ಬಾಬಾ ಜೊತೆ ಮೋದಿ ಫೋಟೋ ಇಟ್ಟು ಲಡ್ಡು ತಿನ್ನಿಸ್ತಾಳೆ ಮೊಮ್ಮಗಳು: ಖ್ಯಾತ ನಟನ ವಿಡಿಯೋ ವೈರಲ್

ಟೀಮ್ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ, ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ನಟಿ ಅತಿಯಾ ಶೆಟ್ಟಿ ಅವರ 15 ತಿಂಗಳ ಪುಟ್ಟ ಮಗಳು 'ಇವಾರಾ' ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಮಾಡುವ ಒಂದು ಕೆಲಸ ಈಗ ಇಡೀ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಮಗುವಿನ ಈ ವಿಚಿತ್ರ ಆದರೆ ಅಷ್ಟೇ ಮುದ್ದಾದ ಅಭ್ಯಾಸವನ್ನು ಸ್ವತಃ ಆಕೆಯ ಅಜ್ಜ, ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಅವರೇ ಬಿಚ್ಚಿಟ್ಟಿದ್ದಾರೆ. ಮನೆಯಲ್ಲಿ ಯಾರು ಏನೇ ಹೇಳಿಕೊಡದಿದ್ದರೂ, ಆ ಪುಟ್ಟ ಕಂದಮ್ಮ ದೇವಸ್ಥಾನದಲ್ಲಿರುವ ಗಣೇಶನ ಪ್ರಸಾದವನ್ನು ತಗೆದುಕೊಂಡು ಹೋಗಿ ಆ ದೇಶದ ಅತ್ಯುನ್ನತ ನಾಯಕನ ಫೋಟೋಗೆ ತಿನ್ನಿಸುತ್ತಿದ್ದಾಳೆ. ಅಷ್ಟಕ್ಕೂ ಅದು ಯಾರ ಫೋಟೋ? ವಿಮಾನ ನಿಲ್ದಾಣದಲ್ಲಿ ನಡೆದ ಆ ಒಂದು ಘಟನೆ ಮಗುವಿನ ಮನಸ್ಸನ್ನು ಹೇಗೆ ಬದಲಿಸಿತು? ಇಲ್ಲಿದೆ ನೋಡಿ ಆ ರೋಚಕ ಕಥೆ.

ಬಾಲಿವುಡ್‌ನ ಖ್ಯಾತ ನಟ, ಕರ್ನಾಟಕದ ಸುನಿಲ್ ಶೆಟ್ಟಿ ಅವರು ಇತ್ತೀಚೆಗೆ ಹಂಚಿಕೊಂಡಿರುವ ತಮ್ಮ ಕುಟುಂಬದ ಪುಟ್ಟ ಮುದ್ದಾದ ಪ್ರಸಂಗವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೇವಲ 15 ತಿಂಗಳ ಪ್ರಾಯದ ತಮ್ಮ ಪುಟ್ಟ ಮೊಮ್ಮಗಳು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿಟ್ಟಿರುವ ನಿಷ್ಕಲ್ಮಶ ಪ್ರೀತಿಯ ಅಪರೂಪದ ಸಂಗತಿಯನ್ನು ಸುನಿಲ್ ಶೆಟ್ಟಿ ಬಹಿರಂಗಪಡಿಸಿದ್ದಾರೆ. ತಮ್ಮ ಮೊಮ್ಮಗಳು ದೇವರ ಕೋಣೆಯಲ್ಲಿ ಸಾಯಿಬಾಬಾ ಅವರ ಫೋಟೋದ ಪಕ್ಕದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನೂ ಇಟ್ಟುಕೊಂಡು ಪೂಜೆ ಮಾಡುತ್ತಾಳೆ ಎಂದು ಸುನಿಲ್ ಶೆಟ್ಟಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Suniel Shetty

'ಮೋದಿ ಜೀ'ಗೆ ಲಡ್ಡು ನೈವೇದ್ಯ, ಯಾರೂ ಹೇಳಿಕೊಟ್ಟಿದ್ದಲ್ಲ

ಮಾಧ್ಯಮವೊಂದರ ಸಂವಾದದಲ್ಲಿ ಈ ಕುರಿತು ಮಾತನಾಡಿದ ಸುನಿಲ್ ಶೆಟ್ಟಿ, "ನನ್ನ 15 ತಿಂಗಳ ಮೊಮ್ಮಗಳು ತನ್ನ ಪುಸ್ತಕದಲ್ಲಿ ಸಾಯಿಬಾಬಾ ಅವರ ಫೋಟೋದ ಜೊತೆಗೇ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನೂ ಇಟ್ಟುಕೊಂಡಿದ್ದಾಳೆ. ಅವಳು ಪ್ರಧಾನಿ ಅವರನ್ನು ಅತ್ಯಂತ ಮುದ್ದಾಗಿ 'ಮೋದಿ ಜೀ' ಎಂದೇ ಕರೆಯುತ್ತಾಳೆ" ಎಂದು ತಿಳಿಸಿದ್ದಾರೆ.

ಇಷ್ಟೇ ಅಲ್ಲದೆ, ಮನೆಯಲ್ಲಿ ಪೂಜೆ ಮಾಡುವಾಗ ಗಣೇಶನ ಮೂರ್ತಿಯ ಮುಂದಿಟ್ಟಿರುವ ಲಡ್ಡು ಪ್ರಸಾದವನ್ನು ತಗೆದುಕೊಂಡು ಹೋಗಿ ಮೋದಿ ಅವರ ಫೋಟೋಗೆ ತಿನ್ನಿಸಲು ಪ್ರಯತ್ನಿಸುತ್ತಾಳೆ. ವಿಶೇಷವೆಂದರೆ, ಆಕೆಗೆ ಕುಟುಂಬದ ಯಾರೊಬ್ಬರೂ ಈ ರೀತಿ ಮಾಡುವಂತೆ ಹೇಳಿಕೊಟ್ಟಿಲ್ಲ. ಸಂಪೂರ್ಣವಾಗಿ ಆ ಪುಟ್ಟ ಮಗುವೇ ಸ್ವತಃ ಈ ಅಭ್ಯಾಸವನ್ನು ಮಾಡಿಕೊಂಡಿದೆ ಎಂದು ಶೆಟ್ಟಿ ವಿವರಿಸಿದ್ದಾರೆ.

Kiccha Sudeep: ಬಾಲಿವುಡ್ ನಟರಿಗೆ ಸೆಡ್ಡು ಹೊಡೆಯುವಂತಿದೆ ಕಿಚ್ಚ ಸುದೀಪ್ ಖರೀದಿಸಿರುವ ಲಕ್ಸುರಿ ಕ್ಯಾರವಾನ್
Kiccha Sudeep: ಬಾಲಿವುಡ್ ನಟರಿಗೆ ಸೆಡ್ಡು ಹೊಡೆಯುವಂತಿದೆ ಕಿಚ್ಚ ಸುದೀಪ್ ಖರೀದಿಸಿರುವ ಲಕ್ಸುರಿ ಕ್ಯಾರವಾನ್

ರಾಜಕೀಯವಲ್ಲ, ಇದು ಮಗುವಿನ ನಿಷ್ಕಲ್ಮಶ ಪ್ರೀತಿ

ಸಾಮಾನ್ಯವಾಗಿ ಇಂತಹ ವಿಷಯಗಳು ಹೊರಬಂದಾಗ ರಾಜಕೀಯ ಚರ್ಚೆಗಳು ಶುರುವಾಗುವುದು ಸಹಜ. ಆದರೆ ಇದನ್ನು ಮುಂಚಿತವಾಗಿಯೇ ಸ್ಪಷ್ಟಪಡಿಸಿರುವ ಸುನಿಲ್ ಶೆಟ್ಟಿ, "ಇದು ಯಾವುದೇ ರಾಜಕೀಯ ಪ್ರೇರಿತ ಹೇಳಿಕೆಯಲ್ಲ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ಸೂಚಿಸುವ ಉದ್ದೇಶವೂ ಇಲ್ಲ. ಇದು ಕೇವಲ ಒಂದು ಮಗುವಿನ ಮುಗ್ಧತೆ ಮತ್ತು ಪ್ರೀತಿಯನ್ನು ತೋರಿಸುವ ಕೌಟುಂಬಿಕ ಕ್ಷಣವಷ್ಟೇ" ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ತಾವೂ ದೀರ್ಘಕಾಲದಿಂದ ಆರಾಧಿಸುತ್ತಿರುವುದಾಗಿ ಹೇಳಿಕೊಂಡ ನಟ ಸುನಿಲ್ ಶೆಟ್ಟಿ, ಮೊಮ್ಮಗಳ ಈ ನಡೆಯನ್ನು ನೋಡಿ ಭಾವುಕರಾಗಿದ್ದಾರೆ. "ಈ ಪುಟ್ಟ ಮಗುವಿನ ಮುಗ್ಧ ವರ್ತನೆಯನ್ನು ನೋಡಿದಾಗ ನನಗೆ ಪ್ರಧಾನಿ ಮೋದಿ ಅವರ ವ್ಯಕ್ತಿತ್ವದಲ್ಲಿ 'ಏನೋ ಒಂದು ಮ್ಯಾಜಿಕ್ (ಜಾದೂ) ಇದೆ' ಅನಿಸುತ್ತದೆ. ಇಲ್ಲದಿದ್ದರೆ 15 ತಿಂಗಳ ಮಗುವಿಗೆ ಇಷ್ಟೊಂದು ಪ್ರೀತಿ ಹೇಗೆ ಹುಟ್ಟಲು ಸಾಧ್ಯ?" ಎಂದು ಸುನಿಲ್ ಶೆಟ್ಟಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ತಾರೆ ಕೆ.ಎಲ್ ರಾಹುಲ್ ಅವರ ಮುದ್ದಿನ ಮಗಳ ಈ ವಿಡಿಯೋ ಮತ್ತು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕ್ರಿಕೆಟ್ ಹಾಗೂ ಸಿನೆಮಾ ಪ್ರೇಮಿಗಳಿಬ್ಬರೂ ಇವಾರಾಳ ಮುಗ್ಧತೆಗೆ ಫಿದಾ ಆಗಿದ್ದಾರೆ. ಮಗುವಿನ ಈ ಮುಗ್ಧ ನಡೆಗೆ ನೆಟ್ಟಿಗರು ಫಿದಾ ಆಗಿದ್ದು, ಹಾರ್ಟ್ ಎಮೋಜಿಗಳ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. "ಮಕ್ಕಳ ಮುಗ್ಧತೆಗೆ ಯಾವುದೇ ಗಡಿಗಳಿಲ್ಲ, ಇದು ನಿಜಕ್ಕೂ ಅದ್ಭುತ ಸಂಗತಿ" ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+