Donald Trump: ಅಪ್ಪ ಸತ್ತೋದ್ರು... ನಾನು ಚುನಾವಣೆಗೆ ನಿಲ್ಲುತ್ತೇನೆ!!

ಯಾರದ್ದೋ ಮನೆಯಲ್ಲಿ ಸಾವು ಎದುರಾದರೆ ಏನು ಮಾಡ್ತಾರೆ? ಮನೆ ಮಂದಿಯೆಲ್ಲಾ ಈ ನೋವು ತಡೆಯಲಾಗದೇ ಅಳುತ್ತಾರೆ. ಆದರೆ ಹೀಗೆ ಕಣ್ಣೀರು ಹಾಕೋದು ಭಾರತೀಯರಿಗೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಮನೆಮಾಡಿದೆ. ಹೀಗಿದ್ದಾಗ ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಅವರು ಸತ್ತ ಸುದ್ದಿಯನ್ನು ಅವರ ಮಗನ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಲಾಗಿತ್ತು.

ಹೀಗೆ ಟ್ವೀಟ್ ಮಾಡಿದ್ದ ಟ್ರಂಪ್ ಮಗ, ತನ್ನ ಪೋಸ್ಟ್‌ನಲ್ಲಿ ಬರೆದಿದ್ದ ಬರಹವು ಜಗತ್ತಿನ ಮೂಲೆ ಮೂಲೆಯಲ್ಲೂ ಸಂಚಲನ ಸೃಷ್ಟಿಮಾಡಿತ್ತು. ನನ್ನ ತಂದೆಯವರಾದ ಡೊನಾಲ್ಡ್ ಟ್ರಂಪ್ ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ತಿಳಿಸಲು ದುಃಖವಾಗುತ್ತಿದೆ. ಹೀಗಾಗಿ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆಂದು, ಈ ಪೋಸ್ಟ್‌ನಲ್ಲಿ ತಿಳಿಸಲಾಗಿತ್ತು. ಹೀಗೆ ಅಪ್ಪ ಸತ್ತ ಸುದ್ದಿ ತಿಳಿಸಿದ್ದ ಟ್ರಂಪ್ ಮಗನ ಟ್ವೀಟ್‌ನಲ್ಲಿ, ಅಧ್ಯಕ್ಷೀಯ ಚುನಾವಣೆ ಬಗ್ಗೆಯೂ ಮಾತನಾಡಿದ್ದು ವಿವಾದ ಎಬ್ಬಿಸಿ ವೈರಲ್ ಆಗಿತ್ತು. ಇದೀಗ ಅದರ ಬಂಡವಾಳ ಬಯಲಾಗಿದೆ.

donald-trump-son-twitter-account-got-hacked

'ಟ್ರಂಪ್ ಮಗನಿಗೆ ದಿಢೀರ್ ಏನಾಗಿದೆ?'

ಅಂದಹಾಗೆ ಯಾರಿಗೆ ತಾನೆ ಇಂತಹ ಟ್ವೀಟ್ ನೋಡಿ ಆಘಾತವಾಗಲ್ಲ ಹೇಳಿ?? ಅದರಲ್ಲೂ ಜಗತ್ತಿನ ಶಕ್ತಿಶಾಲಿ ರಾಷ್ಟ್ರದ ಅಧ್ಯಕ್ಷನಾಗಿದ್ದ ಟ್ರಂಪ್ ಅವರ ಸಾವು ಅವರ ಕೋಟ್ಯಂತರ ಬೆಂಬಲಿಗರಿಗೆ ಶಾಕ್ ಕೊಟ್ಟಿತ್ತು. ಅಲ್ಲದೆ ಟ್ರಂಪ್ ಸತ್ತ ಸುದ್ದಿ ಹೇಳುತ್ತಿರುವ ಅವರ ಮಗ ಯಾಕೆ ಹೀಗೆ ಮಾತಾಡ್ತಾ ಇದ್ದಾನೆ? ಟ್ರಂಪ್ ಮಗನಿಗೆ ದಿಢೀರ್ ಏನಾಗಿದೆ? ಅಂತಾ ಜನರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರು ಮಾಡಿದ್ದರು. ಆಗಲೇ ನೋಡಿ ಬಂಡವಾಳ ಬಯಲಾಗಿದ್ದು, ಟ್ರಂಪ್ ಸಾವಿನ ಸುದ್ದಿಯ ಬಗ್ಗೆ ಮಾಡಿದ್ದ ಟ್ವೀಟ್ ಸತ್ಯ ಗೊತ್ತಾಗಿದ್ದು.

ಟ್ರಂಪ್ ಮಗನ ಟ್ವೀಟ್ ಖಾತೆ ಹ್ಯಾಕ್!

ಹೌದು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗನ 'ಎಕ್ಸ್' ಅಂದರೆ ಈ ಹಿಂದೆ ಟ್ವಿಟ್ಟರ್ ಎಂದು ಕರೆಯುತ್ತಿದ್ದ ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್ ಆಗಿತ್ತು. ಅಲ್ಲದೆ ಹೀಗೆ ಟ್ರಂಪ್ ಮಗನ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿ ಕಿಡಿಗೇಡಿಗಳು ಮನಸ್ಸಿಗೆ ಬಂದಂತೆ ಟ್ವೀಟ್ ಪೋಸ್ಟ್ ಮಾಡಿದ್ದರು. ಡೊನಾಲ್ಡ್ ಟ್ರಂಪ್ ಅವರು ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದೂ ಅಲ್ಲದೆ ಹಲವು ಅಸಂಬದ್ಧ ಮತ್ತು ಅಸಭ್ಯ ಟ್ವೀಟ್‌ಗಳನ್ನ ಪೋಸ್ಟ್ ಮಾಡಿದ್ದರು.

donald-trump-son-twitter-account-got-hacked

ಆದರೆ ಹೀಗೆ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರುವ ವಿಚಾರ ಗೊತ್ತಾಗಿದ್ದೇ ತಡ ವಿವಾದಾತ್ಮಕ ಟ್ವೀಟ್ ಡಿಲೀಟ್ ಮಾಡಲಾಗಿದೆ. ಅಷ್ಟರಲ್ಲಿ ಇದೆಲ್ಲ ಜಗತ್ತಿನ ಮೂಲೆ ಮೂಲೆಗೆ ತಲುಪಿ, ವಿಪರೀತ ಚರ್ಚೆ ಕೂಡ ಶುರುವಾಗಿತ್ತು. ಹೀಗೆ ಮೇಲಿಂದ ಮೇಲೆ ಟ್ರಂಪ್ ಅವ್ರ ಕುಟುಂಬ ಸಮಸ್ಯೆ ಸುಳಿಗೆ ಸಿಲುಕಿರುವುದು ವಿಪರ್ಯಾಸ ಅಂತಿದ್ದಾರೆ ಅಮೆರಿಕನ್ನರು. ಕೆಲ ವಾರಗಳ ಹಿಂದಷ್ಟೇ ಟ್ರಂಪ್ ಅವರು ಜೈಲು ಸೇರುವಂತಾಗಿತ್ತು. ಟ್ರಂಪ್ ವಿರುದ್ಧ ಕ್ರಿಮಿನಲ್ ಇದ್ದ ಕಾರಣ ಜೈಲಿಗೆ ಹೋಗಿದ್ದರು. ಹೀಗೆ ಜೈಲು ಸೇರಿ ಅವರು ಮತ್ತೆ ರಿಲೀಸ್ ಆಗಿ ಬಂದಿದ್ರು. ಆದ್ರೆ ಈಗ ಬೇರೆಯದ್ದೇ ಘಟನೆ ಸದ್ದು ಮಾಡಿದ್ದು, ಹ್ಯಾಕರ್ಸ್‌ಗೆ ಶಾಪ ಹಾಕಲಾಗಿದೆ.

ಒಟ್ನಲ್ಲಿ ಅಮೆರಿಕ ಚುನಾವಣೆ ಹತ್ತಿರ ಬರುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಪದೇ ಪದೆ ಈ ರೀತಿಯ ವಿಚಾರದಲ್ಲಿ ಸದ್ದು ಮಾಡ್ತಿದ್ದಾರೆ. ಆದರೆ ಈ ಬಾರಿ ಟ್ರಂಪ್ ಅವರ ಜೀವಕ್ಕೇ ಅಪಾಯ ಆಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿತ್ತು. ಹೀಗಿದ್ದಾಗ ಅದು ಸುಳ್ಳು ಎಂಬ ವಿಚಾರ ಗೊತ್ತಾಗಿದ್ದು, ಟ್ರಂಪ್ ಬೆಂಬಲಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೇ ರಿಪಬ್ಲಿಕನ್ ಪಕ್ಷದ ನಾಯಕರಿಗೂ ಈ ಸುದ್ದಿ ಕೆಲ ಕಾಲ ಆಘಾತ ನೀಡಿತ್ತು. ಸತ್ಯ ಗೊತ್ತಾದ ತಕ್ಷಣ ಈ ಘಟನೆ ಬಗ್ಗೆ ಸೂಕ್ತ ತನಿಖೆಗೂ ಆಗ್ರಹ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+