Daily Horoscope: ಎರಡು ರಾಶಿಯವರಿಗೆ ಈ ದಿನ ಅದೃಷ್ಟ, ಉದ್ಯೋಗಸ್ಥರಿಗೆ ನೂತನ ಅವಕಾಶ, ಹೆಗಲೇರುವುದು ಹೊಸ ಜವಾಬ್ದಾರಿ

Horoscope June 27: ಶನಿವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶನಿವಾರ ರಾಹುಕಾಲವು ಸಾಮಾನ್ಯವಾಗಿ ಬೆಳಗ್ಗೆ 9:00 ರಿಂದ 10:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ (Aries):

ಇಂದು ಮೇಷ ರಾಶಿಯವರಿಗೆ ಅತ್ಯುತ್ತಮ ದಿನ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸ್ನೇಹಿತರ ಬೆಂಬಲದಿಂದ ಕೆಲಸ ಕಾರ್ಯಗಳು ಪೂರ್ಣವಾಗುವುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಬಹುದು.

Horoscope June 27

ವೃಷಭ ರಾಶಿ (taurus):

ಇಂದು ನಿಮಗೆ ಶುಭದಿನ. ಮನೆಯಲ್ಲಿ ಅತಿಥಿಗಳ ಆಗಮನದಿಂದ ಸಕಾರಾತ್ಮಕ ಚರ್ಚೆಗಳು ನಡೆಯಲಿವೆ. ಗೌರವ ಹೆಚ್ಚಾಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಬಾಗಿಲು ತಟ್ಟಲಿವೆ. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ.

ಮಿಥುನ ರಾಶಿ (Gemini):

ಇಂದು ಮಿಶ್ರ ಫಲ ಸಿಗಲಿದೆ. ಹೊಸ ಜನರಿಂದ ಸ್ವಲ್ಪ ಎಚ್ಚರಿಕೆ ಅಗತ್ಯ. ಯಾವುದೇ ಕೆಲಸಕ್ಕೂ ಮುನ್ನ ಹಿರಿಯರ ಸಲಹೆ ಪಡೆಯಿರಿ. ಕೃಷಿಕರಿಗೆ ಧನಲಾಭವಾಗಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ.

ಕರ್ಕ ರಾಶಿ (cancer):

ಇಂದು ನಿಮಗೆ ಅದೃಷ್ಟದ ದಿನ. ಪೋಷಕರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಲು ಹೊಸ ಯೋಜನೆ ಹಾಕಿಕೊಳ್ಳುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕಾದಿದೆ.

ಸಿಂಹ ರಾಶಿ (Leo):

ಇಂದು ಅದೃಷ್ಟ ನಿಮ್ಮದಾಗಿರಲಿದೆ. ವ್ಯಕ್ತಿತ್ವದಲ್ಲಿ ಸುಧಾರಣೆ ಕಂಡುಬರಲಿದೆ. ಮನೆಯಲ್ಲಿ ಅತಿಥಿಗಳ ಆಗಮನದಿಂದ ಸಂಭ್ರಮ ಮನೆ ಮಾಡಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉದ್ಯಮಿಗಳಿಗೆ ದೊಡ್ಡ ಧನಲಾಭದ ಯೋಗವಿದೆ.

ಕನ್ಯಾ ರಾಶಿ (Virgo):

ಇಂದು ವ್ಯವಹಾರದಲ್ಲಿ ಭರ್ಜರಿ ಲಾಭವಾಗುವುದು. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಮನೆಯಲ್ಲಿ ಹೊಸ ಅತಿಥಿಗಳ ಆಗಮನದಿಂದ ಸಂತೋಷದ ವಾತಾವರಣವಿರುತ್ತದೆ. ಭವಿಷ್ಯವನ್ನು ಉತ್ತಮಪಡಿಸಲು ಇಂದು ನೀವು ಮಹತ್ವದ ನಿರ್ಧಾರ ತೆಗೆದುಕೊಳ್ಳುವಿರಿ.

ತುಲಾ ರಾಶಿ (Libra):

ಇಂದು ನೆಮ್ಮದಿಯ ದಿನ. ಕೌಟುಂಬಿಕ ಜೀವನದಲ್ಲಿ ಉತ್ಸಾಹವಿರುತ್ತದೆ. ಕಂಪ್ಯೂಟರ್ ವ್ಯಾಪಾರಿಗಳಿಗೆ ದೊಡ್ಡ ಆರ್ಡರ್‌ಗಳು ದೊರೆಯುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಪ್ರಶಸ್ತಿ ಸಿಗುವ ಯೋಗವಿದೆ.

ವೃಶ್ಚಿಕ ರಾಶಿ (Scorpio):

ಇಂದು ಸಾಮಾನ್ಯ ದಿನವಾಗಿರಲಿದೆ. ಹಳೆಯ ಸ್ನೇಹಿತರ ಭೇಟಿಯಾಗಲಿದೆ. ವ್ಯವಹಾರ ವಿಸ್ತರಣೆಗೆ ಇಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುವಿರಿ. ಕಚೇರಿಯಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಸಂಗಾತಿಯೊಂದಿಗೆ ಸಮಯ ಚೆನ್ನಾಗಿರಲಿದೆ.

ಧನು ರಾಶಿ (Sagitarius):

ಆರ್ಥಿಕ ಲಾಭವಾಗುವುದು. ವ್ಯಾಪಾರಕ್ಕಾಗಿ ಮಾಡುವ ಪ್ರಯಾಣವು ಯಶಸ್ವಿಯಾಗಲಿದೆ. ಆಫೀಸ್ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವಿರಿ. ಬಾಕಿ ಹಣ ಕೈ ಸೇರುವುದು.

ಮಕರ ರಾಶಿ (Capricorn):

ಇಂದು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಿರಿ. ಹೊಸ ವಾಹನ ಖರೀದಿಯ ಯೋಗವಿದೆ. ನಿಮಗಿಷ್ಟವಾದ ಸಮಾರಂಭದಲ್ಲಿ ಭಾಗಿಯಾಗುವಿರಿ. ಹೊಸ ಜನರ ಪರಿಚಯವಾಗುವುದು. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಇಂದು ಒಳ್ಳೆಯ ದಿನ.

ಕುಂಭ ರಾಶಿ (Aquarius):

ಅದೃಷ್ಟ ಸಂಪೂರ್ಣವಾಗಿ ನಿಮ್ಮ ಜೊತೆಗಿರಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಕಚೇರಿಯಲ್ಲಿ ಕೆಲಸಗಳು ಸುಗಮವಾಗಿ ನಡೆಯಲಿವೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಮೀನ ರಾಶಿ (Pisces):

ಇಂದು ಆತ್ಮವಿಶ್ವಾಸ ಹೆಚ್ಚಿರಲಿದೆ. ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿದೆ. ಕೆಲಸವನ್ನು ಮುಂದೂಡದಿರುವುದು ಉತ್ತಮ. ಕುಟುಂಬ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಲಕ್ಷಣಗಳಿವೆ, ಆರೋಗ್ಯದ ಬಗ್ಗೆ ಎಚ್ಚರವಿರಲಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+