Kiccha Sudeep: ಬಾಲಿವುಡ್ ನಟರಿಗೆ ಸೆಡ್ಡು ಹೊಡೆಯುವಂತಿದೆ ಕಿಚ್ಚ ಸುದೀಪ್ ಖರೀದಿಸಿರುವ ಲಕ್ಸುರಿ ಕ್ಯಾರವಾನ್
ಕನ್ನಡ ಚಿತ್ರರಂಗದ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅವರ ಹೊಸ ಕ್ಯಾರವಾನ್ ಸುದ್ದಿ ಸದ್ಯ ಇಡೀ ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನ ಸೃಷ್ಟಿಸಿದೆ. ಕೇವಲ ಸ್ಯಾಂಡಲ್‌ವುಡ್ ಮಾತ್ರವಲ್ಲದೆ, ಬಾಲಿವುಡ್‌ನ ಬಿಗ್ ಸ್ಟಾರ್‌ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಟಾಲಿವುಡ್‌ನ ಅಲ್ಲು ಅರ್ಜುನ್ ಅವರ ಅಲ್ಟ್ರಾ-ಲಕ್ಸುರಿ ಕ್ಯಾರವಾನ್‌ಗಳಿಗೆ ನೇರವಾಗಿ ಸೆಡ್ಡು ಹೊಡೆಯುವ ರೇಂಜ್‌ನಲ್ಲಿ ಕಿಚ್ಚನ ಈ ಹೊಸ ಚಲಿಸುವ ಅರಮನೆ ಸಿದ್ಧವಾಗಿದೆ.
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಇಂತಹ ಕ್ಯಾರವಾನ್ ಬೇರೆ ಯಾವ ನಟನ ಬಳಿಯೂ ಇಲ್ಲ. ಕೋಟಿ ಕೋಟಿ ಬೆಲೆ ಬಾಳುವ ಈ ಕ್ಯಾರವಾನ್, ಐಷಾರಾಮಿ ಸೌಲಭ್ಯಗಳ ವಿಷಯದಲ್ಲಿ ದೇಶದ ಅತ್ಯುನ್ನತ ತಾರೆಯರ ವಾಹನಗಳ ಸಾಲಿಗೆ ಬಂದು ನಿಂತಿದೆ. ಇದರ ಬೆಲೆ ಕೇಳಿದವರು ಈ ಹಣದಲ್ಲಿ ನನ್ನ ಕನಸಿನ ಬಂಗಲೆಯನ್ನೇ ಕಟ್ಟಬಹುದು ಎಂದು ಹುಬ್ಬೇರಿಸಿದ್ದಾರೆ.

ಬಾಲಿವುಡ್ ಲೆವೆಲ್‌ಗೆ ಕಿಚ್ಚನ ರಾಯಲ್ ಎಂಟ್ರಿ
ಸಾಮಾನ್ಯವಾಗಿ ಕೋಟಿ ಕೋಟಿ ಬೆಲೆಯ ಇಂತಹ ಹೈಟೆಕ್ ಕ್ಯಾರವಾನ್‌ಗಳು ಕೇವಲ ಬಾಲಿವುಡ್‌ಗೆ ಮಾತ್ರ ಸೀಮಿತ ಎಂಬ ಮಾತು ಇತ್ತು. ಶಾರುಖ್ ಖಾನ್ ಅವರ ₹5 ಕೋಟಿ ಬೆಲೆಯ ಐಪ್ಯಾಡ್ ನಿಯಂತ್ರಿತ ವೋಲ್ವೋ ಕ್ಯಾರವಾನ್ ಹಾಗೂ ಅಲ್ಲು ಅರ್ಜುನ್ ಅವರ ₹7 ಕೋಟಿ ಮೌಲ್ಯದ 'ಫಾಲ್ಕನ್' ಕ್ಯಾರವಾನ್‌ಗಳು ದೇಶದಲ್ಲೇ ಅತ್ಯಂತ ದುಬಾರಿ ಎನಿಸಿಕೊಂಡಿವೆ. ಈಗ ಇವರಿಬ್ಬರ ರೇಂಜ್‌ಗೆ ಕಿಚ್ಚ ಸುದೀಪ್ ಅವರ ₹6.5 ಕೋಟಿಯ ಈ ಹೊಸ ವಾಹನ ಲಗ್ಗೆ ಇಟ್ಟಿದೆ.
BOSS @KicchaSudeep new Caravan 😍🔥@KicchaSudeep #KicchaSudeep𓃵 pic.twitter.com/nbU4Ix8hf7
— UTTARA KANNADA DISTRICT KICCHA SUDEEP FANS (A)® (@UKDKSFAofficial) June 27, 2026
ಖ್ಯಾತ ಡಿಸೈನರ್ ಕೈಚಳಕ
ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅವರ ಕ್ಯಾರವಾನ್ ಅನ್ನು ವಿನ್ಯಾಸಗೊಳಿಸಿದ್ದ ದೇಶದ ಪ್ರಸಿದ್ಧ ಆಟೋಮೊಬೈಲ್ ಡಿಸೈನರ್ ದಿಲೀಪ್ ಛಾಬ್ರಿಯಾ ಅವರ ಮಾಲೀಕತ್ವದ 'DC2' ಸಂಸ್ಥೆಯೇ ಸುದೀಪ್ ಅವರ ಈ ಕ್ಯಾರವಾನ್ ಅನ್ನು ಕೂಡ ಕಸ್ಟಮೈಸ್ ಮಾಡಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಸಿದ್ಧವಾಗಿರುವ ಈ ಕ್ಯಾರವಾನ್‌ನ ಒಳಾಂಗಣವು ಒಮ್ಮೆ ಹೆಜ್ಜೆ ಇಟ್ಟರೆ ಪ್ರೈವೇಟ್ ಜೆಟ್‌ನೊಳಗೆ ಕೂತ ಅನುಭವ ನೀಡುತ್ತದೆ. ಸುದೀಪ್ ಅವರ ವರ್ಕೌಟ್ ಕ್ರೇಜ್‌ಗೆ ತಕ್ಕಂತೆ ಇದರೊಳಗೆ ಅತ್ಯಾಧುನಿಕ ಜಿಮ್ ಮಾಡ್ಯುಲರ್ ಸೌಲಭ್ಯವನ್ನೂ ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಕ್ಯಾರವಾನ್ ಮೇಲೂ ಮಿನುಗುತ್ತಿದೆ 'K' ಲೋಗೋ
ಈ ಐಷಾರಾಮಿ ಕ್ಯಾರವಾನ್‌ನ ಮತ್ತೊಂದು ಹೈಲೈಟ್ ಎಂದರೆ ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ವಿನ್ಯಾಸಗೊಳಿಸಲಾಗಿರುವ ಲೋಗೋ. ಕಿಚ್ಚ ಸುದೀಪ್ ಅವರು ತಮ್ಮ ಕಾರುಗಳ ಮೇಲೆ ಬಳಸುವ ತಮ್ಮದೇ ಸಿಗ್ನೇಚರ್ ಹೆಸರಿನ ಮೊದಲ ಅಕ್ಷರವಾದ 'K' (Kiccha) ಸಿಂಬಲ್ ಅನ್ನು ಈ ಹೊಸ ಕ್ಯಾರವಾನ್ ಮೇಲೂ ಹಾಕಿಸಿಕೊಂಡಿದ್ದಾರೆ. ಇದು ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರ 'AA' ಸಿಗ್ನೇಚರ್ ಕ್ಯಾರವಾನ್ ಶೈಲಿಯನ್ನು ಹೋಲುವಂತಿದೆ.
'ಬಿಲ್ಲ ರಂಗ ಬಾಷಾ' ಸೆಟ್‌ಗೆ ಎಂಟ್ರಿ
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಹೈ-ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ 'ಬಿಲ್ಲ ರಂಗ ಬಾಷಾ' ಚಿತ್ರೀಕರಣದ ಅಡ್ಡಕ್ಕೆ ಈ ಐಷಾರಾಮಿ ವಾಹನ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಶೂಟಿಂಗ್ ಸೆಟ್‌ನಲ್ಲಿ ರಾಜ ಗಾಂಭೀರ್ಯದಿಂದ ನಿಂತಿರುವ ಈ ಕ್ಯಾರವಾನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, "ನಮ್ಮ ಕಿಚ್ಚನ ರೇಂಜ್ ಈಗ ಕೇವಲ ಸ್ಯಾಂಡಲ್‌ವುಡ್‌ಗೆ ಮಾತ್ರ ಸೀಮಿತವಾಗಿಲ್ಲ, ಬಾಲಿವುಡ್ ಲೆವೆಲ್‌ಗೆ ಬೆಳೆದಿದೆ" ಎಂದು ಅಭಿಮಾನಿಗಳು ಕಾಲರ್ ಎಗರಿಸುತ್ತಿದ್ದಾರೆ. ಈ ಕ್ಯಾರವಾನ್ ವಿಡಿಯೋಗಳನ್ನು ಕಿಚ್ಚ ಸುದೀಪ್ ಫ್ಯಾನ್ ಫೇಜ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.













Click it and Unblock the Notifications