ಸರ್ಕಾರಿ ಉದ್ಯೋಗಿಗಳಿಗೆ ವಾರದಲ್ಲಿ 4 ದಿನ ಕೆಲಸ, 3 ದಿನ ರಜೆ, ಇನ್ಫೋಸಿಸ್ ನಾರಾಯಣಮೂರ್ತಿಗೆ ಕ್ಲಾಸ್

Employees: ಸಾಮಾನ್ಯವಾಗಿ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳು ವಾರಾಂತ್ಯ (ಶನಿವಾರ, ಭಾನುವಾರ)ದಲ್ಲಿ ಮುಚ್ಚಲ್ಪಡುತ್ತವೆ. ಆದರೆ ಈ ಭಾಗದ ಕಂಪನಿಗಳು ಮಾತ್ರ ಉದ್ಯೋಗಿಗಳಿಗೆ ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರಜೆ ನೀಡಿವೆ. ಜೊತೆಗೆ ಕೆಲಸದ ಅವಧಿಯನ್ನು ಸಹ ಇಳಿಕೆ ಮಾಡಲಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರದ್ದೇ ಚರ್ಚೆ ಜೋರಾಗಿದೆ. ಹಾಗಾದ್ರೆ ಎಲ್ಲಿ, ಕಾರಣ ಏನು ಹಾಗೂ ಈ ಕುರಿತು ನೆಟ್ಟಿಗರು ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ದುಬೈ ಸರ್ಕಾರವು ತನ್ನ ನೌಕರರಿಗೆ ಬೇಸಿಗೆಯ ಅವಧಿಯಲ್ಲಿ ಭಾರಿ ಸಿಹಿಸುದ್ದಿಯನ್ನ ನೀಡಿದೆ. ಸರ್ಕಾರಿ ನೌಕರರ ಜೀವನಮಟ್ಟ ಸುಧಾರಣೆಗಾಗಿ ವಾರದಲ್ಲಿ ಕೇವಲ 4 ದಿನಗಳ ಕೆಲಸದ ಅವಧಿಯನ್ನು ಘೋಷಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಭಾರತದ ಕಾರ್ಪೊರೇಟ್ ಉದ್ಯೋಗಿಗಳು ಸೋಶಿಯಲ್ ಮೀಡಿಯಾದಲ್ಲಿ ದುಬೈ ನೌಕರರ ಅದೃಷ್ಟವನ್ನು ಕೊಂಡಾಡುತ್ತಾ, ಭಾರತದ ಕಠಿಣ ಕೆಲಸದ ಶೈಲಿಯನ್ನ ಹಾಸ್ಯಭರಿತವಾಗಿ ಟ್ರೋಲ್ ಮಾಡುತ್ತಿದ್ದಾರೆ.

Dubai Introduces 4-Day Work Week Indian Employees React to 3-Day Weekend Viral on Social media

ಸರ್ಕಾರಿ ಇಲಾಖೆಯ ನೌಕರರಿಗೆ ಎರಡು ಆಯ್ಕೆಗಳು

ದುಬೈ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು 'ಅವರ್ ಫ್ಲೆಕ್ಸಿಬಲ್ ಸಮ್ಮರ್' ಎಂಬ ವಿಶೇಷ ಯೋಜನೆಯನ್ನು ಜೂನ್ 29ರಿಂದ ಸೆಪ್ಟೆಂಬರ್ 10ರ ವರೆಗೆ ಜಾರಿಗೆ ತರುತ್ತಿದೆ. ಬೇಸಿಗೆಯ ತಿಂಗಳುಗಳಲ್ಲಿ ನೌಕರರಿಗೆ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಇದರ ಅಡಿಯಲ್ಲಿ ಸರ್ಕಾರಿ ಇಲಾಖೆಯ ನೌಕರರಿಗೆ ಎರಡು ಆಯ್ಕೆಗಳನ್ನು ನೀಡಲಾಗಿದೆ.

ಮೊದಲ ಆಯ್ಕೆ 4 ದಿನಗಳ ಕೆಲಸವಾಗಿದೆ. ನೌಕರರು ಸೋಮವಾರದಿಂದ ಗುರುವಾರದವರೆಗೆ ದಿನಕ್ಕೆ 8 ಗಂಟೆಗಳ ಕಾಲ ಕೆಲಸ ಮಾಡಬೇಕು. ಶುಕ್ರವಾರ ಅವರಿಗೆ ಸಂಪೂರ್ಣ ರಜೆ ಇರಲಿದ್ದು, ವಾರದಲ್ಲಿ ಮೂರು ದಿನಗಳ ಸುದೀರ್ಘ ವೀಕೆಂಡ್ ಅನ್ನು ಆನಂದಿಸಬಹುದು. ಎರಡನೇ ಆಯ್ಕೆ ಕಡಿಮೆ ಅವಧಿಯ ಕೆಲಸವಾಗಿದ್ದು, ಸೋಮವಾರದಿಂದ ಗುರುವಾರದವರೆಗೆ ದಿನಕ್ಕೆ 7 ಗಂಟೆ ಕೆಲಸ ಇರಲಿದ್ದು, ಶುಕ್ರವಾರದಂದು 4.5 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ.

ಭಾರತೀಯ ಉದ್ಯೋಗಿಗಳು ಹೇಳೋದೇನು?

ಅಷ್ಟೇ ಅಲ್ಲದೆ ಸಾಧ್ಯವಿರುವ ಕಡೆಗಳಲ್ಲಿ ವರ್ಕ್ ಫ್ರಮ್ ಹೋಮ್ ಮತ್ತು ಫ್ಲೆಕ್ಸಿಬಲ್ ಟೈಮಿಂಗ್ಸ್ ಅಳವಡಿಸಿಕೊಳ್ಳಲು ಇಲಾಖೆಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಇದೀಗ ಈ ಅಧಿಕೃತ ಪ್ರಕಟಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಭಾರತೀಯ ಉದ್ಯೋಗಿಗಳು ವ್ಯಂಗ್ಯದ ಮೂಲಕ ಅಸಮಾಧಾನವನ್ನ ವ್ಯಕ್ತಪಡಿಸುತ್ತಿದ್ದಾರೆ.

ಟ್ವಿಟ್‌ ಬಳಕೆದಾರರೊಬ್ಬರೊಬ್ಬರು ತಮಾಷೆಯಾಗಿ, 'ನಮಗೂ ವಾರದಲ್ಲಿ 5 ದಿನ ಆಫೀಸ್ ಕೆಲಸ ಮತ್ತು 2 ದಿನ ಮನೆಯಿಂದಲೇ ಕೆಲಸ ಇರುತ್ತದೆ, ಆದರೆ ನಮಗೆ ವೀಕೆಂಡ್ ಎಂಬುದೇ ಇಲ್ಲ,' ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಭಾರತದ ಪರಿಸ್ಥಿತಿಯನ್ನು ನೆನೆದು, 'ನಾವು ಭಾರತದಲ್ಲಿ ಇನ್ನೂ ವಾರಕ್ಕೆ 6 ದಿನಗಳ ಕಾಲ ಕತ್ತೆಯಂತೆ ದುಡಿಯುತ್ತಿದ್ದೇವೆ,' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿಕೆಗೆ ಟಾಂಗ್

ಇನ್ನು ಕೆಲವು ಉದ್ಯೋಗಿಗಳು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಈ ಹಿಂದೆ ನೀಡಿದ್ದ 'ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು,' ಎಂಬ ವಿವಾದಾತ್ಮಕ ಹೇಳಿಕೆಯನ್ನು ನೆನಪಿಸಿಕೊಂಡು ಲೇವಡಿ ಮಾಡಿದ್ದಾರೆ. 'ದುಬೈನ ಈ ಸುದ್ದಿ ಕೇಳಿ ಭಾರತದಲ್ಲಿ 70 ಗಂಟೆ ಕೆಲಸದ ಬಗ್ಗೆ ಪ್ರತಿಪಾದಿಸಿದ ಕಂಪನಿ ಮಾಲೀಕರಿಗೆ ಖಂಡಿತ ಆತಂಕ ಮೂಡಿಸಿರಬಹುದು,' ಎಂದು ಮಾರ್ಮಿಕವಾಗಿ ಕಮೆಂಟ್ ಮಾಡಿದ್ದಾರೆ.

ದುಬೈ ಸರ್ಕಾರದ ಅಧಿಕಾರಿಗಳ ಪ್ರಕಾರ, ಈ ಯೋಜನೆಯಿಂದ ನೌಕರರ ಸಂತೋಷ ಮತ್ತು ಆಸಕ್ತಿ ಹೆಚ್ಚಲಿದೆಯೇ ವಿನಃ ಕೆಲಸದ ಕಾರ್ಯಕ್ಷಮತೆ ಕುಂಠಿತಗೊಳ್ಳುವುದಿಲ್ಲ. ಆದರೆ ಭಾರತದಲ್ಲಿ ಮಾತ್ರ ಖಾಸಗಿ ವಲಯದ ಉದ್ಯೋಗಿಗಳು ಇಂತಹದೊಂದು ನಿಯಮ ನಮ್ಮ ದೇಶದಲ್ಲೂ ಜಾರಿಗೆ ಬರಬಾರದೇ ಎಂದು ಕಾತರದಿಂದ ಚರ್ಚಿಸುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ದುಬೈನ ಈ ಮಾದರಿ ಇಲ್ಲಿ ಜಾರಿಗೆ ಬಂದರೆ ಒಳಿತು ಎನ್ನುವುದು ಭಾರತದ ಉದ್ಯೋಗಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+