• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್ ವಿರುದ್ಧ ಅವರದ್ದೇ ಪಕ್ಷದವರು ತಿರುಗಿಬಿದ್ದಿದ್ದೇಕೆ?

|

ನವೆಂಬರ್ 3ರ ಚುನಾವಣೆಯಲ್ಲಿ ಯಾರೇ ಗೆದ್ದರೂ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ನಡೆಯಲಿದೆ ಎಂದು ರಿಪಬ್ಲಿಕನ್ ಪಕ್ಷದ ನಾಯಕರು ಭರವಸೆ ನೀಡಿದ್ದಾರೆ. ಈ ಮೂಲಕ ಡೊನಾಲ್ಡ್ ಟ್ರಂಪ್‌ಗೆ ಅವರದ್ದೇ ಪಕ್ಷದ ನಾಯಕರು ಶಾಕ್ ಕೊಟ್ಟಿದ್ದಾರೆ. ಅಷ್ಟಕ್ಕೂ ವೈಟ್‌ಹೌಸ್‌ನಲ್ಲಿ ಸುದ್ದಿಗಾರರು ಕೇಳಿದ್ದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಟ್ರಂಪ್, ನವೆಂಬರ್ ಚುನಾವಣೆಯಲ್ಲಿ ನಾನು ಸೋತರೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವ ಬಗ್ಗೆ ಗ್ಯಾರಂಟಿ ಕೊಡುವುದಿಲ್ಲ ಎಂದಿದ್ದರು.

ಅಲ್ಲದೆ ತಾವು ಸೋತರೆ ಸುಪ್ರೀಂ ಮೊರೆ ಹೋಗುವುದಾಗಿ ಹೇಳಿದ್ದರು. ಈ ಮೂಲಕ ತಮ್ಮ ಸೋಲನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡುವುದಾಗಿ ಟ್ರಂಪ್ ಗುಡುಗಿದ್ದರು. ಆದರೆ ಈ ಹೇಳಿಕೆ ಅಮೆರಿಕದಲ್ಲಿ ಸಂಚಲನ ಸೃಷ್ಟಿಸಿತ್ತು.

ನಂಬಿಕೆ ಕಳೆದುಕೊಂಡ ಟ್ರಂಪ್, ಶಾಕ್ ಕೊಟ್ಟ ಕೊರೊನಾ..!

ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದಲ್ಲಿ ಅಮೆರಿಕ ನಿಂತಿದ್ದು, ಚುನಾವಣೆಯಲ್ಲಿ ಸೋಲುವವರು ಶಾಂತಿಯುತವಾಗಿ ತಮ್ಮ ಅಧಿಕಾರವನ್ನು ಗೆದ್ದವರಿಗೆ ಹಸ್ತಾಂತರ ಮಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ತಕ್ಷಣವೇ ಟ್ರಂಪ್ ಹೇಳಿಕೆಯ ತೀಕ್ಷಣತೆ ಅರಿತುಕೊಂಡ ಟ್ರಂಪ್ ಪಕ್ಷದ ನಾಯಕರು, ಟ್ರಂಪ್ ತಮ್ಮದೇ ಪಕ್ಷದವರಾದರೂ ಅವರನ್ನು ಬೆಂಬಲಿಸದೆ ತಿರುಗಿಬಿದ್ದಿದ್ದಾರೆ. ಅಲ್ಲದೆ ಯಾರೇ ಗೆದ್ದರೂ ಶಾಂತಿಯುತವಾಗಿ ಅಧಿಕಾರ ಹಸ್ತಾಂತರವಾಗಲಿದೆ ಎಂದಿದ್ದಾರೆ.

ಟ್ರಂಪ್ ಹೀಗೆ ಹೇಳಿದ್ದು ಏಕೆ..?

ಟ್ರಂಪ್ ಹೀಗೆ ಹೇಳಿದ್ದು ಏಕೆ..?

ಅಮೆರಿಕದಲ್ಲಿ ಕ್ರೂರಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. 2 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಅಧ್ಯಕ್ಷೀಯ ಚುನಾವಣೆಯನ್ನು ಅಂಚೆ ಮತದಾನದ ಮೂಲಕ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಆದರೆ ಇದು ಟ್ರಂಪ್‌ಗೆ ಬಿಲ್‌ಕುಲ್ ಇಷ್ಟವಿಲ್ಲ.

ಕೆಲ ದಿನಗಳ ಹಿಂದಷ್ಟೇ ‘ಮೇಲ್‌ ಇನ್‌' ಮತದಾನದ ಬಗ್ಗೆ ಹೇಳಿಕೆ ಕೊಟ್ಟಿದ್ದ ಟ್ರಂಪ್ ಈ ಬಾರಿ ಚುನಾವಣೆಯಲ್ಲಿ ಅಕ್ರಮ ನಡೆಯಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪಕ್ಕಿಂತ ಅಂಚೆ ಮತದಾನವೇ ದೊಡ್ಡ ಬೆದರಿಕೆಯಾಗಿದೆ ಎಂದಿದ್ದರು. ಇದರ ಬೆನ್ನಲ್ಲೇ ವೈಟ್‌ಹೌಸ್‌ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದ ಟ್ರಂಪ್, ನಾನು ಸೋತರೂ ಸೈಲೆಂಟ್ ಆಗಿ ಖುರ್ಚಿ ಬಿಡಲ್ಲ ಎಂಬ ಸಂದೇಶ ರವಾನಿಸಿದ್ದರು.

ಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆ

ಯಾರದ್ದೋ ವೋಟ್ ಯಾರೋ ಹಾಕ್ತಾರೆ

ಯಾರದ್ದೋ ವೋಟ್ ಯಾರೋ ಹಾಕ್ತಾರೆ

ಅಂಚೆ ಮತದಾನದಿಂದ ನಕಲಿ ಮತದಾನಕ್ಕೆ ಅವಕಾಶ ನೀಡಿದಂತಾಗುತ್ತದೆ. ಇಲ್ಲಿ ಯಾರದ್ದೋ ಮತವನ್ನು ಮತ್ತೊಬ್ಬರು ಚಲಾಯಿಸುತ್ತಾರೆ. ಸಾವಿರಾರು ಮತಪತ್ರಗಳು ನಾಪತ್ತೆಯಾಗಬಹುದು ಅನ್ನೋದು ಟ್ರಂಪ್‌ಗೆ ಕಾಡುತ್ತಿರುವ ಅನುಮಾನ. ಇಷ್ಟೆಲ್ಲದರ ಮಧ್ಯೆ ಡೆಮಾಕ್ರಟಿಕ್ ಪಕ್ಷದ ನಾಯಕರು, ಅಂಚೆ ಮತದಾನದ ಪರವಾಗಿ ಗಟ್ಟಿ ನಿಲುವು ತಾಳಿದ್ದಾರೆ. ಮೊದಲಿನಿಂದ ಅಂಚೆ ಮತದಾನ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಕೊರೊನಾ ಭೀತಿಯಿರುವ ಸಂದರ್ಭದಲ್ಲಿ ಅಂಚೆ ಮತದಾನ ಪ್ರಕ್ರಿಯೆ ಆದ್ಯತೆಯಾಗಿರಬೇಕು ಎನ್ನುತ್ತಿದ್ದಾರೆ.

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಸಮೀಕ್ಷೆಗಳಲ್ಲಿ ಸೋಲು ಕಂಡಿರುವ ಟ್ರಂಪ್

ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಡೊನಾಲ್ಡ್ ಟ್ರಂಪ್ ಸೋಲು ಕಂಡಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಟ್ರಂಪ್‌ಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಹೀಗಾಗಿಯೇ ಟ್ರಂಪ್ ಈ ರೀತಿ ಮತದಾನ ಪ್ರಕ್ರಿಯೆ ಮೇಲೆಯೇ ಆರೋಪ ಮಾಡುತ್ತಿದ್ದಾರೆ ಅನ್ನೋದು ಡೆಮಾಕ್ರಟಿಕ್ ಪಕ್ಷದವರ ಆರೋಪ. ಜಾರ್ಜ್ ಫ್ಲಾಯ್ಡ್ ಹತ್ಯೆ ನಂತರ ಭುಗಿಲೆದ್ದಿರುವ ಜನಾಂಗೀಯ ಸಂಘರ್ಷ ಟ್ರಂಪ್‌ಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ಜೊತೆಗೆ ಕೊರೊನಾ ಸಂಕಷ್ಟ ಹಾಗೂ ಕ್ಯಾಲಿಫೋರ್ನಿಯ ಕಾಡ್ಗಿಚ್ಚು ಕೂಡ ಟ್ರಂಪ್‌ ಮರು ಆಯ್ಕೆಗೆ ದೊಡ್ಡ ಅಡ್ಡಿಯಾಗಿದೆ.

  China - Pakistan ಒಟ್ಟಿಗೆ ಬಂದ್ರು ನಾವ್ Ready to Fight | Oneindia Kannada
  ಸುಪ್ರೀಂಕೋರ್ಟ್‌ ಜಡ್ಜ್ ಆಯ್ಕೆಗೂ ಅವಸರ

  ಸುಪ್ರೀಂಕೋರ್ಟ್‌ ಜಡ್ಜ್ ಆಯ್ಕೆಗೂ ಅವಸರ

  ಟ್ರಂಪ್ ಎಷ್ಟು ಅಚ್ಚುಕಟ್ಟಾಗಿ ಯುದ್ಧಕ್ಕೆ ಸಿದ್ಧರಾಗುತ್ತಿದ್ದಾರೆ ಎಂದರೆ, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ರೂತ್‌ ಬ್ಯಾಡರ್‌ ಗಿನ್ಸ್‌ಬರ್ಗ್‌ ಮರಣ ನಂತರ ತೆರವಾಗುವ ಸ್ಥಾನಕ್ಕೆ ಶೀಘ್ರ ನೇಮಕಾತಿ ನಡೆಯಬೇಕೆಂದು ಪಟ್ಟು ಹಿಡಿದಿದ್ದಾರೆ. ಅಕಸ್ಮಾತ್ ನ್ಯಾಯಮೂರ್ತಿ ಆಯ್ಕೆ ನಡೆಯದಿದ್ದರೆ, ಅಮೆರಿಕ ಅಧ್ಯಕ್ಷೀಯ ಚುನಾವಣೆ ವಿವಾದಕ್ಕೆ ತೆರೆ ಬೀಳುವುದಿಲ್ಲ.

  ಏಕೆಂದರೆ ಬಾರಿ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಸುಪ್ರೀಂಕೋರ್ಟ್‌ನಲ್ಲೇ ಅಂತ್ಯ ಕಾಣುವುದು ಗ್ಯಾರಂಟಿ. ಹೀಗಾಗಿ ಅಧ್ಯಕ್ಷೀಯ ಚುನಾವಣೆ ವಿವಾದ ಸುಪ್ರೀಂ ಮೆಟ್ಟಿಲೇರಿದಾಗ, 4-4ರ ಸಮ ಅನುಪಾತದಲ್ಲಿ ತೀರ್ಪು ಹೊರ ಬೀಳಬಹುದು. ಇದೇ ಕಾರಣಕ್ಕೆ ತೆರವಾಗಿರುವ 9ನೇ ನ್ಯಾಯಮೂರ್ತಿ ಸ್ಥಾನಕ್ಕೆ ಅಧ್ಯಕ್ಷೀಯ ಚುನಾವಣೆಗೂ ಮೊದಲೇ ನೇಮಕಾತಿ ಮಾಡಿ ಎಂದು ಟ್ರಂಪ್ ಹಠಹಿಡಿದಿದ್ದಾರೆ.

  ನಾನು ಸುಮ್ಮನೆ ಕುರ್ಚಿ ಬಿಟ್ಟು ಹೋಗಲ್ಲ: ಟ್ರಂಪ್ ವಾರ್ನಿಂಗ್..!

  English summary
  American Republican leaders has promised there will be an "orderly" transfer of power should Trump lose November's election.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X