40 ವರ್ಷದ ಬಳಿಕ ಮೊತ್ತೊಬ್ಬ ವೈಭವ್ ಸೂರ್ಯವಂಶಿ ಬರ್ತಾನೆ: ರಾಹುಲ್ ದ್ರಾವಿಡ್ ಹಿಂಗ್ ಹೇಳಿದ್ಯಾಕೆ?

Rahul Dravid: ಐಪಿಎಲ್‌ 2026ರಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ದಿಗ್ಗಜರ ಗಮನ ಸೆಳೆದ ವೈಭವ್ ಸೂರ್ಯವಂಶಿ ಅವರು ಇತ್ತೀಚೆಗಷ್ಟೇ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದರು. ಇದರ ಬೆನ್ನಲ್ಲೇ ಈ ಬಾಲಕನನ್ನ ಕ್ರಿಕೆಟ್‌ ದೇವರು ಅಂತಲೇ ಹೆಸರಾಗಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಕೆ ಮಾಡಲಾಗಿತ್ತು. ಇದೀಗ ಈ ಕುರಿತು ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರು ಅಚ್ಚರಿ ಹೇಳಿಕೆ ನಿಡಿ ಗಮನ ಸೆಳೆದಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ ಅವರು 15 ವರ್ಷದ ಅದ್ಭುತ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ವೈಭವ್ ಅವರ ಆಟದ ಶೈಲಿ ಮತ್ತು ಅವರ ವಿಶಿಷ್ಟ ಸಾಮರ್ಥ್ಯವನ್ನು ಶ್ಲಾಘಿಸಿರುವ ದ್ರಾವಿಡ್, ಅವರನ್ನು ಬೇರೆ ಯಾವುದೇ ಆಟಗಾರರೊಂದಿಗೆ ಸುಮ್ಮನೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಇನ್ನೂ ಹಲವು ಮಹತ್ವದ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

Rahul Dravid on Vaibhav Sooryavanshi Don t Compare Him to Sachin Tendulkar Let Him Be Himself

ರಾಹುಲ್ ದ್ರಾವಿಡ್ ಹೇಳಿದ್ದೇನು?

ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ದ್ರಾವಿಡ್ ಅವರು, 'ಯಾರೇ ಆಗಲಿ ವೈಭವ್ ಸೂರ್ಯವಂಶಿ ಅವರನ್ನು ಇತರ ಆಟಗಾರರೊಂದಿಗೆ ಹೋಲಿಕೆ ಮಾಡುವುದು ಸೂಕ್ತವಲ್ಲ. ವೈಭವ್ ಒಬ್ಬ ಅದ್ಭುತ ಆಟಗಾರ. ಅವರಲ್ಲಿರುವ ಪ್ರತಿಭೆ ಅಪರೂಪದ್ದು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು 15ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಸಚಿನ್ ನಂತರ ಇಷ್ಟು ಚಿಕ್ಕ ವಯಸ್ಸಿಗೆ ರಾಷ್ಟ್ರೀಯ ತಂಡದಲ್ಲಿ ಆಡುತ್ತಿರುವ ಮತ್ತೊಬ್ಬ ಆಟಗಾರ ಎಂದರೆ ಅದು ವೈಭವ್ ಸೂರ್ಯವಂಶಿ ಮಾತ್ರ,' ಎಂದು ದ್ರಾವಿಡ್ ಶ್ಲಾಘಿಸಿದರು.

'40 ವರ್ಷ ಆದ್ಮೇಲೆ ಮತ್ತೊಬ್ಬ ವೈಭವ್ ಬರ್ತಾನೆ'

ಮುಂದುವರಿದು ತಮಾಷೆಯಾಗಿ ಮಾತನಾಡಿದ ರಾಹುಲ್ ದ್ರಾವಿಡ್ ಅವರು, 'ಸಚಿನ್ ಬಂದು ಹೋದ 40 ವರ್ಷಗಳ ಬಳಿಕ ಈಗ ವೈಭವ್ ಅವರಂತಹ ಆಟಗಾರ ನಮಗೆ ಸಿಕ್ಕಿದ್ದಾರೆ. ಹೀಗಾಗಿ ಅವರನ್ನು ಯಾರೊಂದಿಗೂ ಹೋಲಿಕೆ ಮಾಡದೆ, ಒತ್ತಡ ಹೇರದೆ ಅವರ ಆಟವನ್ನು ಆಡಲು ಬಿಡಬೇಕು,' ಎಂದು ಹೇಳಿದ್ದಾರೆ. ಅಲ್ಲದೆ ಇದೇ ವೇಳೆ ಮತ್ತೆ 40 ವರ್ಷ ಆದ್ಮೇಲೆ ಮತ್ತೊಬ್ಬ ವೈಭವ್ ಬರ್ತಾನೆ,' ಎಂದು ನಗುತ್ತಾ ಹೇಳಿ ಗಮನ ಸೆಳೆದಿದ್ದಾರೆ.

'ನಮ್ಮ ಹುಡುಗರೂ ಚೆನ್ನಾಗಿ ಆಡ್ತಾರೆ, ಆದರೆ ವೈಭವ್ ಶೈಲಿಯೇ ಬೇರೆ'

ಕರ್ನಾಟಕದ ಸ್ಥಳೀಯ ಪ್ರತಿಭೆಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್, 'ನಮ್ಮ ಬೆಂಗಳೂರು ಹಾಗೂ ಕರ್ನಾಟಕದ ಇತರ ಭಾಗಗಳ ಹುಡುಗರೂ ಕೂಡ ಅದ್ಭುತವಾಗಿ ಕ್ರಿಕೆಟ್ ಆಡುತ್ತಾರೆ. ಅವರಿಗೂ ಉತ್ತಮ ಅವಕಾಶಗಳು ಸಿಗಬೇಕು ಮತ್ತು ಅವರು ಮುಂದೆ ಬರಬೇಕು. ಆದರೆ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿ ಮತ್ತು ಅವರ ಆಟದ ರೀತಿಯೇ ವಿಭಿನ್ನವಾಗಿದೆ. ಅವರು ಮೈದಾನದಲ್ಲಿ ತೋರುವ ಬ್ಯಾಟಿಂಗ್ ಕೌಶಲ್ಯ ನಿಜಕ್ಕೂ ವಿಶೇಷವಾದದ್ದು. ಅದನ್ನು ನಾವು ಮುಕ್ತವಾಗಿ ಒಪ್ಪಿಕೊಳ್ಳಲೇಬೇಕು," ಎಂದು ಮುಕ್ತ ಕಂಠದಿಂದ ಹೊಗಳಿದರು.

ಭವಿಷ್ಯದ ಭರವಸೆಯ ಆಟಗಾರ ವೈಭವ್

ವೈಭವ್ ಅವರಲ್ಲಿ ಕ್ರಿಕೆಟ್‌ನ ಸೂಕ್ಷ್ಮ ಜ್ಞಾನವಿದ್ದು, ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವ ಅದ್ಭುತ ಸಾಮರ್ಥ್ಯ ಹೊಂದಿದ್ದಾರೆ. ಅವರು ಇದೇ ರೀತಿ ತಮ್ಮ ಕಠಿಣ ಪರಿಶ್ರಮ ಮತ್ತು ಸ್ಥಿರ ಪ್ರದರ್ಶನವನ್ನು ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವುದಂತೂ ಖಚಿತ ಎಂಬರ್ಥದಲ್ಲಿ ರಾಹುಲ್ ದ್ರಾವಿಡ್‌ ಅವರು ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಅವರು ದೇಶಕ್ಕಾಗಿ ಅತಿ ಹೆಚ್ಚು ರನ್ ಗಳಿಸಿ ಭಾರತ ತಂಡಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದರು. ಬಿಹಾರ ಮೂಲದ ಎಡಗೈ ಬ್ಯಾಟರ್ ಆಗಿರುವ ವೈಭವ್ ಸೂರ್ಯವಂಶಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಪ್ರಥಮ ದರ್ಜೆ ಕ್ರಿಕೆಟ್ (ರಣಜಿ ಟ್ರೋಫಿ) ಹಾಗೂ ಭಾರತದ ಅಂಡರ್-19 ತಂಡದಲ್ಲಿ ಸ್ಥಾನ ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. ಇತ್ತೀಚಿನ ಐಪಿಎಲ್ ಹರಾಜಿನಲ್ಲಿ ಕೋಟಿ.. ರೂಪಾಯಿಗೆ ಹರಾಜಾಗಿದ್ದರು. ಆದರೆ ಈ ಮೌಲ್ಯಕ್ಕಿಂತ ಹೆಚ್ಚು ಪ್ರದರ್ಶನ ನೀಡಿ ಇಡೀ ವಿಶ್ವದ ಗಮನ ಸೆಳೆದಿದ್ದರು. ಒಟ್ಟಿನಲ್ಲಿ ಹೇಳುವುದಾದರೆ ರಾಹುಲ್ ದ್ರಾವಿಡ್ ಅವರ ಈ ಪ್ರೋತ್ಸಾಹದಾಯಕ ಮಾತುಗಳು ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+