Breaking: ನಮ್ಮ ಮೆಟ್ರೋಗೆ ಹಸಿರು ಮಾರ್ಗದ ಸೇವೆಯಲ್ಲಿ ಇಂದು ಬೆಳಗ್ಗೆ ಭಾರೀ ವ್ಯತ್ಯಯ, ಪ್ರಯಾಣಿಕರ ಪರದಾಟ

Namma Metro Updates: ಬೆಂಗಳೂರು ನಮ್ಮ ಮೆಟ್ರೋ ಜಾಲದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು ಉಂಟಾಗುತ್ತಿದ್ದು, ನಿತ್ಯವು ಪ್ರಯಾಣಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮತ್ತೆ ಇಂದು ಗುರುವಾರ (ಜುಲೈ 9) ಬೆಳಗ್ಗೆ ಹಸಿರು ಮಾರ್ಗದ (Green Line) ರೈಲು ಸೇವೆಯಲ್ಲಿಸೇವೆಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಬೆನ್ನಲ್ಲೇ ಭಾರೀ ಸಂಚಾರ ವ್ಯತ್ಯಯವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ತಿಳಿಸಿದೆ. ಈ ಸೇವಾ ಅಡಚಣೆಯಿಂದ ಕೆಲಸಕ್ಕೆ ಇನ್ನಿತರ ಕಾರ್ಯಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಬೆಂಗಳೂರು ಮೆಟ್ರೋ ಅಧಿಕಾರಿಗಳು ಸಮಪರ್ಕ ಮೆಟ್ರೋ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ ಎನ್ನಲಾಗಿದೆ.

ಈ ಹಿಂದೆ ನೇರಳೆ ಮಾರ್ಗದಲ್ಲಿ ರೈಲಿನಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಪ್ರಯಾಣಿಕರು ಲಾರಿ, ಬಸ್, ಖಾಸಗಿ ವಾಹನದಲ್ಲಿ ಸಂಚರಿಸಿದ್ದರು. ಮೇಲಿಂದ ಮೇಲೆ ಮೆಟ್ರೋ ಸೇವೆಯಲ್ಲಿನ ವ್ಯತ್ಯಯದಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಇದೀಗ ಹಸಿರು ಮಾರ್ಗದಲ್ಲಿ ದಿಢೀರ್ ತಾಂತ್ರಿಕ ಸಮಸ್ಯೆ ಕಂಡು ಬಂದ ಬೆನ್ನಲ್ಲೆ ಸಂಚಾರದಲ್ಲಿ ಭಾರೀ ವ್ಯತ್ಯವಾಗಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

Bengaluru Metro Green Line

ಸದರಿ ಉಂಟಾದ ಸಮಸ್ಯೆ ಪರಿಹರಿಸಲು ನಮ್ಮ ತಾಂತ್ರಿಕ ಸಿಬ್ಬಂದಿ ಆದ್ಯತೆಯ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಧ್ಯವಾದಷ್ಟು ಬೇಗ ಸಾಮಾನ್ಯ ಮೆಟ್ರೋ ಸಂಚಾರವನ್ನು ಪುನಃಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಿಕೊಳ್ಳುವಂತೆ ನಮ್ಮ ಮೆಟ್ರೋ ಅಧಿಕಾರಿಗಳು ವಿನಂತಿಸಿದ್ದಾರೆ.

BMTC: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಪ್ರಮುಖ ಮಾರ್ಗದಲ್ಲಿ 6 ಮೆಟ್ರೋ ಫೀಡರ್ ಬಸ್ ಸೇವೆ ಆರಂಭ
BMTC: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಪ್ರಮುಖ ಮಾರ್ಗದಲ್ಲಿ 6 ಮೆಟ್ರೋ ಫೀಡರ್ ಬಸ್ ಸೇವೆ ಆರಂಭ

ಪೀಕ್ ಅವರ್ ನಲ್ಲಿ ಸಮಸ್ಯೆ, ಪ್ರಯಾಣಿಕರಿಗೆ ಕಿರಿಕಿರಿ

ಗುರುವಾರ ಬೆಳಗ್ಗೆ ಎಂದಿನಂತೆ ಫಿಕ್ ಅವರ್‍‌ನಲ್ಲಿ ಮೆಟ್ರೋ ಹಿಡಿದು ಕಚೇರಿಗೆ ತೆರಳುತ್ತಿದ್ದವರಿಗೆ ಈ ಸಂಚಾರ ಅಡಚಣೆ ಕಿರಿಕಿರಿ ಉಂಟು ಮಾಡಿದೆ. ಶೀಘ್ರವೇ ಎದುರಾದ ತಾಂತ್ರಿಕ ಸಮಸ್ಯೆ ಬಗೆಹರಿಸುವುದಾಗಿ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಟೆಕ್ನಿಕಲ್ ಸಮಸ್ಯೆ ಎದುರಾಗಿದ್ದು ರೈಲಿನಲ್ಲಾ ಅಥವಾ ಹಸಿರು ಮಾರ್ಗದಲ್ಲಾ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ. ಎಷ್ಟು ಹೊತ್ತು ಈ ಸಂಚಾರ ಅಡಚಣೆ ಎದುರಾಯಿತು ಎಂಬ ನಿಖರ ಮಾಹಿತಿ ತಿಳಿಯಬೇಕಿದೆ.

4 ದಿನಗಳ ಅಂತರದಲ್ಲಿ ಎರಡು ಬಾರಿ ಮೆಟ್ರೋ ಸೇವೆ ಕಟ್

ಈ ಹಿಂದೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಎರಡು ಬಾರಿ ಸರಣಿ ಸಂಚಾರ ತೊಂದರೆ ಆಗಿತ್ತು. ಕಬ್ಬನ್ ಉದ್ಯಾನದ ಮೆಟ್ರೋ ನಿಲ್ದಾಣಕ್ಕೆ ರೈಲು ಬರುವ ಮುನ್ನವೇ ಹಳಿಗೆ ವಿದ್ಯುತ್ ಪೂರೈಸುವೆ ಕೇಬಲ್ ಸ್ಪೋಟಗೊಂಡ ಪರಿಣಾಮ ಗಂಟೆಗಳ ಕಾಲ ನಿಲ್ದಾಣದಲ್ಲೇ ಪ್ರಯಾಣಿಕರು ಸಿಲುಕಿದ್ದರು. ಇಡೀ ರಾತ್ರಿ ಪೂರ್ತಿ ತಾಂತ್ರಿಕ ತಜ್ಞರು ಕೆಲಸ ಮಾಡಿ ಮಾರನೇ ದಿನ ಸಮಸ್ಯೆ ಬಗೆಹರಿಸಿದ್ದರು. ಅಂದು ಗಂಟೆಗಳ ಕಾಲ ಕಾದು ನೋಡಿದ ಪ್ರಯಾಣಿಕರು ವಿಧಿ ಇಲ್ಲದೇ ಲಾರಿ, ಆಟೋ, ಟ್ಯಾಕ್ಸಿ ಹಿಡಿದು ಗಮ್ಯ ಸ್ಥಾನ ಸೇರಿದರು. ಮೆಟ್ರೋ ಪ್ರಯಾಣಿಕರು ಲಾರಿ ಹತ್ತಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಾರ್ಗದ ಇತರ ರೈಲುಗಳ ಸಂಚಾರದಲ್ಲೂ ವ್ಯತ್ಯಯ ಕಂಡು ಬಂದಿತ್ತು.

ಅದಾಗಿ ಮೂರು ದಿನಗಳಲ್ಲೇ ಮತ್ತೊಮ್ಮೆ ಕಬ್ಬನ್ ಉದ್ಯಾನದಲ್ಲಿ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತು. ಅಂದು ಪ್ರಯಾಣಿಕರ ಕೊರಳಲ್ಲಿದ್ದ ಚೈನ್ ಮೆಟ್ರೋ ರೈಲಿನ ಬಾಗಿಲಿನ ಸಂದಿಗೆ ಸಿಲುಕಿ ಬಾಗಿಲು ಮುಚ್ಚಲಾರದೇ ಸಮಸ್ಯೆ ಉಂಟಾಗಿತ್ತು. ಆಗಲೂ ಪ್ರಯಾಣಿಕರು ಸಂಚಾರ ವ್ಯತ್ಯಯ ಅನುಭವಿಸಿದ್ದರು.

ಮೆಟ್ರೋ ಬಿಟ್ಟು ಪ್ರಯಾಣಿಕರು ರಸ್ತೆಗಿಳಿಸಿದರೆ ಟ್ರಾಫಿಕ್ ಹೆಚ್ಚಳ

ಇದೆಲ್ಲ ಮಾಸುವ ಮುನ್ನವೇ ನಮ್ಮ ಮೆಟ್ರೋ ಮತ್ತೆ ಅಂಥದ್ದೇ ಸೇವಾ ವ್ಯತ್ಯಯದ ಕಾರಣಕ್ಕೆ ಸುದ್ದಿಯಾಗಿದ್ದು, ನಿಜಕ್ಕೂ ಅನುಮಾನ ಮೂಡಿಸಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕೊಡುವೆ ನೀಡುವ ನಮ್ಮ ಮೆಟ್ರೋ ಸಾರಿಗೆ ಸೂಕ್ತವೆಂದು ಸ್ವಂತ ವಾಹನ ಬಿಟ್ಟು ರೈಲು ಹತ್ತುತ್ತಾರೆ. ಇದೀಗ ನಿತ್ಯವು ಅವರಿಗೆ ಕಿರಿಕಿರ ಉಂಟಾದರೆ, ಅವರ ಮತ್ತು ಖಾಸಗಿ ವಾಹನಗಳತ್ತ ಮುಖ ಮಾಡಿದರೆ, ರಸ್ತೆಗೆ ಇಳಿದರೆ ಸಂಚಾರ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಬಿಎಂಆರ್ ಸಿಎಲ್ ಅಧಿಕಾರಿಗಳು ಇದರತ್ತ ಗಮನ ಹರಿಸಬೇಕು. ಎಲ್ಲ ರೈಲುಗಳು ಹಾಗೂ ಮಾರ್ಗದ ಪುನರ್ ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+