Monthly Horoscope: ಜುಲೈ ತಿಂಗಳಲ್ಲಿ ನಿಮ್ಮ ದೊಡ್ಡ ಶತ್ರು ಯಾವುದು? 12 ಜನ್ಮರಾಶಿಗಳಿಗೆ ಜ್ಯೋತಿಷ್ಯದ ಎಚ್ಚರಿಕೆ!
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರವು ವ್ಯಕ್ತಿಯ ಮನಸ್ಥಿತಿ, ನಿರ್ಧಾರಗಳು ಮತ್ತು ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ತಿಂಗಳು ಆರಂಭವಾಗುವ ಮುನ್ನ ಅನೇಕರು ತಮ್ಮ ಭವಿಷ್ಯದ ಬಗ್ಗೆ ಕುತೂಹಲ ಹೊಂದಿರುತ್ತಾರೆ. ಜುಲೈ ತಿಂಗಳಲ್ಲಿ ಪ್ರತಿಯೊಂದು ಜನ್ಮರಾಶಿಯವರು ಒಂದು ನಿರ್ದಿಷ್ಟ ನಕಾರಾತ್ಮಕ ಭಾವನೆ ಅಥವಾ ವರ್ತನೆಯ ಬಗ್ಗೆ ಎಚ್ಚರಿಕೆಯಿಂದ ಇದ್ದರೆ ಒಳಿತೆಂದು ಜ್ಯೋತಿಷ್ಯ ಹೇಳುತ್ತದೆ.

ಮೇಷ
ಇವರು ನಿಯಂತ್ರಿಸಬೇಕಾದದ್ದು ಕೋಪ. ಸಣ್ಣ ವಿಷಯಕ್ಕೂ ಉದ್ವೇಗಗೊಳ್ಳುವ ಸಾಧ್ಯತೆ ಇದೆ. ತಾಳ್ಮೆಯಿಂದ ಮಾತನಾಡಿದರೆ ಸಂಬಂಧಗಳು ಉಳಿಯುತ್ತವೆ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಬರಬಹುದು. ನಿಮ್ಮ ನಾಯಕತ್ವದ ಗುಣಗಳು ಹೊಳೆಯಲಿವೆ. ಕೋಪವನ್ನು ನಿಯಂತ್ರಿಸಿದರೆ ಉತ್ತಮ ಫಲ ಸಿಗಲಿದೆ. ಹಣಕಾಸಿನ ವಿಷಯದಲ್ಲಿ ಮಧ್ಯಮ ಫಲ.

ವೃಷಭ
ಹಠವನ್ನು ನೀವು ನಿಯಂತ್ರಿಸದೇ ಹೋದರೆ ಕಷ್ಟವಿದೆ. ನಿಮ್ಮ ಅಭಿಪ್ರಾಯವೇ ಸರಿ ಎನ್ನುವ ಮನೋಭಾವ ಅವಕಾಶಗಳನ್ನು ಕಳೆದುಕೊಳ್ಳುವಂತೆ ಮಾಡಬಹುದು. ಇತರರ ಮಾತಿಗೂ ಕಿವಿಗೊಡಿ. ಆರ್ಥಿಕವಾಗಿ ಲಾಭದಾಯಕ ತಿಂಗಳು. ಹಳೆಯ ಹೂಡಿಕೆಗಳಿಂದ ಲಾಭ ದೊರೆಯುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಆರೋಗ್ಯದ ಕಡೆ ಸ್ವಲ್ಪ ಗಮನ ಅಗತ್ಯ.

ಮಿಥುನ
ಮಿಥುನದವರು ಗೊಂದಲವನು ಹದ್ದುಬಸ್ತಿನಲ್ಲಿ ಇಡಬೇಕು. ಒಂದೇ ಸಮಯದಲ್ಲಿ ಹಲವು ಕೆಲಸಗಳಿಗೆ ಕೈ ಹಾಕುವುದರಿಂದ ತಪ್ಪು ನಿರ್ಧಾರಗಳಾಗಬಹುದು. ಆದ್ಯತೆ ನಿಗದಿಪಡಿಸಿ. ಹೊಸ ಪರಿಚಯಗಳು ಮತ್ತು ಹೊಸ ಅವಕಾಶಗಳು ಸಿಗಬಹುದು. ಉದ್ಯೋಗ ಬದಲಾವಣೆ ಯೋಚಿಸುತ್ತಿರುವವರಿಗೆ ಅನುಕೂಲಕರ ಸಮಯ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ.

ಕಟಕ
ಕಟಕದವರಿಗೆ ಶೋಕ ಮತ್ತು ಹಳೆಯ ನೆನಪುಗಳು ಕಂಟಕ. ಹಿಂದಿನ ಘಟನೆಗಳನ್ನು ಮರುಮರು ನೆನಪಿಸಿಕೊಳ್ಳುವುದರಿಂದ ಮನಸ್ಸು ಭಾರವಾಗಬಹುದು. ಹೊಸ ಆರಂಭಕ್ಕೆ ಮನಸ್ಸು ತೆರೆದುಕೊಳ್ಳಿ. ಭಾವನಾತ್ಮಕ ವಿಷಯಗಳು ಹೆಚ್ಚಾಗಿ ಕಾಡಬಹುದು. ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ. ವೃತ್ತಿಜೀವನದಲ್ಲಿ ನಿಧಾನಗತಿಯ ಪ್ರಗತಿ ಕಂಡುಬರಬಹುದು.

ಸಿಂಹ
ಇವರು ನಿಯಂತ್ರಿಸಬೇಕಾದ ಸಂಗತಿ ಅಹಂಕಾರ. ಗೌರವ ಸಿಗದಿದ್ದರೆ ಬೇಸರವಾಗಬಹುದು. ವಿನಯದಿಂದ ವರ್ತಿಸಿದರೆ ಯಶಸ್ಸು ಸುಲಭವಾಗುತ್ತದೆ. ಈ ತಿಂಗಳು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಪದೋನ್ನತಿ ಅಥವಾ ಹೊಸ ಅವಕಾಶಗಳ ಸಾಧ್ಯತೆ ಇದೆ. ಅಹಂಕಾರದಿಂದ ದೂರವಿದ್ದರೆ ಯಶಸ್ಸು ಇನ್ನಷ್ಟು ಹೆಚ್ಚಾಗಲಿದೆ.

ಕನ್ಯಾ
ನೀವು ನಿಯಂತ್ರಿಸಬೇಕಾದದ್ದು ಅತಿಯಾದ ಚಿಂತೆ. ಪ್ರತಿಯೊಂದನ್ನೂ ಪರಿಪೂರ್ಣವಾಗಿ ಮಾಡಲು ಯತ್ನಿಸುವುದು ಒತ್ತಡ ಹೆಚ್ಚಿಸಬಹುದು. ಎಲ್ಲವೂ ನಮ್ಮ ನಿಯಂತ್ರಣದಲ್ಲಿರುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳಿ. ಕೆಲಸದಲ್ಲಿ ಶ್ರಮ ಹೆಚ್ಚಾಗಬಹುದು. ಆದರೆ ಅದರ ಫಲವೂ ದೊರೆಯಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಹಣಕಾಸಿನಲ್ಲಿ ಸ್ಥಿರತೆ ಕಂಡುಬರಲಿದೆ.

ತುಲಾ
ಇವರು ಮೌನವಾಗಿರುವುದು ಲೇಸಲ್ಲ. ಮನಸ್ಸಿನ ಮಾತನ್ನು ಹೇಳದೆ ಮೌನವಾಗಿರುವುದು ಸಂಬಂಧಗಳಲ್ಲಿ ಅಂತರ ತರಬಹುದು. ಸರಿಯಾದ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಸಂಬಂಧಗಳಲ್ಲಿ ಸುಧಾರಣೆ ಕಂಡುಬರಲಿದೆ. ಹಳೆಯ ಭಿನ್ನಾಭಿಪ್ರಾಯಗಳು ಕಡಿಮೆಯಾಗುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಹೊಸ ಗ್ರಾಹಕರು ಸಿಗಬಹುದು.

ವೃಶ್ಚಿಕ
ನೀವು ಖಂಡಿತವಾಗಿಯೂ ಅಸೂಯೆಯನ್ನು ಕೈಬಿಡದಿದ್ದರೆ ಕಷ್ಟವಿದೆ. ಇತರರ ಯಶಸ್ಸನ್ನು ನೋಡಿ ಹೋಲಿಕೆ ಮಾಡಿಕೊಳ್ಳಬೇಡಿ. ನಿಮ್ಮ ಬೆಳವಣಿಗೆಯತ್ತ ಗಮನ ಕೊಡಿ. ಸ್ಪರ್ಧಾತ್ಮಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಮಯ. ಧೈರ್ಯದಿಂದ ಮುಂದುವರಿದರೆ ಯಶಸ್ಸು ನಿಮ್ಮದಾಗಲಿದೆ. ಅಸೂಯೆ ಮತ್ತು ಅನುಮಾನಗಳಿಂದ ದೂರವಿರಿ.

ಧನು
ನೀವು ನಿಯಂತ್ರಿಸಬೇಕಾದದ್ದು ಆತುರವನ್ನು. ಯೋಚಿಸದೆ ತೆಗೆದುಕೊಳ್ಳುವ ನಿರ್ಧಾರಗಳು ಸಮಸ್ಯೆ ತರಬಹುದು. ಸ್ವಲ್ಪ ಸಮಯ ತೆಗೆದುಕೊಂಡು ನಿರ್ಧರಿಸಿ. ಪ್ರಯಾಣ ಮತ್ತು ಹೊಸ ಅನುಭವಗಳ ತಿಂಗಳು. ಶಿಕ್ಷಣ ಹಾಗೂ ವಿದೇಶಿ ಅವಕಾಶಗಳ ಬಗ್ಗೆ ಶುಭ ಸುದ್ದಿ ಸಿಗಬಹುದು. ಆತುರದ ನಿರ್ಧಾರಗಳನ್ನು ತಪ್ಪಿಸಿ.

ಮಕರ
ನೀವು ನಿಯಂತ್ರಿಸಬೇಕಾದದ್ದು ಖಿನ್ನತೆಯನ್ನು. ಕೆಲಸದಲ್ಲಿ ವಿಳಂಬವಾದರೂ ನಿರಾಶರಾಗಬೇಡಿ. ನಿಮ್ಮ ಪ್ರಯತ್ನಕ್ಕೆ ಸರಿಯಾದ ಸಮಯದಲ್ಲಿ ಫಲ ಸಿಗಬಹುದು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬಹುದು. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಿರಿ.

ಕುಂಭ
ಅವಮಾನವಾದ ಭಾವನೆಯನ್ನು ನಿಯಂತ್ರಿಸಬೇಕು. ಸಣ್ಣ ಟೀಕೆಗಳನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಪ್ರತಿಕ್ರಿಯೆಗಿಂತ ಪ್ರಗತಿಗೆ ಆದ್ಯತೆ ನೀಡಿ. ಸೃಜನಾತ್ಮಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಹೊಸ ಯೋಜನೆಗಳಿಗೆ ಚಾಲನೆ ನೀಡಬಹುದು. ಸ್ನೇಹಿತರ ಸಹಕಾರದಿಂದ ಕೆಲವು ಮಹತ್ವದ ಕೆಲಸಗಳು ಪೂರ್ಣಗೊಳ್ಳಲಿವೆ.

ಮೀನ
ಅತಿಯಾದ ಭಾವನಾತ್ಮಕತೆಯನ್ನು ನಿಯಂತ್ರಿಸಬೇಕು. ಎಲ್ಲರ ಸಮಸ್ಯೆಯನ್ನು ನಿಮ್ಮದಾಗಿ ತೆಗೆದುಕೊಳ್ಳುವುದು ಮಾನಸಿಕ ಆಯಾಸ ತರಬಹುದು. ಅಗತ್ಯವಿದ್ದಾಗ 'ಬೇಡ' ಎಂದು ಹೇಳುವುದನ್ನೂ ಕಲಿಯಿರಿ. ಮನಸ್ಸಿಗೆ ನೆಮ್ಮದಿ ನೀಡುವ ಘಟನೆಗಳು ನಡೆಯಬಹುದು. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿವೆ. ಕುಟುಂಬ ಮತ್ತು ವೃತ್ತಿಜೀವನದ ನಡುವೆ ಸಮತೋಲನ ಸಾಧಿಸಿದರೆ ಉತ್ತಮ ಫಲ ಸಿಗಲಿದೆ.
(ಬರಹ: ಭವಾನಿ ಭಟ್)












Click it and Unblock the Notifications