ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ukraine Country: ಉಕ್ರೇನ್‌ ದೇಶದ ಇತಿಹಾಸ, ರಾಜಧಾನಿ, ಗಡಿ, ಜನಸಂಖ್ಯೆ ಮಾಹಿತಿ ಇಲ್ಲಿದೆ..

|
Google Oneindia Kannada News

ಕೀವ್‌, ಫೆಬ್ರವರಿ 24: ರಷ್ಯಾದ ಶೆಲ್ ದಾಳಿಯಿಂದ 7 ಜನರು ಸಾವನ್ನಪ್ಪಿದ್ದಾರೆ ಮತ್ತು 9 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಹೇಳಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಆ ಬಳಿಕವೇ ನಾವು ಐವತ್ತು ರಷ್ಯಾದ ಸೈನಿಕರನ್ನು ಕೊಂದಿದ್ದೇವೆ ಹಾಗೂ ಆರು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್‌ ಹೇಳಿದೆ.

ಫೆಬ್ರವರಿ 21 ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪೂರ್ವ ಉಕ್ರೇನ್‌ನ ಎರಡು ಪ್ರತ್ಯೇಕತಾವಾದಿ ಪ್ರದೇಶಗಳನ್ನು ಸ್ವತಂತ್ರವೆಂದು ಗುರುತಿಸಿದ ನಂತರ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿದೆ. ಇಂದು ಉಕ್ರೇನ್‌ನಲ್ಲಿ ಯುದ್ಧಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ನೀಡಿದ್ದಾರೆ. ನಿರೀಕ್ಷೆಯಂತೆಯೇ ಎರಡೂ ದೇಶಗಳ ಮಧ್ಯೆ ಯುದ್ಧ ಈಗಾಗಲೇ ಆರಂಭವಾಗಿದೆ. ನಾವು ನೋವುಗಳು ಸಂಭವಿಸುತ್ತಿದೆ.

ಈ ನಡುವೆ ಉಕ್ರೇನ್‌ ಬಗ್ಗೆ ಅಗತ್ಯ ಮಾಹಿತಿಯನ್ನು ನಾವು ನಿಮಗೆ ಇಲ್ಲಿ ನೀಡಿದ್ದೇವೆ. ಉಕ್ರೇನ್‌ನ ಜನಸಂಖ್ಯೆ, ಧಾರ್ಮಿಕ ನೆಲೆ, ಗಡಿ ಭಾಗ, ಇತಿಹಾಸ, ಭೌಗೋಳಿಕತೆ, ರಾಜಧಾನಿ ಮೊದಲಾದ ಮಾಹಿತಿಯನ್ನು ನಾವು ಇಲ್ಲಿ ವಿವರಿಸಿದ್ದೇವೆ. ಮುಂದೆ ಓದಿ...

ಸಂಘರ್ಷ ಸ್ವಾರಸ್ಯ: ಉಕ್ರೇನ್ ವಿರುದ್ಧ ರಷ್ಯಾ ಸಮರಕ್ಕೆ ಏನು ಕಾರಣ? ಸಂಘರ್ಷ ಸ್ವಾರಸ್ಯ: ಉಕ್ರೇನ್ ವಿರುದ್ಧ ರಷ್ಯಾ ಸಮರಕ್ಕೆ ಏನು ಕಾರಣ?

 ಉಕ್ರೇನ್ ರಾಜಧಾನಿ ಮತ್ತು ಗಡಿಗಳು

ಉಕ್ರೇನ್ ರಾಜಧಾನಿ ಮತ್ತು ಗಡಿಗಳು

ರಷ್ಯಾ ನಂತರ ಯುರೋಪ್‌ನಲ್ಲಿ ಉಕ್ರೇನ್ ಎರಡನೇ ಅತಿದೊಡ್ಡ ದೇಶವಾಗಿದೆ. ಇದರ ರಾಜಧಾನಿ ಕೀವ್‌ ದೇಶದ ಅತಿದೊಡ್ಡ ನಗರ. ರಾಷ್ಟ್ರವು ತನ್ನ ಗಡಿಗಳನ್ನು ರಷ್ಯಾದೊಂದಿಗೆ ಪೂರ್ವ ಮತ್ತು ಈಶಾನ್ಯ ಗಡಿಗಳಲ್ಲಿ, ಉತ್ತರಕ್ಕೆ ಬೆಲಾರಸ್, ಪಶ್ಚಿಮಕ್ಕೆ ಪೋಲೆಂಡ್, ಸ್ಲೋವಾಕಿಯಾ ಮತ್ತು ಹಂಗೇರಿ, ದಕ್ಷಿಣಕ್ಕೆ ರೊಮೇನಿಯಾ ಮತ್ತು ಮೊಲ್ಡೊವಾದೊಂದಿಗೆ ಹಂಚಿಕೊಂಡಿದೆ. ಇದು ಅಜೋವ್ ಸಮುದ್ರ ಮತ್ತು ಕಪ್ಪು ಸಮುದ್ರದ ಉದ್ದಕ್ಕೂ ಕರಾವಳಿಯನ್ನು ಹೊಂದಿದೆ.

 ಉಕ್ರೇನ್ ಇತಿಹಾಸ

ಉಕ್ರೇನ್ ಇತಿಹಾಸ

ಸೋವಿಯತ್ ಒಕ್ಕೂಟದ ಪತನದ ನಂತರ 20 ನೇ ಶತಮಾನದ ಕೊನೆಯಲ್ಲಿ ಉಕ್ರೇನ್ ಸಂಪೂರ್ಣ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ದೇಶವನ್ನು ಮೊದಲು ಪೋಲೆಂಡ್-ಲಿಥುವೇನಿಯಾ, ರಷ್ಯಾ ಮತ್ತು ಯುಎಸ್ಎಸ್ಆರ್ ಆಳ್ವಿಕೆ ನಡೆಸಿತು. ಇದು 1918 ರಿಂದ 1920 ರವರೆಗೆ ಅಲ್ಪಾವಧಿಗೆ ಸ್ವತಂತ್ರವಾಯಿತು. ಆದರೆ ಎರಡು ವಿಶ್ವ ಯುದ್ಧಗಳ ನಡುವೆ ಕೆಲವು ಪಾಶ್ಚಿಮಾತ್ಯ ಪ್ರದೇಶಗಳನ್ನು ಪೋಲೆಂಡ್, ರೊಮೇನಿಯಾ ಮತ್ತು ಜೆಕೊಸ್ಲೊವಾಕಿಯಾ ಆಳ್ವಿಕೆ ನಡೆಸಿತು. ಬಳಿಕ ರಾಷ್ಟ್ರವು ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯ (S.S.R.) ಆಗಿ ಸೋವಿಯತ್ ಒಕ್ಕೂಟದ ಭಾಗವಾಯಿತು. 1991 ರಲ್ಲಿ ಸೋವಿಯತ್ ಒಕ್ಕೂಟದ ಪತನದೊಂದಿಗೆ, ಉಕ್ರೇನಿಯನ್ ಸೋವಿಯತ್ ಸಮಾಜವಾದಿ ಗಣರಾಜ್ಯವು 1990 ರಲ್ಲಿ ಸಾರ್ವಭೌಮ ರಾಷ್ಟ್ರವಾಯಿತು. ಇದು 24 ಆಗಸ್ಟ್ 1991 ರಂದು ಸ್ವತಂತ್ರವಾಯಿತು. ಸ್ವಾತಂತ್ರ್ಯದ ನಂತರ, ದೇಶವು ತನ್ನ ಹೆಸರನ್ನು ಉಕ್ರೇನ್ ಎಂದು ಬದಲಾಯಿಸಿತು. ಉಕ್ರೇನ್‌ನ ಪೂರ್ವ ಪ್ರದೇಶದಲ್ಲಿ ರಷ್ಯಾ ಪರ ಚಿಂತನೆಗಳು ಇದೆ.

 ಉಕ್ರೇನ್ ಪ್ರದೇಶ, ಜನಸಂಖ್ಯೆ, ಭಾರತ ಮತ್ತು ಉಕ್ರೇನ್ ನಡುವಿನ ಅಂತರ

ಉಕ್ರೇನ್ ಪ್ರದೇಶ, ಜನಸಂಖ್ಯೆ, ಭಾರತ ಮತ್ತು ಉಕ್ರೇನ್ ನಡುವಿನ ಅಂತರ

ಉಕ್ರೇನ್ ಪ್ರದೇಶ: ಉಕ್ರೇನ್ ವಿಶ್ವದ 46 ನೇ ಅತಿದೊಡ್ಡ ದೇಶ ಮತ್ತು ಯುರೋಪ್‌ನಲ್ಲಿ ಎರಡನೇ ಅತಿದೊಡ್ಡ ದೇಶವಾಗಿದೆ. ಉಕ್ರೇನ್‌ನ ಒಟ್ಟು ವಿಸ್ತೀರ್ಣ ಆರು ಲಕ್ಷ ಚದರ ಕಿ.ಮೀ. ಆಗಿದೆ.
ಉಕ್ರೇನ್ ಜನಸಂಖ್ಯೆ: ಉಕ್ರೇನ್‌ನ ಒಟ್ಟು ಜನಸಂಖ್ಯೆ 4 ಕೋಟಿಗೂ ಹೆಚ್ಚು ಆಗಿದೆ. ದೇಶದಲ್ಲಿ ಸುಮಾರು 78% ಜನರು ಸ್ಥಳೀಯ ಉಕ್ರೇನಿಯನ್ನರಾಗಿದ್ದಾರೆ. ಅವರಲ್ಲಿ 22% ಇತರ ದೇಶಗಳಿಂದ ಬಂದವರು ಆಗಿದ್ದಾರೆ. 100 ಮಹಿಳೆಯರಿಗೆ 86.3 ಪುರುಷರು ಇದ್ದಾರೆ.
ಭಾರತ ಮತ್ತು ಉಕ್ರೇನ್ ನಡುವಿನ ಅಂತರ: ಭಾರತದಿಂದ ಉಕ್ರೇನ್ ನಡುವಿನ ಅಂತರವು 5000 ಕಿಮೀಗಳಿಗಿಂತ ಹೆಚ್ಚಿದೆ. ಭಾರತದಿಂದ ಉಕ್ರೇನ್ ಅನ್ನು ತಲುಪಲು ವಿಮಾನದಲ್ಲಿ ಸುಮಾರು ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

 ಉಕ್ರೇನ್ ಭಾಷೆ, ಕರೆನ್ಸಿ, ಧರ್ಮ

ಉಕ್ರೇನ್ ಭಾಷೆ, ಕರೆನ್ಸಿ, ಧರ್ಮ

ಉಕ್ರೇನ್ ಭಾಷೆ: ದೇಶದಲ್ಲಿ ಅನೇಕ ಭಾಷೆಗಳನ್ನು ಮಾತನಾಡುತ್ತಿದ್ದರೂ, ದೇಶದ ಅಧಿಕೃತ ಭಾಷೆ ಉಕ್ರೇನಿಯನ್ ಆಗಿದೆ.
ಉಕ್ರೇನ್ ಕರೆನ್ಸಿ: ದೇಶದ ಅಧಿಕೃತ ಕರೆನ್ಸಿ ಉಕ್ರೇನಿಯನ್ ಹ್ರಿವ್ನಿಯಾ (₴) (UAH)
ಉಕ್ರೇನ್ ಧರ್ಮ: ದೇಶದಲ್ಲಿ ಬಹುಸಂಖ್ಯಾತರು ಕ್ರೈಸ್ತರು ಆಗಿದ್ದಾರೆ. ಶೇಕಡ 67.3% ಜನಸಂಖ್ಯೆಯು ಕ್ರೈಸ್ತ ಧರ್ಮವನ್ನು ಪಾಲನೆ ಮಾಡುತ್ತದೆ.

 ಉಕ್ರೇನ್ ಯಾವುದಕ್ಕೆ ಹೆಸರುವಾಸಿಯಾಗಿದೆ?

ಉಕ್ರೇನ್ ಯಾವುದಕ್ಕೆ ಹೆಸರುವಾಸಿಯಾಗಿದೆ?

ಸುಂದರವಾದ ಮತ್ತು ವೈವಿಧ್ಯಮಯ ಭೂದೃಶ್ಯದ ಹೊರತಾಗಿ, ಉಕ್ರೇನ್ ಈ ಕೆಳಗಿನವುಗಳಿಗೆ ಹೆಸರುವಾಸಿಯಾಗಿದೆ:

* ವಿಶ್ವದ ಆಳವಾದ ಮೆಟ್ರೋ ನಿಲ್ದಾಣ, ಆರ್ಸೆನಲ್, ಉಕ್ರೇನ್‌ನಲ್ಲಿದೆ.
* ಉಕ್ರೇನ್‌ನ ಸಾಕ್ಷರತೆಯ ಪ್ರಮಾಣವು ಸುಮಾರು 99.8% ಆಗಿದೆ, ಇದು ವಿಶ್ವದ ನಾಲ್ಕನೇ ಅತಿ ಹೆಚ್ಚು ಸಾಕ್ಷರತೆ ಪ್ರಮಾಣವಾಗಿದೆ.
* ಸರಾಸರಿ ಜೀವಿತಾವಧಿಯು ಸುಮಾರು 71.48 ವರ್ಷಗಳು.
* ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಉಕ್ರೇನ್ ವಿಶ್ವದ ಆರನೇ ಅತಿ ದೊಡ್ಡ ಮದ್ಯಪಾನ ಮಾಡುವ ದೇಶವಾಗಿದೆ.
* ಉಕ್ರೇನ್‌ನಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಗಳು ಫುಟ್‌ಬಾಲ್ ಮತ್ತು ಬಾಕ್ಸಿಂಗ್
* ತನ್ನ ಪರಮಾಣು ಶಸ್ತ್ರಾಗಾರವನ್ನು ತ್ಯಜಿಸಿದ ವಿಶ್ವದ ಮೊದಲ ದೇಶವಾಗಿದೆ.

 ರಷ್ಯಾ-ಉಕ್ರೇನ್ ಬಿಕ್ಕಟ್ಟು

ರಷ್ಯಾ-ಉಕ್ರೇನ್ ಬಿಕ್ಕಟ್ಟು

ಉಕ್ರೇನಿಯನ್ ಅಧ್ಯಕ್ಷರಾಗಿದ್ದ ವಿಕ್ಟರ್ ಯಾನುಕೋವಿಚ್ ಅವರು ಮಾಸ್ಕೋದೊಂದಿಗೆ ನಿಕಟ ಸಂಬಂಧಗಳ ಪರವಾಗಿ ಯುರೋಪಿಯನ್ ಒಕ್ಕೂಟದೊಂದಿಗಿನ ಅಸೋಸಿಯೇಷನ್ ​​ಒಪ್ಪಂದವನ್ನು ತಿರಸ್ಕಾರ ಮಾಡಿದ್ದರು. ಈ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷ ಪ್ರಾರಂಭವಾಯಿತು. ಅವರ ಸರ್ಕಾರವನ್ನು ಜನರು ಪದಚ್ಯುತಗೊಳಿಸಿದರು, ಅದನ್ನು 'ಘನತೆಯ ಕ್ರಾಂತಿ' ('Revolution of Dignity') ಎಂದು ಕರೆಯಲಾಯಿತು. ಪ್ರತಿಯಾಗಿ ರಷ್ಯಾ ಉಕ್ರೇನ್‌ನ ಕ್ರಿಮಿಯನ್ ಪೆನಿನ್ಸುಲಾವನ್ನು ಸ್ವಾಧೀನಪಡಿಸಿಕೊಂಡಿತು. ದೇಶದ ಪೂರ್ವ ಪ್ರದೇಶದಲ್ಲಿ ಪ್ರತ್ಯೇಕತಾವಾದಿ ದಂಗೆಯನ್ನು ಬೆಂಬಲಿಸಿತು. ಉಕ್ರೇನ್‌ನ ಕೈಗಾರಿಕಾ ಕೇಂದ್ರವಾದ ಡಾನ್‌ಬಾಸ್ ಮೇಲೆ ರಷ್ಯಾ ಮತ್ತಷ್ಟು ದಾಳಿ ನಡೆಸಿತು. ಉಕ್ರೇನಿಯನ್ ಸರ್ಕಾರಿ ಪಡೆಗಳು ಮತ್ತು ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳ ನಡುವಿನ ಸಶಸ್ತ್ರ ಸಂಘರ್ಷದ ಪರಿಣಾಮವಾಗಿ, ಸುಮಾರು 14,000 ಜನರು ಪ್ರಾಣ ಕಳೆದುಕೊಂಡರು. ಉಕ್ರೇನ್ ಮತ್ತು ಪಾಶ್ಚಿಮ್ಯ ರಾಷ್ಟ್ರಗಳು ರಷ್ಯಾ ಪ್ರತ್ಯೇಕತಾವಾದಿ ನಾಯಕರನ್ನು ಬೆಂಬಲಿಸುತ್ತದೆ ಮತ್ತು ದಂಗೆಗಳಿಗೆ ಶಸ್ತ್ರ ನೀಡುತ್ತಿದೆ ಎಂದು ಆರೋಪ ಮಾಡಿದೆ. ಆದರೆ ರಷ್ಯಾ ನಿರಾಕಿರಿಸಿದೆ. ಹಲವಾರು ಒಪ್ಪಂದಗಳು ಕೂಡಾ ಮುರಿದು ಬಿದ್ದಿತು. ಈಗ ಸಂಘರ್ಷ ತೀವ್ರವಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆಯುತ್ತಿದೆ.

Recommended Video

ಉಕ್ರೇನ್ ನ ಅಮಾಯಕರ ಮೇಲೂ ಅಟ್ಯಾಕ್ ಮಾಡಿದ ರಷ್ಯಾ | Oneindia Kannada

English summary
Ukraine is the second-largest country in Europe after Russia. Capital, Currency, Total Population, Religion, Map, Neighboring Countries and All You Need To Know in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X