• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತಾರ್‌ನಲ್ಲಿ ತಮಿಳುನಾಡಿನ ನಾಮಕ್ಕಲ್‌ ಮೊಟ್ಟೆಗಳಿಗೆ ಹೆಚ್ಚಿದ ಬೇಡಿಕೆ

|
Google Oneindia Kannada News

ಚೆನ್ನೈ, ನವೆಂಬರ್‌ 22: ನವೆಂಬರ್ 20ರ ಭಾನುವಾರದಂದು ಫಿಫಾ ವಿಶ್ವಕಪ್ 2022 ಪ್ರಾರಂಭವಾಗುತ್ತಿದ್ದಂತೆ ಪ್ರಪಂಚದಾದ್ಯಂತದ ಫುಟ್‌ಬಾಲ್ ಅಭಿಮಾನಿಗಳು ಕತಾರ್‌ನತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ. ಆದರೆ ಕೌತುಕವೆಂಬಂತೆ ಇಲ್ಲಿಗೆ ತಮಿಳುನಾಡಿನ ನಾಮಕ್ಕಲ್‌ ಜಿಲ್ಲೆಯಿಂದ ಕೋಟ್ಯಂತರ ರೂಪಾಯಿ ಮೊಟ್ಟೆಗಳನ್ನು ಖರೀದಿಸಲಾಗುತ್ತಿದೆ.

ಫಿಫಾ ವಿಶ್ವಕಪ್‌ನಿಂದಾಗಿ ಬೇಡಿಕೆಯ ಹೆಚ್ಚಳ ಮತ್ತು ಟರ್ಕಿಯ ಮೊಟ್ಟೆಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಿಂದಾಗಿ ನಾಮಕ್ಕಲ್ ಜಿಲ್ಲೆಯಿಂದ ಕತಾರ್‌ಗೆ ಮೊಟ್ಟೆಗಳನ್ನು ರಫ್ತು ಮಾಡಲಾಗುತ್ತಿದ್ದು, ಈ ಮೊಟ್ಟೆಗಳ ಸಂಖ್ಯೆಯನ್ನು 1.50 ಕೋಟಿಯಿಂದ 2.5 ಕೋಟಿಗೆ ಹೆಚ್ಚಿಸಲಾಗಿದೆ.

ಫಿಫಾ ವಿಶ್ವಕಪ್‌ ವೀಕ್ಷಣೆಗಾಗಿ ಕೊಚ್ಚಿಯಲ್ಲಿ ಮನೆ ಖರೀದಿಸಿದ ಗ್ರಾಮಸ್ಥರು!ಫಿಫಾ ವಿಶ್ವಕಪ್‌ ವೀಕ್ಷಣೆಗಾಗಿ ಕೊಚ್ಚಿಯಲ್ಲಿ ಮನೆ ಖರೀದಿಸಿದ ಗ್ರಾಮಸ್ಥರು!

ನಾಮಕ್ಕಲ್ ಜಿಲ್ಲೆಯಲ್ಲಿ ಸರಿಸುಮಾರು 1,100 ಕೋಳಿ ಸಾಕಣೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಫಾರ್ಮ್‌ಗಳು ದಿನಕ್ಕೆ 5.5 ಕೋಟಿಯಿಂದ 6 ಕೋಟಿ ಮೊಟ್ಟೆಗಳನ್ನು ಉತ್ಪಾದಿಸುತ್ತವೆ. ಇವುಗಳಲ್ಲಿ 1.50 ರಿಂದ 1.75 ಕೋಟಿ ಮೊಟ್ಟೆಗಳನ್ನು ಕೇರಳಕ್ಕೆ, 45 ಲಕ್ಷ ಮೊಟ್ಟೆಗಳನ್ನು ಮಧ್ಯಾಹ್ನದ ಊಟಕ್ಕೆ, 40 ಲಕ್ಷ ಮೊಟ್ಟೆಗಳನ್ನು ಬೆಂಗಳೂರಿಗೆ ಮತ್ತು ಉಳಿದವುಗಳನ್ನು ರಾಜ್ಯದ ವಿವಿಧ ಭಾಗಗಳಿಗೆ ಮತ್ತು ವಿವಿಧ ದೇಶಗಳಿಗೆ ಕಳುಹಿಸಲಾಗುತ್ತದೆ.

ಈ ಹಿಂದೆ ಕತಾರ್‌ಗೆ 1.5 ಕೋಟಿ ಮೊಟ್ಟೆ ರಫ್ತು ಆಗಿತ್ತು. ಇದೀಗ 2 ಕೋಟಿಯಿಂದ 2.5 ಕೋಟಿ ಮೊಟ್ಟೆಗಳಿಗೆ ಬೇಡಿಕೆ ಏರಿಕೆಯಾಗಿದೆ. ಈ ಬೇಡಿಕೆಯಿಂದಾಗಿ ಸೋಮವಾರ ನಾಮಕ್ಕಲ್‌ನಲ್ಲಿ ಒಂದು ಮೊಟ್ಟೆಯ ಬೆಲೆ ₹5.35 ಕ್ಕೆ ನಿಗದಿ ಮಾಡಲಾಗಿದ್ದು, ಶೀಘ್ರದಲ್ಲೇ ಪ್ರತಿ ಮೊಟ್ಟೆಗೆ 6 ರೂಪಾಯಿ ತಲುಪುವ ನಿರೀಕ್ಷೆಯಿದೆ. ಇದರಿಂದಾಗಿ ಮೊಟ್ಟೆಯ ಚಿಲ್ಲರೆ ದರ ಶೀಘ್ರದಲ್ಲೇ 6 ರೂಪಾಯಿ ಮೀರುವ ಸಾಧ್ಯತೆ ಇದೆ.

ತಮಿಳುನಾಡು ಕೋಳಿ ಸಾಕಾಣಿಕೆದಾರರ ಸಂಘದ (ಟಿಎನ್‌ಪಿಎಫ್‌ಎ) ಅಧ್ಯಕ್ಷ ಕೆ. ಸಿಂಗರಾಜ್ ಮಾತನಾಡಿ, ಈ ವರ್ಷ ನಾಮಕ್ಕಲ್ ಜಿಲ್ಲೆಯಲ್ಲೂ ಮೊಟ್ಟೆ ಉತ್ಪಾದನೆ ಹೆಚ್ಚಾಗಿದೆ. ಕತಾರ್‌ಗೆ ಟರ್ಕಿ ಪ್ರಮುಖ ಮೊಟ್ಟೆ ಪೂರೈಕೆದಾರ ದೇಶವಾಗಿದೆ. ಆದರೆ ಅಲ್ಲಿನ ಉತ್ಪಾದನಾ ವೆಚ್ಚ ಹೆಚ್ಚಳದಿಂದ ಟರ್ಕಿ ಮೊಟ್ಟೆಗಳ ಬೆಲೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

FIFA World Cup 2022: demand Increased for Tamil Nadus Namakkal eggs in Qatar

ನಾಮಕ್ಕಲ್‌ನಿಂದ ಒಂದು ಮೊಟ್ಟೆ ಬಾಕ್ಸ್‌ಗೆ (360 ಮೊಟ್ಟೆಗಳು ಇರುವ) ಕತಾರ್‌ಗೆ 29 ರಿಂದ 30 ಡಾಲರ್‌ಗಳಿಗೆ ರಫ್ತು ಮಾಡಲಾಗುತ್ತಿತ್ತು. ಮತ್ತೊಂದೆಡೆ, ಟರ್ಕಿಯ ಮೊಟ್ಟೆಗಳ ಬಾಕ್ಸ್ 36 ಡಾಲರ್‌ ವೆಚ್ಚವಾಗುತ್ತದೆ. ಆದ್ದರಿಂದ ನಾಮಕ್ಕಲ್ ಮೊಟ್ಟೆಗಳನ್ನು ಖರೀದಿಸುವುದರಿಂದ ಆರು ಡಾಲರ್ ಉಳಿತಾಯವಾಗುತ್ತದೆ. ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ಆರಂಭವಾಗುತ್ತಿದ್ದಂತೆ ಅಲ್ಲಿಯೂ ಮೊಟ್ಟೆಗೆ ಬೇಡಿಕೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.

English summary
As the FIFA World Cup 2022 kicks off on Sunday, November 20, football fans around the world have their sights set on Qatar. But curiously, eggs worth crores of rupees are being bought here from Namakkal district of Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X