'ಜಗದ್ಧಾತ್ರಿ' ಸೀರಿಯಲ್ ಪ್ರೋಮೋ ರಿಲೀಸ್: ಮೋಕ್ಷಿತಾ ಪೈ ಮಾಸ್ ರೀ ಎಂಟ್ರಿಗೆ ಫಿದಾ ಆದ ವೀಕ್ಷಕರು
Jagaddhatri Serial: ಪಾರು ಖ್ಯಾತಿಯ ಮೋಕ್ಷಿತಾ ಪೈ ಅವರು ರಿ ಎಂಟ್ರಿ ಕೊಟ್ಟಿದ್ದು "ಜಗದ್ಧಾತ್ರಿ" ಎನ್ನುವ ಹೊಸ ಸೀರಿಯಲ್ ಮಿಂಚಲು ಸಿದ್ಧರಾಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಜಗದ್ಧಾತ್ರಿ ಹೊಸ ಸೀರಿಯಲ್ ಪ್ರೋಮೋ ಬಿಡುಗಡೆಯಾಗಿದೆ. "ಜಗದ್ಧಾತ್ರಿ" ಸೀರಿಯಲ್‌ನ ಹೊಸ ಪ್ರೋಮೋದಲ್ಲಿ ಮೋಕ್ಷಿತಾ ಪೈ, ವಿಜಯ್ ಸೂರ್ಯ, ಕವಿತಾ ಗೌಡ, ಹಿರಿಯ ನಟಿ ಗಿರಿಜಾ ಲೋಕೇಶ್, ಲಕ್ಷ್ಮೀ ಸಿದ್ದಯ್ಯ, ಚಂದನಾ, ದೀಪಿಕಾ ಜಯಣ್ಣ ಹಾಗೂ ಸಿಂಚನಾ ಗೌಡ ಅವರು ಸೇರಿದಂತೆ ಹಲವು ತಾರೆಯರು ಕಾಣಿಸಿಕೊಂಡಿದ್ದಾರೆ. ಹೊಸ ಸೀರಿಯಲ್ ಪ್ರೋಮೋಗೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಜಗದ್ಧಾತ್ರಿ ಸೀರಿಯಲ್ ಪ್ರಸಾರವಾಗಲಿದೆ. ಈ ಸೀರಿಯಲ್ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. "ಇವಳು ಮನೆ ಬೆಳಗೋ ದೀಪವೂ ಹೌದು ಅಧರ್ಮಕ್ಕೆ ಅಂತ್ಯ ಹಾಡೋ ಜ್ವಾಲೆಯೂ ಹೌದು!" ಎನ್ನುವ ಸಾಲುಗಳೊಂದಿಗೆ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಹೊಸ ಪ್ರೋಮೋಗೆ ವೀಕ್ಷಕರಿಂದ ಅತ್ಯುತ್ತಮ ಅಭಿಪ್ರಾಯ ವ್ಯಕ್ತವಾಗಿದೆ.

ಹೊಸ ಪ್ರೋಮೋದಲ್ಲಿ ಏನಿದೆ ?
ಪಾರುವಾಗಿ ಕನ್ನಡಿಗರ ಮನೆಮಾತಾಗಿದ್ದ ಮೋಕ್ಷಿತಾ ಪೈ ಅವರು ಜಗದ್ಧಾತ್ರಿಯಾಗಿ ಮಿಂಚಲು ಮುಂದಾಗಿದ್ದಾರೆ. ಜಗದ್ಧಾತ್ರಿ ಹೊಸ ಸೀರಿಯಲ್ ಪ್ರೋಮೋದಲ್ಲಿ ಮನೆಯಲ್ಲಿ ಪೂಜೆ ನಡೆಯುತ್ತಿರುವ ದೃಶ್ಯ ಇದೆ. ಗಿರಿಜಾ ಲೋಕೇಶ್ ಅವರು ಜಗದ್ಧಾತ್ರಿಯ ಅಜ್ಜಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ಲಕ್ಷ್ಮೀ ಸಿದ್ದಯ್ಯ ಅವರು ಜದ್ಧಾತ್ರಿಯ ಚಿಕ್ಕಮ್ಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಚಂದನಾ ಅವರು ಮಲ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಅಮೃತಧಾರೆ ಸೀರಿಯಲ್‌ನಲ್ಲೂ ಮಿಂಚಿದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ಹಾಗೂ ಮಾಸ್ ಫೈಟ್‌ನೊಂದಿಗೆ ಜಗದ್ಧಾತ್ರಿಯ ಮೋಕ್ಷಿತಾ ಪೈ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ತುಂಬಾ ಮುಗ್ಧ ಹುಡುಗಿ - ಮನೆಯ ಆಚೆ ಪವರ್‌ಫುಲ್ ಆಕ್ಷನ್ ಕ್ವೀನ್ ಆಗಿ ಪ್ರೋಮೋದಲ್ಲಿ ತೋರಿಸಲಾಗಿದೆ. ವಿಜಯ್ ಸೂರ್ಯ ಅವರು ಸಹ ಸಖತ್ ಆ್ಯಕ್ಷನ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮನೆಯಲ್ಲಿ ಪೂಜೆ ನಡೆಯುವಾಗ "ಜಗದ್ಧಾತ್ರಿ"ಗೆ ಗಂಜಲ ತರಲು ಹೇಳುತ್ತಾರೆ, ಅದೇ ಸಂದರ್ಭಕ್ಕೆ ಕರೆಯೊಂದು ಬಂದು ಮಗುವೊಂದರ ರಕ್ಷಣೆಗೆ "ಜಗದ್ಧಾತ್ರಿ" ಮಾಸ್ ಎಂಟ್ರಿ ಕೊಡುವ ಸೀನ್ ಪ್ರೋಮೋದಲ್ಲಿದೆ.
ಪ್ರೇಕ್ಷಕರು ಹೇಳಿದ್ದೇನು ?
ಇನ್ನು ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ "ಜಗದ್ಧಾತ್ರಿ" ಸೀರಿಯಲ್ ಪ್ರೋಮೋಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಬಂದಿದೆ. ಮೋಕ್ಷಿತಾ ಪೈ ಅವರು ಜಗದ್ಧಾತ್ರಿಯಾಗಿ ಚಂದವಾಗಿ ಕಾಣಿಸಿಕೊಂಡಿದ್ದಾರೆ ಎಂದು ವೀಕ್ಷಕರು ಹೇಳಿದ್ದಾರೆ. ಇನ್ನೂ ಕೆಲವರು ತುಂಬಾ ವಿಜೃಂಭಣೆಯಾಗಿದೆ ಎಂದರೆ ಇನ್ನೂ ಕೆಲವರು, ಮನೆಯಲ್ಲಿ ಯಾರಿಗೂ ಗೊತ್ತಾಗದಂಗೆ ಟ್ರೇನಿಂಗ್ ಪಡೆದು ಪೋಲಿಸ್ ಡಿಪಾರ್ಟ್ಮೆಂಟ್ ಸೇರಿ ಕೆಲಸ ಮಾಡುವುದು, ಮನೆಯಲ್ಲಿ ಕೆಲಸ ಮಾಡುವುದು ಹೇಗೆ ಸಾಧ್ಯ? ಇದಕ್ಕೆ ಸರ್ಕಾರದ ಅನುಮತಿ ಬೇಡವೇ? ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಯಾವಾಗ ಬೇಕಾದರೂ ತಮಗೆ ತಿಳಿದಂತೆ ಡ್ಯೂಟಿ ಮಾಡಲು ಬರುವುದೇ ಎಂದು ಲಾಜಿಕ್ ಪ್ರಶ್ನೆ ಮಾಡಿದ್ದಾರೆ. ಇನ್ನೂ ಹಲವು ವೀಕ್ಷಕರು ಈ ಸೀರಿಯಲ್ ಈಗಾಗಲೇ ಹಿಂದಿಯಲ್ಲಿ ಪ್ರಸಾರವಾಗುತ್ತಿದೆ. ಕನ್ನಡಕ್ಕೆ ತಕ್ಕಂತೆ ಸ್ವಲ್ಪ ಬದಲಾಯಿಸಿಕೊಂಡರೆ ಚೆನ್ನಾಗಿ ಇರುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.














Click it and Unblock the Notifications