Narendra Modi: ಕರ್ನಾಟಕಕ್ಕೆ ಏಪ್ರಿಲ್ 28, 29ಕ್ಕೆ ಪ್ರಧಾನಿ ಮೋದಿ ಆಗಮನ
ಬೆಂಗಳೂರು, ಏಪ್ರಿಲ್ 23: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು, ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಮತ್ತೆ ಕರ್ನಾಟಕ ಐದಾರು ಕ್ಷೇತ್ರಗಳಿಗೆ ಮತ್ತೆ ಎರಡು ದಿನ ಆಗಮಿಸಲಿದ್ದಾರೆ.
ಹೌದು, ಪ್ರಧಾನಿ ನರೇಂದ್ರ ಮೋದಿಯವರು ಇದೇ ಏಪ್ರಿಲ್ 28 ಮತ್ತು 29ರಂದು ಎರಡು ದಿನಗಳ ಕಾಲ ಕರ್ನಾಟಕದಲ್ಲಿ ಮತಯಾಚನೆ ಮಾಡಲಿದ್ದಾರೆ. ಇತ್ತೀಚೆಗೆ ಕರಾವಳಿ ಭಾಗದಲ್ಲಿ ಸಂಚರಿಸಿದ್ದ ಪ್ರಧಾನಿ ಈ ಭಾರಿ ಉತ್ತರ ಕರ್ನಾಟಕದಲ್ಲಿ ಮತಯಾಚನೆ ಮಾಡಲಿದ್ದಾರೆ.

ಹೆಚ್ಚು ಸ್ಥಾನ ಗೆಲ್ಲುವ ಗುರಿ
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸುಮಾರು 400ಕ್ಕೂ ಅಧಿಕ ಕ್ಷೇತ್ರ ಗೆಲ್ಲುವ ಗುರಿ ಇಟ್ಟುಕೊಂಡಿರುವ ಬಿಜೆಪಿ ಗೆಲುವಿಗೆ ರಣತಂತ್ರ ರೂಪಿಸಿದೆ. ಈಗಾಗಲೇ ದೇಶ್ಯಾದ್ಯಂತ ಮತಯಾಚನೆ, ಮೆರವಣಿಗೆ, ರ್ಯಾಲಿ ಹಮ್ಮಿಕೊಂಡಿದೆ. ಪಕ್ಷದ ಹಿರಿಯ ನಾಯಕರು ಸೇರಿದಂತೆ ಪ್ರಧಾನಿಯವರು ವಿವಿಧ ರಾಜ್ಯಗಳಲ್ಲಿ ಮತಯಾಚನೆ ಮಾಡುತ್ತಿದ್ದು, ಅದರಲ್ಲಿ ಕರ್ನಾಟಕವು ಒಂದಾಗಿದೆ.
ಕರ್ನಾಟಕದಲ್ಲಿ ಮೆಗಾ ರೋಡ್ ಶೋ
ಈ ಭಾರಿ ಪ್ರಧಾನಿ ಮೋದಿಯವರು ಲೋಕಸಭೆ ಚುನಾವಣೆ ಘೋಷಣೆ ಆದ ನಂತರ ಮೊಲದ ಭಾರಿಗೆ ಉತ್ತರ ಕರ್ನಾಟಕಕ್ಕೆ ಬರುತ್ತಿದ್ದಾರೆ. ಒಟ್ಟು ಆರು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಏಪ್ರಿಲ್ 28 ಹಾಗೂ ಏಪ್ರಿಲ್ 29ರಂದು ಪ್ರಧಾನಿ ಮೆಗಾ ರೋಡ್ ಶೋ ನಡೆಸಲಿದ್ದಾರೆ.
ಬಿಜೆಪಿ ಅಭ್ಯರ್ಥಿಗಳು, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಜೊತೆಗೆ ಬಿಜೆಪಿ ಕೇಂದ್ರ ಸರ್ಕಾರದ ಸಾಧನೆ ವಿವರಿಸಲಿದ್ದಾರೆ. ಎರಡು ದಿನ ಸುಮಾರು 12 ಕ್ಷೇತ್ರಗಳಲ್ಲಿ ಮತಯಾಚನೆ ಮಾಡಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬೃಹತ್ ಸಮಾವೇಶ ಆಯೋಜನೆಗೊಳ್ಳಲಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.
ಕಾರ್ಯಕ್ರಮದ ದಿನಾಂಕ, ಸ್ಥಳದ ವಿವರ
ಉತ್ತರ ಕರ್ನಾಟಕಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 28 ರಂದು ಕಾರವಾರ, ಬೆಳಗಾವಿ ಮತ್ತು ದಾವಣಗೆರೆ, ಬಿಜೆಪಿ ಅಭ್ಯರ್ಥಿಗಳ ಪರ ಮತ ಕೇಳಲಿದ್ದಾರೆ. ಬಳಿಕ ಅವರು ಅಂದು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಎಸ್‌ಪಿಜಿ ಪರಿಶೀಲನೆ ಬಳಿಕ ಪ್ರಧಾನಿ ವಾಸ್ತವ್ಯದ ಹೊಟೇಲ್ ನಿಗದಿಯಾಗಲಿದೆ. ಮರುದಿನ ಏಪ್ರಿಲ್ 29 ರಂದು ವಿಜಯಪುರ, ಕೊಪ್ಪಳ ಹಾಗೂ ಕಲಬುರಗಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.
ಇದೇ ವೇಳೆ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಲಿದ್ದಾರೆ. ಸರ್ಕಾರದ ಸಾಧನೆ ವಿವರಿಸುವ ಜೊತೆಗೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ. ಬಿಜೆಪಿ ಹೆಚ್ಚು ಪ್ರಾಬಲ್ಯ ಇರುವ ಉತ್ತರ ಕರ್ನಾಟಕದಲ್ಲಿ ಜಿಲ್ಲೆಗಳ, ಕ್ಷೇತ್ರಗಳ ಕಾರ್ಯಕರ್ತರು, ಜನರು ಪ್ರಧಾನಿ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.












Click it and Unblock the Notifications