ಅದೃಷ್ಟಕ್ಕಾಗಿ ಆನೆ ವಿಗ್ರಹದ ಕಾಲುಗಳ ನಡುವೆ ನುಗ್ಗಿದ ಭಕ್ತ; ಅರ್ಧದಲ್ಲೇ ಸಿಲುಕಿ ಪರದಾಟ, ವಿಡಿಯೋ ವೈರಲ್!

ದೇವರ ದರ್ಶನ, ಪೂಜೆ ಹಾಗೂ ಹರಕೆ ತೀರಿಸುವುದಕ್ಕಾಗಿ ಭಕ್ತರು ನಾನಾ ರೀತಿಯ ಧಾರ್ಮಿಕ ಆಚರಣೆಗಳನ್ನು ಅನುಸರಿಸುತ್ತಾರೆ. ಆದರೆ ಕೆಲವೊಮ್ಮೆ ಇಂತಹ ಆಚರಣೆಗಳು ಅನಿರೀಕ್ಷಿತ ಸಂಕಷ್ಟಕ್ಕೂ ಕಾರಣವಾಗುತ್ತವೆ. ಇದಕ್ಕೆ ಸಾಕ್ಷಿಯೆಂಬಂತೆ ಮಧ್ಯಪ್ರದೇಶದ ಅಮರಕಂಟಕ್‌ನ ನರ್ಮದಾ ದೇವಾಲಯದಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅದೃಷ್ಟ ಒಲಿಯಲಿ, ಇಷ್ಟಾರ್ಥಗಳು ಈಡೇರಲಿ ಎಂಬ ನಂಬಿಕೆಯಿಂದ ಕಲ್ಲಿನ ಆನೆ ವಿಗ್ರಹದ ಕಾಲುಗಳ ನಡುವಿನ ಕಿರಿದಾದ ಜಾಗದಲ್ಲಿ ತೆವಳಿಕೊಂಡು ಹೋಗಲು ಪ್ರಯತ್ನಿಸಿದ ಭಕ್ತನೊಬ್ಬ ಅಲ್ಲಿಯೇ ಸಿಲುಕಿಕೊಂಡಿದ್ದಾನೆ. ಕೊನೆಗೆ ಹಲವು ನಿಮಿಷಗಳ ಹರಸಾಹಸದ ಬಳಿಕ ಆತ ಹೊರಬರುವಲ್ಲಿ ಯಶಸ್ವಿಯಾಗಿದ್ದಾನೆ.

Amarkantak Temple Devotee Gets Stuck Between Stone Elephant Statue s Legs at Madhya Pradesh Temple

ಆನೆ ವಿಗ್ರಹದ ಕೆಳಗೆ ಸಿಲುಕಿಕೊಂಡ ಭಕ್ತ!

ಮಧ್ಯಪ್ರದೇಶದ ಅಮರಕಂಟಕ್‌ನಲ್ಲಿರುವ ನರ್ಮದಾ ದೇವಾಲಯದಲ್ಲಿ ಈ ಘಟನೆ ನಡೆದಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ದೇವಾಲಯದಲ್ಲಿರುವ ಕಲ್ಲಿನ ಆನೆ ವಿಗ್ರಹದ ಕಾಲುಗಳ ನಡುವಿನ ಕಿರಿದಾದ ಜಾಗದಲ್ಲಿ ಹಾದುಹೋಗುವ ಧಾರ್ಮಿಕ ಆಚರಣೆಯನ್ನು ಭಕ್ತರು ಅನುಸರಿಸುತ್ತಾರೆ ಎನ್ನಲಾಗಿದೆ.

ಈ ಆಚರಣೆಯ ಪ್ರಕಾರ, ಆನೆಯ ವಿಗ್ರಹದ ಕಾಲುಗಳ ನಡುವಿನಿಂದ ಹೊರಬಂದರೆ ಅದೃಷ್ಟ ಒಲಿಯುತ್ತದೆ ಹಾಗೂ ಮನಸ್ಸಿನಲ್ಲಿರುವ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಇದೇ ನಂಬಿಕೆಯಿಂದ ವ್ಯಕ್ತಿಯೊಬ್ಬರು ವಿಗ್ರಹದ ಕೆಳಭಾಗದಲ್ಲಿ ತೆವಳಿಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ ವಿಗ್ರಹದ ಕಾಲುಗಳ ನಡುವಿನ ಜಾಗ ಕಿರಿದಾಗಿದ್ದರಿಂದ ಅವರು ಅರ್ಧದಲ್ಲೇ ಸಿಲುಕಿಕೊಂಡಿದ್ದಾರೆ.

Bengaluru: 3BHK ಮನೆಗೆ ಶಿಫ್ಟ್‌ ಮಾಡಲು ಬರೋಬ್ಬರಿ ₹2.53 ಲಕ್ಷ ಖರ್ಚು ಮಾಡಿದ ದಂಪತಿ, ವಿಡಿಯೋ ವೈರಲ್
Bengaluru: 3BHK ಮನೆಗೆ ಶಿಫ್ಟ್‌ ಮಾಡಲು ಬರೋಬ್ಬರಿ ₹2.53 ಲಕ್ಷ ಖರ್ಚು ಮಾಡಿದ ದಂಪತಿ, ವಿಡಿಯೋ ವೈರಲ್

ಹೊರಬರಲು ಹಲವು ನಿಮಿಷಗಳ ಕಾಲ ಹರಸಾಹಸ

ವ್ಯಕ್ತಿ ವಿಗ್ರಹದ ಕೆಳಗೆ ಸಿಲುಕಿಕೊಂಡಿರುವುದನ್ನು ಗಮನಿಸಿದ ತಕ್ಷಣ ದೇವಾಲಯದಲ್ಲಿದ್ದ ಭಕ್ತರು ಆತನ ಸುತ್ತಲೂ ಜಮಾಯಿಸಿದ್ದಾರೆ. ಆರಂಭದಲ್ಲಿ ಹೇಗಾದರೂ ಮಾಡಿ ಹೊರಬರಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ದೇಹದ ಒಂದು ಭಾಗ ವಿಗ್ರಹದೊಳಗೆ ಸಿಲುಕಿಕೊಂಡಿದ್ದರಿಂದ ಮುಂದೆ ಹೋಗಲೂ ಆಗದೆ, ಹಿಂದಕ್ಕೆ ಬರಲೂ ಆಗದೆ ಪರದಾಡಿದ್ದಾರೆ.

ಈ ವೇಳೆ ಸುತ್ತಲೂ ಸೇರಿದ್ದವರು ಆತನಿಗೆ ಧೈರ್ಯ ತುಂಬಿದ್ದಾರೆ. ದೇಹವನ್ನು ನಿಧಾನವಾಗಿ ಮುಂದಕ್ಕೆ ತಳ್ಳಿ ಹೊರಬರುವಂತೆ ಸಲಹೆ ನೀಡಿದ್ದಾರೆ. ಕೆಲವರು ಆತನ ಪ್ರಯತ್ನವನ್ನು ಗಮನಿಸುತ್ತಿದ್ದರೆ, ಮತ್ತೊಬ್ಬರು ಈ ಸಂಪೂರ್ಣ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ.

ಹಲವು ನಿಮಿಷಗಳ ಕಾಲ ಸಾಕಷ್ಟು ಪ್ರಯತ್ನಿಸಿದ ಬಳಿಕ ಕೊನೆಗೂ ಆ ವ್ಯಕ್ತಿ ವಿಗ್ರಹದ ಕೆಳಗಿನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾನೆ. ಆತ ಹೊರಬರುತ್ತಿದ್ದಂತೆ ಅಲ್ಲಿದ್ದ ಭಕ್ತರು ಚಪ್ಪಾಳೆ ತಟ್ಟಿದ್ದಾರೆ. ಕೆಲವರು ದೇವರ ನಾಮಸ್ಮರಣೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.‌

Mangaluru: ಹಿಂದೂ ಯುವಕನನ್ನು ಪ್ರೀತಿಸಿದ್ದಕ್ಕೆ ವಿದ್ಯಾರ್ಥಿನಿ ಕಿಡ್ನಾಪ್: ವಿಡಿಯೋ ವೈರಲ್; ಪೊಲೀಸರಿಂದ ಶೋಧ!
Mangaluru: ಹಿಂದೂ ಯುವಕನನ್ನು ಪ್ರೀತಿಸಿದ್ದಕ್ಕೆ ವಿದ್ಯಾರ್ಥಿನಿ ಕಿಡ್ನಾಪ್: ವಿಡಿಯೋ ವೈರಲ್; ಪೊಲೀಸರಿಂದ ಶೋಧ!

ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಆ ವ್ಯಕ್ತಿಯ ಪರಿಸ್ಥಿತಿಗೆ ಅನುಕಂಪ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಇಂತಹ ಅಪಾಯಕಾರಿ ಆಚರಣೆಗಳನ್ನು ಅನುಸರಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.

ಎಕ್ಸ್ ಬಳಕೆದಾರರಾದ 'ಎ ಪ್ರೌಡ್ ಏಷ್ಯನ್' (@KalisankarMukhe) ಅವರು ಈ ಕುರಿತು ಪ್ರತಿಕ್ರಿಯಿಸಿ, ನಂಬಿಕೆ ಇರಬೇಕು. ಆದರೆ ಮೂಢನಂಬಿಕೆ ಕೆಲವೊಮ್ಮೆ ಪ್ರಾಣಕ್ಕೆ ಅಪಾಯ ತಂದೊಡ್ಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಬ್ಬ ಬಳಕೆದಾರರು, ಹಿಂದೂ ಧರ್ಮದಂತಹ ಶ್ರೇಷ್ಠ ಧರ್ಮದಲ್ಲಿ ಇಂತಹ ಮೂರ್ಖತನದ ಆಚರಣೆಗಳು ಏಕೆ ಬೇಕು? ಇಂತಹ ಘಟನೆಗಳಿಂದ ಧರ್ಮಕ್ಕೆ ಕೆಟ್ಟ ಹೆಸರು ಬರುತ್ತದೆ. ಅರ್ಚಕರು ಹೊಸ ಹೊಸ ಆಚರಣೆಗಳನ್ನು ಪರಿಚಯಿಸುವ ಬದಲು ಭಕ್ತರಿಗೆ ಸರಳವಾಗಿ ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡಬಾರದೇ ಎಂದು ಪ್ರಶ್ನಿಸಿದ್ದಾರೆ.

ವೈರಲ್ ವಿಡಿಯೋ ಕುರಿತು ಚರ್ಚೆ

ಒಟ್ಟಿನಲ್ಲಿ, ದೇವಾಲಯದ ಧಾರ್ಮಿಕ ಆಚರಣೆಯೊಂದನ್ನು ಅನುಸರಿಸಲು ಹೋಗಿ ಭಕ್ತನೊಬ್ಬ ಸಂಕಷ್ಟಕ್ಕೆ ಸಿಲುಕಿರುವ ಈ ಘಟನೆ ನಂಬಿಕೆ ಮತ್ತು ಸುರಕ್ಷತೆಯ ನಡುವಿನ ಚರ್ಚೆಯನ್ನು ಹುಟ್ಟುಹಾಕಿದೆ. ಧಾರ್ಮಿಕ ನಂಬಿಕೆಗಳನ್ನು ಗೌರವಿಸುವುದರ ಜತೆಗೆ ಯಾವುದೇ ಆಚರಣೆಯನ್ನು ಅನುಸರಿಸುವಾಗ ವೈಯಕ್ತಿಕ ಸುರಕ್ಷತೆಯನ್ನೂ ಗಮನಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+