ಮಾನವರ ನಂತರ ಭೂಮಿಯ ಮೇಲೆ ಈ ಸಮುದ್ರ ಜೀವಿಯದ್ದೇ ಅಧಿಪತ್ಯ! ಸಂಶೋಧನೆಯಲ್ಲಿ ಆಶ್ಚರ್ಯಕರ ಸತ್ಯ ಬಹಿರಂಗ

ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಯ ಅಂಶ ಕೂಡಾ ಒಂದಲ್ಲ ಒಂದು ದಿನ ಅಳಿದು ಹೋಗಲೇಬೇಕು. ಮನುಷ್ಯರು ಕೂಡಾ ಇದಕ್ಕೆ ಹೊರತಾಗಿಲ್ಲ. ಮುಂದೊಂದು ದಿನ ಮಾನವ ಸಂತತಿಯೇ ಅಳಿದು ಹೋಗಬಹುದು.

ಮಾನವರು ಇದ್ದಕ್ಕಿದ್ದಂತೆ ಈ ಭೂಮಿಯ ಮೇಲಿಂದ ಕಣ್ಮರೆಯಾದರೆ ಭೂಮಿಯು ಹೇಗಿರಬಹುದು ಎನ್ನುವ ಆಲೋಚನೆ ನಿಮಗೂ ಬಂದಿರಬಹುದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ಇದೀಗ ವಿಜ್ಞಾನ ಕೈ ಹಾಕಿದೆ. ಮಾನವರ ನಂತರ ಅವರ ಸ್ಥಾನವನ್ನು ಈ ಭೂಮಿಯ ಮೇಲೆ ಯಾರು ತುಂಬಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

Octopus

ಸಮುದ್ರ ಜೀವಿಯ ಪಾರುಪಥ್ಯ:

ಭೂಮಿಯಲ್ಲಿ ಮಾನವ ಸಂತತಿ ಅಳಿದಾಗ ಆ ಸ್ಥಾನವನ್ನು ಸಮುದ್ರ ಪ್ರಭೇದದ ಜೀವಿಯೊಂದು ತುಂಬಲಿದೆ ಎಂದು ಅಧ್ಯಯನ ಹೇಳಿದೆ.ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವುದು, ಉಪಕರಣಗಳ ಬಳಕೆ, ಸ್ಮರಣ ಶಕ್ತಿ ಮತ್ತು ಸಂವಹನದಂತಹ ಸಂಕೀರ್ಣ ನಡವಳಿಕೆಗಳ ಮೂಲಕ ಆಕ್ಟೋಪಸ್‌ ಮಾನವರ ನಂತರ ಭೂಮಿಯನ್ನು ಆವರಿಸುವ ಸಾಧ್ಯತೆ ದಟ್ಟವಾಗಿದೆ ಎಂಬುದನ್ನು ಸಂಶೋಧನೆಯು ಎತ್ತಿ ತೋರಿಸುತ್ತದೆ. ಒಂದು ಕಾಲದಲ್ಲಿ ಮಾನವರ ನಂತರ ಉನ್ನತ ಸಸ್ತನಿಗಳು ಮಾತ್ರ ಭೂಮಿಯ ಮೇಲೆ ಪಾರುಪತ್ಯ ಕಂಡುಕೊಳ್ಳಬಹುದು ಎನ್ನಲಾಗಿತ್ತು. ಆದರೆ ಇದೀಗ ಮಾನವರಿಲ್ಲದ ಜಗತ್ತಿನಲ್ಲಿ, ಆಕ್ಟೋಪಸ್ ಭೂಮಿಯ ಮೇಲೆ ಪ್ರಾಬಲ್ಯ ಸಾಧಿಸಬಹುದು ಎಂದು ಅನೇಕ ವಿಜ್ಞಾನಿಗಳು ನಂಬಿಕೆ ಹೊರ ಹಾಕಿದ್ದಾರೆ.

ಎಲೆಯ ಮೇಲೆ ಹುಳುಗಳು ಬಂದಾಕ್ಷಣ ತನ್ನ ಅಂಗರಕ್ಷಕರನ್ನು ಕೂಗಿ ಕರೆಯುತ್ತದೆ ಈ ಗಿಡ:ಬಯಲಾಯಿತು ಸಸ್ಯ ಜಗತ್ತಿನ ರಹಸ್ಯ
ಎಲೆಯ ಮೇಲೆ ಹುಳುಗಳು ಬಂದಾಕ್ಷಣ ತನ್ನ ಅಂಗರಕ್ಷಕರನ್ನು ಕೂಗಿ ಕರೆಯುತ್ತದೆ ಈ ಗಿಡ:ಬಯಲಾಯಿತು ಸಸ್ಯ ಜಗತ್ತಿನ ರಹಸ್ಯ

ಆಕ್ಟೋಪಸ್ ಬುದ್ಧಿಮತ್ತೆಯೇ ವಿಜ್ಞಾನಿಗಳ ನಿರ್ಧಾರಕ್ಕೆ ಕಾರಣ:

ಮುಂದಿನ ದಿನಗಳಲ್ಲಿ ಮನುಷ್ಯರು ಕಣ್ಮರೆಯಾದರೆ, ಈ ಭೂಮಿಯ ಮೇಲೆ ಬದುಕುಳಿಯಲು ಬೇಕಾಗಿರುವ ಬುದ್ಧಿವಂತಿಕೆ, ಪರಿಸರಕ್ಕೆ ಹೊಂದಿಕೊಳ್ಳ ಚತುರತೆ, ಸಂಪನ್ಮೂಲಗಳ ಮೇಲಿನ ಅವಲಂಬನೆಯನ್ನು ಆಧರಿಸಿ ಯಾವ ಜೀವಿ ಈ ಮನುಷ್ಯನ ಸ್ಥಾನಕ್ಕೆ ಬರಬಹುದು ಎನ್ನುವುದನ್ನು ಲೆಕ್ಕ ಹಾಕಲಾಗಿದೆ. ಆಕ್ಟೋಪಸ್‌ನ ವಿಶಿಷ್ಟ ಬುದ್ಧಿವಂತಿಕೆ ಮತ್ತು ಶಾರೀರಿಕ ವೈಶಿಷ್ಟ್ಯಗಳು ಅದಕ್ಕೆ ಈ ಸಾಮರ್ಥ್ಯವನ್ನು ಒದಗಿಸಿ ಕೊಡುತ್ತದೆ. ಅಕ್ಟೋಪಸ್‌ನ ಮೂರನೇ ಎರಡರಷ್ಟು ನರಕೋಶಗಳು ಅದರ ತೋಳುಗಳಲ್ಲಿರುತ್ತವೆ. ಪ್ರತೀ ತೋಳು ತನ್ನದೇ ಆದ ರೀತಿಯಲ್ಲಿ ಪರಿಸರವನ್ನು ಗ್ರಹಿಸಲು, ಸ್ಪರ್ಶಿಸಲು ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಮರ್ಥವಾಗಿದೆ. ಇವು ಚರ್ಮದ ಮೇಲಿರುವ 'ಕ್ರೊಮ್ಯಾಟೊಫೋರ್ಸ್' ಕೋಶಗಳ ಸಹಾಯದಿಂದ ಸುತ್ತಲಿನ ಪರಿಸರಕ್ಕೆ ತಕ್ಕಂತೆ ಸೆಕೆಂಡುಗಳಲ್ಲಿ ಬಣ್ಣ ಮತ್ತು ವಿನ್ಯಾಸವನ್ನು ಬದಲಾಯಿಸಿಕೊಳ್ಳುತ್ತವೆ. ತಾನು ಬದುಕುಳಿಯಬೇಕಾದರೆ ಯಾವುದನ್ನು ಹೇಗೆ ಬಳಸಬೇಕು ಎನ್ನುವ ಜಾಣ್ಮೆ ಇವುಗಳಿಗಿದೆ. ಉದಾಹರಣೆಗೆ ತೆಂಗಿನಕಾಯಿಯ ಚಿಪ್ಪುಗಳು ಅಥವಾ ಕಲ್ಲುಗಳನ್ನು ರಕ್ಷಣಾ ಕವಚವಾಗಿ ಬಳಸುವುದು ಹೆಗೆ ಎನ್ನುವ ಅರಿವು ಆಕ್ಟೋಪಸ್‌ಗಿದೆ. ಇನ್ನು ಈ ಜೀವಿಯ ದೇಹದಲ್ಲಿ ಮೂಳೆಗಳಿಲ್ಲ. ಹಾಗಾಗಿ ಅತ್ಯಂತ ಕಿರಿದಾದ ಸಂದಿ-ಗೊಂದಿಗಳಿಂದಲೂ ಇವು ಸುಲಭವಾಗಿ ತಪ್ಪಿಸಿಕೊಳ್ಳಬಲ್ಲವು.

ಆಕ್ಟೋಪಸ್ ಉಳಿವು ಮತ್ತು ಸಾಗರ ಪರಿಸರ ವ್ಯವಸ್ಥೆಗಳ ಪುನರ್ಜನ್ಮ:

ಮಾನವರು ಈ ಭೂಮಿಯ ಮೇಲೆ ಇಲ್ಲವೇ ಇಲ್ಲ ಎಂದಾದರೆ ಶತಮಾನಗಳ ಮಾಲಿನ್ಯ ಮತ್ತು ಅತಿಯಾದ ಮೀನುಗಾರಿಕೆಯಿಂದ ಸಾಗರಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತವೆ. ಹವಳದ ದಿಬ್ಬಗಳು ಪುನರುತ್ಪಾದನೆಗೊಳ್ಳಬಹುದು, ಸಮುದ್ರ ಆಹಾರ ಸರಪಳಿಗಳು ಸಮತೋಲನಗೊಳ್ಳುತ್ತವೆ ಮತ್ತು ಜೀವವೈವಿಧ್ಯವು ಮತ್ತೊಮ್ಮೆ ಅಭಿವೃದ್ಧಿ ಹೊಂದುತ್ತದೆ. ಈ ಪುನರುಜ್ಜೀವನಗೊಂಡ ಸಮುದ್ರ ಜಗತ್ತಿನಲ್ಲಿ, ಆಕ್ಟೋಪಸ್ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪರಿಪೂರ್ಣ ಸ್ಥಾನದಲ್ಲಿರುತ್ತದೆ.

ಮೊದಲೇ ಹೇಳಿದಂತೆ ಆಕ್ಟೋಪಸ್‌ ತಪ್ಪಿಸಿಕೊಳ್ಳುವುದರಲ್ಲಿ ನಿಪುಣ. ಸೆಕೆಂಡುಗಳಲ್ಲಿ ಬಣ್ಣ ಮತ್ತು ವಿನ್ಯಾಸವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಇದು ನಿಖರವಾಗಿ ಬೇಟೆಯಾಡುತ್ತದೆ, ಪರಭಕ್ಷಕಗಳಿಂದ ಸಲೀಸಾಗಿ ತನ್ನನ್ನು ತಾನು ಬಚಾವ್‌ ಮಾಡಿಕೊಳುತ್ತದೆ. ಬಹುತೇಕ ರಾತ್ರಿಯಿಡೀ ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತದೆ. ಹೀಗಾಗಿ ಆಕ್ಟೋಪಸ್ ಜನಸಂಖ್ಯೆಯು ವೇಗವಾಗಿ ವಿಸ್ತರಿಸಬಹುದು. ಒಂದು ಕಾಲದಲ್ಲಿ ಮಾನವ ತನಗಾಗಿ ಬದಲಾಯಿಸಿಕೊಂಡ ಆವಾಸಸ್ಥಾನಗಳನ್ನು ಈ ಆಕ್ಟೋಪಸ್‌ಗಳೇ ಅವಲಂಬಿಸಿಕೊಳ್ಳಬಹುದು.

Moon Trees: ಚಂದ್ರನ ಕಕ್ಷೆ ಸುತ್ತಿ ಬಂದು ಭೂಮಿಯಲ್ಲಿ ಹೆಮ್ಮರವಾಗಿ ಬೆಳೆದು ನಿಂತಿವೆ ಈ 'ಮೂನ್ ಟ್ರೀಸ್ʼ
Moon Trees: ಚಂದ್ರನ ಕಕ್ಷೆ ಸುತ್ತಿ ಬಂದು ಭೂಮಿಯಲ್ಲಿ ಹೆಮ್ಮರವಾಗಿ ಬೆಳೆದು ನಿಂತಿವೆ ಈ 'ಮೂನ್ ಟ್ರೀಸ್ʼ

ಆಕ್ಟೋಪಸ್ ಸಮುದ್ರದಿಂದ ಭೂಮಿಗೆ ಚಲಿಸಬಹುದೇ?:

ಕೆಲವು ವಿಕಸನೀಯ ಜೀವಶಾಸ್ತ್ರಜ್ಞರು, ಸಾಕಷ್ಟು ಸಮಯ ನೀಡಿದರೆ, ಆಕ್ಟೋಪಸ್‌ಗಳು ಸಮುದ್ರದ ಆಚೆಗೆ ಬರುವ ಬಗ್ಗೆ ದಾರಿಯನ್ನು ಅನ್ವೇಷಿಸಲು ಪ್ರಾರಂಭಿಸಬಹುದು ಎನ್ನುತ್ತಾರೆ. ಅವು ಈಗಾಗಲೇ ಭೂಮಿಯ ಬಗ್ಗೆ ಕುತೂಹಲವನ್ನು ತೋರುತ್ತವೆ. ಆಗಾಗ ಉಬ್ಬರವಿಳಿತದ ವಲಯಗಳು ಮತ್ತು ಕಲ್ಲಿನ ಆಳವಿಲ್ಲದ ಪ್ರದೇಶಗಳಿಗೆ ಹೋಗುತ್ತವೆ.

ಇನ್ನು ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವ ಆಕ್ಟೋಪಸ್‌ನ ಅಂಗಗಳು, ಸಮಸ್ಯೆ ಪರಿಹರಿಸುವ ಮೆದುಳು ಮತ್ತು ಉಪಕರಣ-ನಿರ್ವಹಣಾ ಸಾಮರ್ಥ್ಯಗಳಿಂದಾಗಿ ಅವು ಅರೆ-ಭೂಮಂಡಲದ ಜೀವನಕ್ಕೆ ವಿಕಸನಗೊಳ್ಳಬಹುದು. ಇದು ವೈಜ್ಞಾನಿಕ ಕಾದಂಬರಿಯಂತೆ ತೋರುತ್ತದೆಯಾದರೂ, ವಿಕಾಸವು ಪದೇ ಪದೇ ಜಾತಿಗಳನ್ನು ಅನಿರೀಕ್ಷಿತ ರೀತಿಯಲ್ಲಿ ಪರಿವರ್ತಿಸಿದೆ. ಆಕ್ಟೋಪಸ್ ಕೂಡಾ ಆ ಒಂದು ಜಿಗಿತಕ್ಕೆ ಪರಿಪೂರ್ಣ ಅಡಿಪಾಯವನ್ನು ಹೊಂದಿದೆ.

ಆಕ್ಟೋಪಸ್‌ಗಳೇ ಸಾಗರ ಚಿಂತಕರು:

ಆಕ್ಟೋಪಸ್ ಭೂಮಿಯನ್ನು ಆಳುವ ಕಲ್ಪನೆಯು ಕೇವಲ ಅದರ ಪ್ರಾಬಲ್ಯದಿಂದ ಮಾತ್ರ ಹೊರ ಹೊಮ್ಮಿದ್ದಲ್ಲ. ಅದರ ಬುದ್ಧಿವಂತಿಕೆಯು ಪ್ರಜ್ಞೆಯು ಮಾನವರಿಗಿಂತ ಭಿನ್ನವಾದ ರೂಪಗಳಲ್ಲಿ ವಿಕಸನಗೊಳ್ಳಬಹುದು ಎನ್ನುವುದನ್ನು ತೋರಿಸುತ್ತದೆ. ಆಕ್ಟೋಪಸ್ ಭಾಷೆ ಅಥವಾ ಸಾಧನಗಳಿಗಿಂತ ಹೆಚ್ಚಾಗಿ ವಿಕಸಿತ ಚಿಂತನೆ, ಮರೆಮಾಚುವಿಕೆ ಮತ್ತು ಸ್ಪರ್ಶ ಸಂವಹನವನ್ನು ಅವಲಂಬಿಸಿದೆ.
ವಿಕಸನಗೊಳ್ಳುವ ಸ್ವಾತಂತ್ರ್ಯವನ್ನು ನೀಡಿದರೆ, ಆಕ್ಟೋಪಸ್‌ಗಳು ಹೊಸ ರೀತಿಯ ಬುದ್ಧಿವಂತಿಕೆಯನ್ನು ಪ್ರತಿನಿಧಿಸಬಹುದು. ಮಾನವ-ನಂತರದ ಜಗತ್ತಿನಲ್ಲಿ, ಆಕ್ಟೋಪಸ್‌ಗಳೇ ಸಾಗರ ಚಿಂತಕರು, ಪರಿಶೋಧಕರು ಮತ್ತು ಎಂಜಿನಿಯರ್‌ಗಳಾಗಬಹುದು.

ಪ್ರಕೃತಿ ಎಂದಿಗೂ ಆವಿಷ್ಕಾರಗಳನ್ನು ನಿಲ್ಲಿಸುವುದಿಲ್ಲ:

ಆಕ್ಟೋಪಸ್ ನೇತೃತ್ವದ ಜಗತ್ತನ್ನು ಕಲ್ಪಿಸಿಕೊಳ್ಳುವುದು ಮಾನವನ ಅಳಿವಿನ ಮುನ್ಸೂಚನೆಯಲ್ಲ. ಬದಲಾಗಿ ನಮ್ಮ ಪ್ರಾಬಲ್ಯ ಎಷ್ಟು ದುರ್ಬಲವಾಗಿದೆ ಎಂಬುದನ್ನು ಗುರುತಿಸುವ ಅಗತ್ಯ ಮತ್ತಯ ಅನಿವಾರ್ಯ. ಇತರ ಬುದ್ಧಿವಂತ ಪ್ರಭೇದಗಳು ಅಭಿವೃದ್ಧಿ ಹೊಂದಲು ಹೆಣಗಾಡುವ ಹಂತಕ್ಕೆ ಮಾನವರು ಪರಿಸರ ವ್ಯವಸ್ಥೆಗಳನ್ನು ಬದಲಾಯಿಸಿದ್ದಾರೆ. ಪ್ರಕೃತಿ ಎಂದಿಗೂ ಆವಿಷ್ಕಾರಗಳನ್ನು ನಿಲ್ಲಿಸುವುದಿಲ್ಲ ಎಂದು ಆಕ್ಟೋಪಸ್ ನಮಗೆ ನೆನಪಿಸುತ್ತದೆ.

ನಾವು ನಾಳೆ ಕಣ್ಮರೆಯಾದರೂ, ಭೂಮಿ ಮೇಲಿನ ಜೀವನವು ಕೊನೆಗೊಳ್ಳುವುದಿಲ್ಲ.ಅದು ರೂಪಾಂತರಗೊಳ್ಳುತ್ತದೆ. ಅಲೆಗಳ ಆಳದಲ್ಲಿ, ಆಕ್ಟೋಪಸ್ ವಿಕಸನಗೊಳ್ಳುವುದನ್ನು ಮುಂದುವರಿಸಬಹುದು.ನಾವು ಒಮ್ಮೆ ನಮ್ಮದು ಎಂದು ಕರೆಯುತ್ತಿದ್ದ ಗ್ರಹದಲ್ಲಿ ಬುದ್ಧಿವಂತಿಕೆ ಮತ್ತು ನಾಯಕತ್ವದ ಅರ್ಥವನ್ನು ಪುನಃ ಬರೆಯಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+