬಹುದು.
ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಸಮಯದಲ್ಲಿ ಸೋನಿ ಸ್ಪೋರ್ಟ್ಸ್ ಚಾನೆಲ್‌ನ ಪ್ರಸಾರದ ಗುಣಮಟ್ಟದ ಕುರಿತು ಅಭಿಮಾನಿಗಳಿಂದ ಕೆಲವು ಟೀಕೆಗಳು ಮತ್ತು ವಿಮರ್ಶೆಗಳು ವ್ಯಕ್ತವಾಗಿದ್ದವು. ಈ ಕೊರತೆಗಳನ್ನು ಇಂಗ್ಲೆಂಡ್ ಸರಣಿಯ ಪ್ರಸಾರದ ವೇಳೆ ಮ್ಯಾನೇಜ್‌ಮೆಂಟ್ ಸರಿಪಡಿಸಲಿದೆ ಎಂಬ ದೊಡ್ಡ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ. ಒಟ್ಟಿನಲ್ಲಿ ಹೇಳುವುದಾದರೆ ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರು ಕಣಕ್ಕಿಳಿಯುತ್ತಾರೆ ಎಂಬುದು ಬಹುತೇಕ ಅಭಿಮಾನಿಗಳ ನಿರೀಕ್ಷೆಯಾಗಿದೆ. ಆದರೂ ಮ್ಯಾನೇಜ್‌ಮೆಂಟ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.












Click it and Unblock the Notifications