ನಿಮ್ಮ ಕಾರು ಅಥವಾ ಬೈಕ್ ನಿಮ್ಮ ಅದೃಷ್ಟವನ್ನು ಹೆಚ್ಚಿಸಬಹುದೇ? ನಿಮ್ಮ ಜನ್ಮರಾಶಿ ಪ್ರಕಾರ ತಿಳಿಯಿರಿ
ಕೆಲವರಿಗೆ ಕೆಂಪು ಕಾರು ಕಂಡರೆ ಆಗೋಲ್ಲ. ಕೆಲವರು ಕಪ್ಪು ಬೈಕ್ ಬಳಸಿದರೆ ತನಗೆ ಖಂಡಿತ ಆಕ್ಸಿಡೆಂಟ್ ಆಗುತ್ತೆ ಅಂದುಕೊಂಡಿರುತ್ತಾರೆ. ಇನ್ನು ಕೆಲವರಿಗೆ ನೀಲಿ ವಾಹನ ತನಗೆ ಅದೃಷ್ಟ ತರುತ್ತೆ ಅಂತ ಭಾವಿಸುತ್ತಾರೆ. ಹೊಸ ವಾಹನ ಖರೀದಿಸುವಾಗ ಬಣ್ಣ, ನಂಬರ್, ದಿನ, ಮುಹೂರ್ತದ ಜೊತೆಗೆ ತಮ್ಮ ಜನ್ಮರಾಶಿಗೆ ಯಾವ ವಾಹನ ಅಥವಾ ಯಾವ ಬಣ್ಣದ ವಾಹನ ಸೂಕ್ತ ಎಂಬುದನ್ನೂ ಅನೇಕರು ಪರಿಶೀಲಿಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಪ್ರತಿಯೊಂದು ರಾಶಿಗೂ ಒಂದು ಅಧಿಪತಿ ಗ್ರಹವಿದೆ. ಆ ಗ್ರಹದ ಪ್ರಭಾವಕ್ಕೆ ಹೊಂದುವ ಬಣ್ಣ ಮತ್ತು ವಾಹನವನ್ನು ಆಯ್ಕೆ ಮಾಡಿದರೆ ಉತ್ತಮ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ, ನಿಮ್ಮ ಜನ್ಮರಾಶಿಗೆ ಹೊಂದುವ ವಾಹನ ಯಾವುದು? ಎಂಥ ಕಲರ್ ಸೂಕ್ತ? ಇಲ್ಲಿದೆ ನೋಡಿ.
ಮೇಷ (Aries)
ಈ ರಾಶಿಯ ಅಧಿಪತಿ ಗ್ರಹ ಮಂಗಳ. ಇವರಿಗೆ ಶುಭ ವಾಹನ ಯಾವುದಾದರೂ ಸ್ಪೋರ್ಟ್ಸ್ ಬೈಕ್, ಎಸ್‌ಯುವಿ ಅಥವಾ ಶಕ್ತಿಶಾಲಿ ಎಂಜಿನ್ ಇರುವ ಕಾರು. ಶುಭಕರ ಬಣ್ಣ ಕೆಂಪು, ಮರೂನ್ ಅಥವಾ ಕಿತ್ತಳೆ. ಇವುಗಳಿಂದ ಧೈರ್ಯ, ಆತ್ಮವಿಶ್ವಾಸ ಹಾಗೂ ವೇಗದ ನಿರ್ಧಾರಗಳಲ್ಲಿ ಅನುಕೂಲ ಸಿಗುತ್ತದೆ. ಮಂದ ಬಣ್ಣದ ವಾಹನಗಳು, ಪದೇ ಪದೇ ಬ್ರೇಕ್‌ಡೌನ್ ಆಗುವ ಹಳೆಯ ವಾಹನಗಳನ್ನು ತಪ್ಪಿಸುವುದು ಉತ್ತಮ.

ವೃಷಭ (Taurus)
ರಾಶಿ ಅಧಿಪತಿ ಶುಕ್ರ. ಶುಭ ವಾಹನ ಸೆಡಾನ್, ಲಕ್ಸುರಿ ಕಾರು ಅಥವಾ ಆರಾಮದಾಯಕ ವಾಹನ. ಶುಭ ಬಣ್ಣ ಬಿಳಿ, ಕ್ರೀಮ್ ಅಥವಾ ಸಿಲ್ವರ್. ಇದರಿಂದ ಫಲ ಸಂಪತ್ತು, ನೆಮ್ಮದಿ ಮತ್ತು ಕುಟುಂಬದೊಂದಿಗೆ ಸುಖಕರ ಪ್ರಯಾಣ. ತುಂಬಾ ಗಾಢ ಕೆಂಪು ಬಣ್ಣದ ವಾಹನ ತಪ್ಪಿಸುವುದು ಉತ್ತಮ. ಟೈರ್, ಬ್ರೇಕ್ ಮತ್ತು ಲೈಟ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ.
ಮಿಥುನ (Gemini)
ಇದರ ಅಧಿಪತಿ ಬುಧ. ಇವರಿಗೆ ಶುಭ ವಾಹನ ಹ್ಯಾಚ್‌ಬ್ಯಾಕ್ ಕಾರು, ಎಲೆಕ್ಟ್ರಿಕ್ ವಾಹನ ಅಥವಾ ಕಾಂಪ್ಯಾಕ್ಟ್ ಕಾರು. ಅನುಕೂಲಕರ ಬಣ್ಣ ಹಸಿರು ಅಥವಾ ಲೈಟ್ ಬ್ಲೂ. ಶುಭಕರ ವಾಹನದಿಂದ ವ್ಯಾಪಾರ, ಸಂವಹನ ಮತ್ತು ಪ್ರಯಾಣದ ಅವಕಾಶಗಳು ಹೆಚ್ಚುತ್ತವೆ. ಅನಗತ್ಯ ಕಸ ಅಥವಾ ಒಡೆದ ವಸ್ತುಗಳನ್ನು ವಾಹನದಲ್ಲಿ ಇಡಬೇಡಿ.
ಕಟಕ (Cancer)
ರಾಶಿ ಅಧಿಪತಿ ಚಂದ್ರ. ಶುಭ ವಾಹನ ಇಡೀ ಕುಟುಂಬ ಬಳಸುವಂಥ ಕಾರು ಅಥವಾ ಎಂಪಿವಿ. ಶುಭ ಬಣ್ಣ ಬಿಳಿ, ಮುತ್ತಿನ ಬಣ್ಣ, ಆಕಾಶ ನೀಲಿ. ಇದರಿಂದ
ಕುಟುಂಬದ ಸುರಕ್ಷತೆ ಹಾಗೂ ಮಾನಸಿಕ ನೆಮ್ಮದಿ ಕಾಪಾಡಿಕೊಳ್ಲಬಹುದು. ತುಂಬಾ ವೇಗವಾಗಿ ಓಡಿಸದಂತೆ ಎಚ್ಚರ ಬೇಕು. ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡಿಸಿ.
ಸಿಂಹ (Leo)
ಇದರ ಅಧಿಪತಿ ಸೂರ್ಯ. ರಾಶಿಗೆ ಶುಭ ವಾಹನ ಪ್ರೀಮಿಯಂ ಎಸ್‌ಯುವಿ, ಐಷಾರಾಮಿ ಕಾರು, ಬುಲೆಟ್ ಬೈಕು. ಗೋಲ್ಡ್, ಕೇಸರಿ ಅಥವಾ ಕಂಚಿನ ಬಣ್ಣಗಳು ಶುಭ. ಇದರಿಂದ ಗೌರವ, ನಾಯಕತ್ವ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುವುದು. ತುಂಬಾ ಮಂದ ಬಣ್ಣಗಳನ್ನು ತಪ್ಪಿಸಬೇಕು.
ಕನ್ಯಾ (Virgo)
ರಾಶಿ ಅಧಿಪತಿ ಬುಧ. ಇವರಿಗೆ ಶುಭಕರ ವಾಹನಗಳು ಇಂಧನ ಉಳಿತಾಯ ಮಾಡುವ ಕಾರು, ಕಾಂಪ್ಯಾಕ್ಟ್ ಎಸ್‌ಯುವಿ ಅಥವಾ ಹಳತಲ್ಲದ ಸ್ಕೂಟರ್. ಬಣ್ಣಗಳು ಹಸಿರು, ಬೂದು ಶುಭ. ಇದರಿಂದ ಕಡಿಮೆ ವೆಚ್ಚದಲ್ಲಿ ಉತ್ತಮ ನಿರ್ವಹಣೆ. ಮೇಂಟೇನೆನ್ಸ್ ತಪ್ಪಿಸಬಾರದು. ವಾಹನವನ್ನು ಯಾವಾಗಲೂ ಸ್ವಚ್ಛವಾಗಿಡಿ.
ತುಲಾ (Libra)
ರಾಶಿ ಅಧಿಪತಿ ಶುಕ್ರ. ಶುಭ ತರುವ ವಾಹನ ಸ್ಟೈಲಿಷ್ ಸೆಡಾನ್, ಲಕ್ಸುರಿ ಕಾರು. ಶುಭ ಬಣ್ಣ ಬಿಳಿ, ಗುಲಾಬಿ ಅಥವಾ ಸಿಲ್ವರ್. ಇದರಿಂದ ಸಾಮಾಜಿಕ ಗೌರವ ಹಾಗೂ ಸಂಬಂಧಗಳಲ್ಲಿ ಸೌಹಾರ್ದ ಸಾಧ್ಯ. ತುಂಬಾ ದೂರ ರೈಡ್ ಮಡುವಾಗ ಎಷ್ಟು ಎಚ್ಚರ ಇದ್ದರೂ ಸಾಲದು. ಹಸಿರು ಬಣ್ಣ ತಪ್ಪಿಸಿ.
ವೃಶ್ಚಿಕ (Scorpio)
ಇದರ ಅಧಿಪತಿ ಮಂಗಳ. ಶುಭ ವಾಹನಗಳು ಆಫ್‌ರೋಡ್ ಎಸ್‌ಯುವಿ ಅಥವಾ ಶಕ್ತಿಶಾಲಿ ಬೈಕ್. ಶುಭ ಬಣ್ಣಗಳು ಕಪ್ಪು ಅಥವಾ ಗಾಢ ಕೆಂಪು. ಇದರಿಂದ ಧೈರ್ಯ ಮತ್ತು ಸಂಕಷ್ಟಗಳನ್ನು ಎದುರಿಸುವ ಶಕ್ತಿ ಬರುತ್ತದೆ. ನೀಲಿ ಬಣ್ಣನ್ನು ತಪ್ಪಿಸಿ. ವಾಹನದಲ್ಲಿ ಸಣ್ಣ ದೋಷ ಇದ್ದರೂ ಕೂಡಲೇ ರಿಪೇರಿ ಮಾಡಿಸಬೇಕು.
ಧನು (Sagittarius)
ರಾಶಿ ಅಧಿಪತಿ ಗುರು. ಶುಭ ವಾಹನ ದೂರ ಪ್ರಯಾಣಕ್ಕೆ ಸೂಕ್ತ ಎಸ್‌ಯುವಿ ಅಥವಾ ಕ್ರಾಸ್‌ಓವರ್. ಶುಭ ಬಣ್ಣ ಹಳದಿ ಅಥವಾ ಕ್ರೀಮ್ ಅಥವಾ ಬಿಳಿ. ಪ್ರಯಾಣದಲ್ಲಿ ಯಶಸ್ಸು ಹಾಗೂ ಹೊಸ ಅವಕಾಶಗಳು ಲಭ್ಯ. ವಾಹನವನ್ನೇ ವ್ಯವಹಾರ ಮಾಡಿಕೊಳ್ಳುವುದು ಶುಭಕರ. ವಾಹನದಲ್ಲಿ ಆಹಾರ ಕೈಗೆ ಹತ್ತಬಹುದು. ಕಪ್ಪು ಬಣ್ಣ ಬೇಡ.
ಮಕರ (Capricorn)
ಇದರ ಅಧಿಪತಿ ಶನಿ. ಶುಭ ವಾಹನ ಗಟ್ಟಿಮುಟ್ಟಾದ ಕಾರು ಅಥವಾ ಡೀಸೆಲ್ ಎಸ್‌ಯುವಿ. ಶುಭವಾದ ಬಣ್ಣ ಕಪ್ಪು, ಬೂದು ಅಥವಾ ನೇವಿ ಬ್ಲೂ. ಇದರಿಂದ ಸ್ಥಿರತೆ ಮತ್ತು ದೀರ್ಘಕಾಲದ ಲಾಭವಿದೆ. ಕೆಂಪು ಬಣ್ಣ ಶುಭವಲ್ಲ. ವಾಹನ ಕಳವಾಗುವ ಸಾಧ್ಯತೆ ಇದೆ. ಎಚ್ಚರದಿಂದ ಕಾಪಾಡಿಕೊಳ್ಳಿ.
ಕುಂಭ (Aquarius)
ಅಧಿಪತಿ ಶನಿ. ಶುಭ ವಾಹನ ಎಲೆಕ್ಟ್ರಿಕ್ ಕಾರು ಅಥವಾ ತಂತ್ರಜ್ಞಾನಾಧಾರಿತ ವಾಹನ. ಶುಭ ಬಣ್ಣಗಳು ನೀಲಿ ಮತ್ತು ಕಪ್ಪು. ಬಿಳಿ ಮಧ್ಯಮ. ಹಸಿರು ಅಧಮ. ಶುಭಕರ ವಾಹನಗಳಿಂದ ಹೊಸ ಆಲೋಚನೆಗಳು ಮತ್ತು ಪ್ರಗತಿ ಆಗುತ್ತದೆ. ನಿಮ್ಮ ವಾಹನವನ್ನು ಅನ್ಯರ ಕೈಯಲ್ಲಿ ಯಾವತ್ತೂ ಕೊಡಬಾರದು.
ಮೀನ (Pisces)
ಅಧಿಪತಿ ಗುರು. ಶುಭ ವಾಹನಗಳು ಆರಾಮದಾಯಕ ಕುಟುಂಬ ಕಾರು, ಹೈಬ್ರಿಡ್ ವಾಹನ ಅಥವಾ ಇ ಬೈಕ್. ಹಳದಿ, ಬಿಳಿ, ಸಮುದ್ರ ಹಸಿರು ಬಣ್ಣಗಳು ಉತ್ತಮ .ಇದರಿಂದ ಶಾಂತಿ, ಆರ್ಥಿಕ ಸ್ಥಿರತೆ ಮತ್ತು ಶುಭಯೋಗ ಲಭ್ಯ. ಕೆಂಪು ಬಣ್ಣ ಬೇಡ. ಸೆಕೆಂಡ್ ಹ್ಯಾಂಡ್ ಗಾಡಿ ಉತ್ತಮವಲ್ಲ. ತುಂಬ ಹಳೆಯ ಗಾಡಿ ಓಡಿಸಬೇಡಿ.
ವಿಶೇಷ ಸೂಚನೆ: ಹೊಸ ವಾಹನ ಖರೀದಿಸಿದ ನಂತರ ಕುಟುಂಬದ ಸಂಪ್ರದಾಯದಂತೆ ಪೂಜೆ ಮಾಡಿಸುವವರೂ ಇದ್ದಾರೆ. ಸುರಕ್ಷಿತ ಚಾಲನೆಗೆ ಆದ್ಯತೆ ನೀಡಿ ಮತ್ತು ಟ್ರಾಫಿಕ್ ನಿಯಮಗಳನ್ನು ಪಾಲಿಸಿ. ರಾಶಿಗೆ ಹೊಂದುವ ಬಣ್ಣದ ವಾಹನವನ್ನು ಆಯ್ಕೆ ಮಾಡಿದರೆ ಮಾನಸಿಕ ನೆಮ್ಮದಿ, ಪ್ರಯಾಣದಲ್ಲಿ ಅನುಕೂಲ ಮತ್ತು ಉತ್ತಮ ಅನುಭವ ಸಿಗುತ್ತದೆ. ವಾಹನದ ಆಯ್ಕೆಯಲ್ಲಿ ಸುರಕ್ಷತಾ ಫೀಚರ್‌ಗಳು, ನಿರ್ಮಾಣ ಗುಣಮಟ್ಟ, ನಿರ್ವಹಣಾ ವೆಚ್ಚ, ಇಂಧನ ದಕ್ಷತೆ ಮತ್ತು ನಿಮ್ಮ ಅಗತ್ಯಗಳು ಪ್ರಮುಖ ಮಾನದಂಡಗಳಾಗಿರಬೇಕು. ಅದೃಷ್ಟಕ್ಕಿಂತ ಎಚ್ಚರಿಕೆಯ ಚಾಲನೆ, ಸಮಯಕ್ಕೆ ಸರಿಯಾದ ನಿರ್ವಹಣೆ ಮತ್ತು ಟ್ರಾಫಿಕ್ ನಿಯಮಗಳ ಪಾಲನೆಯೇ ಸುರಕ್ಷಿತ ಹಾಗೂ ಸುಖಕರ ಪ್ರಯಾಣದ ನಿಜವಾದ ರಹಸ್ಯವಾಗಿದೆ.
(ಬರಹ: ಭವಾನಿ ಭಟ್)












Click it and Unblock the Notifications