VTU: ಸಂಜೆ 5:30ಕ್ಕೆ ಪರೀಕ್ಷೆ ಮುಕ್ತಾಯ, 5:35ಕ್ಕೆ ಫಲಿತಾಂಶ ಪ್ರಕಟ; ಹೊಸ ಇತಿಹಾಸ ಸೃಷ್ಟಿಸಿದ ವಿಟಿಯು

VTU Created New History: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಇಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 5 ನಿಮಿಷಗಳಲ್ಲಿ ಫಲಿತಾಂಶ ಪ್ರಕಟಿಸುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಿಇ ಮತ್ತು ಬಿ.ಟೆಕ್ 6ನೇ ಸೆಮಿಸ್ಟರ್‌ನ ಅಂತಿಮ ಪ್ರಾಯೋಗಿಕ ಪರೀಕ್ಷೆಯು ಮಂಗಳವಾರ (ಜೂನ್ 30) ಸಂಜೆ 5:30ಕ್ಕೆ ಮುಕ್ತಾಯಗೊಂಡಿತು. ತದನಂತರ ಕೇವಲ ಐದೇ ನಿಮಿಷಗಳಲ್ಲಿ ಅಂದರೆ ಸಂಜೆ 5:35ಕ್ಕೆ ವಿಶ್ವವಿದ್ಯಾಲಯವು ಇಡೀ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿ ಹೊಸ ದಾಖಲೆ ಸೃಷ್ಟಿಸಿದೆ.

VTU Creates History Engineering Exam Results Declared Within 5 Minutes in Karnataka Know details

ಹಿಂದಿನ ಎಲ್ಲಾ ದಾಖಲೆ ಮುರಿದ ವಿಟಿಯು

ಈ ಪರೀಕ್ಷೆಗೆ ಒಟ್ಟು 60,856 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಬಾರಿ ಒಟ್ಟಾರೆ ಶೇಕಡಾ 76.84 ರಷ್ಟು ಫಲಿತಾಂಶ ದಾಖಲಾಗಿದೆ. ವಿಟಿಯು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್, ಮೌಲ್ಯಮಾಪನ ಕುಲಸಚಿವ ಪ್ರೊ.ಯು.ಜೆ. ಉಜ್ವಲ್‌ ಮತ್ತು ಕುಲಸಚಿವ ರಾಂಪುಲೆ ಅವರು ಜಂಟಿಯಾಗಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದರು. ಈ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ವಿಟಿಯು ಮುರಿದಿರುವ ಕೀರ್ತಿಗೆ ಪಾತ್ರವಾಗಿದೆ.

ವಿಶ್ವವಿದ್ಯಾಲಯವು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ ಮತ್ತು ವ್ಯವಸ್ಥಿತ ಯೋಜನೆಯನ್ನು ಅಳವಡಿಸಿಕೊಂಡಿದ್ದರಿಂದ ಈ ವೇಗ ಸಾಧ್ಯವಾಗಿದೆ ಎಂದು ತಿಳಿದುವಂದಿದೆ. ಆರನೇ ಸೆಮಿಸ್ಟರ್‌ನ ಪರೀಕ್ಷೆಗಳು ಮುಗಿದ ತಕ್ಷಣವೇ ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆಯನ್ನು ಮುಗಿಸಿ, ಅಂಕಗಳನ್ನು ಪೋರ್ಟಲ್‌ನಲ್ಲಿ ಸಿದ್ಧವಾಗಿಡಲಾಗಿತ್ತು. ಕೊನೆಯ ದಿನ ಪ್ರಾಯೋಗಿಕ ಪರೀಕ್ಷೆ ಮುಗಿದ ತಕ್ಷಣ ಆಯಾ ಕಾಲೇಜುಗಳ ಮಂಡಳಿಯು ಅಂಕಗಳನ್ನು ನೇರವಾಗಿ ಡಿಜಿಟಲ್ ಸಾಫ್ಟ್‌ವೇರ್‌ಗೆ ಅಪ್‌ಲೋಡ್ ಮಾಡಿತು.

ಕುಲಪತಿಗಳು ಹೇಳಿದ್ದೇನು?

ಈ ಕುರಿತು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿದ್ದು, 'ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿರುತ್ತಾರೆ. ಆದ್ದರಿಂದ ನಾವು ಸಾಧ್ಯವಾದಷ್ಟು ಬೇಗ ಫಲಿತಾಂಶ ಪ್ರಕಟಿಸಲು ನಿರ್ಧರಿಸಿದೆವು. ಅದೇ ರೀತಿಯಲ್ಲಿ ಸಿದ್ಧತೆ ನಡೆಸಿ ಫಲಿತಾಂಶ ಬಿಡುಗಡೆ ಮಾಡಿದ್ದೇವೆ. ಈ ಹಿಂದೆ ಅಂತಿಮ ವರ್ಷದ ವಿದ್ಯಾರ್ಥಿಗಳ ಫಲಿತಾಂಶವನ್ನು 10 ನಿಮಿಷಗಳ ಒಳಗಾಗಿ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಸಹಕಾರ ನೀಡಿದ ವಿಟಿಯು ಆಡಳಿತ ಸಿಬ್ಬಂದಿ, ಪರೀಕ್ಷಾ ವಿಭಾಗದ ಸಿಬ್ಬಂದಿ ಮತ್ತು ಸಂಯೋಜಿತ ಕಾಲೇಜುಗಳ ಸಿಬ್ಬಂದಿಗೆ ಅಭಿನಂದನೆಗಳು,' ಎಂದು ತಿಳಿಸಿದ್ದಾರೆ.

ಹಿಂದಿನ ಫಲಿತಾಂಶದ ವಿವರ

ಇತ್ತೀಚೆಗಷ್ಟೇ ಅಂತಿಮ ವರ್ಷದ 56,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳಲ್ಲಿ ಬಿಡುಗಡೆ ಮಾಡಿತ್ತು. 2025ರಲ್ಲಿ 50,321 ವಿದ್ಯಾರ್ಥಿಗಳ ಫಲಿತಾಂಶವನ್ನು ಕೇವಲ 1 ಗಂಟೆ ಅವಧಿಯಲ್ಲಿ ಪ್ರಕಟ ಮಾಡಿತ್ತು. ಇನ್ನೂ 6ನೇ ಸೆಮಿಸ್ಟರ್ ಫಲಿತಾಂಶವದ ವಿವರ ನೋಡುವುದಾದರೆ, 2024-25ರಲ್ಲಿ 58,232 ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷೆ ಮುಗಿದ 10 ದಿನಗಳಲ್ಲಿ ಘೋಷಣೆ ಮಾಡಿತ್ತು.

ಪರೀಕ್ಷೆ ಮುಗಿದ ಎಷ್ಟನೇ ದಿನಕ್ಕೆ 6ನೇ ಸೆಮಿಸ್ಟರ್ ಫಲಿತಾಂಶ ಪ್ರಕಟ?

* 2025-26 - 5 ನಿಮಿಷ

* 2024-25 - 10 ದಿನ

* 2023-24 - 11 ದಿನ

* 2022-23 - 10 ದಿನ

ಈ ರೀತಿ ಶೀಘ್ರವಾಗಿ ಫಲಿತಾಂಶ ಪ್ರಕಟಿಸುವುದರಿಂದ ಇಂಜಿನಿಯರಿಂಗ್ ಮುಗಿಸುವ ವಿದ್ಯಾರ್ಥಿಗಳಿಗೆ ಉದ್ಯೋಗದ ಸಂದರ್ಶನಗಳಲ್ಲಿ ಭಾಗವಹಿಸಲು ಹಾಗೂ ಉನ್ನತ ಶಿಕ್ಷಣದ ಪ್ರವೇಶಾತಿ ಪಡೆಯಲು ಯಾವುದೇ ವಿಳಂಬ ಇಲ್ಲದೆ ತಕ್ಷಣವೇ ತಾತ್ಕಾಲಿಕ ಅಂಕಪಟ್ಟಿ ಸಿಗುವಂತೆ ಆಗುತ್ತದೆ ಎಂದು ಕುಲಪತಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+