Actor Doddanna: ನಾನು ಸತ್ತಿಲ್ಲ, ಬದುಕಿದ್ದೇನೆ ಸುಮ್ನೆ ಪುಂಗ್ಬೇಡಿ: ನಟ ದೊಡ್ಡಣ ಮನವಿ

Actor Doddanna: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ತಮ್ಮ ಸಾವಿನ ಸುಳ್ಳು ಸುದ್ದಿ ಕುರಿತು ಸ್ಯಾಂಡಲ್‌ವುಡ್‌ ಖ್ಯಾತ ಹಿರಿಯ ನಟ ದೊಡ್ಡಣ್ಣ ಅವರೇ ವಿಡಿಯೋ ಮೂಲಕ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಭಾವಪೂರ್ಣ ಶ್ರದ್ಧಾಂಜಲಿಯ ಪೋಸ್ಟರ್ ಮತ್ತು ಪೋಸ್ಟ್‌ಗಳು ಫೇಸ್‌ಬುಕ್ ಸೇರಿದಂತೆ ಹಲವು ಕಡೆ ಭಾರಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರು ತಾವು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ನೆಮ್ಮದಿಯಿಂದ ಇರುವುದಾಗಿ ತಮ್ಮ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ಖಚಿತಪಡಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಆರೋಗ್ಯದ ಕುರಿತು ಹರಡಿದ್ದ ತಪ್ಪು ಮಾಹಿತಿ ಮತ್ತು ವದಂತಿಗಳಿಗೆ ತಾವೇ ಸ್ವತಃ ವಿಡಿಯೋದಲ್ಲಿ ಮಾತನಾಡುವ ಮೂಲಕ ತೆರೆ ಎಳೆದಿದ್ದಾರೆ.

Actor Doddanna Breaks Silence on Death Rumours Confirms He Is Healthy and Safe Know details

ನಾನು ಸುರಕ್ಷಿತ, ಆರೋಗ್ಯವಾಗಿದ್ದೇನೆ: ದೊಡ್ಡಣ್ಣ

ಈ ವಿಡಿಯೋದಲ್ಲಿ ತಮ್ಮ ಪತ್ನಿಯೊಂದಿಗೆ ಕ್ಯಾಮೆರಾ ಮುಂದೆ ಬಂದಿರುವ ದೊಡ್ಡಣ್ಣ ಅವರು ಅತ್ಯಂತ ಉತ್ಸಾಹದಿಂದಲೇ ಮಾತನಾಡಿದ್ದಾರೆ. ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಮಾತು ಆರಂಭಿಸಿದ ಅವರು, 'ಅನ್ನದಾತರು, ಆಶ್ರಯದಾತರು ಆದ ಕನ್ನಡ ನಾಡಿನ ಎಲ್ಲ ನನ್ನ ತಂದೆ-ತಾಯಿಗಳಿಗೆ ನಿಮ್ಮ ದೊಡ್ಡಣ್ಣನ ಭಕ್ತಿಪೂರ್ವಕವಾದ ನಮಸ್ಕಾರಗಳು," ಎಂದು ಹೇಳುತ್ತಾ ಸ್ಪಷ್ಟನೆ ನೀಡಿದ್ದಾರೆ

ತಮ್ಮ ಸಾವಿನ ಸುಳ್ಳು ವದಂತಿಗಳ ಬಗ್ಗೆ ಮಾತನಾಡಿದ ಅವರು, 'ನಿಮಗೆ ಒಂದು ವಿಷಯವನ್ನು ನಾನು ತಿಳಿಸಲೇಬೇಕು. ಇವತ್ತು ಬೆಳ್ಳಂಬೆಳಗ್ಗೆ ನಾನು ಎದ್ದು ಹೇಳುವುದಕ್ಕಿಂತ ಮುಂಚೆಯೇ ಯಾರೋ ಕೆಲವು ಅನಾಮಧೇಯರು ನಾನು ನಿಧನನಾಗಿದ್ದೇನೆ ಎನ್ನುವ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದು ಶುದ್ಧ ಸುಳ್ಳು,' ಎಂದು ಹೇಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಕಂಗಾಲಾಗಿದ್ದ ಅಭಿಮಾನಿಗಳು ಮತ್ತು ಕುಟುಂಬಸ್ಥರು

ಬೆಳಗ್ಗೆಯಿಂದಲೇ ಈ ಸುಳ್ಳು ಸುದ್ದಿ ವ್ಯಾಪಕವಾಗಿ ಹರಡಿದ್ದರಿಂದ ದೊಡ್ಡಣ್ಣ ಅವರ ಅಭಿಮಾನಿಗಳು, ಚಿತ್ರರಂಗದ ಆಪ್ತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಈ ಕುರಿತು ಮಾತನಾಡಿದ ದೊಡ್ಡಣ ಅವರು, 'ನಾನು ನೆಮ್ಮದಿಯಾಗಿದ್ದೇನೆ, ತುಂಬಾ ಚೆನ್ನಾಗಿದ್ದೇನೆ. ಆದರೆ ಬೆಳಗ್ಗೆಯಿಂದ ನನಗೆ ಮುಖ ತೊಳೆದುಕೊಳ್ಳುವುದಕ್ಕೂ ಬಿಡುತ್ತಿಲ್ಲ. ನನ್ನ ಪ್ರೀತಿಪಾತ್ರರು, ಅಭಿಮಾನಿಗಳು, ಬಂಧು-ಬಳಗದವರು, ನನ್ನ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಗಾಬರಿಯಿಂದ ಸತತವಾಗಿ ಫೋನ್ ಮಾಡುತ್ತಲೇ ಇದ್ದಾರೆ. ಈ ಆತಂಕವನ್ನು ನಿವಾರಿಸಲೆಂದೇ ನಾನು ಈ ವಿಡಿಯೋ ಮಾಡಿ ಸ್ಪಷ್ಟನೆ ನೀಡುತ್ತಿದ್ದೇನೆ,' ಎಂದು ವಿವರಿಸಿದ್ದಾರೆ.

ನೂರು ಕಾಲ ಬಾಳುವ ಆಶೀರ್ವಾದ

ತಮ್ಮ ಮೇಲಿರುವ ಸಾರ್ವಜನಿಕರ ಅಪಾರ ಪ್ರೀತಿಯನ್ನು ಸ್ಮರಿಸಿದ ಹಿರಿಯ ನಟ ದೊಡ್ಡಣ್ಣನವರು, 'ಎಲ್ಲಿಯವರೆಗೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರುತ್ತದೆಯೋ ಅಲ್ಲಿಯವರೆಗೆ ನಾನು ನೂರು ಕಾಲ ಚೆನ್ನಾಗಿರುತ್ತೇನೆ ಎನ್ನುವ ಸಂಪೂರ್ಣ ನಂಬಿಕೆ ನನಗಿದೆ. ನನ್ನ ಮೇಲೆ ಇಷ್ಟೊಂದು ಪ್ರೀತಿ ಮತ್ತು ವಿಶ್ವಾಸ ಇಟ್ಟಿರುವ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ವಂದನೆಗಳು,' ಎಂದು ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದರು ಮತ್ತು ಗಣ್ಯ ವ್ಯಕ್ತಿಗಳ ಕುರಿತು ಇಂತಹ ಆಘಾತಕಾರಿ ಸುಳ್ಳು ಸುದ್ದಿಗಳನ್ನು ಹರಡುವುದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗುತ್ತಿದೆ. ಇಂತಹ ಸುದ್ದಿಗಳನ್ನು ನಂಬುವ ಮುನ್ನ ಅಧಿಕೃತ ಮಾಧ್ಯಮಗಳು ಅಥವಾ ವ್ಯಕ್ತಿಗಳ ಹೇಳಿಕೆಗಳನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ.

ದೊಡ್ಡಣ್ಣ ಅವರ ಈ ವಿಡಿಯೋವನ್ನು ಮಾಡಿದ ಬಳಿಕ ಇಡೀ ಕನ್ನಡ ಚಿತ್ರರಂಗ ಹಾಗೂ ಅವರ ಕೋಟ್ಯಂತರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಹಿರಿಯ ನಟನಿಗೆ ಸುದೀರ್ಘ ಆಯುಷ್ಯ ಮತ್ತು ಉತ್ತಮ ಆರೋಗ್ಯ ಸಿಗಲಿ ಎಂದು ಸಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಾರೈಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+