ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್: ಮೊದಲ ಪಂದ್ಯದಲ್ಲೆ ಸೋಲಿನ ಆಘಾತ ನಡುವೆ ಮೆಸ್ಸಿ ದಾಖಲೆ

|
Google Oneindia Kannada News

ಫಿಫಾ ವಿಶ್ವಕಪ್ 2022ರ ಮೊದಲ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡಕ್ಕೆ ಆಘಾತ ಎದುರಾಗಿದೆ. ಫುಟ್ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿ ನೇತೃತ್ವದ ತಂಡವನ್ನು ಸೌದಿ ಅರೇಬಿಯಾ ಸೋಲಿಸಿದೆ. ಈ ಮೂಲಕ ವಿಶ್ವಕಪ್ 2022ರ ಮೊದಲ ದೊಡ್ಡ ಆಘಾತವನ್ನು ಅಭಿಮಾನಿಗಳು ಕಂಡಿದ್ದಾರೆ. ದೈತ್ಯ ಸಂಹಾರಿಯಾಗಿ ಸೌದಿ ಅರೇಬಿಯಾ ಹೊರ ಹೊಮ್ಮಿದೆ.

ಸೌದಿ ಅರೇಬಿಯಾ ವಿರುದ್ಧದ ಪಂದ್ಯದಲ್ಲಿ ಹುರುಪಿನಿಂದಲೇ ಕಣಕ್ಕಿಳಿದ ಅರ್ಜೆಂಟೀನಾ ತಂಡಕ್ಕೆ ಪಂದ್ಯದ ಮೊದಲ 10 ನಿಮಿಷದಲ್ಲೇ ಮೆಸ್ಸಿ ಮುನ್ನಡೆ ಗಳಿಸಿಕೊಟ್ಟರು. ಪೆನಾಲ್ಟಿ ಲಾಭ ಪಡೆದ ಮೆಸ್ಸಿ, ಸುಲಭವಾಗಿ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಹೊಸ ದಾಖಲೆ ಬರೆದರು.

ಅರ್ಜೆಂಟೀನಾ ಪರ ಆಡಿ ನಾಲ್ಕು ವಿಶ್ವಕಪ್ ಟೂರ್ನಮೆಂಟ್ ಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಸಾಧನೆಯನ್ನು ಮೆಸ್ಸಿ ತಮ್ಮ ಹೆಸರಿಗೆ ಬರೆದುಕೊಂಡರು. 2006, 2014, 2018 ಹಾಗೂ 2022ರಲ್ಲಿ ಮೆಸ್ಸಿ ಗೋಲು ದಾಖಲಿಸಿದ್ದಾರೆ. ಇದಲ್ಲದೆ ಪೋರ್ಚುಗಲ್ ದಿಗ್ಗಜ ಕ್ರಿಶ್ಚಿಯಾನೋ ರೊನಾಲ್ಡೊ ಅವರ ವಿಶ್ವಕಪ್ ದಾಖಲೆ ಸಮಕ್ಕೆ ಮೆಸ್ಸಿ ನಿಂತಿದ್ದಾರೆ. ವಿಶ್ವಕಪ್ ಪಂದ್ಯಾವಳಿಗಳಲ್ಲಿ ರೊನಾಲ್ಡೋ ಏಳುಗೋಲು ಗಳಿಸಿದ್ದು, ಮೆಸ್ಸಿ ಈ ದಾಖಲೆ ಸಮಕ್ಕೆ ಬಂದಿದ್ದಾರೆ.

FIFA World Cup 2022: ARG vs KSA: Lionel Messi becomes first Argentine to score at 4 World Cups

ಗೋಲು ಗಳಿಸಿದ ನಂತರವೂ ದಾಳಿ ಮುಂದುವರೆಸಿದ ಅರ್ಜೆಂಟೀನಾ ತಂಡ ನಾಲ್ಕು ಬಾರಿ ಗೋಲು ಗಳಿಸುವ ಪ್ರಯತ್ನದಲ್ಲಿ ಎಡವಿತು. ಮಾರ್ಟಿನೆಜ್ ಪ್ರಯತ್ನಕ್ಕೆ ಆಫ್ ಸೈಡ್ ಎಂದು ರೆಫ್ರಿ ವಿಷಲ್ ಹೊಡೆದರು.

ಆದರೆ, ಸಿ ಗುಂಪಿನ ಮೊದಲ ಪಂದ್ಯದ ದ್ವಿತೀಯಾರ್ಧದಲ್ಲಿ ಅರ್ಜೆಂಟೀನಾದ ರಕ್ಷಣಾ ಪಡೆ ವೈಫಲ್ಯದ ಲಾಭವನ್ನು ಸೌದಿ ಅರೇಬಿಯಾ ಪಡೆದುಕೊಂಡಿತು. ಸಲೆಹ್ ಅಲ್ಶೆಹ್ರಿ ಹಾಗೂ ಸಲೇಂ ಅಲ್ದಾವ್ಸಾರಿ ತಲಾ ಒಂದು ಗೋಲು ಗಳಿಸಿ, ಸೌದಿಗೆ ಅರ್ಹ ಜಯ ತಂದಿತ್ತರು. ಈ ಮೂಲಕ ಮೂರು ಅಂಕಗಳಿಸಿದರು.

FIFA World Cup 2022: ARG vs KSA: Lionel Messi becomes first Argentine to score at 4 World Cups

"ನಾನು ವಿಶ್ವಕಪ್‌ಗಾಗಿ ದಿನಗಳನ್ನು ಎಣಿಸುತ್ತಿದ್ದೇನೆ. ನಿಜ ಹೇಳಬೇಕೆಂದರೆ ನಾವು ವಿಶ್ವಕಪ್‌ ಸನಿಹವಿದ್ದೇವೆ, ಮುಂದೆ ಏನಾಗಲಿದೆ ಎನ್ನುವ ಕೊಂಚ ಆತಂಕವಿದೆ. ಏಕೆಂದರೆ ಇದು ನನ್ನ ಕೊನೆಯ ವಿಶ್ವಕಪ್‌, ಹಾಗಾಗಿ ಅದು ಹೇಗೆ ಹೋಗಲಿದೆ? ಎನ್ನುವ ಕುತೂಹಲವಿದೆ. ಹಾಗಾಗಿ ವಿಶ್ವಕಪ್‌ ಬರುವವರೆಗೆ ನನಗೆ ಕಾಯಲು ಸಾಧ್ಯವಾಗುತ್ತಿಲ್ಲ. ಆದರೆ ಅದು ಚೆನ್ನಾಗಿ ಅವಿಸ್ಮರಣೀಯವಾಗಿರಬೇಕೆಂಬ ಹತಾಶ ಭಾವನೆಯಲ್ಲಿದ್ದೇನೆ " ಎಂದು ವಿಶ್ವಕಪ್ ಆರಂಭಕ್ಕೂ ಮುನ್ನ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಬದುಕು ಹಾಗೂ ವಿಶ್ವಕಪ್ ಬಗ್ಗೆ ಮೆಸ್ಸಿ ಹೇಳಿಕೊಂಡಿದ್ದರು.

FIFA World Cup 2022: ARG vs KSA: Lionel Messi becomes first Argentine to score at 4 World Cups

2014ರ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡ ಅದ್ಭುತ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಿತ್ತಾದರೂ ಅಂತಿಮ ಹಣಾಹಣಿಯಲ್ಲಿ ಜರ್ಮನಿಯ ವಿರುದ್ಧ ಹೀನಾಯ ಸೋಲು ಕಂಡು ನಿರಾಶೆ ಅನುಭವಿಸಿತ್ತು. ಈಗ 2022ರಲ್ಲಿ ಆರಂಭಿಕ ಆಘಾತ ಅನುಭವಿಸಿದೆ.

English summary
World Cup 2022: Lionel Messi stepped up when his side needed him the most, scoring the opening goal for Argentina as they square off against Saudi Arabia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X