ಬ್ರೇಕ್‌ ಅಪ್‌ ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನಿಸಿದ ಕಂಪನಿ : ಸಂಬಂಧ ಮುರಿಯುವುದಕ್ಕೂ ತಿಂಗಳಿಗೆ 3 ಲಕ್ಷ ರೂ. ವೇತನ

ಇಂದಿನ ಕಾಲದ ಡೇಟಿಂಗ್ ಜಗತ್ತಿನಲ್ಲಿ ಬ್ರೇಕಪ್, ಪ್ಯಾಚ್‌ ಅಪ್‌ ಇವೆಲ್ಲಾ ಯಾವಾಗ ಹೇಗೆ ನಡೆದು ಹೋಗುತ್ತದೆಯೋ ತಿಳಿಯುವುದೇ ಇಲ್ಲ. ಆದರೆ, ಇದೀಗ ಆನ್ಲೈನ್ ಡೇಟಿಂಗ್ ಪ್ಲಾಟ್‌ಫಾರ್ಮ್ 'Dating.com' ಒಂದು ವಿಚಿತ್ರ ಹಾಗೂ ಆಸಕ್ತಿದಾಯಕ ಉದ್ಯೋಗವಕಾಶವನ್ನು ನೀಡಿದೆ. 'ಚೀಫ್ ಬ್ರೇಕಪ್ ಆಫೀಸರ್' (CBO) ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.

ಚೀಫ್ ಬ್ರೇಕಪ್ ಆಫೀಸರ್' ಕೆಲಸ ಏನು?:

ಈ ಹುದ್ದೆಯು ಸಂಪೂರ್ಣವಾಗಿ 'ವರ್ಕ್ ಫ್ರಮ್ ಹೋಮ್' ಆಗಿದೆ. ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 3,000 ಡಾಲರ್ ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು 2.8 ಲಕ್ಷ ವೇತನ ನೀಡಲಾಗುವುದು. ಈ ಆಫೀಸರ್‌ ಕೆಲಸವೇನೆಂದರೆ, ತಮ್ಮ ಸಂಬಂಧವನ್ನು ಮುರಿದುಕೊಳ್ಳಲು ಮುಜುಗರಪಡುವ ಅಥವಾ ಕಷ್ಟಪಡುವ ಗ್ರಾಹಕರ ಪರವಾಗಿ, ಅವರ ಸಂಗಾತಿಗೆ ಬ್ರೇಕಪ್ ವಿಷಯವನ್ನು ವೃತ್ತಿಪರವಾಗಿ ತಿಳಿಸುವುದು.

Company Hiring Chief Breakup Officer

ಈ ಉದ್ಯೋಗಕ್ಕೆ ಅದ್ಭುತವಾದ 'ಎಮೋಷನಲ್ ಇಂಟೆಲಿಜೆನ್ಸ್' ಮತ್ತು ಸಂವಹನ ಕೌಶಲ್ಯ ಹೊಂದಿರುವ ಅಭ್ಯರ್ಥಿಗಳ ಅಗತ್ಯವಿದೆ. ಅಷ್ಟೇ ಅಲ್ಲದೆ, ಸಂಬಂಧವು ಸೌಹಾರ್ದಯುತವಾಗಿ ಕೊನೆಗೊಂಡಿದೆಯೇ ಅಥವಾ ಗಲಾಟೆಯಲ್ಲಿ ಮುಗಿದಿದೆಯೇ ಎಂಬುದನ್ನು ವಿಶ್ಲೇಷಿಸಿ ರೇಟಿಂಗ್ ನೀಡುವ ಜವಾಬ್ದಾರಿಯೂ ಇವರ ಮೇಲಿರುತ್ತದೆ.

ಆಫೀಸ್ ಮೀಟಿಂಗ್‌ಗೆ ಲೇಟ್, ಮೊದಲ ದಿನ ಶಾಲೆಗೆ ಹೋದ ಮಗುವಿನ ಜೊತೆಗಿರಿ ಎಂದು ರಜೆ ಕೊಟ್ಟ ಬಾಸ್
ಆಫೀಸ್ ಮೀಟಿಂಗ್‌ಗೆ ಲೇಟ್, ಮೊದಲ ದಿನ ಶಾಲೆಗೆ ಹೋದ ಮಗುವಿನ ಜೊತೆಗಿರಿ ಎಂದು ರಜೆ ಕೊಟ್ಟ ಬಾಸ್

ಕೆಲಸಕ್ಕೆ ಆಯ್ಕೆಯಾಗಬೇಕಾದರೆ ಇರುವ ಅರ್ಹತೆಗಳೇನು?:

ಕಂಪನಿಯು ಈ ಹುದ್ದೆಗೆ ಕೆಲವು ವಿಶೇಷ ಅರ್ಹತೆಗಳನ್ನು ನಿಗದಿಪಡಿಸಿದೆ. ಅವುಗಳೆಂದರೆ:

1. ಅಭ್ಯರ್ಥಿಯು ತನ್ನ ವೈಯಕ್ತಿಕ ಜೀವನದಲ್ಲಿ ಕನಿಷ್ಠ 3 ಬಾರಿ ಬ್ರೇಕಪ್‌ ಅನುಭವವನ್ನು ಹೊಂದಿದ್ದರೆ ಅವರಿಗೆ ಮೊದಲ ಆದ್ಯತೆ ನೀಡಲಾಗುವುದು.

2. ರಿಲೇಶನ್‌ಶಿಪ್ (Relationship), ಸಿಚುವೇಶನ್‌ಶಿಪ್ (Situationship) ಮತ್ತು ಸಂಕೀರ್ಣ ಸಂಬಂಧಗಳ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು.

3. ಬ್ರೇಕಪ್ ವಿಷಯ ತಿಳಿಸುವಾಗ ಸಂಗಾತಿಯಿಂದ ಎದುರಾಗುವ ಕೋಪ ಮತ್ತು ಆಕ್ರೋಶವನ್ನು ಸಹಿಸಿಕೊಳ್ಳುವ ತಾಳ್ಮೆ ಇರಬೇಕು.

Company Hiring Chief Breakup Officer

ಈ ಹುದ್ದೆಯ ಅವಶ್ಯಕತೆ ಏನು?:

ಇಂದಿನ ಯುವಕರಲ್ಲಿ ಹೆಚ್ಚುತ್ತಿರುವ 'ಘೋಸ್ಟಿಂಗ್' (Ghosting) ಸಂಸ್ಕೃತಿಯನ್ನು ತಡೆಯುವುದು ಈ ಹುದ್ದೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ಯಾವುದೇ ಮಾಹಿತಿ ನೀಡದೆ ಇದ್ದಕ್ಕಿದ್ದಂತೆ ಸಂಬಂಧದಿಂದ ಮಾಯವಾಗುವುದನ್ನು 'ಘೋಸ್ಟಿಂಗ್' ಎನ್ನಲಾಗುತ್ತದೆ. ಒಂದು ಸಮೀಕ್ಷೆಯ ಪ್ರಕಾರ, ಸುಮಾರು 84% ಯುವಕರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬ್ರೇಕ್‌ ಅಪ್‌ ವೇಳೆ ಎದುರಾಗಬಹುದಾದ ಕಠಿಣ ಮಾತುಕತೆಯನ್ನು ತಪ್ಪಿಸಲು ಜನರು ಈ ಹಾದಿಯನ್ನು ಹಿಡಿಯುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ, ಗೌರವಾನ್ವಿತ ರೀತಿಯಲ್ಲಿ ಸಂಬಂಧವನ್ನು ಕೊನೆಗೊಳಿಸಲು ಕಂಪನಿ ಈ ಹೊಸ ಮಾರ್ಗವನ್ನು ಕಂಡುಕೊಂಡಿದೆ.

ಮಹಿಳಾ ಉದ್ಯೋಗಿಯ ಪಿರಿಯಡ್ಸ್ ಲೀವ್-ಮ್ಯಾನೇಜರ್ ವಾಟ್ಸಾಪ್ ಚಾಟ್ ವೈರಲ್; ನೆಟ್ಟಿಗರು ಹೇಳಿದ್ದೇನು?
ಮಹಿಳಾ ಉದ್ಯೋಗಿಯ ಪಿರಿಯಡ್ಸ್ ಲೀವ್-ಮ್ಯಾನೇಜರ್ ವಾಟ್ಸಾಪ್ ಚಾಟ್ ವೈರಲ್; ನೆಟ್ಟಿಗರು ಹೇಳಿದ್ದೇನು?

ಹೊಸ ಜೀವನಕ್ಕೆ ದಾರಿ:

ಈ ಐಡಿಯಾ ವಿಚಿತ್ರವಾಗಿ ಕಂಡರೂ, ಸಂಬಂಧವನ್ನು ಸ್ಪಷ್ಟವಾಗಿ ಮತ್ತು ಘನತೆಯಿಂದ ಕೊನೆಗೊಳಿಸಲು ಬಯಸುವವರಿಗೆ ಇದು ಉತ್ತಮ ಪರ್ಯಾಯವಾಗಬಹುದು ಎಂದು ಕಂಪನಿಯ ಡೇಟಿಂಗ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಘೋಸ್ಟಿಂಗ್ ನೋವನ್ನು ಅನುಭವಿಸುವ ಬದಲು ಕನಿಷ್ಠ ಪಕ್ಷ ತಮ್ಮ ಸಂಬಂಧಕ್ಕೆ ಅಧಿಕೃತವಾಗಿ ಫುಲ್‌ ಸ್ಟಾಪ್‌ ಬಿದ್ದಿದೆ ಎನ್ನುವ ಸತ್ಯ ಇಲ್ಲಿ ತಿಳಿಯುತ್ತದೆ. ಈ ವಿಶಿಷ್ಟ ವಿಧಾನವು ಸಂಗಾತಿಯಿಂದ ಯಾವುದೇ ಕಹಿ ಅನುಭವವಿಲ್ಲದೆ ಬೇರ್ಪಟ್ಟು ಹೊಸ ಜೀವನ, ಹೊಸ ಮಾರ್ಗ ಕಂಡುಕೊಳ್ಳುವುದಕ್ಕೆ ದಾರಿ ಮಾಡಿ ಕೊಡುತ್ತದೆ.

ಈ ಸುದ್ದಿಯು ಇಂದಿನ ಬದಲಾಗುತ್ತಿರುವ ಸಾಮಾಜಿಕ ಸಂಬಂಧಗಳ ಮೇಲೆ ಒಂದು ಹೊಸ ಬೆಳಕು ಚೆಲ್ಲಿದ್ದು, ಉದ್ಯೋಗ ಮಾರುಕಟ್ಟೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+